Breaking News

Uncategorized

ಗ್ರಾಪಂ ಸದಸ್ಯನ ಕೊಚ್ವಿ ಕೊಲೆ ಪ್ರಕರಣ : ನಾಲ್ವರು ಆರೋಪಿಗಳು ಪೋಲಿಸ್ ವಶಕ್ಕೆ!

ಹುಬ್ಬಳ್ಳಿ : ಕೌಟುಂಬಿಕ ಹಳೆಯ ದ್ವೇಷದ ಹಿನ್ನೆಲೆ ರಾಯನಾಳ ಗ್ರಾಪಂ ಸದಸ್ಯನನ್ನು ಕೊಲೆ ಮಾಡಿದ್ದ ಘಟನೆಗೆ ಸಂಬಂಧಿಸಿ ಹಳೇಹುಬ್ಬಳ್ಳಿ ಪೊಲೀಸರು ಬುಧವಾರ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ‌ ರಾಯನಾಳ ಗ್ರಾಪಂ ಸದಸ್ಯ ಗಂಗಿವಾಳ ಗ್ರಾಮದ ದೀಪಕ ಶಿವಾಜಿ ಪಟದಾರಿ ( 30 ) ಅವರನ್ನು ಸೋಮವಾರ ರಾತ್ರಿ ರಾಯನಾಳದಲ್ಲಿ 6 ರಿಂದ 8 ಜನರ ಗುಂಪು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.ಈ ಕುರಿತು ಹತ್ಯೆಯಾದ ದೀಪಕನ ಸಹೋದರ ಹಳೇಹುಬ್ಬಳ್ಳಿ ಠಾಣೆಯಲ್ಲಿ ಮೇಟಿ …

Read More »

ಗುರೂಜಿ ಹತ್ಯೆಯಾದ ಪ್ರೆಸಿಡೆಂಟ್ ಹೋಟೆಲ್ ಗೆ ಅಲೋಕ್ ಕುಮಾರ್ ಭೇಟಿ : ಸಿಬ್ಬಂದಿಗೆ ತರಾಟೆ

ಹುಬ್ಬಳ್ಳಿ: ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆ ನಡೆದ ಸ್ಥಳಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಂದ್ರಶೇಖರ ಗುರೂಜಿ ಹತ್ಯೆಯಾದ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಹತ್ಯೆಯ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ ಹೋಟೆಲ್ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡರು. ಹೋಟೆಲ್ ಭದ್ರತಾ ಲೋಪದ ಬಗ್ಗೆ ಅಲೋಕ್ ಕುಮಾರ್ ಗರಂ ಆಗಿದ್ದು, ಇಂತ ದೊಡ್ಡ ಹೊಟೆಲ್ ನಲ್ಲಿ ಒಂದು ಮೆಟಲ್ ಡಿಟೆಕ್ಟರ್ ಇಟ್ಟುಕೊಳ್ಳಲು ಆಗುವುದಿಲ್ವಾ ಎಂದು …

Read More »

ಬೆಂಗಳೂರುನಲ್ಲಿ‌ ಹೆಚ್ಚಿದ ಮಹಾಮಾರಿ ಆರ್ಭಟ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಸಾವಿರ ಗಡಿದಾಟಿದೆ. ಬೆಂಗಳೂರಿನಲ್ಲಿ ನಿನ್ನೆ 1,053 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 18,09,240 ಕ್ಕೆ ಏರಿಕೆ ಆಗಿದೆ. ನಿನ್ನೆ 986 ಮಂದಿ ಬಿಡುಗಡೆಯಾಗಿದ್ದು, ಇದುವರೆಗೂ 17,86,214 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ ಕೋವಿಡ್ ಸಾವಿನ ಸಂಖ್ಯೆ ಶೂನ್ಯ. ಸಕ್ರಿಯ ಪ್ರಕರಣಗಳು 6,056 ಇದೆ. ಇದುವರೆಗೂ ಕೋವಿಡ್ ಸಾವಿನ ಸಂಖ್ಯೆ 16,969 ರಷ್ಟಿದೆ. ಅದರಂತೆ ರಾಜ್ಯದಲ್ಲಿ ನಿನ್ನೆ 26,437 ಮಂದಿಗೆ …

Read More »

ಕಂಟ್ರೋಲ್​ ಮಾಡದೆ ಹೋದ್ರೆ ನಿನ್​ ಹೆಂಡ್ತೀನೂ ಓಡಿ ಹೋಗ್ತಾಳೆ : ಈಶ್ವರಪ್ಪ ಲೇವಡಿ

ಕಲಬುರಗಿ: ನೀವು ನೆಟ್ಟಗೆ ಇಟ್ಟುಕೊಂಡು ಕಂಟ್ರೋಲ್​ ಮಾಡದೆ ಹೋದ್ರೆ ನಿನ್​ ಹೆಂಡ್ತೀನೂ ಓಡಿ ಹೋಗ್ತಾಳೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ವಿರುದ್ಧ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಲೇವಡಿ ಮಾಡಿದ್ದಾರೆ. ಠಾಕ್ರೆ ವಿರುದ್ಧ ಕೆಂಡಕಾರುವ ಭರದಲ್ಲಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಯಾವ ಪಕ್ಷದಲ್ಲಿ ಶಿಸ್ತು, ನಾಯಕತ್ವ ಇರುವುದಿಲ್ಲವೋ ಆ ಪಕ್ಷ ಪ್ರಜಾಪ್ರಭುತ್ವದಲ್ಲಿ ಉಳಿಯುವುದಿಲ್ಲ ಎಂದು ಮಹಾರಾಷ್ಟ್ರದಲ್ಲಿನ ರಾಜಕೀಯ ವಿದ್ಯಮಾನಗಳ ಕುರಿತು ವಿಶ್ಲೇಷಿಸಿದರು. ಸಿಎಂ …

Read More »

ವರುಣನ ಆರ್ಭಟ: ಮನೆಗಳು ಕುಸಿತ, ಗದ್ದೆಗಳಿಗೆ ನುಗ್ಗಿದ ನೀರು

ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಬುಧವಾರ ಬಿರುಸಾಗಿ ಮಳೆ ಸುರಿದಿದೆ. ಮೂಡಿಗೆರೆ ತಾಲ್ಲೂಕಿನ ಬೆಟ್ಟಗೆರೆ, ಬಣಕಲ್‌ ವಿಲೇಜ್‌, ಗೋಣಿಬೀಡಿನಲ್ಲಿ ಮೂರು ಮನೆಗಳ ಗೋಡೆಗಳು ಕುಸಿದಿವೆ. ಮೂಡಿಗೆರೆ ತಾಲ್ಲೂಕಿನ ಮುಗ್ರಹಳ್ಳಿ, ಹಂತೂರು, ಉಗ್ಗೆಹಳ್ಳಿ, ಊರುಬಗೆ, ಫಲ್ಗುಣಿ ಭಾಗದಲ್ಲಿ ಗದ್ದೆ ನಾಟಿಗಾಗಿ ನಿರ್ಮಿಸಿದ್ದ ಸಸಿಮಡಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಭತ್ತದ ಗದ್ದೆಗಳು ಜಲಾವೃತವಾಗಿದ್ದು, ಎಸ್ಟೇಟ್ ಕುಂದೂರು, ಬೀಜುವಳ್ಳಿ, ಜನ್ನಾಪುರ ಭಾಗಗಳಲ್ಲಿ ಶುಂಠಿಗದ್ದೆಗೆ ನೀರು ನುಗ್ಗಿ ಹಾನಿಯಾಗಿದೆ. ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಕಳಸ, ಕೊಪ್ಪ, ಎನ್‌.ಆರ್‌.ಪುರ …

Read More »

ಚಂದ್ರಶೇಖರ್ ಗುರೂಜಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಹುಬ್ಬಳ್ಳಿ : ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಕೊಲೆ ನಡೆದಿದ್ದು, ಈಗಾಗಲೇ ಕೊಲೆಗಾರರನ್ನು ಪೊಲೀಸರು ಬಂಧಿಸಿದ್ದು, ಕೊಲೆ ಆರೋಪಿ ಮಹಾಂತೇಶ್ ಐದು ದಿನಗಳ ಹಿಂದೆ ಫೇಸ್ ಬುಕ್ ನಲ್ಲಿ ಗುರೂಜಿಯನ್ನು ಕೊಲ್ಲುವ ಸುಳಿವು ಕೊಟ್ಟಿದ್ದ ಎಂದು ತಿಳಿದುಬಂದಿದೆ. ಐದು ದಿನಗಳ ಹಿಂದೆ ಆರೋಪಿ ಮಹಾಂತೇಶ್ ಫೇಸ್‌ಬುಕ್‌ ನಲ್ಲಿ ಭಗವದ್ಗೀತೆಯ ಶ್ಲೋಕದ ಪೋಸ್ಟ್ ಅನ್ನು ಶೇರ್ ಮಾಡಿದ್ದ ಆರೋಪಿ, ‘ಅಧರ್ಮ ತಾಂಡವಾಡುತ್ತಿರುವಾಗ ದುಷ್ಟರನ್ನು ನಾಶ ಮಾಡಲು …

Read More »

ವರುಣ ದೇವನಿಗೆ ಪ್ರಾರ್ಥಿಸಿ ಗೊಂಬೆಗಳ ಮದುವೆ

ಹುಮನಾಬಾದ್: ಮಳೆಯ ಸಮೃದ್ಧಿಗಾಗಿ ವರುಣ ದೇವನಿಗೆ ಪ್ರಾರ್ಥಿಸಿ ಸಮೀಪದ ಮೀನಕೇರಾ ಗ್ರಾಮದಲ್ಲಿ  ಗೊಂಬೆಗಳ ಮದುವೆ ಮಾಡಲಾಯಿತು. ಗ್ರಾಮದಲ್ಲಿ ಮದುವೆಯ ಸಂಭ್ರಮ ಮನೆ ಮಾಡಿತ್ತು. ಸಾಮಾನ್ಯ ಮದುವೆ ಸಮಾರಂಭದಲ್ಲಿ ಮಾಡುವ ಎಲ್ಲಾ ಕೈಂಕರ್ಯಗಳು ಈ ವೇಳೆ ನಡೆದವು.ಓಣಿಯ ಎಲ್ಲರೂ ಸಂಭ್ರಮದಿಂದ ಪಾಲ್ಗೊಂಡಿದ್ದರು. ಗ್ರಾಮಸ್ಥರು ತಮ್ಮ ಮನೆಗಳ ಬಾಗಿಲುಗಳಿಗೆ ತಳೀರು ತೋರಣದಿಂದ ಅಲಂಕಾರ ಮಾಡಿ, ತಮ್ಮ ಮನೆಯ ಸದಸ್ಯರ ಮದುವೆ ಎಂಬಂತೆ ಉತ್ಸಾಹದಿಂದ ಪಾಲ್ಗೊಂಡಿದ್ದರು. ಮೊದಲಿಗೆ ಗ್ರಾಮದ ರಾಮಲಿಂಗೇಶ್ವರ ಮಂದಿರದಿಂದ ಸಂಪ್ರದಾಯದಂತೆ ಗ್ರಾಮದ …

Read More »

ಹರ್ಷ ಹತ್ಯೆ ಪ್ರಕರಣ : ಆರೋಪಿಗಳಿಗೆ 5 ವರ್ಷ ಜೈಲು ಶಿಕ್ಷೆ

ಹಿಂದೂ ಕಾರ್ಯಕರ್ತ ಹರ್ಷನನ್ನು ಹತ್ಯೆಗೈದ ಆರೋಪಿಗಳ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಜೈಲಿನೊಳಗೆ ಮೊಬೈಲ್ ಬಳಸಿದ್ದಕ್ಕಾಗಿ ಅವರು ಪ್ರತ್ಯೇಕ ಜೈಲು ಶಿಕ್ಷೆಗೆ ಒಳಗಾಗುವ ಸಾಧ್ಯತೆಗಳಿವೆ ಎಂದು ಹಿರಿಯ ಅಧಿಕಾರಿ ತಿಳಿಸಿದರು. ಹರ್ಷ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳೀಗ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಆರೋಪಿಗಳು ತಮ್ಮ ಕುಟುಂಬ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ಮಾತನಾಡಿರುವ ವಿಡಿಯೋಗಳು ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಘಟನೆಯನ್ನು …

Read More »

ಹೊಸ ಉಪ ವಂಶಾವಳಿಯಾಗಿರುವ ಬಿಎ 2.75 ಪತ್ತೆ

ನವದೆಹಲಿ: ಭಾರತದಲ್ಲಿ ಕೊವಿಡ್-19 ವೈರಸ್ ಒಮಿಕ್ರಾನ್ ರೂಪಾಂತರದ ಹೊಸ ಉಪ ವಂಶಾವಳಿಯಾಗಿರುವ ಬಿಎ 2.75 ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ  ಮಾಹಿತಿ ನೀಡಿದೆ. ಕಳೆದ ಎರಡು ವಾರಗಳಲ್ಲಿ ಜಾಗತಿಕವಾಗಿ ವರದಿಯಾದ ಕೊವಿಡ್-19 ಪ್ರಕರಣಗಳು ಸುಮಾರು ಶೇ. 30ರಷ್ಟು ಹೆಚ್ಚಾಗಿದೆ ಎಂದು ಡಬ್ಲುಹೆಚ್​ಓ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಯುರೋಪ್ ಮತ್ತು ಅಮೆರಿಕಾದಲ್ಲಿ BA.4 ಮತ್ತು BA.5 ಪ್ರಕರಣಗಳು ಕಾಣಿಸಿಕೊಂಡಿವೆ. ಭಾರತದಂತಹ ದೇಶಗಳಲ್ಲಿ BA 2.75ನ ಹೊಸ …

Read More »

ಜುಲೈ 9ರವರೆಗೆ ಎಲ್ಲಾ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

ಬೆಂಗಳೂರು: ಜುಲೈ 9ರವರೆಗೆ ಕರಾವಳಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಚದುರಿದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಭಾರೀ ಹೆಚ್ಚಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಶಾಲಾ- ಕಾಲೇಜುಗಳಿಗೆ ಮಳೆಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಿಸಲಾಗಿದೆ.

Read More »