Breaking News

Shaikh BigTv

ಬೈಕ್ ನಲ್ಲಿ ಅವಿತುಕೊಂಡು ಕುಳಿತಿದ್ದ ಕೆರೆ ಹಾವು

ಹುಬ್ಬಳ್ಳಿ: ಪೊಲೀಸ್ ಸಿಬ್ಬಂದಿಯೊಬ್ಬರ ಬೈಕ್ ನಲ್ಲಿ ಅವಿತುಕೊಂಡು ಕುಳಿತಿದ್ದ ಕೆರೆ ಹಾವನ್ನು ರಕ್ಷಣೆ ಮಾಡುವಲ್ಲಿ ಹಾಗೂ ಜನರ ಆತಂಕವನ್ನು ದೂರ ಮಾಡುವಲ್ಲಿ ಉರಗ ತಜ್ಞ ಸ್ನೇಕ್ ನಾಗರಾಜ ಯಶಸ್ವಿಯಾಗಿದ್ದಾರೆ. ಅಮರಗೋಳ ಅಶ್ವಮೇಧ ಪಾರ್ಕ್ ನಲ್ಲಿರುವ ಪೋಲಿಸ್ ಸಿಬ್ಬಂದಿಯೊಬ್ಬರ ಬೈಕಿನಲ್ಲಿ ಅವಿತುಕೊಂಡಿದ್ದ ಕೆರೆ ಹಾವನ್ನು ರಕ್ಷಣೆ ಮಾಡಿದ್ದಾರೆ. ಇನ್ನೂ ಸ್ಥಳೀಯರಿಗೆ ಹಾವಿನ ಬಗ್ಗೆ ಹಾಗೂ ಹಾವನ್ನು ರಕ್ಷಣೆ ಮಾಡುವ ಬಗ್ಗೆ ಜಾಗೃತಿ ಮೂಡಿಸಿದರು. ಇನ್ನೂ ಬೈಕ್ ಹಾಗೂ ಮನೆಯ ಮುಂದೆ ಬಿಟ್ಟಿರುವ …

Read More »

ಪ್ರೀತಿಸಿದ ಪ್ರಮೇಗಳಿಗೆ ಅಡ್ಡಿಯಾದ ಜಾತಿ

ಧಾರವಾಡ: ಪರಸ್ಪರ ಪ್ರೀತಿ ಮಾಡಿದ ಜೋಡಿ ಇದೀಗ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ರಕ್ಷಣೆಗೆ ಖಾಕಿಪಡೆಗೆ ಅಂಗಲಾಚಿದ್ದಾರೆ. ಧಾರವಾಡ ಮೂಲದ ಯುವಕ ಹಾಗೂ ಹಾವೇರಿ ಮೂಲದ ಯುವತಿ ನಡುವೆ ಕಳೆದ 6 ವರ್ಷಗಳ ಹಿಂದೆಯೇ ಪ್ರೇಮಾಂಕುರವಾಗಿತ್ತು. ಯುವಕ ಶಂಭು ಮನೆಯಲ್ಲಿ ಬಾಡಿಗೆ ಇದ್ದ ಯುವತಿ ಶಾಲಿನಿ ಅಲ್ಲಿಯೇ ಕೆಲ ವರ್ಷ ವಾಸವಿದ್ದರು. ಹೀಗಾಗಿ ಇವರಿಬ್ಬರ ನಡುವೆ ಆಗಲೇ ಪ್ರೇಮ ಚಿಗುರೊಡೆದಿತ್ತು. ಇದನ್ನು ಮನೆಯವರ ಜೊತೆ ಚರ್ಚೆ ಮಾಡಿದಾಗ, ಇಬ್ಬರ ಜಾತಿ ಬೇರೆ …

Read More »

ಐತಿಹಾಸಿಕ ದಾಖಲೆ ಹಾಗೂ ಛಾಯಾಚಿತ್ರಗಳ ಪ್ರದರ್ಶನ ಕಾರ್ಯಕ್ರಮ

ಧಾರವಾಡ : ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಜಿಲ್ಲಾಡಳಿತ ಮತ್ತು ಧಾರವಾಡ ಪ್ರಾದೇಶಿಕ ಪತ್ರಗಾರ ಇಲಾಖೆಯಿಂದ ಸ್ವಾತಂತ್ರ್ಯ ಸಂಭ್ರಮಾಚರಣೆ ನಿಮಿತ್ತ ಎರಡು ದಿನಗಳವರೆಗೆ ಐತಿಹಾಸಿಕ ದಾಖಲೆ ಹಾಗೂ ಛಾಯಾಚಿತ್ರಗಳ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಶಾಸಕ ಅರವಿಂದ ಬೆಲ್ಲದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶಾಸಕ ಎನ್. ಎಚ್. ಕೋನರಡ್ಡಿ, ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಭಾಗವಹಿಸಿದ್ದರು.

Read More »

ಆಗಸ್ಟ್ 20 ರಂದು ಡಿ. ದೇವರಾಜ ಅರಸು ಜಯಂತಿ

ಹುಬ್ಬಳ್ಳಿ: ತಾಲೂಕು ಆಡಳಿತದಿಂದ ಆಗಸ್ಟ್ 20 ರಂದು ಡಿ. ದೇವರಾಜ ಅರಸು ಜಯಂತಿ ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯನ್ನು ಆಗಸ್ಟ್ 14 ರಂದು ಸಂಜೆ 4 ಗಂಟೆಗೆ ತಹಶೀಲ್ದಾರ ಕಾರ್ಯಾಲಯದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಮಾಜದ ಮುಖಂಡರು, ಸಂಘ-ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಭೆಗೆ ಹಾಜರಾಗಿ ಸೂಕ್ತ ಸಲಹೆ ಸೂಚನೆ ನೀಡಬೇಕೆಂದು ಹುಬ್ಬಳ್ಳಿ ಶಹರ ತಹಶೀಲ್ದಾರರಾದ ಕಲಗೌಡ ಪಾಟೀಲ ತಿಳಿಸಿದ್ದಾರೆ.

Read More »

ನೀರು ಪೂರೈಕೆಯಾಗದೆ ಹಿನ್ನಲೆ ರಸ್ತೆಯಲ್ಲಿ ಪ್ರತಿಭಟನೆ

ಧಾರವಾಡ:ಕುಡಿಯಲು ನೀರು ಇಲ್ಲ ಎಂದು ಆಕ್ರೋಶಗೊಂಡ ಧಾರವಾಡ ತಾಲೂಕಿನ ಸೋಮಾಪುರ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಕಳೆದ ಒಂದು ತಿಂಗಳಿನಿಂದ ಸರಿಯಾಗಿ ಸೋಮಾಪುರ ಗ್ರಾಮದಲ್ಲಿ ನೀರು ಪೂರೈಕೆ ಆಗುತ್ತಿಲ್ಲ, ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಈ ಕುರಿತು ಹಲವಾರು ಭಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾ ನಿರತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

Read More »

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಹುಬ್ಬಳ್ಳಿ: ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿರಡಿ ನಗರದಲ್ಲಿ ನಡೆದಿದೆ. ವಿನಾಯಕ ಮೂಳ್ಳೋಳಿ ಒಬ್ಬಂಟಿಯಾಗಿ ಮನೆಯಲ್ಲಿ ವಾಸ ಮಾಡುತ್ತಿದ್ದ ರಾತ್ರಿ ವೇಳೆ ಏಕಾಏಕಿ ನೇಣು ಬಿಗಿದುಕೊಂಡಿದ್ದಾನೆ. ಇನ್ನೂ ಕೆಲವು ದಿನಗಳ ಹಿಂದೆ ಮನೆಯ ಬಳಿ ನಡೆದ ಅಪಘಾತದಲ್ಲಿ ಸಾವನಪ್ಪಿ ವಿನಾಯಕ ತಾಯಿ ಬಸಮ್ಮ, ಇನ್ನೂ ಘಟನೆ ನಂತರ ಬಹಳ ನೊಂದಿದ್ದಾ ಎನ್ನಲಾಗಿದೆ. ವಿನಾಯಕ ಹಾಗೂ ಗೆಳೆಯರ ನಡುವೆ ಗಲಾಟೆ ನಡೆದಿರುವ ಆರೋಪ ಸಹ ಇತ್ತು, ಆತ್ಮಹತ್ಯೆ ಮಾಡಿಕೊಳ್ಳಲು …

Read More »

ನಿವೃತ್ತ ನೌಕರರ ಸಂಘದ ಭವನ ನಿರ್ಮಾಣ ಮಾಡುವಂತೆ ಮನವಿ ಸಲ್ಲಿಕೆ

ಕುಂದಗೋಳ : ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘಕ್ಕೆ ಭಾಗಶಃ ಒಂದು ಅರ್ಧ ಗುಂಟೆ ನಿವೇಶನವನ್ನು ಹಸ್ತಾಂತರ ಮಾಡುವ ಮೂಲಕ ನಿವೃತ್ತ ನೌಕರರ ಸಂಘದ ಭವನ ನಿರ್ಮಾಣ ಮಾಡಲು ಅನುಕೂಲ ಮಾಡಿ ಕೊಡುವಂತೆ ನಿವೃತ್ತ ಅಧಿಕಾರಿಗಳು ನೌಕರರ ಸಂಘದ ಅಧ್ಯಕ್ಷ ಮುತ್ತಪ್ಪ ಅಣ್ಣಿಗೇರಿ ಅವರಿಗೆ ಮನವಿ ಪತ್ರ ನೀಡಿದರು. ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ತಾಲೂಕ ಘಟಕ ಕಾರ್ಯಾಧ್ಯಕ್ಷರಾದ ಶೇಖರಪ್ಪ ಬಿಸೆರೊಟ್ಟಿಯವರು ಮತ್ತು ಅಧ್ಯಕ್ಷರಾದ ನದಾಪ …

Read More »

ಪಟ್ಟಣದ ಪುರಸಭೆ ಮುಖ್ಯಾಧಿಕಾರಿಯಾಗಿ ಶರಣು ಪೂಜಾರ ಅಧಿಕಾರ ಸ್ವೀಕಾರ

ನವಲಗುಂದ: ಪಟ್ಟಣದ ಪುರಸಭೆ ಮುಖ್ಯಾಧಿಕಾರಿಯಾಗಿ ಶರಣು ಪೂಜಾರ ಇಂದು ಅಧಿಕಾರ ಸ್ವೀಕಾರ ಮಾಡಿಕೊಂಡರು. ಈ ಹಿಂದೆ ಮುಖ್ಯಾಧಿಕಾರಿ ಆಗಿದ್ದ ವೆಂಕಟೇಶ ನಾಗನೂರು ಅವರು ವರ್ಗಾವಣೆ ಆದ ಮೇಲೆ ಖಾಲಿ ಉಳಿದ ಸ್ಥಾನಕ್ಕೆ ಇಂದು ಶರಣು ನೇಮಕಗೊಂಡು ಅಧಿಕಾರ ವಹಿಸಿಕೊಂಡರು.

Read More »

ರಂಗಾಯಣಕ್ಕೆ ನೂತನ ನಿರ್ದೇಶಕರಾಗಿ ರಾಜು ತಾಳಿಕೋಟೆ ಆಯ್ಕೆ

ಧಾರವಾಡ: ರಂಗಾಯಣಕ್ಕೆ ಇದೀಗ ನೂತನ ನಿರ್ದೇಶಕರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಕಲಿಯುಗದ ಕುಡುಕ ನಾಟಕ ಖ್ಯಾತಿಯ ಹಾಗೂ ಹಲವು ಚಲನಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಮಿಂಚಿದ ರಾಜು ತಾಳಿಕೋಟೆ ಅವರನ್ನು ಧಾರವಾಡ ರಂಗಾಯಣದ ನೂತನ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ವಿಧಾನಸಭಾ ಚುನಾವಣೆಯ ನಂತರ ತೆರವಾಗಿದ್ದ ಧಾರವಾಡ ರಂಗಾಯಣ ನಿರ್ದೇಶಕ ಸ್ಥಾನಕ್ಕೆ ಒಂದು ವರ್ಷದ ನಂತರ ನಿರ್ದೇಶಕರನ್ನು ರಾಜ್ಯ ಸರ್ಕಾರ ನೇಮಕ …

Read More »

ದೇವಸ್ಥಾನದ ಉದ್ಘಾಟನೆ ಹಾಗೂ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆಯಲ್ಲಿ ಕೋನರಡ್ಡಿ ಭಾಗಿ

ನವಲಗುಂದ: ತಾಲೂಕಿನ ಹೆಬ್ಬಾಳ ಗ್ರಾಮದ ನೂತನ ಶ್ರೀಕಶ್ವರ ದೇವಸ್ಥಾನದ ಉದ್ಘಾಟನೆ ಹಾಗೂ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಶಾಸಕ ಎನ್.ಎಚ್.ಕೋನರಡ್ಡಿ ಭಾಗವಹಿಸಿ ದೇವರ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ನಾರಾಯಣ ದೇವರಡ್ಡಿ, ಶಂಕರ ಅಂಬಲಿ, ಮಂಜುನಾಥ ಹುಲಗಪ್ಪನವರ, ಸಂಗಪ್ಪ ಉದಪುಡಿ, ತುಕಾರಾಮ ಕಾಲವಾಡ, ಕುಮಾರ ಮಾದರ, ನಿರೂಪಕಿ ಕು.ಸೃಷ್ಟಿ ಹಂಪಣ್ಣವರ ಸೇರಿದಂತೆ ಗ್ರಾಮದ ಯುವ ಮುಖಂಡರು ಹಾಗೂ ಮುಂತಾದ ಗ್ರಾಮಸ್ಥರು ಉಪಸ್ಥಿತರಿದ್ದರು.

Read More »