ಹುಬ್ಬಳ್ಳಿ: ಹುಬ್ಬಳ್ಳಿ ಇಂದಿರಾ ಕ್ಯಾಂಟೀನ್ ಸ್ಥಾಪನೆ ಮಾಡುವಲ್ಲಿ ಪರ-ವಿರೋಧ ಚರ್ಚೆ ಜೋರಾಗಿ ನಡೆದಿದೆ. ಸ್ಮಶಾನದಲ್ಲಿನ ಇಂದಿರಾ ಕ್ಯಾಂಟೀನಿಂದ ಪ್ರಮೋದ ಮುತಾಲಿಕ್ಗೆ ಏನು ತೊಂದರೆ..? ಅವರನ್ನು ಯಾರೂ ಇಂದಿರಾ ಕ್ಯಾಂಟೀನ್ಗೆ ಊಟಕ್ಕೆ ಕರೆದಿಲ್ಲ, ಹಿಂದೂಗಳ ಬಗ್ಗೆ ಮುತಾಲಿಕ್ ಅವರದ್ದು ಡೋಂಗಿತನ, ಇಂದಿರಾ ಕ್ಯಾಂಟೀನ್ ವಿರೋಧಿಸುವದು ಸನಾತನಿಗಳ ಕುತಂತ್ರ ಎಂದು ವಿವಿಧ ದಲಿತ ಸಂಘಟನೆಗಳ ಒಕ್ಕೂಟ ಆರೋಪಿಸಿದೆ. ಇನ್ನು ಸಮಾಜಕ್ಕೆ ಒಳ್ಳೆಯದಾಗೋ ಒಂದೇ ಒಂದು ಕೆಲಸ ಮುತಾಲಿಕ್ ಅವರು ಮಾಡಿಲ್ಲ, ಇಂದಿರಾ ಕ್ಯಾಂಟೀನ್ …
Read More »44 ವರ್ಷ ದಾಂಪತ್ಯ ಜೀವನ ನಡೆಸಿ ಸಾವಿನಲ್ಲಿ ಒಂದಾದ ಅಪರೂಪದ ದಂಪತಿ
ಹುಬ್ಬಳ್ಳಿ : ೪೪ ವರ್ಷ ಸಿತಿಪತಿಯಾಗಿ ವೈವಾಹಿಕ ಜೀವನ ನಡೆಸಿದ್ದು, ಸಾವಿನಲ್ಲೂ ಗಂಡ ಹೆಂಡತಿ ಒಂದಾಗಿದ್ದ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದೆ. ಕುಸುಗಲ್ ಗ್ರಾಮದ ಶಂಕರಪ್ಪ ಹೊಂಬಳ ಹಾಗೂ ಅವರ ಪತ್ನಿ ಅನ್ನಪೂರ್ಣ ಹೊಂಬಳ ಇಬ್ಬರೂ ಸಾವಿನಲ್ಲೂ ಒಂದಾಗಿದ್ದಾರೆ. ಅಂದ ಹಾಗೇ 72 ವರ್ಷದ ಶಂಕರಪ್ಪ ಅವರು ಇಂದು ಬೆಳಿಗ್ಗೆ 6 ಗಂಟೆಗೆ ಹೃದಯಾಘತದಿಂದ ಮೃತಪಟ್ಟಿದ್ದಾರೆ. ಗಂಡನ ಸಾವಿನ ಸುದ್ದಿ ಕೇಳಿ ಕೆಲವೆ ಗಂಟೆಯಲ್ಲಿ ಪತ್ನಿ ಅನ್ನಪೂರ್ಣ …
Read More »ತಿರುಪತಿ ಲಾಡು ಪ್ರಕರಣಕ್ಕೆ ಕಿಡಿಕಾರಿದ ಶೆಟ್ಟರ್
ಹುಬ್ಬಳ್ಳಿ: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗಮೋಹನ್ ರೆಡ್ಡಿ ಹಾಗೂ ಅವರ ತಂದೆ ಕನ್ವರ್ಟೆಡ್ ಕ್ರಿಶ್ಚಿಯನ್ಸ್. ಹಿಂದು ಧರ್ಮದ ಬಗ್ಗೆ ನಂಬಿಕೆ ವಿಶ್ವಾಸ ಇಲ್ಲ. ಹಿಂದೂತ್ವದ ಬಗ್ಗೆ ನಂಬಿಕೆಯೂ ಇಲ್ಲ.ತಿರುಪತಿ ಲಾಡುವಿನಲ್ಲಿ ಪ್ರಾಣಿಗಳ ಕೊಬ್ಬು ಬೆರಕೆ ವಿಚಾರದಲ್ಲಿ ಸನಾತನ ಧರ್ಮ ಪ್ರಾಧಿಕಾರ ರಚನೆ ಆಗಬೇಕು ಎಂದು ಮಾಜಿ ಸಿಎಂ ಹಾಗೂ ಸಂಸದ ಜಗದೀಶ್ ಶೆಟ್ಟರ್ ಕಿಡಿ ಕಾರಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಟಿಟಿಡಿ ಸಮಿತಿಯಲ್ಲಿ ಹಿಂದು ಧರ್ಮದ ಮೇಲೆ …
Read More »ಅಣ್ಣಿಗೇರಿಯಲ್ಲಿ ಪೌರ ಕಾರ್ಮಿಕರ ದಿನ ಆಚರಣೆ
ಅಣ್ಣಿಗೇರಿ: ಪಟ್ಟಣದ ಆದಿ ಕವಿ ಪಂಪ ಸ್ಮಾರಕದಲ್ಲಿ ಪೌರಾಡಳಿತ ನಿರ್ದೆಶನಾಲಯ ಬೆಂಗಳೂರು. ಜಿಲ್ಲಾಡಳಿತ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶ.ಧಾರವಾಡ ಪುರಸಭೆ ಕಾರ್ಯಾಲಯ ಅಣ್ಣಿಗೇರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಲಾಗಿದ್ದ ಪೌರ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದ ಸಾನಿಧ್ಯವನ್ನು ದಾಸೋಹ ಮಠದ ಶ್ರೀ ಶಿವಕುಮಾರ ಶ್ರೀಗಳು ವಹಿಸಿದ್ದರು. ಈ ವೇಳೆ ಪುರಸಭೆಯ ಮುಖ್ಯಾಧಿಕಾರಿಗಳಾದ ವೈ ಜಿ ಗದ್ದಿಗೌಡರ್, ಶಾನು ನಾಶಿಪುಡಿ, ಪುರಸಭೆ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Read More »ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿ ಕೇಂದ್ರವನ್ನು ಉದ್ಘಾಟಿಸಿದ ಶಾಸಕ
ಅಣ್ಣಿಗೇರಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿ ಕೇಂದ್ರವನ್ನು ಶಾಸಕ ಎನ್.ಎಚ್. ಕೋನರಡ್ಡಿ ಉದ್ಘಾಟಿಸಿದರು. ತಹಶೀಲ್ದಾರ್ ಮಂಜುನಾಥ ದಾಸಪ್ಪನವರ, ರಿಷಿಕುಮಾರ ಸಾರಂಗಿ, ಬಾಪುಗೌಡ್ರ ಪಾಟೀಲ, ಬಸವಗೌಡ್ರ ಕುರಹಟ್ಟಿ, ನಿಜಗುಣೆಪ್ಪ ಅಕ್ಕಿ, ಚಂಬಣ್ಣಹಾಳದೋಟರ, ಮುದಕಣ್ಣ ಕೊರವರ ಇನ್ನಿತರರಿದ್ದರು.
Read More »ಮೊರಬ ಗ್ರಾಮದಲ್ಲಿ ಹೆಸರು ಖರೀದಿ ಕೇಂದ್ರ ಪ್ರಾರಂಭ
ನವಲಗುಂದ: ಸರಕಾರದ ಬೆಂಬಲ ಯೋಜನೆ ಅಡಿಯಲ್ಲಿ ಹೆಸರು ಖರೀದಿ ಕೇಂದ್ರ ವನ್ನು ತಾಲೂಕಿನ ಮೊರಬ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಚೇರಿಯಲ್ಲಿ ಪ್ರಾ ರಂಭಿಸಲಾಯಿತು. ಖರೀದಿ ಕೇಂದ್ರದ ಪೂಜೆಯಲ್ಲಿ ಭಾಗವಹಿಸಿ ಉದ್ಘಾಟನೆಯನ್ನು ಶಾಸಕ ಎನ್.ಎಚ್.ಕೋನರಡ್ಡಿ ನೆರವೇರಿಸಿದರು. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಈ ವೇಳೆ ಸಹಕಾರಿ ಸಂಘದ ಅಧ್ಯಕ್ಷ ಶರಣಬಸವೇಶ ವಿರಕ್ತಮಠ, ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರು ಸೇರಿದಂತೆ ಗ್ರಾಮದ ಗುರು ಹಿರಿಯರು, ಯುವಕರು …
Read More »ಛಾಯಾಗ್ರಾಹಕರ ಕುಟುಂಬಕ್ಕೆ ಸಹಾಯ, ಸಹಕಾರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ : ಕೋನರಡ್ಡಿ
ಅಣ್ಣಿಗೇರಿ: ಛಾಯಾಗ್ರಾಹಕರ ಉದ್ಯೋಗ ಬಹಳ ಕಷ್ಟಕರವಾಗಿ ಸಾಗುತ್ತಿದೆ. ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಛಾಯಾಗ್ರಾಹಕರ ಕುಟುಂಬಕ್ಕೆ ಸಹಾಯ, ಸಹಕಾರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಕೋನರಡ್ಡಿ ಭರವಸೆ ನೀಡಿದರು. ಅವರು ಸ್ಥಳೀಯ ಆದಿಕವಿ ಪಂಪ ಸ್ಮಾರಕ ಭವನದಲ್ಲಿ ಹಮ್ಮಿಕೊಂಡಿದ್ದ ನೂತನ ಅಣ್ಣಿಗೇರಿ ತಾಲ್ಲೂಕು ಛಾಯಾ ಗ್ರಾಹಕರ ಕ್ಷೇಮಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಪಟ್ಟಣದಲ್ಲಿ ನೂತನವಾಗಿ ಛಾಯಾಗ್ರಾಹಕರ ಸಮುದಾಯ ಭವನ ನಿರ್ಮಾಣಕ್ಕಾಗಿ ಶಾಸಕರ ಅನುದಾನದಲ್ಲಿ 5 …
Read More »ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ರಘುವೀರಾನಂದ ಮಹಾರಾಜ್ ನಿಧನ
ಹುಬ್ಬಳ್ಳಿ: ಇಲ್ಲಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ರಘುವೀರಾನಂದ ಮಹಾರಾಜ್ (60) ನಿಧನರಾದರು. ಕಲ್ಯಾಣ ನಗರದ ಐದನೇ ಅಡ್ಡರಸ್ತೆಯಲ್ಲಿರುವ ಮಠದ ಆವರಣದಲ್ಲಿ ಮಂಗಳವಾರ ಬೆಳಿಗ್ಗೆ 9.30 ರವರೆಗೆ ಸ್ವಾಮೀಜಿಯವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೇಶ್ವಾಪುರ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಆಶ್ರಮದ ಮೂಲಗಳು ತಿಳಿಸಿವೆ.
Read More »ನಟೋರಿಯಸ್ ರೌಡಿ ಶೀಟರ್ ಅರೆಸ್ಟ್ ಮಾಡಿದ ಹುಬ್ಬಳ್ಳಿ ಪೋಲಿಸರು
ಹುಬ್ಬಳ್ಳಿಯಲ್ಲಿ ಮತ್ತೊಂದು ಫೈರಿಂಗ್… ಖಾಕಿಪಡೆಗೆ ಚಳ್ಳೆಹಣ್ಣು ತಿನಿಸಿಲು ಹೋಗಿ ಕಿಮ್ಸ್ ಪಾಲಾದ ಭೂಪ!!!! ರೋಡಲ್ಲಿ ನಿಂತು ವಸೂಲಿ ಮಾಡಿದ್ರೆ ಕಾಲು ಕಳೆದುಕೊಳ್ಳುವ ಗ್ಯಾರಂಟಿ ಸಂದೇಶ ಕೊಟ್ಟ ಪೊಲೀಸರು! ಹುಬ್ಬಳ್ಳಿ:ತಲ್ವಾರ್ ತೋರಿಸಿ ಚಿನ್ನಾಭರಣ, ಹಣ ಸೇರಿದಂತೆ ಮೊಬೈಲ್ ಫೋನ್ಗಳನ್ನು ದೋಚುತ್ತಿದ್ದ ನಟೋರಿಯಸ್ ರೌಡಿ ಶೀಟರ್ ಕಾಲಿಗೆ ಪೊಲೀಸರು ಗುಂಡೇಟು ನೀಡಿ ಅರೆಸ್ಟ್ ಮಾಡಿದ್ದಾರೆ. ವಿನೋದ್ ಗುಡಿಹಾಳ ಎಂಬಾತನ ಮೇಲೆಯೇ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಈತ ಬಳ್ಳಾರಿ, ಧಾರವಾಡ, ಹಾವೇರಿ ಸೇರಿದಂತೆ ವಿವಿಧ …
Read More »ಕೃಷಿ ಮೇಳಕ್ಕೆ ಅಂದಾಜು ಏಳೂವರೆ ಲಕ್ಷ ಜನ ಭೇಟಿ
ಧಾರವಾಡ: ನಿನ್ನೆ ಭಾನುವಾರ ರಜಾ ದಿನವಾಗಿದ್ದರಿಂದ ಧಾರವಾಡದ ಕೃಷಿ ಮೇಳಕ್ಕೆ ಅಂದಾಜು ಏಳೂವರೆ ಲಕ್ಷ ಜನ ಭೇಟಿ ಕೊಟ್ಟಿದ್ದರು. ಇಂದು ಸೋಮವಾರವಾದರೂ ಮಧ್ಯಾಹ್ನದವರೆಗೂ ಸುಮಾರು ನಾಲ್ಕೂವರೆ ಲಕ್ಷ ಜನ ಕೃಷಿ ಮೇಳಕ್ಕೆ ಬಂದು ಕೃಷಿ ಮೇಳದ ಮೆರಗು ಮತ್ತಷ್ಟು ಹೆಚ್ಚಾಗುವಂತೆ ಮಾಡಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದಲೂ ಜನ ಕೃಷಿ ಮೇಳಕ್ಕೆ ಆಗಮಿಸಿದ್ದು, ಕೃಷಿಗೆ ಬೇಕಾದ ಸಲಕರಣೆಗಳನ್ನು ಖರೀದಿ ಮಾಡಿಕೊಂಡು ಹೋಗುತ್ತಿದ್ದಾರೆ. ಇದರ ಜೊತೆಗೆ ಕೃಷಿ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಪೂರಕ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





