Breaking News

News

ಬಾಲಕಿ ಮೇಲೆ ಮಂಗವೊಂದರ ದಾಳಿ ಬಾಲಕಿಗೆ ಗಂಭೀರ ಗಾಯ

ಶಾಲೆಯಿಂದ ಹೊರಬಂದಿದ್ದ ಮಗುವಿನ ಮೇಲೆ ಮಂಗವೊಂದು ದಾಳಿ ಮಾಡಿ ವಿದ್ಯಾರ್ಥಿನಿಗೆ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಧಾರವಾಡದ ಗರಗ ಗ್ರಾಮದಲ್ಲಿ ಇಂದು ನಡೆದಿದ್ದು, ಧಾರವಾಡ ತಾಲ್ಲೂಕಿನ ಗರಗ ಗ್ರಾಮದ ನಿವಾಸಿ ಇಕರಾ ಗಡಕಾರಿ (8) ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿಯಾಗಿದ್ದಾಳೆ. ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಉರ್ದು ಶಾಲೆಯಲ್ಲಿ 2ನೇ ತರಗತಿ ಒದುತ್ತಿದ್ದು, ಶಾಲೆ ಆಟದ ಸಮಯದಲ್ಲಿ ವಿದ್ಯಾರ್ಥಿನಿ ಶಾಲೆಯಿಂದ ಆಚ್ಚೆ ಬಂದು ಶಾಲೆಯ ಆವರಣಕ್ಕೆ ಮರಳುತ್ತಿರುವ ವೇಳೆ ಒಂಟಿ ಮಂಗ ವಿದ್ಯಾರ್ಥಿನಿಯ …

Read More »

ಜಿಂಕೆ ಕೊಂಬು ಮಾರಟ ಹಿನ್ನಲೆ ಇಬ್ಬರ ಬಂಧನ

ಶಿವಮೂಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ರಿಪ್ಪನ್‌ಪೇಟೆ ಸಮೀಪದ ಹಾರನ ಹಳ್ಳಿ ಸೋಮಿನಕೊಪ್ಪ ಬಸ್ ನಿಲ್ದಾಣದ ಬಳಿ ಅಕ್ರಮವಾಗಿ ಜಿಂಕೆ ಕೊಂಬು ಮಾರಾಟಕ್ಕೆ ಸಾಗಾಣಿಕೆ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿಯನ್ನಾದರಿಸಿ ಸಾಗರ ಆರಣ್ಯ ಸಂಚಾರಿ ದಳದ ಪೊಲೀಸ್ ಸಬ್‌ ಇನ್ಸೆಕ್ಟರ್ ವಿನಾಯಕ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಹಾರನಹಳ್ಳಿ ಮಂಜುನಾಥ ಮತ್ತು ಸಚಿನ್ ಎಂಬ ಬಂಧಿತ ಆರೋಪಿಗಳಿಂದ ಜಿಂಕೆ ಕೊಂಬು ವಶ ಪಡಿಸಿಕೊಂಡು ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಪತ್ತೆ ಕಾರ್ಯಾಚರಣೆಯಲ್ಲಿ …

Read More »

ವೃದ್ಧೆಯ ಹತ್ತಿರ ಇದ್ದ ಹಣ ಬಂಗಾರ ಕಳ್ಳತನ ಮಾಡಿದ ಖದೀಮರು

ಕೊರಟಗೆರೆ: ತಾಲೂಕಿನ ಕಾಲೋನಿ, ನಾಗೇನಹಳ್ಳಿ ಸೇರಿದಂತೆ ಭೈರೇನಹಳ್ಳಿ ಕ್ರಾಸ್ ಬಳಿ ಸರಣಿ ಕಳ್ಳತನ ನಡೆದಿದ್ದು, ರಸ್ತೆ ಬದಿಯ ಅಂಗಡಿಗಳಲ್ಲಿ ಕಳ್ಳರು ಕಳ್ಳತನ ನಡೆಸಿರುವುದಲ್ಲದೇ ಬೆಳಗ್ಗಿನ ವೇಳೆ ವೃದ್ದೆಯ ಕೊರಳಲ್ಲಿದ್ದ ಚೈನ್ ಕಸಿದು ಪರಾರಿಯಾದ ಘಟನೆ ಕೂಡ ನಡೆದಿದೆ. ಕಾಲೋನಿಯಿಂದ ಕೊರಟಗೆರೆಗೆ ಬರುವ ಮಾರ್ಗ ಮಧ್ಯದ ರಸ್ತೆ ಬದಿಯ ಐದು ಅಂಗಡಿಗಳಲ್ಲಿ ತಡ ರಾತ್ರಿ ಕಳ್ಳತನ ನಡೆಸಲಾಗಿದ್ದು, ಸಿಲಿಂಡರ್,ಗುಟ್ಕಾ, ಸಿಗರೇಟ್, ನಗದು ಕಳವು ಮಾಡಿ ಕಳ್ಳರು ಪರಾರಿಯಾಗಿದ್ದಾರೆ.ಕಳ್ಳತನ ಮಾಡಿರುವ ಪ್ರತಿಯೊಂದು ಅಂಗಡಿಗಳಲ್ಲಿ ಬೆಲೆ …

Read More »

ಡ್ರಗ್‌ ಮಾಫಿಯಾ ಕಡಿವಾಣಕ್ಕೆ ಮುಂದಾದ ಸಿ.ಎಂ. ಅಧಿಕಾರಿಗಳಿಗೆ ಸೂಚನೆ;

ಡ್ರಗ್ ಮಾಫಿಯಾದ ಬೇರುಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ‌ ರಾಜ್ಯದಲ್ಲಿ ಡ್ರಗ್ಸ್ ಹಾವಳಿಯನ್ನು ಪರಿಣಾಮಕಾರಿಯಾಗಿ ತಡೆಯುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಯುವ ಸಮೂಹ ಮಾದಕದ್ರವ್ಯದ ದಾಸರಾಗದಂತೆ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇದರ ಜತೆಗೆ ಡ್ರಗ್ ಮಾಫಿಯಾದ ಮೂಲವನ್ನು ಪತ್ತೆ ಹಚ್ಚಬೇಕು. ಚಾಳಿ ಬಿದ್ದ ಪೆಡ್ಲರ್ ಗಳನ್ನು ಗಡಿಪಾರು ಮಾಡುವುದೂ ಸೇರಿದಂತೆ ಹಚ್ಚಿನ ಕಠಿಣ ಕ್ರಮಗಳ ಮೂಲಕ ಡ್ರಗ್ ಹಾವಳಿಯನ್ನು ತಡೆಯಬೇಕು ಎಂದು ಸೂಚಿಸಿದ್ದಾರೆ. ವಿಶೇಷ …

Read More »

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಚಿವರಿಗೆ ಮನವಿ

ಮೈಸೂರು ; ಆಶಾ ಕಾರ್ಯಕರ್ತರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಮೈಸೂರು ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಮೈಸೂರು ಜಿಲ್ಲಾ ಪಂಚಾಯತ್‌ನಲ್ಲಿ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದರು. ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಎಐಯುಟಿಯುಸಿ ಕೇಂದ್ರೀಯ ಕಾರ್ಮಿಕ ಸಂಘಟನೆಗೆ ಸಂಯೋಜಿತ ಗೊಂಡಿರುವ  ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗೌರವ ಧನ 8,000 ನಿಗದಿಪಡಿಸಿ, ಆರ್ ಸಿ ಎಚ್ ಪೋರ್ಟಲ್ ಮೂಲಕ ಪ್ರೋತ್ಸಾಹ ಧನ ನೀಡುವುದನ್ನು …

Read More »

ಆಡು ನುಂಗಲು ಬಂದ ಹೆಬ್ಬಾವು, ನುಂಗಲಾಗದೆ ಮರಳಿ ಕಾಡು ಸೇರಿದ ಹೆಬ್ಬಾವು

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತ್ತೂರು ಗ್ರಾಮದಲ್ಲಿ ಆಡು ನುಂಗಲು ಸಾಧ್ಯವಾಗದೇ ಆಡನ್ನು ಬಿಟ್ಟು ಹೆಬ್ಭಾವು ತೆರಳಿದ ಘಟನೆ ನಡೆದಿದೆ. ಆಹಾರ ಅರಸಿ ನಾಡಿಗೆ ಬಂದಿದ್ದ ಭಾರೀ ಗಾತ್ರದ ಹೆಬ್ಬಾವು ಬ್ರಾಂತಿಕಟ್ಟೆ ಕೊಡೆಂಕಿರಿ ಎಂಬಲ್ಲಿ ಆಡೊಂದನ್ನು ಬೇಟೆಯಾಡಿದ್ದು ಹಿಡಿದ ಆಡನ್ನು ನುಂಗಲು‌ ಸುಮಾರು ಒಂದು ತಾಸು ಸೆಣಸಾಡಿ ವಿಫಲವಾಗಿ ನುಂಗಲು ಸಾಧ್ಯವಾಗದೆ ತೆರಳಿದೆ. ಜಾರ್ಜ್ ಕುಟ್ಟಿ ಎಂಬವರಿಗೆ ಸೇರಿದ ಸುಮಾರು 45 ಕೆಜಿ ತೂಕದ ಗಂಡು ಆಡು ಹೆಬ್ಬಾವಿನ …

Read More »

ಬೈಕ್‌ ರಿಪೇರಿ ಮಾಡುತ್ತೀರುವ ರಾಹುಲ್‌ ಗಾಂಧಿ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌

ಕಾಂಗ್ರೆಸ್ ನಾಯಕ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಾರ್ವಜನಿಕರ ಜೊತೆ ಒಂದಿಲ್ಲಾ ಒಂದು ಬಹಳ ಆಳವಾಗಿ ಅವರೊಡನೆ ಬೆರೆಯುವ ಫೋಟೋ ಹಾಗೂ ವಿಡಿಯೋಗಳು ಸಾಮಾಜದ ಜಾಲತಾಣಗಳಲ್ಲಿ ಆಗಾಗ ಭಾರೀ ವೈರಲ್ ಆದ್ರೆ ಮತ್ತೊಮ್ಮೆ ಟ್ರೋಲ್ ಆಗುವದು ಸಹಜ ಆಗಿದೆ. ಇಂದೂ ಸಹ ರಾಹುಲ್ ಗಾಂಧಿ ಮೆಕಾನಿಕ್ ಶಾಪ್ ಒಂದರಲ್ಲಿ ಬೈಕ್ ಗಳ ರಿಪೇರಿ ಮಾಡುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಕೈಯಲ್ಲಿ ಸ್ಪ್ಯಾನರ್, ಸ್ಕ್ರೂ ಡ್ರೈವರ್ …

Read More »

ಗ್ರಾಮೀಣ ಯೋಜನಾ ಸಹಾಯಕ ನಿರ್ದೇಶಕನ ಮೇಲೆ ಲೋಕಾಯುಕ್ತರ ದಾಳಿ

ರಾಯಚೂರು ಜಿಲ್ಲೆಯ ನಗರ ಮತ್ತು ಗ್ರಾಮೀಣ ಯೋಜನಾ ಘಟಕದ ಸಹಾಯಕ ನಿರ್ದೇಶಕನ ಮೇಲೆ ಲೋಕಾಯುಕ್ತ ದಾಳಿಯಾಗಿದೆ. ಶರಣಪ್ಪ ಮಡಿವಾಳ, ರಾಯಚೂರು ಜಿಲ್ಲೆ ನಗರ ಮತ್ತು ಗ್ರಾಮೀಣ ಯೋಜನಾ ಘಟಕದ ಸಹಾಯಕ ನಿರ್ದೇಶಕರಾಗಿದ್ದು, ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದ ಕಚೇರಿ ಮತ್ತು ಮನೆಯ ಮೇಲೆ ದಾಳಿಯಾಗಿದೆ. ಕಲಬುರಗಿಯ ನಾಗನಹಳ್ಳಿ-ಖಣದಾಳ ರಸ್ತೆಯಲ್ಲಿರುವ ಫಾರ್ಮ್ ಹೌಸ್ ನಲ್ಲೂ ದಾಳಿಯಾಗಿದೆ. ಶರಣಪ್ಪ ಮೇಲೆ ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪವಿದ್ದು, ಕಲಬುರಗಿ ಲೋಕಾಯುಕ್ತ ಎಸ್ಪಿ ಎ.ಆರ್. …

Read More »

ಬಿಟ್‌ ಕಾಯಿನ್‌ ಹಗರಣಕ್ಕೆ ಮರುಜೀವ ;ಸಿ.ಎಂ. ಸಿದ್ದರಾಮಯ್ಯ

ಬಿಟ್ ಕಾಯಿನ್ ಹಗರಣ ತನಿಖೆಗೆ ಮುಂದಾದ ಕಾಂಗ್ರೆಸ್ ಸರಕಾರ , ಬಿಜೆಪಿ ಸರಕಾರ ವೇಳೆ ಮುಂಚೋಣೆಯಲ್ಲಿ ಇದ್ದ ಬಿಟ್‌ ಕಾಯಿನ್‌ ಬಹುಕೋಟಿ ಹಗರಣವನ್ನು ಮರು ತನಿಖೆ ಮಾಡಲಾಗುವುದು ಎಂದು ಸಿ,ಎಂ ಸಿದ್ದರಾಮಯ್ಯ ಹಾಸನದಲ್ಲಿ ಇಂದು ತಿಳಿಸಿದ್ದಾರೆ . ಹಾಸನದಲ್ಲಿ ಇಂದು ನಾಡಪ್ರಭು ಕೇಂಪೆಗೌಡ ಅವರ ಜಯುಂತಿ ಆಚರಣೆ ಮಾಡಿ ತದನಂತರದಲ್ಲಿ ಮಾತನಾಡಿದ ಅವರು ಬಿಜೆಪಿ ಸರಕಾರದಲ್ಲಿ ನಡೆದ ಎಲ್ಲಾ ಹಗರಣಗಳನ್ನು ಬಹಿರಂಗ ಮಾಡಲಿದ್ದೇವೆ. ಅದರಲ್ಲೂ ಪ್ರಮುಖವಾಗಿದ್ದು ಬಿಟ್‌ ಕಾಯಿನ್‌ ಹಗರಣ …

Read More »

ನರಗುಂದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ

ಗದಗ ; ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜ ವಿವಿದೋದ್ಧೇಶಗಳ ಸಂಘ ನರಗುಂದ ವತಿಯಿಂದ SSLC ಮತ್ತು PUC ವಿದ್ಯಾರ್ಥಿಗಳಿಗೆ ನಿನ್ನೆ ದಿನ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಈ ಸಂದರ್ಭದಲ್ಲಿ ನರಗುಂದ ಮತಕ್ಷೇತ್ರದ ಶಾಸಕರಾದ ಸಿ.ಸಿ.ಪಾಟೀಲ್‌ ಅವರ ಪುತ್ರ ಉಮೇಶಗೌಡ ಪಾಟೀಲ್‌ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ದೂರೆಸ್ವಾಮಿ ವಿರಕ್ತಮಠದ ಶ್ರೀಗಳು ಹಾಗೂ ಸಾಧನೆ ಮಾಡಿದ ಮಕ್ಕಳ ಪೋಷಕರು ಹಾಗೂ ನರಗುಂದ ಪಟ್ಟಣದ ಸಮಸ್ತ …

Read More »