admin
November 20, 2021
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಠಾಣೆಯಲ್ಲಿ ಅಸಭ್ಯ ವರ್ತನೆ ತೋರಿದ ಆರೋಪದಡಿ ನಗರದ ಕಸಬಾಪೇಟ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಶ್ರೀಕಾಂತ ಗೋಣೆಪ್ಪನವರ ಅವರನ್ನು ಅಮಾನತು ಮಾಡಲಾಗಿದೆ. ಶಿಸ್ತಿನ ಇಲಾಖೆಯಲ್ಲಿ ಶ್ರೀಕಾಂತ ಅಶಿಸ್ತಿನಿಂದ ವರ್ತಿಸುತ್ತಿದ್ದರು. ಠಾಣೆಯಲ್ಲಿ ಅಧಿಕಾರಿ, ಸಿಬ್ಬಂದಿ ಎದುರು ಶರ್ಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದರು. ಹೀಗೆ ಮಾಡದಂತೆ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ ದುರ್ವರ್ತನೆ ಮುಂದುವರಿಸಿದ್ದರು ಎನ್ನಲಾಗ್ತಿದೆ. ಈ ಕಾರಣಕ್ಕೆ ಡಿಸಿಪಿ ಕೆ. ರಾಮರಾಜನ್ ಅವರು ತಮ್ಮ ವರ್ಗಾವಣೆಗೂ ಮುನ್ನವೇ ಶ್ರೀಕಾಂತ ಅಮಾನತು ಆದೇಶ ಹೊರಡಿಸಿದ್ದಾರೆ
Read More »
admin
November 20, 2021
Breaking News, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಡಾ.ಲಿಂಗರಾಜ ರುದ್ರಪ್ಪ ಅಂಗಡಿ ಧಾರವಾಡ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಜಿಲ್ಲೆಯ ಹಿರಿಯ, ಕಿರಿಯ ಸಾಹಿತಿಗಳು, ಕಲಾವಿದರು, ಕನ್ನಡಾಭಿಮಾನಿಗಳ ಒತ್ತಾಸೆ ಬೆಂಬಲದೊಂದಿಗೆ ಪುನರ್ ಆಯ್ಕೆ ಬಯಸಿ ಸ್ಪರ್ಧೆ ಮಾಡಿದ್ದು, ನನ್ನ ಆಯ್ಕೆ ನೂರಕ್ಕೆ ನೂರರಷ್ಟು ಖಚಿತವಾಗಿದೆ ಎಂದು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ.ಲಿಂಗರಾಜ ರುದ್ರಪ್ಪ ಅಂಗಡಿ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಕಳೆದ ಎಂಟು ವರ್ಷಗಳಿಂದ …
Read More »
admin
November 20, 2021
Breaking News, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಕೋಡಿಮಠದ ಡಾ.ಶಿವಾನಂದ ರಾಜೇಂದ್ರ ಸ್ವಾಮೀಜಿ ಧಾರವಾಡ: ರಾಜ್ಯದಲ್ಲಿ ಕಾರ್ತಿಕ ಮುಗಿಯುವವರೆಗೂ ಮಳೆ ಮುಂದುವರೆಯಲಿದೆ ಎಂದು ಕೋಡಿಮಠದ ಡಾ.ಶಿವಾನಂದ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇನ್ನೂ ಮಳೆ ಹೆಚ್ಚಾಗುವ ಲಕ್ಷಣ ಇದೆ. ಕಾರ್ತಿಕ ಕಳೆಯುವವರೆಗೂ ಮಳೆ ಇರುತ್ತದೆ. ಸದ್ಯ ಪ್ರಕೃತಿ ವಿಕೋಪವಾಗಿದೆ. ಏನೂ ಮಾಡಲು ಆಗುವುದಿಲ್ಲ ಎಂದರು.ಅನಾಹುತಗಳು ಹೆಚ್ಚಾಗುವ ಸಾಧ್ಯತೆ ಇದೆ. ಸಂಕ್ರಾಂತಿವರೆಗೂ ಮಳೆ ಇರಲಿದೆ ಎಂದರು. ಇದೇ ವೇಳೆ ರಾಜಕೀಯದ ಬಗ್ಗೆ ಭವಿಷ್ಯ …
Read More »
admin
November 19, 2021
ಆರೋಗ್ಯ, ಕರ್ನಾಟಕ, ಬೆಂಗಳೂರು, ಲೈಫ್ ಸ್ಟೈಲ್, ವಿಶೇಷ ಸುದ್ದಿ
ಬೆಂಗಳೂರು : ನಮ್ಮ ದೈನಂದಿನ ಆಹಾರ ಕ್ರಮದಲ್ಲಿ ಸಕ್ಕರೆ ಅತಿ ಕೆಟ್ಟ ಅಭ್ಯಾಸ ಎನ್ನುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಸಕ್ಕರೆ ಸೇವನೆ ಒಂದು ರೀತಿಯ ಸ್ಲೋ ಪಾಯಿಸನ್ (ನಿಧಾನಗತಿಯ ವಿಷ). ಇದರ ಸೇವನೆಯಿಂದ ಅತಿ ಹೆಚ್ಚು ಆರೋಗ್ಯ ಸಮಸ್ಯೆ ನಮ್ಮನ್ನು ಕಾಡುತ್ತದೆ. ಎಲ್ಲಾ ಬಗೆಯ ಆರೋಗ್ಯ ಸಮಸ್ಯೆಗೆ ಸಕ್ಕರೆಯೇ ಮುಖ್ಯ ಕಾರಣ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಹಾಗಿದ್ದರೆ, ಸಕ್ಕರೆ ಸೇವನೆ ಮಾಡಬಾರದೇ?. ಖಂಡಿತ ಮಾಡಬಹುದು. ಎಷ್ಟು ಪ್ರಮಾಣದಲ್ಲಿ ಮಾಡಬೇಕು, ಯಾವ …
Read More »
admin
November 19, 2021
Breaking News, ಕರ್ನಾಟಕ, ಬೆಂಗಳೂರು, ಮೈಸೂರು, ರಾಜಕೀಯ ಸುದ್ದಿ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೈಸೂರು: ರಾಜ್ಯದಲ್ಲಿ 40 ಪರ್ಸೆಂಟ್ ಕಮಿಷನ್ ಪಡೆಯುವ ಸರ್ಕಾರವಿದೆ. ರಾಜ್ಯಪಾಲರು ಇಂತಹ ಸರ್ಕಾರವನ್ನು ವಜಾ ಮಾಡುವಂತೆ ಪತ್ರ ಬರೆಯುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಒಂದು ಕಾಮಗಾರಿ ತೆಗೆದುಕೊಳ್ಳಬೇಕಾದರೆ ಮಂತ್ರಿಗಳಿಗೆ, ಎಂಎಲ್ಎಗಳಿಗೆ 40 ಪರ್ಸೆಂಟ್ ಕಮಿಷನ್ ಕೊಡಬೇಕಾಗಿದೆ ಎಂದು ಗುತ್ತಿಗೆದಾರರ ಸಂಘ ಪ್ರಧಾನಿ ಅವರಿಗೆ ಪತ್ರ ಬರೆದಿದೆ ಎಂದರು. ಇಷ್ಟೊಂದು ಕಮಿಷನ್ ತೆಗೆದುಕೊಳ್ಳುವ ಸರ್ಕಾರವನ್ನು …
Read More »
admin
November 19, 2021
Breaking News, ಕರ್ನಾಟಕ, ರಾಜಕೀಯ ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಬಿಜೆಪಿ ಅತಿ ಹೆಚ್ಚು ಸ್ಥಾನ ಪಡೆಯಲಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿಂದು ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಅವರು, ಇಂದು ಎರಡನೇ ದಿನದ ಜನಸ್ವರಾಜ್ ಸಮಾವೇಶ. ನಾಳೆ ಬಾಗಲಕೋಟೆ, ವಿಜಯಪುರ ಹಾಗೂ ಬೆಳಗಾವಿಯಲ್ಲಿ ಸಮಾವೇಶ ನಡೆಯಲಿದೆ. ಪರಿಷತ್ ಚುನಾವಣೆಯಲ್ಲಿ ನಾವು 20 ಸೀಟುಗಳನ್ನು ಹಾಕಲಿದ್ದೇವೆ. ಅದರಲ್ಲಿ ಅತೀ ಹೆಚ್ಚು ಸ್ಥಾನ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇವತ್ತು ಬಹಳ ಐತಿಹಾಸಿಕ ದಿನ. …
Read More »
admin
November 19, 2021
ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ವೈದ್ಯರ ಮೇಲೆ ರೋಗಿಗಳ ಸಂಬಂಧಿಕರು ಹಲ್ಲೆ ನಡೆಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್ ಖಡಕ್ ಎಚ್ಚರಿಕೆ ನೀಡಿದೆ. ಹೌದು. ರೋಗಿಗಳ ಸಂಬಂಧಿಕರಿಂದ ವೈದ್ಯರ ಮೇಲೆ ನಡೆಯುವ ಹಲ್ಲೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ನಗರದ ಖ್ಯಾತ ಮನೋರೋಗ ತಜ್ಞ ಡಾ. ವಿನೋದ ಕುಲಕರ್ಣಿ ಅವರು ಪಿಐಎಲ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ವೈದ್ಯರ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿತ್ತು. ನಗರದ …
Read More »
admin
November 18, 2021
ಕರ್ನಾಟಕ, ಕರ್ನಾಟಕ, ಗದಗ
ಗದಗ :ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಊರಿನ ವಾರ್ಡ್ 1 ರ ಹನಮಂತಗೌಡ ಬಸವನಗೌಡ ಪಾಟೀಲ್ ಎಂಬುವವರ ಮನೆಯು ಸಂಪೂರ್ಣವಾಗಿ ಬಿದ್ದಿದ್ದು ಅಧಿಕಾರಿಗಳು ಆಗಲಿ ಗ್ರಾಮ ಪಂಚಾಯತಿಯವರು ಬಂದು ನೋಡಿಕೊಂಡು ಹೋಗುತ್ತಾರೆ ಹೋರತು ಯಾರು ಪರಿಹಾರ ನೀಡುತ್ತಿಲ್ಲ ಎಂದು ಕಣ್ಣೀರು ಹಾಕಿದ ಅಜ್ಜಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದಲ್ಲಿ ಸುಮಾರು 7 ತಿಂಗಳ ಹಿಂದೆಯೇ ಮಳೆಗೆ ಮನಿಯೊಂದು ಬಿದ್ದಿದ್ದು ಶಾಸಕರು ಬಂದು ನೋಡಿಕೊಂಡು ಹೋದರು ಇಲ್ಲಿವರೆಗೆ ಏನು ಮಾಡಿಲ್ಲ ಹಾಗೂ ಗ್ರಾಮ ಪಂಚಾಯತಿಯವರು …
Read More »
admin
November 18, 2021
ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಧಾರವಾಡ ಜಿಲ್ಲೆಯಲ್ಲಿ ಸುರಿದ ಮಳೆಗೆ ಬೆಳೆಗಳು ಜಲಾವೃತವಾಗಿರುವುದು, ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಅಪಾರ ಪ್ರಮಾಣದ ಬೆಳೆ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಕಲಘಟಗಿ ತಾಲೂಕಿನಲ್ಲಿ ನಡೆದಿದೆ.ಭಾರಿ ಮಳೆಗೆ ನೀರಸಾಗರ ಜಲಾಶಯದ ನೀರು ಹೆಚ್ಚಿ ಹೊರ ಹರಿದ ಪರಿಣಾಮ ಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ. ಎಮ್ಮೆಟ್ಟಿ, ನೀರಸಾಗರ, ಮುತ್ತಗಿ, ಗಂಬ್ಯಾಪುರ ಗ್ರಾಮಗಳ ರೈತರ ಜಮೀನುಗಳಿಗೆ ನೀರು ನುಗ್ಗಿ …
Read More »
admin
November 18, 2021
Breaking News, ಕರ್ನಾಟಕ, ಕೋಲಾರ, ರಾಜಕೀಯ ಸುದ್ದಿ
ಕೋಲಾರ :ನಿಷೇಧದ ನಡುವೆಯೂ ಜಿಲ್ಲೆಗೆ ಪ್ರವೇಶಿಸಲು ಯತ್ನಿಸಿದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಬಂಧನ ಮಾಡಲಾಗಿದೆ. ಕಳೆದ ಶನಿವಾರ ರಾತ್ರಿ ದತ್ತಪೀಠಕ್ಕೆ ತೆರಳುತ್ತಿದ್ದ ವಾಹನದ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆ ಖಂಡಿಸಿ, ಹಿಂದೂಪರ ಸಂಘಟನೆಗಳು ಇಂದು ಕೋಲಾರ ಬಂದ್ ಕರೆ ನೀಡಿದ್ದರು, ಬಂದ್ ಹಿನ್ನಲೆ ಕೋಲಾರಕ್ಕೆ ಶ್ರೀರಾಮ ಸೇನೆ ಸಂಘಟನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕರೆಸಿ ನಗರದಲ್ಲಿ ಭಾಷಣ ಮಾಡಿಸಲು ಉದ್ದೇಶಿಸಲಾಗಿತ್ತು. ಆದರೆ ಜಿಲ್ಲಾಡಳಿತ …
Read More »