Breaking News

Shaikh BigTv

ಕಲಘಟಗಿ ಮತಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಮನವಿ ಸಲ್ಲಿಕೆ

ಕಲಘಟಗಿ: ಸಚಿವ ಸಂತೋಷ ಲಾಡ್ ಅವರಿಗೆ ರಾಜಕೀಯದಲ್ಲಿ ಮರುಜನ್ಮ ನೀಡಿದ ಕಲಘಟಗಿ ಮತಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಆರೋಪಿಸಿದ್ದಾರೆ. ತಾಲೂಕಾನಾದ್ಯಂತ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಬೆಳೆ ಹಾಳಾಗಿ ರೈತರು ಬೀದಿಪಾಲಾಗಿದ್ದಾರೆ. ಬ್ಯಾಂಕ್ ಹಾಗೂ ಇನ್ನಿತರ ಹಣಕಾಸು ಸಂಸ್ಥೆಗಳ ಸಾಲ ವಸೂಲಾತಿಯಿಂದ ರೈತರ ಕುಟುಂಬಗಳು ತತ್ತರಿಸಿ ಹೋಗಿವೆ. ಅಷ್ಟೆ ಅಲ್ಲದೆ ಕಲಘಟಗಿ ತಾಲ್ಲೂಕಿನಾದ್ಯಂತ ಮಳೆಯ ಅವಾಂತರಕ್ಕೆ …

Read More »

ಕಳ್ಳತನದ ಪ್ರಕರಣ : ಆರೋಪಿಯನ್ನು ಬಂಧಿಸಿದ ಪೋಲಿಸರು

ಹುಬ್ಬಳ್ಳಿ: ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿಯ ಕೃಷ್ಣಾ ನಗರ ನಿವಾಸಿ ಹುಸೇನ್ ಹಸನಪ್ಪಾ ಅಂಚಟಗೇರಿ ಎಂಬಾತನನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ತಾರಿಹಾಳದದಲ್ಲಿ ಬಂಧಿಸಿದ್ದಾರೆ. ಬಂಧಿತ ಕಳ್ಳನಿಂದ 70 ಸಾವಿರ ರೂಪಾಯಿ ಮೌಲ್ಯದ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಳೇ ಹುಬ್ಬಳ್ಳಿ ಠಾಣೆ ಪಿಎಸ್‌ಐ ಬೆಳಗಾಂವಕರ, ಎಎಸ್‌ಐ ಹೊನ್ನಪ್ಪನವರ, ಮುಖ್ಯಪೇದೆ ಚಂದ್ರು, ಪೇದೆಗಳಾದ ಮದ್ದೀನ, ಗಿರೀಶ ಹಾಗೂ ಚನ್ನಪ್ಪ ಕಳ್ಳನನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Read More »

ಸಾಲ ತಾಳಲಾರದೆ ವ್ಯಕ್ತಿ ಆತ್ಮಹತ್ಯೆ

ಧಾರವಾಡ: ಖಾಸಗಿ ವ್ಯಕ್ತಿಯಿಂದ ಸಾಲ ಪಡೆದುಕೊಂಡಿದ್ದ ಯುವಕನೋರ್ವ ಆತನ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಧಾರವಾಡದ ಚರಂತಿಮಠ ಗಾರ್ಡನ್ ನಿವಾಸಿ ಮಂಜುನಾಥ ಕಟಗೆಣ್ಣವರ (32) ಎಂಬಾತನೇ ಧಾರವಾಡದ ಕೆಲಗೇರಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವನು. ಮಂಜುನಾಥ ಖಾಸಗಿ ವ್ಯಕ್ತಿ ಕಡೆ ಸಾಲ ಪಡೆದುಕೊಂಡಿದ್ದ. ಸಾಲಕ್ಕೆ ಬಡ್ಡಿ ಕೊಡುವಂತೆ ಕಿರುಕುಳ ಸಹ ನೀಡುತ್ತಿದ್ದ. ಅಷ್ಟೇ ಅಲ್ಲದೇ ಆ ಸಾಲಕ್ಕೆ ಮಂಜುನಾಥನ ಮನೆಯನ್ನು ಆ ಖಾಸಗಿ ವ್ಯಕ್ತಿ ಸಂಚಕಾರ ನೋಂದಣಿ ಸಹ ಮಾಡಿಸಿಕೊಂಡಿದ್ದ. …

Read More »

ವಾಹನ ಮತ್ತು ಬೈಕ್‌ ನಡುವೆ ಅಪಘಾತ : ಸವಾರ ಸಾವು

ಕುಂದಗೋಳ: ಟಾಟಾ ಏಸ್ ವಾಹನ ಮತ್ತು ಬೈಕ್‌ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಕುಂದಗೋಳ ಪಟ್ಟಣದಲ್ಲಿ ನಡೆದಿದೆ. ಕುಂದಗೋಳ ಕಡೆಯಿಂದ ಬೆನಕನಹಳ್ಳಿ ಮಾರ್ಗವಾಗಿ ವೇಗವಾಗಿ ಟಾಟಾ ಏಸ್ ವಾಹನ ನಡೆಸಿಕೊಂಡು ಬಂದ ವಾಹನ ಚಾಲಕ ಕುಂದಗೋಳ ಸೋನಾರ್ ಪ್ಲಾಟ್ ಕಡೆಯಿಂದ ಮೂರಂಗಡಿ ಕೂಟ್ ಮಾರ್ಗವಾಗಿ ಹೊರಟಿದ್ದ ಬೈಕ್ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದಾನೆ. ಅಪಘಾತದ ವೇಳೆ ಅಕ್ಟೋಬರ್ 14 ರಂದು ಗಾಯಗೊಂಡ ಬೈಕ್‌ ಸವಾರನನ್ನು …

Read More »

ಲಾರಿಗೆ ಟಾಟಾ ಏಸ್ ವಾಹನವೊಂದು ಡಿಕ್ಕಿ: ಕೆಲವರು ಗಾಯ

ಧಾರವಾಡ: ಮುಂದೆ ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಟಾಟಾ ಏಸ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಕೆಲವರು ಗಾಯಗೊಂಡಿರುವ ಘಟನೆ ಹುಬ್ಬಳ್ಳಿ, ಧಾರವಾಡ ಬೈಪಾಸ್‌ ಬಳಿ ಇರುವ ಮಿಶ್ರಾ ಪೇಡಾದ ಹತ್ತಿರ ನಿನ್ನೆ ರಾತ್ರಿ ಸಂಭವಿಸಿದೆ. ಯಲ್ಲಮ್ಮನ ಗುಡ್ಡಕ್ಕೆ ಹೊರಟಿದ್ದ ಟಾಟಾ ಏಸ್ ವಾಹನವು ಮುಂದೆ ಹೊರಟಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಟಾಟಾ ಏಸ್‌ನಲ್ಲಿ ಮೂರ್ನಾಲ್ಕು ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ನಿನ್ನೆ ರಾತ್ರಿಯೇ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ …

Read More »

ಚನ್ನಮ್ಮಳ ಜೀವನ ಮತ್ತು ಸಾಧನೆ ಪ್ರೇರಕ ಶಕ್ತಿಯಾಗಿದೆ:ಅಪರ ಜಿಲ್ಲಾಧಿಕಾರಿ ಗೀತಾ ಸಿಡಿ

ಧಾರವಾಡ : ದೇಶದಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಮೊಳಗಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಇಂದಿನ ಮಹಿಳೆಯರಿಗೆ ಆದರ್ಶ ಪ್ರಾಯರಾಗಿದ್ದಾರೆ. ಅವರ ಹೋರಾಟ, ಧೈರ್ಯ, ಸ್ಥೈರ್ಯ ಮತ್ತು ಸ್ವಾಭಿಮಾನಗಳು ಪ್ರತಿಯೊಬ್ಬ ಮಹಿಳೆಯಲ್ಲಿ ಇರಬೇಕು. ನಮ್ಮ ಹೆಣ್ಣುಮಕ್ಕಳಿಗೆ ರಾಣಿ ಚನ್ನಮ್ಮನ ಗುಣಗಳನ್ನು ಬೆಳೆಸಬೇಕು. ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ, ಸ್ವಾಭಿಮಾನಿ ಕಿತ್ತೂರು ರಾಣಿ ಚನ್ನಮ್ಮ ಆದರ್ಶ ಪ್ರಾಯಳಾಗಿದ್ದು, ಅವರ ಜೀವನ ಮತ್ತು ಸಾಧನೆಗಳು ಎಲ್ಲರಿಗೂ ಪ್ರೇರಕ ಶಕ್ತಿಯಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಗೀತಾ …

Read More »

ಅ. 25 ರಂದು ಒಳ ಮೀಸಲಾತಿ ನೀಡುತ್ತಿರುವುದನ್ನು ಖಂಡಿಸಿ ಪ್ರತಿಭಟನೆ

ಧಾರವಾಡ: ಅಕ್ಟೋಬರ್ 25 ರಂದು ಧಾರವಾಡದಲ್ಲಿ ರಾಜ್ಯ ಸರಕಾರ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ನೀಡುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಅಲ್ ಇಂಡಿಯಾ ಬಂಜಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಪಾಂಡುರಂಗ ಪಮ್ಮಾರ ಹೇಳಿದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಾತಿಗಣತಿ ಬಹಿರಂಗಪಡಿಸದೇ ಒಳಮೀಸಲಾತಿ ಜಾರಿಗೊಳಿಸಲು ಅವಕಾಶ ನೀಡುವುದಿಲ್ಲ. ಲಂಬಾಣಿ, ಕೊರಮ, ಕೊರಚ, ಭೋವಿ, ಒಡ್ಡರ ಸೇರಿದಂತೆ 99 ಜಾತಿಗಳ ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

Read More »

ಕಿತ್ತೂರು ಚೆನ್ನಮ್ಮ ವೃತ್ತದಲ್ಲಿರುವ ಪ್ರತಿಮೆಗೆ ಮೇಯರ್ ರಾಮಪ್ಪ ಬಡಿಗೇರ್ ಮಾಲಾರ್ಪಣೆ

ಹುಬ್ಬಳ್ಳಿ :ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ವೀರರಾಣಿ ಕಿತ್ತೂರು ಚೆನ್ನಮ್ಮ ನವರ ಜನ್ಮ ದಿನಾಚರಣೆ ಅಂಗವಾಗಿ ಹುಬ್ಬಳ್ಳಿಯ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿರುವ ಪ್ರತಿಮೆಗೆ ಮೇಯರ್ ರಾಮಪ್ಪ ಬಡಿಗೇರ್ ರವರು ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಶಾಸಕರಾದ ಮಹೇಶ ಟೆಂಗಿನಕಾಯಿ ಉಪ ಮೇಯರ್ ಶ್ರೀಮತಿ ದುರ್ಗಮ್ಮ ಶಶಿಕಾಂತ ಬಿಜವಾಡ ರವರು, ಪಾಲಿಕೆ ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ ರವರು, ಗೌರವಾನ್ವಿತ ಪಾಲಿಕೆ ಸದಸ್ಯರುಗಳು ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

Read More »

ಕಿತ್ತೂರು ರಾಣಿ ಚೆನ್ನಮ್ಮನವರ ಪುತ್ಥಳಿಗೆ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಮಾಲಾರ್ಪಣೆ

ಹುಬ್ಬಳ್ಳಿ: ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತಿ ಹಾಗೂ ಸ್ವರಾಜ್ಯ ಯುದ್ಧದ 200ನೇಯ ವರ್ಷದ ವಿಜಯೋತ್ಸವದ ನಿಮಿತ್ಯ ಹುಬ್ಬಳ್ಳಿಯಲ್ಲಿರುವ ಪುತ್ಥಳಿಗೆ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಮಾಲಾರ್ಪಣೆ ಮಾಡಿ ಮಾತನಾಡಿದರು. ವೀರಮಾತೆಯರ ಸಾಲಿನ ಮುಕುಟ ಮಣಿ ಕಿತ್ತೂರು ರಾಣಿ ಚೆನ್ನಮ್ಮನವರ ಪರಾಕ್ರಮದ ಕುರಿತು ಮಾತನಾಡಿ, ಅವರ ಸ್ಮರಣಾರ್ಥವಾಗಿ ಕೇಂದ್ರ ಸರಕಾರವು ಚೆನ್ನಮ್ಮರ ಅಂಚೆ ಚೀಟಿ ಬಿಡುಗಡೆ ಮಾಡುತ್ತಿರುವುದು ರಾಜ್ಯದ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.

Read More »

ಅವಳಿ ನಗರದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ. 37 ಹಾಗೂ 47 ರಲ್ಲಿ ಸದಸ್ಯತಾ ಅಭಿಯಾನ ನಡೆಸಿ, ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ನೋಂದಾಯಿಸಲು ಶಾಸಕ ಮಹೇಶ್ ಟೆಂಗಿನಕಾಯಿ ಅವರು ಮಾರ್ಗದರ್ಶನ ಮಾಡಿದರು. ಇದೆ ವೇಳೆಯಲ್ಲಿ ಪಕ್ಷ ಸಂಘಟನೆ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಉಮೇಶಗೌಡ ಕೌಜಗೇರಿ, ಶ್ರೀಮತಿ ರೂಪಾ ಶೆಟ್ಟಿ, ಪಕ್ಷದ ಪದಾಧಿಕಾರಿಗಳು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

Read More »