Breaking News

News

ನಕಲಿ ದಾಖಲೆಗೆ ಸಹಕರಿಸಿದ ಆರ್ ಟಿ ಓ ಕಚೇರಿಯ 4 ಸಿಬ್ಬಂದಿಯ ಬಂಧನ…

ದಾವಣಗೆರೆ: ಕಳವು ಮಾಡಿದ ದ್ವಿಚಕ್ರ ವಾಹನಗಳಿಗೆ ನಕಲಿ ದಾಖಲೆ ಸೃಷ್ಟಿಸಲು ಸ್ಥಳೀಯ ಬ್ರೋಕರ್​ಗಳಿಗೆ ಸಹಕರಿಸುತ್ತಿದ್ದ ಆರೋಪದ ಮೇರೆಗೆ ಆರ್​ಟಿಒ ಕಚೇರಿಯ ನಾಲ್ವರು ಸಿಬ್ಬಂದಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಳವು ಮಾಡಿದ್ದ ಬೈಕ್​ಗಳ ಮಾಲೀಕರಿಗೆ ಗೊತ್ತಿಲ್ಲದಂತೆ ನಕಲಿ ದಾಖಲೆ ಸೃಷ್ಟಿಸಿ ಬೈಕ್​ಗಳನ್ನು ಬೇರೊಬ್ಬರ ಹೆಸರಿಗೆ ವರ್ಗಾಯಿಸುತ್ತಿದ್ದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ದ್ವಿತೀಯ ದರ್ಜೆಯ ಸಹಾಯಕರಾಗಿರುವ (ಎಸ್​ಡಿಎ) ವಸಂತ ಕುಮಾರ್, ಶಶಿಕುಮಾರ್, ಜಗದೀಶ್, ಪ್ರದೀಪ್ ಬಂಧಿತ ಸಿಬ್ಬಂದಿಯಾಗಿದ್ದಾರೆ. ದಾವಣಗೆರೆ ಜಿಲ್ಲೆ ಹೊನ್ನಾಳಿ …

Read More »

ವಿದ್ಯುತ್ ಪ್ರಹರಿಸಿ 8 ತಿಂಗಳ ಮಗು ಸಾವು…

ಕಾರವಾರ: ಸ್ವಿಚ್ಡ್​​ ಬೋರ್ಡ್​ಗೆ ಹಾಕಿದ್ದ ಮೊಬೈಲ್ ಚಾರ್ಜರ್ ವಯರ್​ಗೆ ಬಾಯಿ ಹಾಕಿದ ಪರಿಣಾಮ ವಿದ್ಯುತ್ ಪ್ರವಹಿಸಿ 8 ತಿಂಗಳ ಮಗು ಸಾವನ್ನಪ್ಪಿದ ಘಟನೆ ಕಾರವಾರ ತಾಲೂಕಿನ ಸಿದ್ದರದಲ್ಲಿ ಇಂದು ನಡೆದಿದೆ. ಸಿದ್ದರದ ಸಂತೋಷ ಕಲ್ಗುಟಕರ್, ಸಂಜನಾ ಕಲ್ಗುಟಕರ್ ದಂಪತಿಯ ಏಂಟು ತಿಂಗಳ ಹೆಣ್ಣು ಮಗು ಸಾನಿಧ್ಯ ಕಲ್ಗುಟಕರ್ ಮೃತಪಟ್ಟಿದೆ. ಇಂದು ಬೆಳಗ್ಗೆ ಮನೆಯಲ್ಲಿ ಸ್ವಿಚ್ ಬೋರ್ಡ್​ಗೆ ಹಾಕಿದ್ದ ಮೊಬೈಲ್ ಚಾರ್ಜರ್ ಸ್ವಿಚ್​ ಆಫ್​ ಮಾಡಿರಲಿಲ್ಲ. ಆದರೆ, ಇದೇ ಸಮಯದಲ್ಲಿ ಮಗು …

Read More »

ಪತ್ನಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಪತಿ…

ಆನೇಕಲ್:ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ನಂತರ ಪತಿ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆನೇಕಲ್ ತಾಲೂಕಿನ ಸರ್ಜಾಪುರ ಸಮೀಪದ ಬಿಕ್ಕನಹಳ್ಳಿಯ ಜನತಾ ಕಾಲೊನಿಯಲ್ಲಿ ನಡೆದಿದೆ. ಲಕ್ಷ್ಮಮ್ಮ (47) ಪತಿಯಿಂದಲೇ ದಾರುಣವಾಗಿ ಕೊಲೆಯಾದ ಮಹಿಳೆ. ವೆಂಕಟಸ್ವಾಮಿ(53) ಪತ್ನಿಯನ್ನ ಕೊಲೆ ಮಾಡಿ, ಆತ್ಮಹತ್ಯೆ ಮಾಡಿಕೊಂಡ ಪತಿ. ಇನ್ನೂ ಇಬ್ಬರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅಷ್ಟೇ ಅಲ್ಲ ಈ ದಂಪತಿ ಇಬ್ಬರು ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದರು. ರಾತ್ರಿ ಕ್ಷುಲ್ಲಕ …

Read More »

50ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಸಚಿವರು ಪಕ್ಷದ ನಾಯಕರ ಭೇಟಿ :ಡಿಕೆ ಶಿವಕುಮಾರ್

ನವದೆಹಲಿ:2024ರ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಸುಮಾರು 50 ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಸಚಿವರು ಇಂದು ನವದೆಹಲಿಯಲ್ಲಿ ಪಕ್ಷದ ನಾಯಕರನ್ನು ಭೇಟಿಯಾಗಲಿದ್ದಾರೆ ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿಗಳಾದ ಕೆಸಿ ವೆಂಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿದಂತೆ ಇತರರು ಭಾಗವಹಿಸುವ ಸಾಧ್ಯತೆಯಿದೆ. ಕರ್ನಾಟಕ ಡಿಸಿಎಂ …

Read More »

ಧಾರವಾಡ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿದವರೆಷ್ಟು ಗೊತ್ತಾ?

ಧಾರವಾಡ : ಜಿಲ್ಲೆಯಲ್ಲಿ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಧಾರವಾಡ ಗ್ರಾಮೀಣದಲ್ಲಿ 83, ಧಾರವಾಡ ನಗರದಲ್ಲಿ 12, ಹುಬ್ಬಳ್ಳಿ ಗ್ರಾಮೀಣದಲ್ಲಿ 60, ಹುಬ್ಬಳ್ಳಿ ನಗರದಲ್ಲಿ 28, ಕುಂದಗೋಳದಲ್ಲಿ 61, ಕಲಘಟಗಿಯಲ್ಲಿ 61, ನವಲಗುಂದದಲ್ಲಿ 38, ಅಣ್ಣಿಗೇರಿಯಲ್ಲಿ 27, ಅಳ್ಳಾವರದಲ್ಲಿ 10, ಗ್ರಾಮೀಣ ಪ್ರದೇಶದಲ್ಲಿ ಗ್ರಾಮ್ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳು ಮತ್ತು ನಗರ ಪ್ರದೇಶದಲ್ಲಿ ಕರ್ನಾಟಕ ಒನ್ ಹಾಗೂ ತಾತ್ಕಾಲಿಕ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. …

Read More »

ಹೆಚ್.ಡಿ.ರೇವಣ್ಣಗೆ ಹೈಕೋರ್ಟ್ ಸೆಮನ್ಸ್ ಜಾರಿ ಮಾಡಿದೆ….

ಬೆಂಗಳೂರು: ಹಣ ಮತ್ತು ಕೊಳಿ ಮಾಂಸ ಹಂಚಿ ಚುನಾವಣೆ ಗೆದ್ದರುವುದಾಗಿ ಆರೋಪಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಶಾಸಕ ಹೆಚ್.ಡಿ.ರೇವಣ್ಣಗೆ ಹೈಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಇದೇ ವೇಳೆ, ಕಾಂಗ್ರೆಸ್​ ಅಭ್ಯರ್ಥಿ ಶ್ರೇಯಸ್ ಪಾಟೀಲ್​​ಗೂ ಸಮನ್ಸ್ ಜಾರಿ ಮಾಡಲಾಗಿದೆ. ಹೊಳೆನರಸೀಪುರ ಪರಾಜಿತ ಅಭ್ಯರ್ಥಿ ದೇವರಾಜೇಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ನ್ಯಾಯಪೀಠ ಸಮನ್ಸ್ ಜಾರಿ ಮಾಡಿ ವಿಚಾರಣೆಯನ್ನು ಸೆಪ್ಟಂಬರ್ 4 ಕ್ಕೆ ಮುಂದೂಡಿದೆ. …

Read More »

ಧಾರವಾಡ ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಜೆ.ಎಸ್.ಎಸ್ ಶಿಕ್ಷಣ ಸಂಸ್ಥ

ಧಾರವಾಡ ನಗರದ ಪ್ರತಿಷ್ಠಿತ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಯು ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು ನೂತನ ಆಡಳಿತ ಮಂಡಳಿಯ ಸುವರ್ಣ ಮಹೋತ್ಸವ ವರ್ಷ ಹಾಗೂ ಪೂಜ್ಯ ಧಮ೯ಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆ ಅವರು 75ನೇ ಹುಟ್ಟುಹಬ್ಬವನ್ನು ಈ ವರ್ಷ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ 75 ಸಮಾಜಮುಖಿ ಕಾಯಕ್ರಮಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಪೂಜ್ಯರ ಸಹಾಯ ಮುಟ್ಟುವಂತೆ ಜನತಾ ಶಿಕ್ಷಣ ಸಮಿತಿಯ ವಿವಿಧ ಅಂಗ ಸಂಸ್ಥೆಗಳು ವಿವಿಧ ಕಾಯ೯ಕ್ರಮ ಹಮ್ಮಿಕೊಂಡಿವೆ ಎಂದು ಜೆ.ಎಸ್.ಎಸ್ …

Read More »

ಮಾಜಿ ಸಿಎಂ ಶೆಟ್ಟರ್‌ನ ದೆಹಲಿಗೆ ಹೈಕಮಾಂಡ್ ಬುಲಾವ್!

ಹುಬ್ಬಳ್ಳಿ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಸಭೆ ನಡೆಸುತ್ತಿದ್ದು, ಹೈಕಮಾಂಡ ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಗೂ ಬುಲಾವ್ ನೀಡಿದೆ. ದೆಹಲಿಗೆ ಬರುವಂತೆ ಜಗದೀಶ್ ಶೆಟ್ಟರ್ ಗೆ ಬುಲಾವ್ ನೀಡಿದ ಹೈಕಮಾಂಡ್, ಇಂದು ಮದ್ಯಾಹ್ನ ದೆಹಲಿಗೆ ತೆರಳಲಿರೋ ಜಗದೀಶ್ ಶೆಟ್ಟರ್. ಹೈಕಮಾಂಡ್ ನಾಯಕರ ಕರೆ ಮೇರೆಗೆ ದೆಹಲಿಗೆ ಹಾರಲಿರುವ ಶೆಟ್ಟರ್, ಇಂದು ಮದ್ಯಾಹ್ನ ಹುಬ್ಬಳ್ಳಿಯಿಂದ ದೆಹಲಿಗೆ ತೆರಳಲಿದ್ದಾರೆ.

Read More »

ಶೀಘ್ರದಲ್ಲೇ ರೈತರಿಗೆ ಸಿಗಲಿದೆ ಪಿಎಂ ಕಿಸಾನ್ 14ನೇ ಕಂತು: ಇಲ್ಲಿದೆ ಡಿಟೇಲ್ಸ್!

ಕೇಂದ್ರ ಸರ್ಕಾರವು ದೇಶದ ಲಕ್ಷಗಟ್ಟಲೆ ರೈತರಿಗೆ ಶೀಘ್ರದಲ್ಲೇ ಒಳ್ಳೆಯ ಸುದ್ದಿಯನ್ನು ನೀಡಬಹುದು. ವಾಸ್ತವವಾಗಿ, ದೇಶದ ರೈತರಿಗೆ ಆರ್ಥಿಕ ಸಹಾಯಕ್ಕಾಗಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ. ಈ ಯೋಜನೆಯಡಿ ಇದುವರೆಗೆ 13ನೇ ಕಂತಿನವರೆಗೆ ರೈತರಿಗೆ ಲಾಭವಿದೆ. ಈಗ ರೈತರು PM ಕಿಸಾನ್ 14 ನೇ ಕಂತು ದಿನಾಂಕ 2023 ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಏತನ್ಮಧ್ಯೆ, 27 ಜುಲೈ 2023 ರಂದು, ರಾಜಸ್ಥಾನದ ಸಿಕಾರ್‌ನಲ್ಲಿನ ಕಾರ್ಯಕ್ರಮದಿಂದ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಪ್ರಾರಂಭಿಸಿದ …

Read More »

ಗ್ಯಾಸ್‌ ಬೆಲೆಯಲ್ಲಿ 100 ರೂಪಾಯಿ ಇಳಿಸಿದ ಕೇಂದ್ರ ಸರ್ಕಾರ: ಇಂದು ಮಧ್ಯರಾತ್ರಿಯಿಂದಲೇ ದರ ಜಾರಿ!

ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಮಂಗಳವಾರ ಇಳಿಸಿವೆ. 19ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆ (99.75 ರೂಪಾಯಿ) ಅಂದಾಜು 100 ರೂಪಾಯಿ ಇಳಿಕೆಯಾಗಿದೆ. ಕೋಲ್ಕತ್ತ 1,802.50 ರೂ, ಮುಂಬೈ 1,640.50 ರೂಪಾಯಿ ಇದ್ದರೆ ಇನ್ನು ಚೆನ್ನೈನಲ್ಲಿ 19 ಕೆಜಿಯ ಒಂದು ಸಿಲಿಂಡರ್ ಬೆಲೆ 1,852.50 ರೂಪಾಯಿ ಆಗಿದೆ. ಜುಲೈ 4 ರಂದು ಎಲ್​ಪಿಸಿ ಸಿಲಿಂಡರ್ ಬೆಲೆಯನ್ನು ತೈಲ ಕಂಪನಿಗಳು ಪರಿಷ್ಕರಿಸಿದ್ದವು. ಪರಿಣಾಮ …

Read More »