Breaking News

BigTv News

ಜಾತಿ ಕಾರಣಕ್ಕೆ ಪ್ರಿಯಕರನ ಹತ್ಯೆ, ಲವರ್ ಶವದ ಜೊತೆಗೇ ಮದುವೆ ಆದ ಯುವತಿ

ಜಾತಿ ವಿಚಾರಕ್ಕೆ ಮಗಳ ಪ್ರೀತಿ ನಿರಾಕರಿಸಿದ ಕುಟುಂಬ ಒಂದು ಆಕೆ ಪ್ರಿಯಕರನ ಕೊಂದೇ ಹಾಕಿರುವ ಭೀಕರ ಘಟನೆ ಮಹಾರಾಷ್ಟ್ರದ ನಾಂದೇಡ್ ಭಾಗದಲ್ಲಿ ನಡೆದಿದೆ. 25 ವರ್ಷದ ಸಕ್ಷಾಮ್ ಟೆಟೆ ಹತ್ಯೆ ಆಗಿರುವ ದುರ್ದೈವಿ. ಆದರೆ ತಮ್ಮ ಕುಟುಂಬಸ್ಥರು ಮಾಡಿದ ಈ ಕೃತ್ಯವನ್ನು ಖಂಡಿಸಿ ಯುವತಿ ಪ್ರಿಯಕರನ ಮೃತದೇಹವನ್ನೇ ಮದುವೆಯಾಗಿ ಕೊನೆಗೂ ತನ್ನ ಪ್ರೀತಿ ಉಳಿಸಿಕೊಂಡಿದ್ದಾಳೆ ಎಂಬ ವಿಚಾರ ಈಗ ಸಂಚಲನ ಸೃಷ್ಟಿಸಿದೆ… ಈ ಘಟನೆ ಇದೀಗ ಹಳ್ಳಿಯಿಂದ ದಿಲ್ಲಿ ತನಕ …

Read More »

ಹಿಟ್ಟಿನ ಗಿರಣಿಗೆ ಹೋದ 13 ವರ್ಷದ ಬಾಲಕಿಯನ್ನ ಕಬ್ಬಿನ ಗದ್ದೆಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ!

ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ ನಿವಾಸಿ ಅಪ್ರಾಪ್ತ ಬಾಲಕಿ, ನವೆಂಬರ್ 23 ರಂದು ಮನೆಯಿಂದ ಸುಮಾರು 300 ಮೀಟರ್ ದೂರದಲ್ಲಿರುವ ಹಿಟ್ಟಿನ ಗಿರಣಿಗೆ ಹೋಗುತ್ತಿದ್ದಳು. ಇದೇ ಸಮಯದಲ್ಲಿ ಬಾಲಕಿಯನ್ನು ಹಿಂಬಾಲಿಸಿದ ಇಬ್ಬರು ಆರೋಪಿಗಳಾದ ಮಣಿಕಂಠ ದಿನ್ನಿಮನಿ (28) ಮತ್ತು ಈರಣ್ಣ ಸಂಕಮ್ಮನವರ ಎಂಬುವವರು ಆಕೆಯ ಮೇಲೆ ದಾಳಿ ನಡೆಸಿದ್ದಾರೆ. ಯಾರೂ ಇಲ್ಲದ ಏಕಾಂತದ ಪ್ರದೇಶವನ್ನು ಗಮನಿಸಿ, ಬಾಲಕಿಯನ್ನು ಬಲವಂತವಾಗಿ ರಸ್ತೆಯ ಪಕ್ಕದಲ್ಲಿದ್ದ ಕಬ್ಬಿನ ಗದ್ದೆಗೆ ಎಳೆದೊಯ್ದು ಈ ಇಬ್ಬರು …

Read More »

ಶಿಗ್ಗಾವಿ ಬಳಿ ಲಾರಿ ಪಲ್ಟಿ: 20 ಆಡು ಸಾವು

ಆಡುಗಳನ್ನ ಸಾಗಿಸುತ್ತಿದ್ದ ಲಾರಿಯೊಂದು ಟೈಯ‌ರ್ ಸ್ಫೋಟಗೊಂಡ ಪರಿಣಾಮ ಲಾರಿ ಪಲ್ಟಿಯಾಗಿ 180 ಆಡುಗಳಲ್ಲಿ 20 ಆಡುಗಳು ಮೃತಪಟ್ಟ ಘಟನೆ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಬಳಿ ಸೋಮವಾರ ಬೆಳಗಿನ ಜಾವ ನಡೆದಿದೆ.ಗುಜರಾತನಿಂದ ಮಂಡ್ಯ ಕಡೆಗೆ ಆಡುಗಳನ್ನು ತುಂಬಿಕೊಂಡು ಹೋಗುತ್ತಿದ್ದು ಲಾರಿ, ಟೈಯರ್ ಸ್ಫೋಟಗೊಂಡು ಹೆದ್ದಾರಿ ತಡೆ ಗೋಡೆಗೆ ಡಿಕ್ಕಿ ಹೊಡೆದು ಪಲ್ಟಿ ಆಗಿದೆ.ಗಾಯಗೊಂಡ ಆಡುಗಳಿಗೆ ಸ್ಥಳೀಯ ಪಶು ವೈದ್ಯಾಧಿಕಾರಿ ರಾಜೇಂದ್ರ ಅವರ ತಂಡದಿಂದ ಚಿಕಿತ್ಸೆ ನೀಡಲಾಗಿದೆ. ಘಟನೆ ಕುರಿತು ಶಿಗ್ಗಾವಿ …

Read More »

ಬೆಂಗಳೂರಲ್ಲಿ ವಿವಾಹಿತ ಮಹಿಳೆಯನ್ನ ಉಸಿರುಗಟ್ಟಿಸಿ ಕೊಂದು, ನೇಣು ಬಿಗಿದುಕೊಂಡು ಆರೋಪಿ ಆತ್ಮಹತ್ಯೆ.!

ಲಲಿತಾ (49) ಎಂಬ ಮಹಿಳೆಯನ್ನ ಲಕ್ಷ್ಮೀನಾರಾಯಣ ಎಂಬಾತ ಕೊಲೆ ಮಾಡಿದ್ದಾನೆ. ಬೆಂಗಳೂರಿನ ಇಂದಿರಾ ಪ್ರಿಯದರ್ಶಿನಿ ನಗರದ ಮನೆಯಲ್ಲಿ ಘಟನೆ ನಡೆದಿದೆ.ಪತಿ ಸಾವಿನ ಬಳಿಕ ಲಲಿತಾ ಲಕ್ಷ್ಮೀನಾರಾಯಣನ ಜೊತೆ ವಾಸವಾಗಿದ್ದರು. ಲಲಿತಾ ನಡೆ ಪ್ರಶ್ನಿಸಿ ಲಕ್ಷ್ಮೀನಾರಾಯಣ ಆಗಾಗ ಜಗಳ ಮಾಡುತ್ತಿದ್ದನು. ನಿನ್ನೆ ರಾತ್ರಿ ಆರೋಪಿ ಆಕೆಯನ್ನ ವೇಲ್ ನಿಂದ ಉಸಿರುಗಟ್ಟಿಸಿ ಕೊಂದಿದ್ದಾನೆ. ನಂತರ ಲಕ್ಷ್ಮೀನಾರಾಯಣ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿ ತೊರೆದು ಲಕ್ಷ್ಮೀನಾರಾಯಣ ಲಲಿತಾ ಜೊತೆ ವಾಸವಿದ್ದನು. ಪತಿ …

Read More »

ಏಳನೇ ತರಗತಿ ಬಾಲಕಿ ಮೇಲೆ ಹೀನ ಕೃತ್ಯ, ಕಬ್ಬಿನ ಗದ್ದೆಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ

ಕಬ್ಬಿನ ಗದ್ದೆಗೆ ಎಳೆದೊಯ್ದು ಏಳನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ಬೆಳಗಾವಿಯ ಮುರಗೋಡ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನವೆಂಬರ್ 23ರಂದೇ ಘಟನೆ ನಡೆದಿದ್ದು, ಬಾಲಕಿ ಕುಟುಂಬಸ್ಥರಿಗೆ ಜೀವ ಬೆದರಿಕೆ ಹಿನ್ನಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಆರೋಪಿಗಳಾದ ಮಣಿಕಂಠ ದಿನ್ನಿಮನಿ ಮತ್ತು ಈರಣ್ಣ ಸಂಕಮ್ಮನವರ ಹಿಟ್ಟುಬೀಸಲು ತೆರಳಿದ್ದ ಬಾಲಕಿ ಮೇಲೆ ಹೇಹಕೃತ್ಯ ನಡೆಸಿದ್ದಾರೆ. ಮನೆಯಿಂದ ಮುನ್ನೂರು ಮೀಟರ್ ದೂರ ಇರುವ ಹಿಟ್ಟಿನ ಗಿರಣಿಗೆ ಹಿಟ್ಟು …

Read More »

ಮಹಡಿ ಮೇಲೆ ಗಾಂಜಾ ಬೆಳೆದ ಉಗ್ರಾಣ ನಿಗಮದ ನೌಕರ ಅರೆಸ್ಟ್

ರಾಯಚೂರು ಜಿಲ್ಲೆ ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಉಗ್ರಾಣ ನಿಗಮದ ವಸತಿ ಸಮುಚ್ಛಯದ ಮಹಡಿಯಲ್ಲಿ ಗಾಂಜಾ ಗಿಡ ಬೆಳೆಸಿದ್ದ ಉಗ್ರಾಣ ನಿಗಮದ ನೌಕರ ಖಾದರ್ ಬಾಷಾನನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.ಕರಿಯಪ್ಪ ಲೇಔಟ್ ಮಲ್ಲಯ್ಯ ದೇವಾಲಯದ ಸಮೀಪ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಬಸವರಾಜ್ ಸುಕಾಲಪೇಟೆ, ಕೃಷ್ಣ ಏಳುಮೈಲು ಕ್ಯಾಂಪ್ ಎಂಬುವರನ್ನು ಬಂಧಿಸಿ ಮಾದಕ ದ್ರವ್ಯದ 30 ಪ್ಯಾಕೆಟ್ ಗಳನ್ನು ಜಪ್ತಿ ಮಾಡಲಾಗಿದೆ.

Read More »

ಜಮೀನು ಪೋಡಿ ಹೆಸರಿನಲ್ಲಿ ಲಂಚಕ್ಕೆ ಬೇಡಿಕೆ: ‘ಲೋಕಾ’ ಬಲೆಗೆ ಬಿದ್ದ ಸರ್ವೇಯರ್

ಮೈಸೂರು:- ಜಿಲ್ಲೆಯಲ್ಲಿ ಲೋಕಾಯುಕ್ತ ತಂಡವು ಪಿರಿಯಾಪಟ್ಟಣ ಕಂದಾಯ ಇಲಾಖೆಯ ಸರ್ವೇಯರ್ ರವೀಂದ್ರ ಅವರನ್ನು ಲಂಚ ಸ್ವೀಕಾರ ಪ್ರಕರಣದಲ್ಲಿ ಬಲೆಗೆ ಬೀಳಿಸಿದೆ.ಜಮೀನಿನ ಪೋಡಿ ದುರಸ್ತಿ ಮತ್ತು ಸಾಗುವಳಿ ಹೆಸರಿನಲ್ಲಿ, “ನಿಮ್ಮ ಜಮೀನು ರಸ್ತೆಗೊಳಪಡುವ ಸಾಧ್ಯತೆ ಇದೆ” ಎಂದು ಹೆದರಿಸಿ 1 ಲಕ್ಷ ರೂ.ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಇದೆ. ಲೋಕಾಯುಕ್ತ ತಂಡವು ಜಾಲ ಹಚ್ಚಿದಾಗ, 30 ಸಾವಿರ ರೂ. ಸ್ವೀಕರಿಸುವ ವೇಳೆ ರವೀಂದ್ರನನ್ನು ಹಿಡಿದಿದೆ. ಈ ಕಾರ್ಯಾಚರಣೆ ಲೋಕಾಯುಕ್ತ ಎಸ್‌ಪಿ ಟಿ.ಜೆ. …

Read More »

ಮಹಿಳೆಯ ಕೊಂದು ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಕುಂಬಳೆ: ನಾಲ್ಕು ವರ್ಷಗಳಿಂದ ಜತೆಯಾಗಿ ವಾಸಿಸುತ್ತಿದ್ದ ಕೊಲ್ಲಂ ಕೊಟ್ಟಿಯಂ ನಿವಾಸಿ ನೀತುಕೃಷ್ಣ (32) ಅವರನ್ನು ಚಿನ್ನಕ್ಕಾಗಿ ಕುತ್ತಿಗೆ ಬಿಗಿದು ಕೊಲೆಗೈದು ತಲೆಮರೆಸಿಕೊಂಡಿದ್ದ ವಯನಾಡು ವೈತಿರಿ ನಿವಾಸಿ ಎಂ. ಆಂಟೋ ಸೆಬಾಸ್ಟಿಯನ್‌ (44) ಎಂಬಾತನನ್ನು ಬದಿಯಡ್ಕ ಪೊಲೀಸರು ವಯನಾಡಿನಿಂದ ಬಂಧಿಸಿದ್ದಾರೆ.ಈ ಇಬ್ಬರು ಜತೆಯಾಗಿ ಶೇಣಿಯಲ್ಲಿ ವಾಸಿಸುತ್ತಿದ್ದರು. 2023 ಜನವರಿ 27ರಂದು ಬೆಳಗ್ಗೆ ನೀತುಕೃಷ್ಣ ಅವರ ಕೊಲೆ ನಡೆದಿತ್ತು. ಆಕೆಯ ಒಂದು ಪವನಿನ ಬ್ರೇಸ್‌ಲೆಟ್‌ಗಾಗಿ ಉಂಟಾದ ವಿವಾದ ಕೊಲೆಯಲ್ಲಿ ಕೊನೆಗೊಂಡಿತ್ತು. ಆರೋಪಿಯನ್ನು ತಿರುವನಂತಪುರದಿಂದ …

Read More »

ಬೆನ್ನುನೋವಿನಿಂದ ವಿದ್ಯಾರ್ಥಿನಿ ಸಾವು

ಒಡಿಶಾ ಮೂಲದ ಖಾಸಗಿ ಕಾಲೇಜಿನ ಎಂಜಿನಿರಿಂಗ್ ವಿದ್ಯಾರ್ಥಿನಿ ಆಕಾಂಕ್ಷಾ ಮೋಹಾಂತಿ (25) ಮೃತಪಟ್ಟವರು. ನ. 29ರಂದು ರಾತ್ರಿ ಮಣಿಪಾಲದ ಹೊಟೇಲೊಂದರಲ್ಲಿ ಊಟ ಮಾಡಿ ವಾಸ್ತವ್ಯದ ಕೊಠಡಿಗೆ ತೆರಳಿದ ಆಕೆಗೆ ಏಕಾಏಕಿ ಗಂಭೀರ ಸ್ವರೂಪದಲ್ಲಿ ಬೆನ್ನು ನೋವು ಕಾಣಿಸಿಕೊಂಡಿತು.ನಡೆದಾಡಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದ ಅವರನ್ನು ತತ್‌ಕ್ಷಣ ಸ್ನೇಹಿತರು ಆಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಕರೆದೊಯ್ದರು. ಪರೀಕ್ಷಿಸಿದ ವೈದ್ಯರು ಯುವತಿ ಈಗಾಗಲೇ ಕೊನೆಯುಸಿರೆಳೆದಿರುವುದಾಗಿ ತಿಳಿಸಿದರು. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು 1.38 ಲಕ್ಷ ರೂ. ವಂಚನೆ

ಬ್ರಹ್ಮಾವರ: ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು ಕರೆ ಮಾಡಿದ ವ್ಯಕ್ತಿ ಆನ್‌ಲೈನ್ ಮೂಲಕ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹೇರೂರು ಗ್ರಾಮದ ರೀಟಾ ರೊಡ್ರಿಗಸ್(50) ಎಂಬವರಿಗೆ ನ.20ರಂದು ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಎಟಿಎಂ ರಿನಿವಲ್ ಮಾಡಲು ಇದೆ ಎಂದು ಹೇಳಿ, ಆಧಾರ್ ಕಾರ್ಡ್, ಪಾನ್ ಕಾರ್ಡ್ ವಿವರ ಪಡೆದು ನಂತರ ಮೊಬೈಲ್‌ಗೆ ಓಟಿಪಿ ಕಳುಹಿಸಿದನು.ಅದನ್ನು ಕೇಳಿ ಪಡೆದು ರೀಟಾ ಅವರ ಬ್ಯಾಂಕ್ ಖಾತೆಯಿಂದ …

Read More »