Breaking News

Uncategorized

ಪತ್ರಿಕೋದ್ಯಮ ರಾಜಶೇಖರ ಕೋಟಿ ಅವರಿಗೆ ವೃತ್ತಿಯಾಗಿರಲಿಲ್ಲ, ಬದುಕಾಗಿತ್ತು : ಯಡಿಯೂರಪ್ಪ

ಮೈಸೂರು: ಪತ್ರಿಕೋದ್ಯಮ ರಾಜಶೇಖರ ಕೋಟಿ ಅವರಿಗೆ ವೃತ್ತಿಯಾಗಿರಲಿಲ್ಲ. ಅದು ಅವರಿಗೆ ಬದುಕಾಗಿತ್ತು. ಸಮಾಜದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಗಟ್ಟಿಯಾದ ಧ್ವನಿ ಎತ್ತುವ ಜತೆಗೆ ಹೋರಾಟಗಳ ಬೆನ್ನಿಗೆ ನಿಂತಿದ್ದ ಕೋಟಿ ಅವರು ಸಮಾಜಕ್ಕೆ ಮಾದರಿಯಾದವರು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣ್ಣಿಸಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಬುಧವಾರ ಆಯೋಜಿಸಿದ್ದ ‘ಆಂದೋಲನ ೫೦ ಸಾರ್ಥಕ ಪಯಣ’ ಕಾರ್ಯಕ್ರಮಕ್ಕೆ ವಿಡಿಯೋ ಸಂದೇಶ ಕಳುಹಿಸಿ, ಶುಭನುಡಿಗಳನ್ನಾಡಿದರು. ಒಂದು ಪ್ರಾದೇಶಿಕ ಪತ್ರಿಕೆಯಾಗಿ ‘ಆಂದೋ …

Read More »

ಹುಟ್ಟು ಹಬ್ಬ ಆಚರಣೆಗೆ ಹೋಗದ ಕಾರಣ ವ್ಯಕ್ತಿ ಮೇಲೆ ಹಲ್ಲೆ

ಹುಬ್ಬಳ್ಳಿ: ಅವಳಿ ನಗರದಲ್ಲಿ ದಿನ ನಿತ್ಯ ಪುಡಿ ರೌಡಿಗಳ ಹಾವಳಿ ಹೆಚ್ಚಾಗುತ್ತಿದ್ದು, ಜನರು ಭಯ ಭೀತರಾಗಿದ್ದಾರೆ. ಹುಟ್ಟು ಹಬ್ಬದ ಆಚರಣೆಗೆ ಬರದ ಕಾರಣ ಸಹೋದರರ ಇಬ್ಬರ ಮೇಲೆ ಕುಡಿದ ಅಮಲಿನಲ್ಲಿದ್ದ ತಂಡವೊಂದು ಹಲ್ಲೆ ಮಾಡಿರೋ ಘಟನೆ ನಗರದಲ್ಲಿ ನಡೆದಿದೆ. ಪರಶರಾಮ ಹಲ್ಲೆಗೆ ಒಳಗಾದ ವ್ಯಕ್ತಿ. ವೈಯಕ್ತಿಕ ಕಾರಣಗಳಿಂದ ಬರ್ತಡೆಗೆ ಹೋಗದ ಕಾರಣ ಪೋನ್ ಮಾಡಿ ಒತ್ತಾಯಮಾಡಿದ್ದಾರೆ. 5 ರಿಂದ 6 ಜನ ಸೇರಿ ಸಹೋದರರ ಮೇಲೆ ಹಲ್ಲೆ ನಡೆಸಿದ್ದಾರೆ. ಕಲ್ಲು, …

Read More »

ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಸಾವು

ಯಲ್ಲಾಪುರ : ಇಲ್ಲಿನ ಹಳಿಯಾಳ- ಯಲ್ಲಾಪುರ ರಾಜ್ಯ ಹೆದ್ದಾರಿಯ ತಟ್ಟಿಹಳ್ಳ ಮತ್ತು ತಾಟವಾಳ ಮಧ್ಯೆ ಬೈಕ್ ಸ್ಕಿಡ್ ಆಗಿ ಬಿದ್ದು ಬೈಕ್ ಸವಾರ ಗುರುವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ . ಯಲ್ಲಾಪುರ ತಾಲೂಕಿನ ಕಿರವತ್ತಿ ಗ್ರಾಮದ ನಿವಾಸಿ ಪೀಟರ್‌ ಹಂಡಿ ( 26 ) ಮೃತಪಟ್ಟವರು . ಅವರು ದಾಂಡೇಲಿಯ ಕಾಗದ ಕಾರ್ಖಾನೆಯ ನೌಕರನಾಗಿದ್ದು ಎಂದಿನಂತೆ ತಮ್ಮ ಬೈಕ್ ಮೂಲಕ ಕರ್ತವ್ಯಕ್ಕೆಂದು ದಾಂಡೇಲಿಗೆ ಬರುವ ಸಂದರ್ಭದಲ್ಲಿ ತಾಟವಾಳ ಸಮೀಪದ ಕಿರವತ್ತಿ ಕ್ರಾಸ್‌ನ …

Read More »

ಕೆರೆಯಲ್ಲಿ ಪಲ್ಟಿಯಾದ ಬಸ್ : ತಪ್ಪಿದ ದುರಂತ

ಕಲಘಟಗಿ : ಸಾರಿಗೆ ಸಂಸ್ಥೆಯ ಬಷ್ಟೊಂದು ಕೆರೆಯಲ್ಲಿ ಪಲ್ಟಿಯದ ಘಟನೆ ಕಲಘಟಗಿ ತಾಲೂಕಿನ ಜೋಡಳ್ಳಿ ಗ್ರಾಮದ ಬಳಿ ಸಂಭವಿಸಿದೆ . ಧಾರವಾಡದಿಂದ ಜೋಡಳ್ಳಿ ಕಡೆಗೆ ಹೊರಟಿದ್ದ ಬಸ್ಸಿನ ಸ್ಟಿಯರಿಂಗ್ ಲಾಕ್ ಆಗಿ ಜೋಡಳ್ಳಿ ಬಳಿಯೇ ಇದ್ದ ಕೆರೆಗೆ ಬಸ್ ಪಲ್ಟಿಯಾಗಿದೆ . ಇನ್ನು ಈ ಬಸ್ಸಿನಲ್ಲಿ ಚಾಲಕ ಹಾಗೂ ನಿರ್ವಾಹಕ ಸೇರಿದಂತೆ ಸುಮಾರು 25 ಜನ ಪ್ರಯಾಣಿಸುತ್ತಿದ್ದರು . ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ

Read More »

ಅಂಗನವಾಡಿ ಕಟ್ಟಡ ನಿರ್ಮಾಣದ ಭೂಮಿ ಪೂಜೆ: ಶಾಸಕಿ ಕುಸುಮಾವತಿ ಚ ಶಿವಳ್ಳಿ.

ಕುಂದಗೋಳ : ತಾಲೂಕಿನ ಬೆಟದೂರು ಗ್ರಾಮದಲ್ಲಿ ಪಂಚಾಯತ ರಾಜ್ ಇಂಜಿನಿಯರಿಂಗ್ ವಿಭಾಗ ಅಡಿಯಲ್ಲಿ 16 ಲಕ್ಷರುಗಳ ಮೊತ್ತದ ಅಂಗನವಾಡಿ ಕಟ್ಟಡ ನಿರ್ಮಾಣದ ಭೂಮಿ ಪೂಜೆಯನ್ನು ಶಾಸಕರಾದ ಶ್ರೀಮತಿ ಕುಸುಮಾವತಿ ಸಿ ಶಿವಳ್ಳಿಯವರು ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರು ಉಪಾಧ್ಯಕ್ಷರು ಸರ್ವಸದಸ್ಯರುಗಳು ಸೇರಿದಂತೆ ಮುಂತಾದ ಗ್ರಾಮಸ್ಥರು ಉಪಸ್ಥಿತರಿದ್ದರು.

Read More »

ಅಂಬೇಡ್ಕರ್ ಅವರ ಕಾನೂನು ಅರಿವು ಮೂಡಿಸಲು ಉಪವಾಸ ಸತ್ಯಾಗ್ರಹ ಕೈಕೊಂಡ ಅಭಿಮಾನಿಗಳು

ಹುಬ್ಬಳ್ಳಿ: ಸಂವಿಧಾನ‌ ಶಿಲ್ಪಿ ಬಿ.ಆರ್. ಅವರಿಗೆ ಪದೆ ಪದೇ ಅಪಮಾನ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಅವರ ಕಾನೂನು ಅರಿವು ಕೂಡ ಯಾರಿಗೂ ತಿಳಿಯುತ್ತಿಲ್ಲವೆಂದು ಡಾ. ಬಿಆರ್ ಅಂಬೇಡ್ಕರ್ ಅವರ ಅಭಿಮಾನಿಗಳು ಇಂದು ನಗರದ ಅಂಬೇಡ್ಕರ್ ಅವರ ಪುತ್ಥಳಿ ಮುಂದೆ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ವಿಶ್ವಕ್ಕೆ ಮಾದರಿ ಸಂವಿಧಾನ‌ ನೀಡಿದ ಮಹಾನ ವ್ಯಕ್ತಿಯ ಕುರಿತು ರಾಜಕಾರಣಿಗಳು, ಕಿಡಿಗೇಡಿಗಳು ಅಪಮಾನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂದು ಬೆಳಗ್ಗೆಯಿಂದ ಸಾಯಂಕಾಲ 6 ರವರೆಗೆ …

Read More »

ಗುರೂಜಿ ಕೊಲೆ ಹಿನ್ನಲೆ : ದೈವದ ಮೊರೆ ಹೋದ ಪ್ರೆಸಿಡೆಂಟ್ ಹೋಟೆಲ್ ಸಿಬ್ಬಂದಿ

ಹುಬ್ಬಳ್ಳಿ : ಉಣಕಲ್ ಕೆರೆ ಬಳಿಯ ದಿ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಚಂದ್ರಶೇಖರ ಗುರೂಜಿ ಅವರ ಬರ್ಬರ ಕೊಲೆ ಹಿನ್ನಲೆ ಹೋಟೆಲ್ ಆಡಳಿತ ಮಂಡಳಿ & ಸಿಬ್ಬಂದಿ ವರ್ಗ ದೈವದ ಮೊರೆ ಹೋಗಿದ್ದಾರೆ. ಗುರೂಜಿ ಹತ್ಯೆ ನಡೆದ ಸ್ಥಳದಲ್ಲೇ ಹೋಟೆಲ್ ಆಡಳಿತ ಮಂಡಳಿ ಹೋಮ ಹಾಕಿಸಿದ್ದಾರೆ. ಗುರೂಜಿ ಕೊನೆಯುಸಿರೆಳೆದ ಸ್ಥಳದಲ್ಲೇ ಹೋಮ, ಹವನ ಮಾಡಿಸಲಾಗುತ್ತಿದೆ. ಗುರೂಜಿ ಹತ್ಯೆಯಿಂದ ತೀವ್ರ ಆತಂಕಗೊಂಡ ಸಿಬ್ಬಂದಿ. ಹೋಟೆಲ್ ನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಭಯ …

Read More »

ಧಾರವಾಡದ ಮೆಹಬೂಬನಗರದಲ್ಲಿ ಮತ್ತೊಂದು ಕೊಲೆ ಯತ್ನ

ಧಾರವಾಡ : ಹುಬ್ಬಳ್ಳಿ , ಧಾರವಾಡ ಅವಳಿನಗರದಲ್ಲಿ ಮೇಲಿಂದ ಮೇಲೆ ಕೊಲೆಗಳು , ಕೊಲೆ ಯತ್ನಗಳು ನಡೆಯುತ್ತಲೇ ಇವೆ . ಇತ್ತೀಚಿನ ಎರಡೂರು ದಿನಗಳಲ್ಲಿ ಕೊಲೆಗಳು ಹೆಚ್ಚಾಗಿವೆ . ಈಗ ಧಾರವಾಡದ ಮೆಹಬೂಬನಗರದಲ್ಲಿ ಮತ್ತೊಂದು ಕೊಲೆ ಯತ್ನ ನಡೆದಿದೆ . ಈ ಕೊಲೆ ಯತ್ನದ ದೃಶ್ಯಾವಳಿಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು , ಧಾರವಾಡಿಗರನ್ನು ಬೆಚ್ಚಿ ಬಿಳಿಸಿದೆ . ಇಟ್ಬಾಲ್ ಎಂಬಾತ ತನ್ನ ಸಹೋದರಿ ಮೇಲೆ ಹಲ್ಲೆ ನಡೆಸಿದ್ದಾನೆ . …

Read More »

ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ಉಡುಪಿ: ಕೂಸಮ್ಮ ಶಂಭು ಶೆಟ್ಟಿ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆೆಯಲ್ಲಿ ಮಹಿಳೆಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಬಾಣಂತಿ ಹಾಗೂ ಮೂವರು ಮಕ್ಕಳು ಆರೋಗ್ಯವಾಗಿದ್ದಾರೆ. ‌ಈ ಸಂಬಂಧ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಸರ್ಜನ್‌ ಮಧುಸೂಧನ್ ನಾಯಕ್‌, ಸರ್ಕಾರಿ ತಾಯಿ ಹಾಗೂ ಮಕ್ಕಳ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ತ್ರಿವಳಿ ಮಕ್ಕಳ ಜನನವಾಗಿದೆ. ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ. ಮೂವರು ಮಕ್ಕಳಲ್ಲಿ ಎರಡು ಗಂಡು ಹಾಗೂ ಒಂದು ಹೆಣ್ಣು ಎಂದು …

Read More »

ಬೈಕಿಗೆ ಲಾರಿ ಡಿಕ್ಕಿ : ಅಜ್ಜ, ಮೊಮ್ಮಗ ಸಾವು

ಕೂಡ್ಲಿಗಿ: ತಾಲ್ಲೂಕಿನ ಕಕ್ಕುಪ್ಪಿ ಗ್ರಾಮದ ಬಳಿ ಬೈಕಿಗೆ ಲಾರಿ ಡಿಕ್ಕಿ ಹೊಡೆದಿದ್ದರಿಂದ ಅಜ್ಜ, ಮೊಮ್ಮಗ ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ. ಮೃತರು ತಾಲ್ಲೂಕಿನ ನಾಗರಹುಣೆಸೆ ಗ್ರಾಮದ ಭೀಮಪ್ಪ (55), ಅವರ ಮೊಮ್ಮಗ ಆದಿ (5) . ಪಿ.ಆರ್. ವಿನಯ್ ಕುಮಾರ್ ಗಾಯಗೊಂಡಿದ್ದಾರೆ. ಕಕ್ಕುಪ್ಪಿ ಗ್ರಾಮದ ಬಳಿ ಗುಡೇಕೋಟೆ ಕಡೆಯಿಂದ ಅತಿ ವೇಗದಲ್ಲಿ ಬಂದ ಲಾರಿ ಬೈಕಿಗೆ ಡಿಕ್ಕಿ ಹೊಡೆದಿದೆ. ಬೈಕ್ ನಲ್ಲಿದ್ದ ಆದಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಭೀಮಪ್ಪ ಆಸ್ಪತ್ರೆಗೆ …

Read More »