ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭ ವಾಗಿದ್ದು, ಅರಮನೆ ಆವರಣದಲ್ಲಿ ಕುಶಾಲತೋಪು ಸಿಡಿಸುವ ಫಿರಂಗಿ ಗಾಡಿಗಳನ್ನು ಸ್ವಚ್ಛಗೊಳಿಸಿ ಪೂಜೆ ಸಲ್ಲಿಸಲಾಯಿತು. ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ 11 ಫಿರಂಗಿಗಳಿಗೆ ಪೂಜೆ ಸಲ್ಲಿಸಿದರು. ಡಿಸಿಪಿಗಳಾದ ಎಂ.ಮುತ್ತುರಾಜ್, ಜಾಹ್ನವಿ, ಎಸಿಪಿ ಸತೀಶ್ ಪಾಲ್ಗೊಂಡಿದ್ದರು. ಅರಮನೆ ಅರ್ಚಕ ಪ್ರಹ್ಲಾದರಾವ್ ನೇತೃತ್ವದಲ್ಲಿ ನಡೆದ ಧಾರ್ಮಿಕ ಕಾರ್ಯದಲ್ಲಿ ಮೊದಲಿಗೆ ಕುಶಾಲ ತೋಪು ಸಿಡಿಸುವಾಗ ಯಾವುದೇ ಅವಘಡವಾಗದಂತೆ ವಿಘ್ನನಿವಾರಕ ಗಣಪತಿಗೆ ಪೂಜೆ ಸಲ್ಲಿಸಲಾಯಿತು. ನಂತರ ಚಾಮುಂಡೇಶ್ವರಿ …
Read More »ಮೀಸಲಾತಿ ಕಾಂಗ್ರೆಸ್ ಕೊಟ್ಟ ಭಿಕ್ಷಾ ಪಾತ್ರೆಯಲ್ಲ ಅದು ದಲಿತರ ಜನ್ಮಸಿದ್ಧ ಹಕ್ಕು: ಸಂಸದ ಜಿಗಜಿಣಗಿ
ವಿಜಯಪುರ: ದೇಶದಲ್ಲಿ ಕಾಂಗ್ರೆಸ್ ಯಾವಾಗಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿರೋಧಿಯಾಗಿದ್ದು ಈಗ ರಾಹುಲ್ ಗಾಂಧಿ ಮೀಸಲಾತಿ ರದ್ದು ಮಾಡುತ್ತೇವೆ ಎಂದು ಹೇಳುವ ಮೂಲಕ ಅದನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ, ಮೀಸಲು ರದ್ದು ಮಾಡುತ್ತೇವೆ ಎಂದು ಹೇಳಲು ಮೀಸಲಾತಿ ಕಾಂಗ್ರೆಸ್ ಕೊಟ್ಟಿರುವ ಭಿಕ್ಷಾ ಪಾತ್ರೆಯಲ್ಲ ಮೀಸಲಾತಿ ದಲಿತರ ಜನ್ಮ ಸಿದ್ಧ ಹಕ್ಕು ಎಂದು ಸಂಸದ ರಮೇಶ್ ಜಿಗಜಿಣಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೆರಿಕದಲ್ಲಿ ಮೀಸಲಾತಿ ರದ್ದು ಪಡಿಸುವ ಬಗ್ಗೆ ರಾಹುಲ್ …
Read More »ಗುಡ್ಡ ತೆರವುಗೊಳಿಸಿ ಕಚೇರಿ ಸ್ಥಾಪನೆಗೆ ಮನವಿ
ಕಮಲಾಪುರ: ಪಟ್ಟಣದ ಮಧ್ಯ ಭಾಗದಲ್ಲಿರುವ ಗುಡ್ಡ ತೆರವುಗೊಳಿಸಿದರೆ ಸುಮಾರು 10 ಎಕರೆ ಸರ್ಕಾರಿ ಜಮೀನು ದೊರೆಯಲಿದ್ದು ತಾಲ್ಲೂಕು ಮಟ್ಟದ ಕಚೇರಿಗಳನ್ನು ಸ್ಥಾಪಿಸಲು ಅನುಕೂಲವಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಸುಮಾರು 100 ಅಡಿ ಎತ್ತರವಿರುವ ಈ ಗುಡ್ಡ ಪಟ್ಟಣದ ಹೃದಯಭಾಗದಲ್ಲಿದೆ, ಸರ್ಕಾರಿ ಗಾಂವಠಾಣಾ ಆಗಿದ್ದು, ಗುಡ್ಡದ ತಳಭಾಗದ ಇಕ್ಕೆಲದಲ್ಲೆ ನೂರಾರು ಮನೆಗಳಿವೆ ಸಾವಿರಾರು ಜನ ವಾಸವಾಗಿದ್ದಾರೆ ಈ ಗುಡ್ಡ ಯಾವಾಗ ಬೇಕಾದರೂ ಕುಸಿಯುವ ಸಾಧ್ಯತೆ ಇದ್ದು, ಗುಡ್ಡ ಕುಸಿದರೆ ನೂರಾರು ಜನರ …
Read More »ಫೈ ಓವರ್ ಬ್ರಿಡ್ಜ್ ಕಾಮಗಾರಿ ವೇಳೆ ಅವಘಡ: ಆಸ್ಪತ್ರೆಗೆ ಪ್ರಹ್ಲಾದ್ ಜೋಶಿ ಭೇಟಿ
ಹುಬ್ಬಳ್ಳಿ: ಹುಬ್ಬಳ್ಳಿ: ಫೈ ಓವರ್ ಬ್ರಿಡ್ಜ್ ಕಾಮಗಾರಿ ವೇಳೆ ಕಬ್ಬಿಣದ ರಾಡ್ ಬಿದ್ದು ಗಂಭೀರವಾಗಿ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಎಸ್ ಎಸ್ ಐ ನಾಬೀರಾಜ್ ಅವರ ಆರೋಗ್ಯವನ್ನು ಸೆಂಟ್ರಲ್ ಮಿನಿಸ್ಟರ್ ಪ್ರಹ್ಲಾದ್ ಜೋಶಿ ಅವರು ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದರು. ಈ ಘಟನೆ ನಡೆಯಬಾರದಿತ್ತು. ಆದ್ರೆ ನಡೆದಿದ್ದು ದುರಂತ. ಇದಕ್ಕೆ ಸಂಬಂಧಿಸಿದಂತೆ PWD ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಆದ್ರೆ, ಕೈಗೊಳ್ಳದ ಕಾರಣ ಈ …
Read More »ಆಯುಷ್ಮಾನ್ ಭಾರತ್ ಯೋಜನೆಯನ್ನು 70 ವರ್ಷ ಮೇಲ್ಪಟ್ಟವರಿಗೂ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧಾರ
ನವದೆಹಲಿ: ವಿಶ್ವದ ಅತಿದೊಡ್ಡ ಆರೋಗ್ಯ ವಿಮೆ ಯೋಜನೆ ಎಂಬ ಹಿರಿಮೆ ಹೊಂದಿರುವ ಆಯುಷ್ಮಾನ್ ಪ್ಲಾನ್ ಭಾರತ್ ವಿಮಾ ಯೋಜನೆಯನ್ನು 70 ವರ್ಷ ಮತ್ತು ಅದಕ್ಕೆ ಮೇಲ್ಪಟ್ಟ ಎಲ್ಲಾ ವಯೋಮಿತಿಯವರೆಗೂ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ವಯೋಮಿತಿಯ ಎಲ್ಲಾ ನಾಗರಿಕರಿಗೂ ಇನ್ನು ಮುಂದೆ 5 ಲಕ್ಷ ರೂ.ವರೆಗಿನ ಆರೋಗ್ಯ ವಿಮೆ ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. …
Read More »ಸೈಬರ್ ವಂಚನೆ ಪ್ರಕರಣ: ವಿದ್ಯಾವಂತರೇ ಟಾರ್ಗೆಟ್
ಬಾಗಲಕೋಟೆ: ಜಿಲ್ಲೆಯಲ್ಲಿ ತಿಂಗಳ ಅವಧಿಯಲ್ಲಿ ಸೈಬರ್ ವಂಚಕರು ಮೂವರನ್ನು ತಮ್ಮ ಬಲೆಗೆ ಬೀಳಿಸಿಕೊಂಡು, ಅವರಿಗೆ ₹1.26 ಕೋಟಿ ವಂಚನೆ ಮಾಡಿದ್ದಾರೆ. ಪ್ರಕರಣಗಳ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ಜಾಗೃತಿ ಮೂಡಿಸುತ್ತಿದ್ದರೂ, ಶೀಘ್ರ ಹಣ ಮಾಡುವ ದುರಾಸೆಗೆ ವಾರದಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ನಗರದ ವ್ಯಾಪಾರಿಯೊಬ್ಬರ ಟೆಲಿಗ್ರಾಂಗೆ ಲಿಂಕ್ ಕಳುಹಿಸಿ, ಹೋಟೆಲ್ಗಳಿಗೆ ರೇಟಿಂಗ್ ನೀಡಿದರೆ ಕಮಿಷನ್ ನೀಡುವುದಾಗಿ ಆಮಿಷ ಒಡ್ಡಿದ್ದಾರೆ ಆರಂಭದಲ್ಲಿ ಅವರ ರೇಟಿಂಗ್ ನೀಡಿದ್ದಕ್ಕೆ ವಿವಿಧ ಹಂತಗಳಲ್ಲಿ ₹84,645 ಜಮಾ ಮಾಡಿದ್ದಾರೆ. …
Read More »ಯಾದಗಿರಿಯಲ್ಲಿ ಪದೇ ಪದೇ ಕುಸಿಯುತ್ತಿರುವ ರೈಲ್ವೆ ಸೇತುವೆ
ಯಾದಗಿರಿ: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ನಗರದ ಹಳೆ ಬಸ್ನಿಲ್ದಾಣ ಹತ್ತಿರದ ರಾಜ್ಯ ಹೆದ್ದಾರಿ 15 ವನಮಾರಪಲ್ಲಿ ರಾಯಚೂರು ರಸ್ತೆ ಸೇತುವೆ (ರೈಲ್ವೆ ಮೇಲ್ಸೆತುವೆ)ಯ ಕಳೆದ ಮೂರ್ನಾಲ್ಕು ವರ್ಷಗಳಿಂದ ಪದೇ ಪದೇ ಒಂದೇ ಸ್ಥಳದಲ್ಲಿ ಬಿರುಕು ಬಿಡುತ್ತಿದೆ, ಇದು ಪ್ರತಿವರ್ಷ ಮಳೆಗಾಲದಲ್ಲಿ ನಡೆದುಕೊಂಡು ಬಂದಿದೆ. ಅಧಿಕ ಮಳೆಯಿಂದ ನಗರದ ರೈಲ್ವೆ ಮೇಲ್ಸೇತುವೆ ರಸ್ತೆ ಕುಸಿದಿದೆ, ಬ್ಯಾರಿಕೇಡ್ ಇಟ್ಟು ಅಲ್ಲಲ್ಲಿ ಕಲ್ಲುಗಳನ್ನು ಇಡಲಾಗಿದೆ ವಾಹನಗಳ ಸಂಚಾರ ತುಂಬಾ ತೊಂದರೆ ಉಂಟಾಗಿದೆ. ಸುತ್ತಿ …
Read More »ಪ್ರಹ್ಲಾದ ಜೋಶಿ ಅವರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತ
ನವಲಗುಂದ: ಹೆಸರು ಖರೀದಿಗೆ ಮಿತಿ ಹೆಚ್ಚಳ ಹಾಗೂ ತೇವಾಂಶ ವಿನಾಯಿತಿ ನೀಡಬೇಕು ಹಾಗೂ ಕಳಸಾ ಬಂಡೂರಿ ಜಾರಿ ಮಾಡದೆ ಹೋದರೆ ಹೋರಾಟ ತೀವ್ರಗೊಳಿಸಲಾಗುವುದು. ನಮ್ಮ ನೀರನ್ನು ನಾವು ರಕ್ಷಿಸಲು ಮಿನಾಮೇಷ ಮಾಡಲ್ಲ ಎಂದು ಕರ್ನಾಟಕ ರೈತ ಸೇನೆ ಅಧ್ಯಕ್ಷ ಶಂಕರ ಅಂಬ್ಲಿ ಪ್ರಹ್ಲಾದ ಜೋಶಿ ಅವರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು. ಹೆಸರು ಖರೀದಿಗೆ ಕನಿಷ್ಠ ಮಿತಿಗೊಳಿಸಿದ್ದು, ತೇವಾಂಶದ ಮಿತಿ 12% ರಷ್ಟು ನಿಗದಿ ಪಡಿಸಿದೆ. ಆದರೆ, …
Read More »ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಉತ್ಪನ್ನ ಖರೀದಿ ಪ್ರಕ್ರಿಯೆ ಆರಂಭ
ವಿಜಯನಗರ: ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಸೂರ್ಯಕಾಂತಿ ಉತ್ಪನ್ನವನ್ನು ಖರೀದಿಸುವ ಪ್ರಕ್ರಿಯೆ ನಡೆಯುತ್ತಿದೆ. ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿ ಉತ್ಪನ್ನವನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್ 7280 ರೂ.ದಂತೆ ರೈತರಿಂದ ಖರೀದಿಗಾಗಿ ಖರೀದಿ ಕೇಂದ್ರಗಳನ್ನು ಜಿಲ್ಲೆಯ ವಿವಿಧೆಡೆ ಪ್ರಾರಂಭಿಸಲಾಗಿದ್ದು, ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಟಾಸ್ಕ್ ಫೊರ್ಸ್ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರು ತಿಳಿಸಿದ್ದಾರೆ. …
Read More »ಭಾರತ ಮತ್ತು ಅಮೇರಿಕಾ ನಡುವಿನ ಸೇನಾ ಜಂಟಿ ಯುದ್ಧ ಅಭ್ಯಾಸ ಆರಂಭ
ಜೈಪುರ: ಭಾರತ ಮತ್ತು ಅಮೆರಿಕ ಸೇನೆಗಳ ನಡುವಿನ 20ನೇ ಆವೃತ್ತಿಯ ಸೇನಾ ಜಂಟಿ ಸಮರಾಭ್ಯಾಸ ಯುದ್ಧ್ ಅಭ್ಯಾಸ 2024 ರಾಜಸ್ಥಾನದ ಪಶ್ಚಿಮ ವಲಯದಲ್ಲಿರುವ ಮಹಾನ್ ಫೀಲ್ಡ್ ಫೈರಿಂಗ್ ರೇಂಜಸ್ನಲ್ಲಿ ಸೋಮವಾರ ಪ್ರಾರಂಭವಾಗಿದೆ. ಭಾರತ ಮತ್ತು ಅಮೆರಿಕದ ಒಟ್ಟು 1,200 ಸೈನಿಕರು ಈ ಅಭ್ಯಾಸದಲ್ಲಿ ಭಾಗವಹಿಸುತ್ತಿದ್ದಾರೆ. ಸೋಮವಾರ ಬೆಳಗ್ಗೆ 10:30ರ ಸುಮಾರಿಗೆ ಪಥಸಂಚಲನದೊಂದಿಗೆ ಸೇನಾ ಸಮರಾಭ್ಯಾಸ ಆರಂಭಗೊಂಡಿತು. ಈ ಆವೃತ್ತಿಯು ಸೈನ್ಯದ ಶಕ್ತಿಯನ್ನು ಸೂಚಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 600 ಸಿಬ್ಬಂದಿಯನ್ನು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





