ನವಲಗುಂದ : ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಮೆಕ್ಕೆಜೋಳ, ಹತ್ತಿ ಮೆಣಸಿನ ಗಿಡ, ಈರುಳ್ಳಿ ಬೆಳೆ ಸೇರಿ ಹಲವು ಬೆಳೆಗಳು ಹಾಳಾಗಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಕಂದಾಯ ಇಲಾಖೆ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ ಸಮೀಕ್ಷಾ ಕಾರ್ಯವನ್ನು ಕೈಗೆತ್ತಿಕೊಂಡಿವೆ. ತಾಲೂಕಿನ ತಿರ್ಲಾಪುರ ಗ್ರಾಮದ ರೈತ ವಿರೂಪಾಕ್ಷಯ್ಯ ಬಸಲಿಂಗಯ್ಯ ಹಿರೇಮಠ ಅವರ ಅರೇಕುರಹಟ್ಟಿ ಹದ್ದಿನ ಜಮೀನಿನಲ್ಲಿ ಹತ್ತಿ ಬೆಳೆ ಹಾಳಾಗಿರುವುದನ್ನು ತಹಶೀಲ್ದಾರ ಸುದೀರ್ ಸಾಹುಕಾರ ಅವರು …
Read More »ಕೊಳೆತ ಟಮೊಟೆ ಮಾರಾಟ : ಸಾರ್ವಜನಿಕರಿಂದ ವಿಡಿಯೋ ಹಂಚಿಕೆ
ಹುಬ್ಬಳ್ಳಿ: ಅತೀದೊಡ್ಡ ಮಾರುಕಟ್ಟೆಯನ್ನು ಹೊಂದಿದ ನಮ್ಮ ಹುಬ್ಬಳ್ಳಿಯ ಎಪಿಎಮ್ಸಿಯಲ್ಲಿ, ಕೊಳೆತ ಟಮೊಟೆ ಮಾರುತ್ತಿದ್ದಾರೆಂದು ಸಾರ್ವಜನಿಕರು ವಿಡಿಯೋ ಕಳಸಿದ್ದಾರೆ. ಬೆಳಗಿನ ಜಾವ ಹುಬ್ಬಳ್ಳಿ ಎಪಿಎಮ್ಸಿಯಲ್ಲಿ ತರಕಾರಿ ಮಾರಾಟ ಮಾಡಿಕೊಂಡು ನಂತರ, ನಗರದ ವಿವಿಧ ಮಾರುಕಟ್ಟೆಗೆ ಮಾರಾಟ ಮಾಡಲು ಹೋಗುತ್ತಾರೆ. ದಿನಂಪ್ರತಿ ಮಾರಾಟ ಮಾಡುವ ವೇಳೆ ಟಮೊಟೆಗಳು ಕೊಳೆತು ಹುಳ ಹತ್ತಿದ್ದ ಟಮೊಟೆಗಳನ್ನು ಮಾರಾಟ ಮಾಡುತ್ತಿದ್ದಾರೆಂದು ಸಾರ್ವಜನಿಕರು ವಿಡಿಯೋ ಮಾಡಿ ಕಳಿಸಿದ್ದಾರೆ. ಈ ಬಗ್ಗೆ ಎಪಿಎಮ್ಸಿ ಅಧ್ಯಕ್ಷರು ಇತ್ತ ಗಮನಿಸಬೇಕಾಗಿದೆ.
Read More »ಮೂರು ಜನ ಮನೆ ಕಳ್ಳರ ಬಂಧನ ಮಾಡಿದ ಹಳೇ ಹುಬ್ಬಳ್ಳಿ ಪೋಲಿಸರು
ಹುಬ್ಬಳ್ಳಿ: ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಪೊಲೀಸರಿಂದ ಮೂರು ಜನ ಮನೆ ಕಳ್ಳರ ಬಂಧನ ಮಾಡುವುಲ್ಲಿ ಯಶಸ್ವಿಯಾಗಿದ್ದಾರೆ. 05 ಗ್ರಾಂ ಚಿನ್ನ, 200 ಗ್ರಾಂ ಬೆಳ್ಳಿ, ಒಂದು ಮೊಬೈಲ ಪೋನ ಹಾಗೂ ನಗದು ಹಣ ವಶಪಡಿಸಿಕೊಂಡಿದ್ದಾರೆ. ಆರೋಪಿಗಳಾದ ಯುನುಸ್ ಅಬ್ದುಲ ಖಾದರ ಖಾಜಿ,ಸಿದ್ದಪ್ಪ ಯಮನಪ್ಪ ವಾಲ್ಮೀಕಿ, ಉಮೇಶ ಲಕ್ಷ್ಮಣ ಕೂಲಿ ನಾಗರಾಜ ಬಾಚಣಕಿ ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇತ್ತೀಚೆಗೆ ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯ ಆನಂದನಗರ ಘೋಡ್ಡೆ ಪ್ಲಾಟ ಮತ್ತು …
Read More »ಕನ್ನಡ ಶಾಲೆಗೆ ಬಣ್ಣ ಹಚ್ಚಿದ ಹಳೇ ವಿದ್ಯಾರ್ಥಿಗಳ ಸಂಘ
ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಸಿದ್ದಾರೂಢರ ನಗರದಲ್ಲಿರುವ ರೇವಣಸಿದ್ದೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ, 2 ನೇ ಶಾಲೆಗೆ ಬಣ್ಣ ಹಚ್ಚುವ ಮಹತ್ತರ ಕಾರ್ಯವನ್ನು ಮಾಡಿದ್ದಾರೆ. ಈ ಕನ್ನಡ ಶಾಲೆಯಲ್ಲಿ ಅದೆಷ್ಟೋ ಮಕ್ಕಳು ಓದುತ್ತಿದ್ದಾರೆ. ಈಗ ಆ ಶಾಲೆ ಬಣ್ಣದಿಂದ ಕಂಗೊಳಿಸಿದ್ದನ್ನು ನೋಡಿ ಮಕ್ಕಳು ಖುಷಿ ಖುಷಿಯಿಂದ ಶಾಲೆಗೆ ಹೋಗುತ್ತಿದ್ದಾರೆ. ಈ ಹಳೆ ವಿದ್ಯಾರ್ಥಿ ಸಂಘದ ಇಂತಹ ಒಳ್ಳೆಯ ಕೆಲಸಕ್ಕೆ ಹುಬ್ಬಳ್ಳಿ ಧಾರವಾಡ ಜನರು ಮೆಚ್ಚುಗೆ …
Read More »ಬಿ.ಕೆ ಹರಿಪ್ರಸಾದ್ ವಿರುದ್ಧ “ವಿಶ್ವ ವಿಪ್ರ ಸೇವಾ” ಟ್ರಸ್ಟ್ ಅಧ್ಯಕ್ಷ ಲಕ್ಷ್ಮಣ ಕುಲಕರ್ಣಿ ಆಕ್ರೋಶ
ಹುಬ್ಬಳ್ಳಿ: ಪರಮ ಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ವಿರುದ್ಧ, ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವಹೇಳನಕಾರಿ ಪದ ಬಳಕೆ ಮಾಡಿದ್ದು ತಪ್ಪು, ತಕ್ಷಣವೇ ಕ್ಷಮೆ ಕೇಳಬೇಕೆಂದು ವಿಶ್ವ ವಿಪ್ರ ಸೇವಾ ಟ್ರಸ್ಟ್ ಅಧ್ಯಕ್ಷ ಲಕ್ಷ್ಮಣ ಕುಲಕರ್ಣಿ ಎಚ್ಚರಿಕೆ ನೀಡಿದ್ದಾರೆ. ಮಾಧ್ಯಮವರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ಮತ್ತು ಹಿಂದೂ ಸಮಾಜವನ್ನು ಹಾಳು ಮಾಡುವ ದುರುದ್ದೇಶದಿಂದ, ಮಾಡಿದ ಜನಗಣತಿಯ ಕುರಿತು ಅತ್ಯಂತ ಸಮರ್ಥವಾಗಿ ಹೇಳಿಕೆಯನ್ನು ಪರಮ ಪೂಜ್ಯ …
Read More »ಅಚಲವಾದ ಆತ್ಮವಿಶ್ವಾಸವನ್ನು ಹೊಂದಿದ್ದರೆ, ಉತ್ತಮ ಸಾಧನೆಯನ್ನು ಸಾಧಿಸಬಹುದು: ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ
ಧಾರವಾಡ: ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲ. ಅಚಲವಾದ ಆತ್ಮ ವಿಶ್ವಾಸವನ್ನು ಹೊಂದಿದ್ದರೆ, ಉತ್ತಮ ಸಾಧನೆಯನ್ನು ಸಾಧಿಸಬಹುದು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರು ಹೇಳಿದರು. ಅವರು ಇಂದು ಸಮಗ್ರ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಸಂಯುಕ್ತಾಶ್ರಯದಲ್ಲಿ ನೇಚರ್ ಫಸ್ಟ್ ಇಕೋ ವಿಲ್ಹೇಜ್ನಲ್ಲಿ ಆಯೋಜಿಸಲಾಗಿದ್ದ ಬಾಲಮಂದಿರಗಳ ಮಕ್ಕಳಿಗೆ ರಾಜ್ಯ ಮಟ್ಟದ ಮಕ್ಕಳ ಕಥಾ …
Read More »42 ಪ್ಯಾನೊ ಹಾಗೂ ಟ್ಯಾಬ್’ಗಳನ್ನು ಅರ್ಹ ವಿಶೇಷ ಚೇತನರಿಗೆ ವಿತರಣೆ
ಕುಂದಗೋಳ : ತಾಲೂಕಿನ ಗುರುವಿನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಗುರುವಿನಹಳ್ಳಿ ಹಾಗೂ ವಿಠಲಾಪುರ ಗ್ರಾಮದ ಪ್ರತಿಶತ 5% ಅನುದಾನದಲ್ಲಿ 42 ಪ್ಯಾನೊ ಹಾಗೂ ಟ್ಯಾಬ್’ಗಳನ್ನು ಅರ್ಹ ವಿಶೇಷ ಚೇತನರಿಗೆ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಮಂಜುನಾಥ ಬೂದಪ್ಪನವರ ಉಪಾಧ್ಯಕ್ಷರಾದ ರತ್ನವ ಪಡೆಸೂರ ಹಾಗೂ ಗ್ರಾಪಂ ಸದಸ್ಯರು, ಎರಡು ಊರಿನ ಹಿರಿಯರು ಹಾಗೂ ಉಪಸ್ಥಿತರಿದ್ದರು.
Read More »ಅತಿವೃಷ್ಟಿಯಿಂದ ಹಾನಿಯಾದ ಸ್ಥಳಗಳಿಗೆ ಸಿವಿಲ್ ನ್ಯಾಯಾಧೀಶ ಭೇಟಿ
ಕುಂದಗೋಳ: ಅಕ್ಟೋಬರ್ ತಿಂಗಳಲ್ಲಿ ಸುರಿದ ಮಳೆ ರಭಸಕ್ಕೆ ಅತಿವೃಷ್ಟಿಯಿಂದ ಹಾನಿಯಾದ ಸ್ಥಳಗಳನ್ನು ಗೌರವಾನ್ವಿತ ಸಿವಿಲ್ ನ್ಯಾಯಾಧೀಶ ಅಬ್ದುಲ್ ಖಾದರ್ ಮತ್ತು ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಗಾಯತ್ರಿಯವರು ವೀಕ್ಷಣೆ ಮಾಡಿದರು. ಕಂದಾಯ ಇಲಾಖೆ ಅಧಿಕಾರಿ ಅಶೋಕ್ ಮಲ್ಲೂರು ನೇತೃತ್ವದಲ್ಲಿ ಮುಳ್ಳೂಳ್ಳಿ, ಯರಗುಪ್ಪಿ ಬ್ರಿಡ್ಜ್ ಹಾನಿ ಪರಿಶೀಲನೆ ನಡೆಸಿದರು. ರೈತಾಪಿ ಜನರ ಜಮೀನಿನಲ್ಲಿ ಹಾನಿಯಾದ ಬೆಳೆಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳು, ಕರವೇ ಅಧ್ಯಕ್ಷರು, ರೈತಾಪಿ …
Read More »ಅನಾರೋಗ್ಯಕ್ಕೆ ತುತ್ತಾದ ರೋಗಿಗಳಿಗೆ ಸಂತೋಷ್ ಲಾಡ್ ಪೌಂಢಷನ್ ವತಿಯಿಂದ ಸಹಾಯ ಹಸ್ತ
ಕಲಘಟಗಿ : ಮುತ್ತಗಿ ಗ್ರಾಮದ ಕಲುಷಿತ ನೀರು ಸೇವಿಸಿ ಅನಾರೋಗ್ಯಕ್ಕೆ ತುತ್ತಾಗಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಕಾರ್ಯಕರ್ತರೊಂದಿಗೆ ಖುದ್ದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕರೆ ಮಾಡಿ ರೋಗಿಗಳ ಆರೋಗ್ಯದ ಬಗ್ಗೆ ವಿಚಾರಿಸಿ ಕೆಲವರೊಂದಿಗೆ ಮಾತನಾಡಿ ದೈರ್ಯಗೆಡದಂತೆ ತಿಳಿಸಿದರು. ಹಾಗೂ ಚಿಕಿತ್ಸೆ ಪಡೆಯುತ್ತಿರುವ ೪೪ ರೊಗಿಗಳಿಗೆ ಸಂತೋಷ್ ಲಾಡ್ ಪೌಂಢಷನ್ ವತಿಯಿಂದ ತಲಾ ಒಬ್ಬ ರೋಗಿಗೆ 2 ಸಾವಿರ ರೂಗಳಂತೆ ಸಹಾಯಧನವನ್ನು ವಿತರಣೆ ಮಾಡಲಾಯಿತು. ಈ …
Read More »ಕಳ್ಳತನ ಪ್ರಕರಣ: ಗರಗ ಠಾಣೆ ಪೋಲಿಸ್ ರಿಂದ ಯುವಕನಿಗೆ ಮನಸೋಇಚ್ಛೆ ಥಳಿತ
ಧಾರವಾಡ: ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಮಾಯಕನನ್ನು ಕರೆದುಕೊಂಡು ಬಂದ ಗರಗ ಠಾಣೆ ಪಿಎಸ್ಐ ಹಾಗೂ ಕೆಲ ಪೊಲೀಸರು ಆ ಯುವಕನನ್ನು ಮನಸೋಇಚ್ಛೆ ಥಳಿಸಿದ್ದಾರೆ. ಗರಗ ಗ್ರಾಮದ ಕಾರ್ತಿಕ್ ಈಟಿ ಎಂಬ ಯುವಕನನ್ನು ಪೊಲೀಸರು ಥಳಿಸಿದ್ದಾರೆ. ಕಾರ್ತಿಕ್ ಎಂಬ ಈ ಯುವಕ ಗರಗ ಗ್ರಾಮದ ಭಾರತ್ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ. ಈ ಗ್ಯಾಸ್ ಏಜೆನ್ಸಿಯಲ್ಲಿ ಮೂರು ತಿಂಗಳ ಹಿಂದೆ ಹಣ ಕಳ್ಳತನವಾಗಿತ್ತು. ಈ ಪ್ರಕರಣದ ವಿಚಾರಣೆಗೆಂದು ಕಾರ್ತಿಕ್ ಎಂಬ ಯುವಕನನ್ನು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





