Breaking News

BigTv News

ಮಂಗಳೂರು: ಜೈಲ್‌ನಲ್ಲಿ ಗ್ಯಾಂಗ್ ವಾರ್, ಸುಹಾಸ್ ಶೆಟ್ಟಿ ಕೊಲೆ ಆರೋಪಿ ಮೇಲೆ ಕೈದಿಗಳಿಂದ ಹಲ್ಲೆ!

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳು ಹಾಗೂ ಮತ್ತೊಂದು ಗ್ಯಾಂಗ್‌ನ ನಡುವೆ ಘರ್ಷಣೆ ನಡೆದಿರುವುದಾಗಿ ವರದಿಯಾಗಿದೆ.ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ನೌಶಾದ್ ಮೇಲೆ ಹಲವಾರು ಕೈದಿಗಳು ಹಲ್ಲೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಸಹಾಯಕ ಪೊಲೀಸ್ ಆಯುಕ್ತ ಪ್ರತಾಪ್ ಸಿಂಗ್ ಥೋರಟ್ ಜೈಲಿಗೆ ತಕ್ಷಣ ಆಗಮಿಸಿದ್ದು,ಗಲಾಟೆಯ ನಂತರ, ಪೊಲೀಸರು ಜೈಲಿನ ಆವರಣದ ಸುತ್ತಲೂ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ.ಈ ಘಟನೆಯ …

Read More »

ರಾಯಚೂರು :CRPF ಯೋಧನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ!

ದೆಹಲಿಯಿಂದ ಆಸ್ಸಾಂಗೆ ವರ್ಗಾವಣೆಯಾದ ಹಿನ್ನೆಲೆ ರಜೆ ಮೇಲೆ ಊರಿಗೆ ಬಂದಿದ್ದ ಯೋಧನ ಮೇಲೆ ಹಲ್ಲೆ ನಡೆದಿದೆ. ಅಕ್ಕನ ಜಮೀನಿನ ಬದುವಿನ ವಿಚಾರದಲ್ಲಿ ಅಕ್ಕನ ಪರ ನ್ಯಾಯ ಕೇಳಿದ್ದರಿಂದ ಜಗಳವಾಗಿದ್ದು, ಪಕ್ಕದ ಜಮೀನಿನ ಅಮರೇಶ್, ಮಂಜುನಾಥ ಎಂಬುವವರು ಹಲ್ಲೆ ನಡೆಸಿದ್ದಾರೆ.ವಾಕಿಂಗ್ ಮಾಡುತ್ತಿದ್ದಾಗ ಏಕಾಏಕಿ ಬಂದ ಅಮರೇಶ್ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಚನ್ನಬಸಪ್ಪ ತಪ್ಪಿಸಿಕೊಂಡು ಓಡಿದ್ದು, ಆದರೂ ಬಿಡದೇ ಬೆನ್ನಟ್ಟಿ ಹಲ್ಲೆಗೆ ಮುಂದಾಗಿದ್ದಾರೆ. ಆಗ ಸ್ಥಳೀಯರು ಸಹಾಯಕ್ಕೆ ಮುಂದಾಗಿದ್ದಾರೆ. ಸದ್ಯ …

Read More »

ಪಿರಿಯಾಪಟ್ಟಣ: ಗಾಂಜಾ ಮಾರಾಟಕ್ಕೆ ಯತ್ನ; ಆರೋಪಿ ಬಂಧನ!!

ಗೋಣಿಕೊಪ್ಪ ರಸ್ತೆಯಲ್ಲಿನ ಉತ್ತೇನಹಳ್ಳಿ ಗೇಟ್ ಬಳಿ ಇರುವ ಖಾಸಗಿ ಹೊಟೇಲ್ ಮುಂಭಾಗ ಆರೋಪಿ ಮತೀನ್‌ಖಾನ್ ಭಾನುವಾರ ಮಧ್ಯಾಹ್ನ ಪ್ಲಾಸ್ಟಿಕ್ ಕವರ್‌ನಲ್ಲಿ ಗಾಂಜಾ ಇಟ್ಟುಕೊಟ್ಟು ಸಾರ್ವಜನಿಕರಿಗೆ ₹ 150 ರಿಂದ ₹ 200ಗಳಿಗೆ ಮಾರಾಟ ಮಾಡುತ್ತಿದ್ದು ಈ ವೇಳೆ ಸ್ಥಳೀಯರು ನೀಡಿದ ಮಾಹಿತಿಯಂತೆ ಪೊಲೀಸ್ ಇನ್‌ಸ್ಪೆಕ್ಟರ್ ಗೋವಿಂದರಾಜು, ಪಿಎಸ್‌ಐ ನವ್ಯಾ ಮತ್ತು ಸಿಬ್ಬಂದಿ ಸ್ಥಳಕ್ಕೆ ಹೋಗಿ ತಪಾಸಣೆ ಮಾಡಿದಾಗ ಗಾಂಜಾ ಇರುವುದು ಪತ್ತೆಯಾಗಿದೆ. ಆರೋಪಿಯನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂ ಮಹಾದೇವಪ್ಪ, …

Read More »

ಮಣಿಪಾಲ : ಬಿಬಿಎ ವಿದ್ಯಾರ್ಥಿ ಆತ್ಮಹತ್ಯೆ!

ಮಣಿಪಾಲದ ಸ್ಕೂಲ್ ಆಫ್ ಕಾಮರ್ಸ್ ಎಕೊನೋಮಿಕ್ ಅಕಾಡೆಮಿ ವಿದ್ಯಾರ್ಥಿ ಯೊಬ್ಬ ಅನುತ್ತೀರ್ಣಗೊಂಡ ಚಿಂತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.ಮೊದಲ ವರ್ಷದ ಸೆಕೆಂಡ್ ಸೆಮಿಸ್ಟರ್‌ನಲ್ಲಿ 4 ವಿಷಯ ಗಳಲ್ಲಿ ಅನುತ್ತೀರ್ಣಗೊಂಡ ವಿಚಾರದಲ್ಲಿ ಮನನೊಂದು ಮೇ 12ರಂದು ರಾತ್ರಿಯಿಂದ ಮೇ 18ರ ಬೆಳಗಿನ ಮಧ್ಯಾವಧಿಯಲ್ಲಿ ಹಾಸ್ಟೆಲ್ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೃತದೇಹವು ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Read More »

ರಾಯಚೂರು: ಸಿಡಿಲು ಬಡಿದು ಕುರಿಗಾಹಿ, ಎತ್ತು ಸಾವು!

ಜಿಲ್ಲೆಯ ವಿವಿಧೆಡೆ ಭಾನುವಾರ ತಡ ರಾತ್ರಿ ಹಾಗೂ ಸೋಮವಾರ ಸಂಜೆ ಸಾಧಾರಣ ಮಳೆಯಾಗಿದೆ. ಭಾನುವಾರ ರಾತ್ರಿ ಲಿಂಗಸುಗೂರು ತಾಲ್ಲೂಕಿನ ಜಾಂತಾಪೂರ ಗ್ರಾಮದಲ್ಲಿ ಭಾನುವಾರ ರಾತ್ರಿ ಸಿಡಿಲು ಬಡಿದು ಅಮರಗುಂಡಪ್ಪ ತಿಪ್ಪಣ್ಣ ಅವರ ಎತ್ತು ಸಾವನ್ನಪ್ಪಿದೆ.ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಹೊರವಲಯದಲ್ಲಿ ಸೋಮವಾರ ಸಿಡಿಲು ಬಡಿದು ಕುರಿಗಾಹಿ ಹನುಮಗೌಡ ನಾಯಕ (16) ಸ್ಥಳದಲ್ಲೇ ಮೃತಪಟ್ಟಿದ್ದಾನೆ

Read More »

ಚಿಕ್ಕಮಗಳೂರು: ನಾಯಿಗಳ ದಾಳಿಗೆ ಜಿಂಕೆ ಸಾವು!

ಮೂಗ್ತಿಹಳ್ಳಿ ಬಳಿ ಸೋಮವಾರ ಬೆಳಿಗ್ಗೆ ಕಾಣಿಸಿಕೊಂಡ ಜಿಂಕೆಯನ್ನು ಬೀದಿ ನಾಯಿಗಳು ಅಟ್ಟಾಡಿಸಿದ್ದವು. ಈ ವೇಳೆ ತಂತಿ ಬೇಲಿ ದಾಟುವ ಪ್ರಯತ್ನದಲ್ಲಿ ಗಾಯಗೊಂಡಿತ್ತು.ನಾಯಿಗಳ ದಾಳಿಯಿಂದ ನಿತ್ರಾಣಗೊಂಡಿದ್ದ ಜಿಂಕೆ ರಕ್ಷಿಸಲು ಸ್ಥಳೀಯರು ನಡೆಸಿದ ಪ್ರಯತ್ನದ ನಡುವೆಯೂ ಮೃತಪಟ್ಟಿದೆ.ಸ್ಥಳೀಯರು ನಾಯಿಗಳನ್ನು ಓಡಿಸಿ ಜಿಂಕೆಯನ್ನು ಹಿಡಿದು ರಕ್ಷಣೆ ಮಾಡಲು ಪ್ರಯತ್ನಿಸಿದರು.ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಅಧಿಕಾರಿಗಳು ಜಿಂಕೆಯನ್ನು ಪಶು ವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದರು. ನಾಯಿಗಳ ದಾಳಿಯಿಂದ ಗಾಬರಿಗೊಂಡಿದ್ದ ಜಿಂಕೆ ಆಘಾತಕ್ಕೆ ಒಳಗಾಗಿತ್ತು. …

Read More »

ನರಗುಂದ :ಬೀದಿ ನಾಯಿಗಳ ದಾಳಿ, 7 ಟಗರು ಸಾವು!

ರಾಚಯ್ಯ ನಗರದ ಹತ್ತಿರವಿರುವ ಫಾರ್ಮ್‌ಹೌಸ್‌ನಲ್ಲಿ ಸಾಕಿದ ಟಗರುಗಳ ಮೇಲೆ ಭಾನುವಾರ ಸಂಜಡ ಬೀದಿ ನಾಯಿಗಳು ದಾಳಿ ನಡೆಸಿದ್ದು, ಬೀರಪ್ಪ ಹನಮಪ್ಪ ಗೊಗೇರಿಯವರಿಗೆ ಸೇರಿದ 7 ಟಗರುಗಳು ಮೃತಪಟ್ಟಿವೆ. ಐದು ಟಗರುಗಳು ಗಂಭೀರ ಗಾಯಗೊಂಡಿವೆ.ತೀವ್ರ ಗಾಯಗೊಂಡ ಟಗರುಗಳಿಗೆ ತಾಲ್ಲೂಕು ಪಶುವೈದ್ಯಾಧಿಕಾರಿ ಡಾ.ಸಂತೋಷ ಫಾರ್ಮ್‌ಹೌಸ್‌ಗೆ ಭೇಟಿ ನೀಡಿ ಚಿಕಿತ್ಸೆ ನೀಡಿದ್ದಾರೆ.ಬೀದಿ ನಾಯಿಗಳ ದಾಳಿಯಿಂದ 7 ಟಗರು ಸಾವನ್ನಪ್ಪಿ, ಕೆಲವು ಟಗರುಗಳು ಗಾಯಗೊಂಡಿವೆ. ಇದರಿಂದ ₹1 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ. ಬೀದಿ ನಾಯಿಗಳ ದಾಳಿಯಿಂದ …

Read More »

ಎಂಜಿನಿಯರ್ ದುರಂತ ಸಾವು, ಕೆಲಸದ ಒತ್ತಡ ಮತ್ತು ಕಿರುಕುಳದ ಆರೋಪ!

ನಿಖಿಲ್ ಸೋಮವಂಶಿ ಅವರ ಮೃತದೇಹವು ಮೇ 8ರಂದು ಬೆಂಗಳೂರಿನ ಅಗರ ಕೆರೆಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಬೆಂಗಳೂರು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ರೆಡ್ಡಿಟ್ ಮತ್ತು ಕೆಲವು ಮಾಧ್ಯಮ ವರದಿಗಳ ಪ್ರಕಾರ, ಕ್ರುಟ್ರಿಮ್ ಸಂಸ್ಥೆಯ ಹೆಸರೇಳಲು ಇಚ್ಛಿಸದ ನಿಖಿಲ್ ಅವರ ಸಹೋದ್ಯೋಗಿಗಳು ಅಮೆರಿಕ ಮೂಲದ ವ್ಯವಸ್ಥಾಪಕರ ಕಿರುಕುಳ ಮತ್ತು ಅಪಾಯಕಾರಿ ಕೆಲಸದ ವಾತಾವರಣದಿಂದಾಗಿ ನಿಖಿಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.ಸಹೋದ್ಯೋಗಿಗಳ ಆರೋಪದ ಪ್ರಕಾರ, ಅಮೆರಿಕ ಮೂಲದ ವ್ಯವಸ್ಥಾಪಕ ರಾಜ್‌ಕಿರಣ್ ಪಾನುಗಂಟಿ ಅವರು …

Read More »

ದೆಹಲಿ :ಬಾಲಕನಿಗೆ ಚಾಕು ಇರಿದು ಹತ್ಯೆ, ನಾಲ್ವರ ಬಂಧನ!

ಕಾರ್ಯಕ್ರಮವೊಂದರಲ್ಲಿ ಸಂಗೀತ ನುಡಿಸುವ ವಿಚಾರದಲ್ಲಿ ನಡೆದ ಜಗಳದಲ್ಲಿ 18 ವರ್ಷದ ಬಾಲಕನೊಬ್ಬ ಚಾಕು ಇರಿತಕ್ಕೊಳಗಾಗಿ ಸಾವನ್ನಪ್ಪಿದ ಘಟನೆ ವಾಯುವ್ಯ ದೆಹಲಿಯಲ್ಲಿ ನಡೆದಿದೆ.ಕಾರ್ಯಕ್ರಮವೊಂದರಲ್ಲಿ ಸಂಗೀತ ನುಡಿಸುವ ವಿಚಾರದಲ್ಲಿ ಸೇನ್ ಮತ್ತು ಹುಡುಗರ ಗುಂಪಿನ ನಡುವೆ ಸಣ್ಣಪುಟ್ಟ ವಾಗ್ವಾದ ನಡೆದಿತ್ತು.ಮರುದಿನ ಪ್ರತೀಕಾರವಾಗಿ ಹುಡುಗರ ಗುಂಪು ಅವನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ, ನಾಲ್ವರು ಬಾಲಾಪರಾಧಿಗಳನ್ನು ಬಂಧಿಸಲಾಗಿದ್ದು, ದಾಳಿಗೆ ಬಳಸಿದ ಆಯುಧವನ್ನು ಇನ್ನೂ ವಶಪಡಿಸಿಕೊಳ್ಳಲಾಗಿಲ್ಲ ಎಂದು …

Read More »

ಉಡುಪಿ : ಪಾದೂರು ತೈಲ ಸಂಗ್ರಹಾಲಯದ ಮೇಲೆ ಡ್ರೋನ್‌ ದಾಳಿ!

ಪಾಕಿಸ್ತಾನದ ಮೇಲೆ ಭಾರತ ದಾಳಿಯ ಬೆನ್ನಲ್ಲೇ ಉಡುಪಿ ಜಿಲ್ಲೆಯ ಪಾದೂರು ತೈಲ ಸಂಗ್ರಹಾಲಯದ ಮೇಲೆ ಡ್ರೋನ್‌ ದಾಳಿ ನಡೆದಿದೆ. ಸಂಜೆ 4 ಗಂಟೆಯ ಸುಮಾರಿಗೆ ಈ ದಾಳಿ ನಡೆದಿದ್ದು, ತೈಲ ಸಂಗ್ರಹಾಲಯದ ಒಳಗೆ ಹಾಗೂ ಹೊರ ಭಾಗಕ್ಕೆ ಹಾನಿಯಾಗಿದೆ.ಕೂಡಲೇ ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್‌ ಕಂಟ್ರೋಲ್‌ ರೂಂಗೆ ಮಾಹಿತಿಯನ್ನು ನೀಡಲಾಗಿತ್ತು. ದಾಳಿಯ ಬೆನ್ನಲ್ಲೇ ಐಎಸ್‌ಪಿಆರ್‌ಎಲ್‌ನ ಅಗ್ನಿಶಾಮಕ ವಾಹನ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತನ್ನನ್ನು ತೊಡಗಿಸಿಕೊಂಡಿತ್ತು. ಅಷ್ಟೇ ಅಲ್ಲಾ, ಅದಾನಿ …

Read More »