Breaking News

Shaikh BigTv

ಪ್ರತಿಭಾ ಕಾರಂಜಿ : ಜಿಲ್ಲಾ ಮಟ್ಟಕ್ಕೆ ಆಯ್ಕೆ

ನವಲಗುಂದ: ತಾಲೂಕಿನ ಖನ್ನೂರ ಗ್ರಾಮದ ಆರ್ ವಿ ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ನವಲಗುಂದದ ಜಗದ್ಗುರು ಅಜಾತ ನಾಗಲಿಂಗ ಮಹಾಸ್ವಾಮಿ ವಿದ್ಯಾಪೀಠ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಈರಮ್ಮ ಬೆಂಡಿಗೇರಿ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ. ಮಹಮ್ಮದ್ ಶೋಯೆಬ್ ಹೊರಗಿನಮನಿ ಅರೇಬಿಕ್ ಧಾರ್ಮಿಕ ಪಠಣ ಪ್ರಥಮ ಸ್ಥಾನ ಹಾಗೂ ಪೂರ್ವಿಕಾ ದಲಬಂಜನ ಹಿಂದಿ ಭಾಷಣದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಈ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರು …

Read More »

ಶಾಸಕ ಕಾಶಪ್ಪನವರಿಗೆ ಟಾಂಗ್ ಕೊಟ್ಟ ಬೆಲ್ಲದ

ಧಾರವಾಡ: ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಎರಡು ಭಾಗವಾದ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಶಾಸಕ ಅರವಿಂದ ಬೆಲ್ಲದ ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ರ್ಯಾಲಿ ನಿಲ್ಲುವುದಿಲ್ಲ. ಟ್ರ್ಯಾಕ್ಟ‌ರ್ ರ್ಕ್ಯಾಲಿ ನಡೆದೇ ನಡೆಯುತ್ತದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರಿಗೆ ಅರವಿಂದ ಬೆಲ್ಲದ ಟಾಂಗ್ ಕೊಟ್ಟಿದ್ದಾರೆ. ಕಾಶಪ್ಪನವರ್‌ ಅಧ್ಯಕ್ಷರಿದ್ದಾರೆ. ಅವರಿಗೆ ಆ ಸ್ಥಾನ ಸಿಕ್ಕಿದೆ ಎಂದರೆ ಅವರ ಜವಾಬ್ದಾರಿ ಇನ್ನೂ ಹೆಚ್ಚಾಗುತ್ತದೆ. ನಮ್ಮ ಪಕ್ಷ ಆಡಳಿತದಲ್ಲಿದ್ದಾಗ ಬಸನಗೌಡ ಪಾಟೀಲ, ನಾನು ಮತ್ತು ಸಿದ್ದು ಸವದಿ …

Read More »

ನಮ್ಮ ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆದಿದೆ : ಜಯಮೃತ್ಯುಂಜಯ ಸ್ವಾಮೀಜಿ

ಧಾರವಾಡ: ಪಂಚಮಸಾಲಿ ಸಮದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಹೋರಾಟ ಮಾಡುತ್ತಿರುವ ಕೂಡಲಸಂಗಮ ಬಸವ ಜಯಮೃತ್ಯುಂಜಯ ಸ್ವಾಮೀಜಿ, ತಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ ಎಂದಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನಕ್ಕೆ ನಾವು ಮುತ್ತಿಗೆ ಹಾಕುತ್ತೇವೆ. ಡಿಸೆಂಬರ್ 10 ರಂದು ಸಾವಿರ ಟ್ರ್ಯಾಕ್ಟರ್‌ ಮೂಲಕ ರ್ಯಾಲಿ ಹೋಗಲು ನಿರ್ಧರಿಸಿದ್ದೇವೆ. 10 ಸಾವಿರಕ್ಕೂ ಹೆಚ್ಚು ಪಂಚಮಸಾಲಿ ವಕೀಲರು ಸೇರುತ್ತಾರೆ. ವಕೀಲರ ನೇತೃತ್ವದಲ್ಲಿ ಈ ಹೋರಾಟ ನಡೆಯಲಿದೆ ಎಂದರು.

Read More »

ಅಂತರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನಾಚರಣೆ; ಧಾರವಾಡ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ; ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಸ್ವೀಕರಿಸಿದ ಜಿಲ್ಲಾಧಿಕಾರಿ ದಿವ್ಯ ಪ್ರಭು

ಧಾರವಾಡ: ಕರ್ನಾಟಕ ಸರ್ಕಾರವು ಕಳೆದ ಸೆಪ್ಟಂಬರ್ 15, 2024 ರಂದು ಅಂತರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನಾಚರಣೆಯ ಅಂಗವಾಗಿ ಪ್ರಜಾಪ್ರಭುತ್ವ ಜಾಗೃತಿ ಮೂಡಿಸಲು ಬೀದರ್‍ದಿಂದ ಚಾಮರಾಜನಗರ ಜಿಲ್ಲೆಯವರೆಗೆ ಮಾನವ ಸರಪಳಿ ನಿರ್ಮಾಣ ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಧಾರವಾಡ ಜಿಲ್ಲೆಯಿಂದ ಅತೀ ಹೆಚ್ಚು ಜನರು ಆನ್ ಲೈನ್ ಮೂಲಕ ತಮ್ಮ ಹೆಸರು ನೋಂದಣಿ ಮಾಡಿಕೊಂಡು ಭಾಗವಹಿಸಿದ್ದರಿಂದ ಮತ್ತು ವಿಭಿನ್ನ ಕಾರ್ಯ ಕ್ರಮಗಳ ಮೂಲಕ ಪ್ರಜಾಪ್ರಭುತ್ವ ದಿನಾಚರಣೆ ಯಶಸ್ವಿಗೊಳಿಸಿದ್ದರಿಂದ ಧಾರವಾಡ ಜಿಲ್ಲೆಗೆ ರಾಜ್ಯ ಸರ್ಕಾರವು …

Read More »

ವಿಶ್ವದ ಸುಂದರ ಸಂವಿಧಾನ ನಮ್ಮದು; ನ್ಯಾಯಾಂಗವು ಸದಾ ಕಾಲ ಸಂವಿಧಾನದ ಶ್ರೇಷ್ಠತೆಯನ್ನು ರಕ್ಷಿಸುತ್ತದೆ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಜಿ. ರಮಾ

ಧಾರವಾಡ : ಇಂದಿನ ಜಾಗತಿಕ ಬದಲಾವಣೆ, ಬೇರೆ ದೇಶಗಳ ಆಡಳಿತ, ಅಲ್ಲಿನ ನಾಗರಿಕ ಹಕ್ಕು, ಸ್ವಾತಂತ್ರ್ಯಗಳನ್ನು ಅವಲೋಕಿಸಿದಾಗ ಭಾರತದ ಸಂವಿಧಾನದ ಶ್ರೇಷ್ಠತೆ ಎದ್ದು ಕಾಣುತ್ತದೆ. ನಮ್ಮ ಸಂವಿಧಾನ ವಿಶ್ವದ ಸುಂದರ ಸಂವಿಧಾನವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಜಿ.ರಮಾ ಅವರು ಹೇಳಿದರು. ಅವರು ಇಂದು ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ, ಧಾರವಾಡ ವಕೀಲರ …

Read More »

ಲಕ್ಷಾಂತರ ಮೌಲ್ಯದ ಬಂಗಾರ ಬೆಳ್ಳಿ ಕಳ್ಳತನ

ಹುಬ್ಬಳ್ಳಿ: ನಗರದ ಮರಾಠಗಲ್ಲಿಯ ಗಜಾನನ ಹೋಟೆಲ್ ಪಕ್ಕದ ಮನೆಯಲ್ಲಿ ಒಟ್ಟು 1.41 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಮತ್ತು ಚಿನ್ನದ ಆಭರಣಗಳ ಕಳ್ಳತವಾಗಿದೆ. ರಾಜೇಶ ಮಹಾದೇವರಾವ್ ಮಾನೆ ಅವರ ಮನೆಯಲ್ಲಿ ಯಾರು ಇಲ್ಲದ ವೇಳೆ ಎರಡು ಬೀಗ ಮುರಿದು ಒಳನುಗ್ಗಿದ ಕಳ್ಳರು, ಟಿಜೋರಿಯಲ್ಲಿದ್ದ 33.5 ಗ್ರಾಂ ತೂಕದ 1.34 ಲಕ್ಷ ಮೌಲ್ಯದ ಚಿನ್ನಾಭರಣ, 190 ಗ್ರಾಂ ತೂಕದ 7,600 ಮೌಲ್ಯದ ಬೆಳ್ಳಿ ಹಾಗೂ ಟಿವಿ ಕಳ್ಳತನವಾಗಿವೆ. ಈ ಕುರಿತು ಹುಬ್ಬಳ್ಳಿ …

Read More »

ನಿವೇಶನ ಕೊಡಿಸುವಲ್ಲಿ ಬರೋಬ್ಬರಿ 35 ಲಕ್ಷ ರೂಪಾಯಿ ವಂಚನೆ

ಹುಬ್ಬಳ್ಳಿ: ನಿವೇಶನ ಕೊಡಿಸುವುದಾಗಿ ಹೇಳಿ ವ್ಯಕ್ತಿಯೊಬ್ಬರಿಂದ 35 ಲಕ್ಷ ರೂಪಾಯಿ ಪಡೆದು ವಂಚಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ವಿಶ್ವೇಶ್ವರ ನಗರದ ನಿವಾಸಿ ಮೃತ್ಯುಂಜಯ ವಿನೋದ ಬರಿಮನಿ, ಭವಾನಿನಗರದ ಬೂದಿಹಾಳಮಠ ಎಂಬಾತ ನವನಗರದಲ್ಲಿ ಎರಡು, ತಡಸಿನಕೊಪ್ಪದಲ್ಲಿ ಒಂದು ನಿವೇಶನ ಕೊಡಿಸುವುದಾಗಿ ನಂಬಿಸಿದ್ದಾನೆ. ತನ್ನ ಪರಿಚಯಸ್ಥರ ಬ್ಯಾಂಕ್ ಖಾತೆಗಳಿಗೆ ವಿನೋದ ಹಾಗೂ ಅವರ ಪತ್ನಿ ಖಾತೆಯಿಂದ ಹಣ ಹಾಕಿಸಿಕೊಂಡಿದ್ದಾನೆ. ನಿವೇಶನ ಕೊಡಿಸದೆ, ಹಣವನ್ನೂ ಮರಳಿಸದೆ ವಂಚನೆ ಮಾಡಿದ್ದಾಗಿ ಅಶೋಕ ನಗರ ಪೊಲೀಸ್ …

Read More »

ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ: ಎಸ್.ಆರ್.ಪಾಟೀಲ

ಧಾರವಾಡ: ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೆ ತೊಂದರೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಬೆಳಗಾವಿ ಕಂದಾಯ ವಿಭಾಗದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಅವರು ಹೇಳಿದರು. ಅವರು ಇಂದು ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಸಾಂಸ್ಥಿಕ ಕಾರ್ಯ ವಿಧಾನಗಳು ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸುವ ಬಗ್ಗೆ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಹಳ್ಳಿ ಭಾಗಗಳಿಗೆ …

Read More »

ಬೈಕ್ ಸವಾರನೊಬ್ಬ ಆಯ ತಪ್ಪಿ ರಾಮದುರ್ಗದ ಘಾಟ ಪ್ರಪಾತಕ್ಕೆ ಬಿದ್ದು ಸಾವು

ಹುಬ್ಬಳ್ಳಿ : ಬೈಕ್ ಸವಾರನೊಬ್ಬ ಆಯ ತಪ್ಪಿ ರಾಮದುರ್ಗದ ಘಾಟ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದು, ಇನ್ನೊಬ್ಬನಿಗೆ ಗಂಭೀರವಾದ ಗಾಯವಾದ ಘಟನೆಯೊಂದು ರವಿವಾರ ನಡೆದಿದೆ. ಹಳೆ ಹುಬ್ಬಳ್ಳಿಯ ಆನಂದ್ ನಗರದ ಚಂದನ್ ಕಾಲೋನಿ ನಿವಾಸಿ ಗಣೇಶ್ ಸರೋಜಾ ಗೋಸಾವಿ ಸಾವನ್ನಪ್ಪಿದ ಯುವಕ. ಮನೆ ದೇವರಿಗೆಂದು ಹುಬ್ಬಳ್ಳಿಯಿಂದ ಹೋಗುತ್ತಿದ್ದಾಗ, ರಾಮದುರ್ಗದ ಘಾಟ ಬಳಿ ಆಯತಪ್ಪಿ ಪ್ರಪಾತಕ್ಕೆ ಬಿದ್ದು, ದೇಹಕ್ಕೆ ಕಲ್ಲು ಚುಚ್ಚಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನೊಬ್ಬನಿಗೆ ಗಂಭೀರವಾದ ಗಾಯವಾಗಿದ್ದು, ಧಾರವಾಡ ಖಾಸಗಿ ಆಸ್ಪತ್ರೆಯಲ್ಲಿ …

Read More »

ನೋಂದಾಯಿತ ಮಾನವ ಸಂಪನ್ಮೂಲ ಏಜೆನ್ಸಿಗಳಿಂದ ಇ-ಪ್ರೋಕ್ಯೂರ್‌ಮೆಂಟ್ ಪೋರ್ಟಲ್ ಮೂಲಕ ಟೆಂಡರ್ ಆಹ್ವಾನ

ಧಾರವಾಡ: ಧಾರವಾಡ ಜಿಲ್ಲೆಯ ಅಟಲ್‍ಜೀ ಜನಸ್ನೇಹಿ ಕೇಂದ್ರ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ನಾಡಕಛೇರಿಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಹಾಗೂ ಡಾಟಾ ಎಂಟಿ ಅವರೇಟರರನ್ನು ಒಂದು ವರ್ಷದ ಅವಧಿಗೆ ಪೂರೈಸುವ ಕುರಿತು ಆಸಕ್ತ ಮತ್ತು ನೋಂದಾಯಿತ ಮಾನವ ಸಂಪನ್ಮೂಲ ಏಜೆನ್ಸಿಗಳಿಂದ ಇ-ಪ್ರೋಕ್ಯೂರ್‌ಮೆಂಟ್ ಪೋರ್ಟಲ್ ಮೂಲಕ ಟೆಂಡರ್ ಕರೆಯಲಾಗಿದೆ. ಮಾಹಿತಿಗಾಗಿ https://kppp.karnataka.gov.in ನಲ್ಲಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಧಾರವಾಡ ಕರೆಯಲಾಗಿದ್ದು, ಅಟಲ್ ಜೀ ಜನಸ್ನೇಹಿ ಕೇಂದ್ರದ ಶಾಖೆಯಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಹೆಚ್ಚಿನ …

Read More »