Breaking News

Crime

ತುಮಕೂರು :ಗಾಂಜಾ ಮಾರಾಟ, ಇಬ್ಬರು ಬಂಧನ!!

ಬಟವಾಡಿ ಕೆಳ ಸೇತುವೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಹೊಸ ಬಡಾವಣೆ ಠಾಣೆ ಪೊಲೀಸರು, ₹1.10 ಲಕ್ಷ ಮೌಲ್ಯದ 1 ಕೆ.ಜಿ 300 ಗ್ರಾಂ ಗಾಂಜಾ ಸೊಪ್ಪು ಜಪ್ತಿ ಮಾಡಿದ್ದಾರೆ.ಇಬ್ಬರು ಪ್ರತಿ ಸೋಮವಾರ ಬಟವಾಡಿ ಬಳಿ ವ್ಯಕ್ತಿಯೊಬ್ಬರಿಂದ ಗಾಂಜಾ ಖರೀದಿಸುತ್ತಿದ್ದರು. ಅದನ್ನು ನಗರದ ವಿವಿಧೆಡೆ ಮಾರಾಟ ಮಾಡುತ್ತಿದ್ದರು. ಸೋಮವಾರ ಸಂಜೆ ಬ್ಯಾಗ್‌ನಲ್ಲಿ ಗಾಂಜಾ ಸೊಪ್ಪು ಹಿಡಿದುಕೊಂಡು ನಿಂತಿದ್ದರು.ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿ, …

Read More »

ಬೆಂಗಳೂರು :ಡಿವೈಡರ್‌ಗೆ ಬಸ್‌ ಡಿಕ್ಕಿ, ದೇವನಹಳ್ಳಿ ಏರ್‌ಪೋರ್ಟ್‌ ಸಿಬ್ಬಂದಿ ಸಾವು!

ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಉರುಳಿಬಿದ್ದ ಪರಿಣಾಮ ಓರ್ವ ಸಾವನ್ನಪ್ಪಿ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ 33 ಮಂದಿ ಸಿಬ್ಬಂದಿಗಳು ಗಾಯಗೊಂಡಿರುವ ಘಟನೆ ದೇವನಹಳ್ಳಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಬೇಗೂರು ಸಿಐಎಸ್‌ಎಫ್ ಜಂಕ್ಷನ್ ಬಳಿ ಮಂಗಳವಾರ ನಡೆದಿದೆ.ತೀವ್ರವಾಗಿ ಗಾಯಗೊಂಡಿದ್ದ ಸಂತೋಷ್ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ.ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ …

Read More »

ಹಾಸನ : ಕಲ್ಲಹಳ್ಳಿ ಪ್ರಪಾತದಲ್ಲಿ ವ್ಯಕ್ತಿಯ ಶವ ಪತ್ತೆ!

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಲ್ಲಹಳ್ಳಿ ಪ್ರಪಾತದಲ್ಲಿ ಮೃತದೇಹವೊಂದು ಪತ್ತೆಯಾಗಿದೆ. ಮೃತದೇಹದ ಪರಿಶೀಲನೆ ನಡೆಸಿದಾಗ ಆತ ಕೊಡಗು ಜಿಲ್ಲೆಯ ಸಂಪತ್​ ಎಂದು ತಿಳಿದುಬಂದಿದೆ.ಕಲ್ಲಹಳ್ಳಿ ಗ್ರಾಮದ ಬಳಿ ಕಾರು ಪತ್ತೆಯಾಗಿತ್ತು. ಕಾರಿನಲ್ಲಿ ರಕ್ತ ಹರಿದಿರುವುದನ್ನು ಗಮನಿಸಿದ್ದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಯಸಳೂರು ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದರು. ಅತ್ತ, ಕುಶಾಲನಗರ ಪೊಲೀಸ್​ ಠಾಣೆಯಲ್ಲಿ ಸಂಪತ್ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು.ಮೇಲ್ನೋಟಕ್ಕೆ ಯಾರೋ ಸಂಪತ್​ ಅವರನ್ನು ಬರ್ಬರವಾಗಿ ಕೊಚ್ಚಿ …

Read More »

ಬಾಗಲಕೋಟ :ಶಿಕ್ಷಕನ ಮೇಲೆ ಬಿಯರ್ ಬಾಟಲನಿಂದ ಹಲ್ಲೆ!!

ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವ ಶಿಕ್ಷಕರೊಬ್ಬರ ಮೇಲೆ ಬಿಯರ್ ಬಾಟಲನಿಂದ ಮಾರಣಾಂತಿಕ‌ ಹಲ್ಲೆ ನಡೆಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ‌ ಸಾವಳಗಿ ಗ್ರಾಮದಲ್ಲಿ ಜರುಗಿದೆ.ಶಿಕ್ಷಕನ ಮನೆಯ ಪಕ್ಕದ ಯುವಕ ಪವನ ಜಾಧವ ನಡುವೆ ಕ್ರಿಕೆಟ್ ಬಾಲ್ ವಿಚಾರವಾಗಿ ಮಾತಿನ ಚಕಮಕಿ ನಡೆದಿತ್ತು. ಬಾಲ್‌ ಶಿಕ್ಷಕನ ಮನೆಯ ಒಳಗೆ ಬಿದ್ದಿದ್ದರಿಂದ ಶಿಕ್ಷಕ ಬೈದು ಬುದ್ದಿವಾದ ಹೇಳಿದ್ದರಂತೆ. ಆದರೆ ಶಿಕ್ಷಕ ಬೈದಿರುವ ಬಗ್ಗೆ ಯುವಕ ಪವನ ಮನಸ್ಸಿನಲ್ಲಿ ದ್ವೇಷವನ್ನು ಬೆಳೆಸಿಕೊಂಡಿದ್ದ. ಇದೇ ದ್ವೇಷದ …

Read More »

ಯಾದಗಿರಿ : ಅಳಿಯನನ್ನೇ ಕೊಚ್ಚಿ ಕೊಲೆ ಮಾಡಿದ ಮಾವ!

ಸಾಲದ ವಿಚಾರಕ್ಕೆ ಮಾವ ಅಳಿಯನನ್ನೇ ಕೊಚ್ಚಿ ಕೊಲೆ ಮಾಡಿರುವ ಘಟನೆ ಹುಣಸಗಿ ತಾಲೂಕಿನ ಶಾಖಾಪುರ(ಎಸ್.ಕೆ) ಗ್ರಾಮದಲ್ಲಿ ನಡೆದಿದೆ. ಲಕ್ಷ್ಮಣ ಚಿಗರಿಹಾಳ (28) ಮೃತ ದುರ್ದೈವಿ. ಸೋದರ ಮಾವ ಮಾನಪ್ಪ ಕೊಲೆ ಮಾಡಿದ ಆರೋಪಿ.ಕೊಟ್ಟ ಸಾಲ ವಾಪಸ್ ಕೊಡುವಂತೆ ಕೇಳಿದ್ದಕ್ಕೆ ಲಕ್ಷ್ಮಣ ಚಿಗರಿಹಾಳ ಮಾವ ಮಾನಪ್ಪಗೆ ಕೇಳಿದ್ದರು. ಇಷ್ಟಕ್ಕೆ ಬಹಿರ್ದೆಸೆಗೆ ತೆರಳುತ್ತಿದ್ದ ಅಳಿಯ ಲಕ್ಷ್ಮಣ ಚಿಗರಿಹಾಳನನ್ನು ಕೊಡಲಿಯಿಂದ ಕೊಚ್ಚಿ ಮಾವ ಮಾನಪ್ಪ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಎಸ್​​ಪಿ ಪೃಥ್ವಿಕ್ ಶಂಕರ್, ಡಿವೈಎಸ್​ಪಿ …

Read More »

ಅಥಣಿ: ಶೆಡ್​ನಲ್ಲಿ ಬಾಲಕನ ಮೇಲೆ ಹಲ್ಲೆ ಮಾಡಿ ಚರಂಡಿಗೆ ಎಸೆದ ಆರೋಪಿಗಳು ಅರೆಸ್ಟ್​!

ಅಥಣಿ ಪಟ್ಟಣದ ಹೊರವಲಯದ ಖಾಲಿ ನಿವೇಶನದಲ್ಲಿ ಮೇ 01 ರಂದು ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಬಾಲಕನ ಶವ ಸಿಕ್ಕಿತ್ತು. ಅನಾಥ ಶವ ಎಂದು ಪೊಲೀಸರು ಶವ ಸಂಸ್ಕಾರ ಮಾಡಿದ್ದರು. ಶವ ಸಂಸ್ಕಾರ ನಡೆದ ಎರಡು ದಿನಗಳ ಬಳಿಕ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಬಾಲಕನ ಗುರುತು ಪತ್ತೆಯಾಗಿದೆ.ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಬಾಲಕನದ್ದು ಸಹಜ ಸಾವಲ್ಲ, ಕೊಲೆ ಎಂದು ತಿಳಿದಿದೆ. ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. …

Read More »

ಡಾಕ್ಟರ್‌ಗೆ ಡ್ರಗ್ಸ್‌ ಚಟ… ಬರೋಬ್ಬರಿ 1 ಕೋಟಿ ರೂ. ಆಸ್ತಿ ನುಂಗಿ ನೀರು ಕುಡಿದ ಕಿʻಲೇಡಿʼ!!

ತೆಲಂಗಾಣ ಮಾದಕ ದ್ರವ್ಯ ವಿರೋಧಿ ಬ್ಯೂರ ಕೊಕೇನ್ ಸೇವನೆ ಮತ್ತು ಖರೀದಿಯ ಆರೋಪದ ಮೇಲೆ ಹೈದರಾಬಾದ್‌ನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ಮಾಜಿ ಸಿಇಒ ಆಗಿದ್ದ ವೈದ್ಯೆಯನ್ನು ಬಂಧಿಸಿದೆ.ನಮ್ರತಾ ಚಿಗುರುಪತಿ 53 ಗ್ರಾಂ ಕೊಕೇನ್, ಎರಡು ಮೊಬೈಲ್ ಫೋನ್‌ಗಳು ಮತ್ತು 10,000 ರೂ. ನಗದಿನ ಜೊತೆಗೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.ನಮ್ರತಾ ಒಮೆಗಾ ಆಸ್ಪತ್ರೆಗಳ ಮಾಜಿ ಮುಖ್ಯಸ್ಥರಾಗಿದ್ದು, ಕೊಕೇನ್ ಸೇವನೆಯ ಚಟಕ್ಕೆ ತೀವ್ರವಾಗಿ ಒಳಗಾಗಿದ್ದರು. ಈ ಚಟಕ್ಕಾಗಿ ಆಕೆ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿದ್ದಾರೆ. …

Read More »

ಬೆಂಗಳೂರು: ದುಷ್ಟಶಕ್ತಿ ಓಡಿಸುತ್ತೇನೆಂದು ಹೋಟೆಲ್​ನಲ್ಲಿ ಪೂಜೆ, ಮಹಿಳೆಗೆ 5 ಲಕ್ಷ ರೂ. ವಂಚಿಸಿದ ಜ್ಯೋತಿಷಿ!

ದುಷ್ಟಶಕ್ತಿಯನ್ನು ಓಡಿಸುತ್ತೇನೆ ಎಂದು ಜ್ಯೋತಿಷಿ ಬೆಂಗಳೂರಿನ ವಿಭೂತಿಪುರದ ನಿವಾಸಿಯಾಗಿರುವ 33 ವರ್ಷದ ಮಹಿಳೆಯಿಂದ ಐದು ಲಕ್ಷ ರೂ. ಪಡೆದು ವಂಚಿಸಿದ್ದಾನೆ. ವಂಚಕನ ವಿರುದ್ಧ ವಂಚನೆಗೊಳಗಾದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.ಜ್ಯೋತಿಷಿ ಮೊದಲಿಗೆ ನಿಂಬೆ ಹಣ್ಣುಗಳನ್ನು ಕತ್ತರಿಸಿ, ಧೂಪ ಹಚ್ಚಿದ್ದಾನೆ. ನಂತರ ಮಹಿಳೆಯ ಮುಖಕ್ಕೆ ಬೂದಿ ಎರಚಿದ್ದಾನೆ. ನಂತರ, ಮಹಿಳೆಗೆ ನವಿಲು ಗರಿಗಳಿಂದ ಹೊಡೆದು, ಅವರ ಕೂದಲನ್ನು ಹಿಡಿದು “ಆತ್ಮ ದೂರ ಹೋಗು” ಎಂದು ಕಿರಿಚಿದ್ದಾನೆ. ಪೂಜೆಗಳೆಲ್ಲ ಮುಗಿದ ನಂತರ ದುಷ್ಟಶಕ್ತಿಗಳು …

Read More »

ಪಾಕಿಸ್ತಾನ ವಶದಲ್ಲಿದ್ದ ಬಿಎಸ್‌ಎಫ್‌ ಯೋಧ ಪೂರ್ಣಂ ಕುಮಾರ್ ಬಿಡುಗಡೆ!

ಪಾಕಿಸ್ತಾನಕ್ಕೆ ಜೀವಂತವಾಗಿ ಸೆರೆಸಿಕ್ಕಿದ್ದ ಬಿಎಸ್‌ಎಫ್‌ ಯೋಧ ಪೂರ್ಣಂ‌ ಕುಮಾರ್‌ ಶಾ ಬಿಡುಗಡೆಯಾಗಿದ್ದಾರೆ. ಪಹಲ್ಗಾಮ್‌ ದಾಳಿಯ ನಂತರ ಭಾರತ ನಡೆಸುತ್ತಿದ್ದ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯ ವೇಳೆ ಪೂರ್ಣಂ ಸಾಹು ಗಡಿ ದಾಟಿ ಹೋಗಿ ಪಾಕ್‌ ಯೋಧರ ಕೈಗೆ ಸೆರೆಸಿಕ್ಕಿದ್ದರು.ಪೂರ್ಣಂ‌ ಬಂಧನದ ಬೆನ್ನಲ್ಲೇ ಭಾರತವೂ ಸಹ ಪಾಕಿಸ್ತಾನದ ಯೋಧನೊಬ್ಬನನ್ನು ಜೀವಂತವಾಗಿ ಸೆರೆಹಿಡಿದಿತ್ತು. ಕೂಡಲೇ ಎಚ್ಚೆತ್ತುಕೊಂಡ ಪಾಕಿಸ್ತಾನವು ಈಗ ತನ್ನ ಯೋಧನ ಬಿಡುಗಡೆಗಾಗಿ ಭಾರತದ ಯೋಧನನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದೆ.ಗಡಿ ರಕ್ಷಣಾ ಪಡೆ (BSF) …

Read More »

ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣ: 9 ಅಪರಾಧಿಗಳಿಗೆ ಜೀವವಧಿ ಶಿಕ್ಷೆ!

ಆರು ವರ್ಷಗಳ ಹಿಂದೆ ತಮಿಳುನಾಡಿನ ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಮತ್ತು ಸುಲಿಗೆ ಪ್ರಕರಣದಲ್ಲಿ ಬಂಧಿತರಾಗಿದ್ದ 9 ಆರೋಪಿಗಳನ್ನು ಅಪರಾಧಿಗಳು ಎಂದು ಪರಿಗಣಿಸಿದ ಮಹಿಳಾ ನ್ಯಾಯಾಲಯ, ಜೀವ ಇರುವವರೆಗೂ ಕಾರಾಗೃಹ ಶಿಕ್ಷೆ ವಿಧಿಸಿ ಮಂಗಳವಾರ ಆದೇಶಿಸಿದೆ.ನ್ಯಾಯಾಧೀಶೆ ಆರ್. ನಂದಿನಿ ದೇವಿ ಅವರು ಶಿಕ್ಷೆಯ ಆದೇಶ ಪ್ರಕಟಿಸಿ, ಜೀವಾವಧಿ ಶಿಕ್ಷೆಯ ಜತೆಗೆ, ಎಂಟು ಸಂತ್ರಸ್ತರಿಗೆ ₹85 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.ಪ್ರಕರಣದಲ್ಲಿ ಒಟ್ಟು 48 ಸಾಕ್ಷಿಗಳಿದ್ದರು. ಸಂತ್ರಸ್ತ ಮಹಿಳೆಯರು ಚಿಕ್ಕ ವಯಸ್ಸಿನವರು ಮತ್ತು …

Read More »