ಕಾರ್ಕಳ: ಪತ್ತೊಂಜಿ ಕಟ್ಟೆ ಎಂಬಲ್ಲಿ ಎಪ್ರಿಲ್ 23ರಂದು ಮನೆಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿದ ಪ್ರಕರಣವನ್ನು ಕಾರ್ಕಳ ನಗರ ಠಾಣೆಯ ಪೊಲೀಸರು ಬೇಧಿಸಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಬೈರಂಪಳ್ಳಿ ಗ್ರಾಮದ ಆನಂದ ಕುಲಾಲ್ (40) ಹಾಗೂ ಕಳವು ಮಾಡಿದ ಚಿನ್ನಾಭರಣವನ್ನು ಖರೀದಿಸಿದ ಜಯರಾಮ ಆಚಾರ್ಯ (54) ಎಂದು ಗುರುತಿಸಲಾಗಿದೆ. ಬಂಧಿತರಿಂದ ಒಟ್ಟು ಸುಮಾರು ರೂ. 5.60 ಲಕ್ಷ ಮೌಲ್ಯದ 39 ಗ್ರಾಂ ತೂಕದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ …
Read More »ಎಂಡಿಎಂಎ ಮಾರಾಟ ಯತ್ನ: ಬಂಧನ
ಬೆಂಗಳೂರು: ವೀರನಗರ ಪೇರ್ಲ ರಸ್ತೆಯಲ್ಲಿ ಸ್ಕೂಟರ್ ನಲ್ಲಿ ಕುಳಿತು ಸಾರ್ವಜನಿಕರಿಗೆ ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಡಿ ಯುವಕನನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆಮೊಹಮ್ಮದ್ ಗುಲ್ ಝಹೀಮ್ ಬಂಧಿತ ಆರೋಪಿ. ಕಂಕನಾಡಿ ನಗರ ಠಾಣೆ ಪೊಲೀಸರು ಗಸ್ತು ಕರ್ತವ್ಯ ದಲ್ಲಿರುವಾಗ ಬಜಾಲ್ ವೀರ ನಗರ ಕಡೆಗೆ ಹೋಗುವ ಪೇರ್ಲ ರಸ್ತೆಯಲ್ಲಿ ಸ್ಕೂಟರ್ ನಲ್ಲಿ ಕುಳಿತ್ತಿದ್ದಾತ ಪೊಲೀಸ್ ವಾಹನ ನೋಡಿ ಓಡಿ ಹೋಗಲು ಯತ್ನಿಸಿದ್ದಾನೆ.ಪೊಲೀಸರು ಆತನನ್ನು ಬೆನ್ನಟ್ಟಿ ಹಿಡಿದು, ಪರಿಶೀಲಿಸಿದಾಗ …
Read More »1000 ಲೀಟರ್ ಸೇಂದಿ ಜಪ್ತಿ
ರಾಯಚೂರು: ಅಬಕಾರಿ ಮತ್ತು ಪೊಲೀಸರು ದಾಳಿ ನಡೆಸಿ ಇಲ್ಲಿನ ಚಂದ್ರಬಂಡಾ ರಸ್ತೆಯ ನರಸಿಂಹಲು( ಬ್ರೂಸ್ಲೀ) ಅವರ ಮನೆಯಲ್ಲಿ 1000 ಲೀಟರ್ಗೂ ಹೆಚ್ಚು ಸೇಂದಿ, ಸಿ.ಎಚ್. ಪೌಡರ್ ಹಾಗೂ ಅಲ್ಫಾ ಜೋಲಂ ಎಂಬ ರಾಸಾಯನಿಕಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿ ನರಸಿಂಹಲು ಅಲಿಯಾಸ್ ಬ್ರೂಸ್ ಲೀ ವಿರುದ್ಧ ಈಗಾಗಲೇ 40ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಗೂಂಡಾ ಕಾಯ್ದೆಯಡಿ ಜೈಲಿಗೂ ಹೋಗಿದ್ದರು. ಆದರೂ ಮತ್ತೆ ಇದೇ ದಂಧೆಯಲ್ಲಿ ತೊಡಗಿದ್ದಾರೆ ಎಂದು ಖಚಿತ …
Read More »ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಬಂಧನ; 87.5 ಲಕ್ಷ ರೂ ಬೆಲೆಯ ಹೈಡ್ರೋಪೋನಿಕ್ ಗಾಂಜಾ ವಶ
ಬೆಂಗಳೂರು: ಬ್ಯಾಂಕಾಕ್ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕನನ್ನು 87.5 ಲಕ್ಷ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಹೊಂದಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.ಏಪ್ರಿಲ್ 23 ರಂದು ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದರು.ಬ್ಯಾಂಕಾಕ್ನಿಂದ ಆಗಮಿಸಿದ ಪ್ರಯಾಣಿಕನನ್ನು ತಡೆಹಿಡಿಯಲಾಯಿತು, ಮತ್ತು ಅವರ ಚೆಕ್-ಇನ್ ಬ್ಯಾಗೇಜ್ನಿಂದ 87.5 ಲಕ್ಷ ರೂ. ಮೌಲ್ಯದ 2.5 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು …
Read More »ಅಪರಿಚಿತ ವ್ಯಕ್ತಿಯ ಶವ ಗೋಣಿ ಚೀಲದಲ್ಲಿ ಪತ್ತೆ
ಬೆಂಗಳೂರು: ಪುರುಷನ ಶವವನ್ನು ಗೋಣಿ ಚೀಲದಲ್ಲಿ ತುಂಬಿ ಗಂಗಮ್ಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀಪುರದ ಬಿಡಿಎ ಲೇಔಟ್ ನಲ್ಲಿ ಎಸೆದು ದುಷ್ಕ ರ್ಮಿಗಳು ಪರಾರಿ ಯಾಗಿದ್ದಾರೆ. ಆರೋ ಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಗಂಗಮ್ಮನಗುಡಿ ಲಕ್ಷ್ಮೀಪುರದ ಬಿಡಿಎ ಲೇಔಟ್ನಲ್ಲಿ ಶುಕ್ರ ವಾರ ಬೆಳಗ್ಗೆ ಸ್ಥಳೀಯರು ವಾಯುವಿಹಾರ ಮಾಡುತ್ತಿದ್ದರು.ಆ ವೇಳೆ ನಾಯಿಗಳು ಚೀಲ ಎಳೆಯುತ್ತಿದ್ದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳು …
Read More »ಕೊಲೆ: ಮುಸ್ಲಿಮ್ ಹೆಸರು ಬದಲಿಸಿಕೊಂಡಿದ್ದ ವ್ಯಕ್ತಿ 31 ವರ್ಷ ಬಳಿಕ ಬಂಧನ
ಲಕ್ನೋ: ಸಲೀಮ್ ವಾಸ್ತಿಕ್ ಎಂಬ ಯೂಟ್ಯೂಬರ್ನನ್ನು 1995ರ ಹತ್ಯೆಯೊಂದರ ಸಂಬಂಧ ಈಗ ಬಂಧಿಸಲಾಗಿದೆ. ಸಲೀಮ್ ಖಾನ್ ಎಂಬ ಹೆಸರಿದ್ದ ಈತ ಈ ಹತ್ಯೆಯ ಬಳಿಕ ಸಲೀಮ್ ವಾಸ್ತಿಕ್ ಎಂದು ಹೆಸರು ಬದಲಿಸಿಕೊಂಡಿದ್ದು, ಇದೀಗ ಮಾಜಿ ಮುಸ್ಲಿಂ ಎಂದೇ ಖ್ಯಾತಿ ಪಡೆದಿದ್ದ ಎನ್ನಲಾಗಿದೆ.31 ವರ್ಷಗಳ ಹಿಂದೆ ಉದ್ಯಮಿಯೊಬ್ಬರ 13 ವರ್ಷ ವಯಸ್ಸಿನ ಮಗನನ್ನು ಈತ ಕೊಲೆ ಮಾಡಿದ್ದ. ಅಪಹರಣ, ಸುಲಿಗೆ ಹಾಗೂ ಕೊಲೆ ಆರೋಪದಡಿ ಈತನಿಗೆ 1997ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. …
Read More »ಭಜರಂಗದಳ ಕಾರ್ಯಾಚರಣೆ, 8 ಟನ್ ಗೋಮಾಂಸ ವಶಕ್ಕೆ
ಧಾರವಾಡ: ಬಜರಂಗದಳದ ಕಾರ್ಯಕರ್ತರು ಖಚಿತ ಮಾಹಿತಿಯೊಂದಿಗೆ ಕೆಲಗೇರಿ ಬ್ರಿಜ್ ಬಳಿ ಬೆಳಗಾವಿಯ ಕಸಾಯಿ ಖಾನೆಯಿಂದ ಬೆಂಗಳೂರಿಗೆ ಸಾಗಾಟ ಮಾಡುತ್ತಿದ್ದ ಅಕ್ರಮ ಗೋಮಾಂಸದ ಬೊಲೆರೊ ವಾಹನವನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಸುಮಾರು 60 ಕ್ಕೂ ಹೆಚ್ಚು ಗೋವಿನ ಕರುಗಳನ್ನು ಕಡಿದು ಈ ಮಾಂಸ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.ಈ ಕಾರ್ಯಾಚರಣೆಯಲ್ಲಿ ಸಿದ್ದು ಹಿರೇಮಠ, ಅನುದೀಪ ಕುಲಕರ್ಣಿ, ಗುರುಶಾಂತ, ನಾಗರಾಜ, ಗಣೇಶ, ಧ್ರುವ, ದರ್ಶನ, ಉದಯ ಹಾಗೂ ಕೆಲಗೇರಿಯ ಗ್ರಾಮಸ್ಥರು ಇದ್ದರು. ಪ್ರಕರಣ ಸಬ್ …
Read More »ಸಿಲೆಂಡರ್ ಅಕ್ರಮ ಸಂಗ್ರಹ: ಶಿಕ್ಷೆ ಪ್ರಕಟ
ರಾಣೆಬೆನ್ನೂರು: ಪಟ್ಟಣದ ಹನಗೋಡಿಮಠ ಓಣಿಯ ಶಿವಕುಮಾರ ಚನ್ನಯ್ಯ ಹಿರೇಮಠ ಹಾಗೂ ನಾಗರಾಜ ನಾಗಯ್ಯ ಹನಗೋಡಿಮಠ ಅವರು ಗೃಹ ಮತ್ತು ವಾಣಿಜ್ಯ ಬಳಕೆ ಸಿಲಿಂಡರ್ಗಳನ್ನು ಅಕ್ರಮವಾಗಿ ಸಂಗ್ರಹಿಸಿದ ಪ್ರಕರಣ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶ ಮಹಾಂತೇಶ ಭೂಸಗೋಳ ಅವರು ಶನಿವಾರ ಅಪರಾಧಿಗಳಿಗೆ ತಲಾ 5 ವರ್ಷ ಶಿಕ್ಷೆ ಹಾಗೂ ₹80 ಸಾವಿರ ದಂಡ ವಿಧಿಸಿದ್ದಾರೆ. ಹನಗೋಡಿಮಠರ ಓಣಿಯ ಗೋದಾಮಿನಲ್ಲಿ ಗೃಹ ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್ ಅಕ್ರಮವಾಗಿ ಸಂಗ್ರಹಿಸಿದ ಖಚಿತ ಮಾಹಿತಿ …
Read More »ಗ್ಯಾಸ್ ಸಿಲಿಂಡರ್ ವಿತರಿಸದ ಆರೋಪ : ಬೆಳ್ತಂಗಡಿಯ ಏಜೆನ್ಸಿ ವಿರುದ್ಧ ದೂರು
ಬೆಳ್ತಂಗಡಿ: ನಗರದ ಲಾಯಿಲಾದ ಗ್ಯಾಸ್ ಏಜೆನ್ಸಿ ಒಂದರಲ್ಲಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಸರಿಯಾಗಿ ವಿತರಿಸುತ್ತಿಲ್ಲ ಎಂದು ಕುವೆಟ್ಟು ಗ್ರಾಮದ ಮಹಮ್ಮದ್ ರಫೀಕ್ ಜಿಲ್ಲಾಧಿಕಾರಿಗಳಿಗೆ ತಹಶೀಲ್ದಾರರ ಮೂಲಕ ದೂರು ನೀಡಿದ್ದಾರೆ. ದಿನ ಬಳಕೆಯ ಸಿಲಿಂಡರ್ ಪಡೆಯಲು 10 ರಿಂದ 20 ದಿನಗಳವರೆಗೆ ಕಾಯಬೇಕಾಗಿದೆ. ಅಲ್ಲದೇ ಮನೆಗೆ ತಲುಪಿಸದೇ ಕಚೇರಿಗೆ ಬಂದು ಕೊಂಡೊಯ್ಯುವಂತೆ ಹೇಳುತ್ತಿದ್ದಾರೆ. ಕಚೇರಿಯಲ್ಲಿ ಹೋದರೆ ಬೇರೆ ದಿನ ಬನ್ನಿ ಅಂತ ಹೇಳುತ್ತಾರೆ ಎಂದು ಆರೋಪಿಸಲಾಗಿದೆ.
Read More »ಮಂಗಳೂರು: ‘ಡಿಜಿಟಲ್ ಅರೆಸ್ಟ್’ ಹೆಸರಲ್ಲಿ ಬೃಹತ್ ವಂಚನೆ; ₹2.07 ಕೋಟಿ ಕಳೆದುಕೊಂಡ ವೃದ್ಧ
ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳೆಂದು ನಂಬಿಸಿ ಸೈಬರ್ ವಂಚಕರು ಮಂಗಳೂರಿನ 61 ವರ್ಷದ ವ್ಯಕ್ತಿಯೊಬ್ಬರಿಗೆ ₹2.07 ಕೋಟಿ ಹಣ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯ ವಿವರ: ಮಾರ್ಚ್ 31ರಂದು ಸಂತ್ರಸ್ತರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ತಾನು ‘ನ್ಯಾಷನಲ್ ಡೇಟಾ ಪ್ರೊಟೆಕ್ಷನ್ ಸೆಂಟರ್’ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. “ನಿಮ್ಮ ಗುರುತಿನ ಚೀಟಿ ಬಳಸಿ ಮುಂಬೈನಲ್ಲಿ ಸಿಮ್ ಕಾರ್ಡ್ ಖರೀದಿಸಲಾಗಿದೆ. ಇದರಿಂದ ಅಶ್ಲೀಲ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





