Breaking News

ಕರ್ನಾಟಕ

ಸಂತೋಷ್ ಲಾಡ್‌ ಧಾರವಾಡ-ಹಳಿಯಾಳ ರಾಜ್ಯ ಹೆದ್ದಾರಿಯ ಪರಿಶೀಲನೆ…

ಧಾರವಾಡ: ಸ್ಥಳೀಯರ ಅಹವಾಲಿನಂತೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್‌ ಧಾರವಾಡ-ಹಳಿಯಾಳ ರಾಜ್ಯ ಹೆದ್ದಾರಿಯ ಪರಿಶೀಲನೆ ನಡೆಸಿದರು. ರಸ್ತೆ ತಿರುವು ದುರಸ್ತಿ ಮತ್ತು ಸೇತುವೆಯ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಚಿವ ಸಂತೋಷ್ ಲಾಡ್, ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಅವರೊಂದಿಗೆ ಧಾರವಾಡ-ಹಳಿಯಾಳ ರಾಜ್ಯ ಹೆದ್ದಾರಿಯನ್ನು ಉನ್ನತ ಶಿಕ್ಷಣ ಅಕಾಡೆಮಿ ಹತ್ತಿರ ಪರಿಶೀಲನೆ ನಡೆಸಿದರು.

Read More »

ಬೆಳಗಾವಿ ಕಾಂಗ್ರೆಸ್‌ ನಲ್ಲಿ ಹೊತ್ತಿಕೊಂಡ ಅಸಮಾಧಾನದ ಜ್ವಾಲೆ…

ಬೆಳಗಾವಿ: ಸಚಿವ ಸತೀಶ್‌ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್‌ ನಡುವೆ ಮುಸುಕಿ ಗುದ್ದಾಟ ಜೋರಾಗಿದ್ದು, ಬೆಳಗಾವಿ ಕಾಂಗ್ರೆಸ್‌ ನಲ್ಲಿ ಹೊತ್ತಿಕೊಂಡ ಅಸಮಾಧಾನದ ಜ್ವಾಲೆಯನ್ನ ಶಮನಗೊಳಿಸಲು ಡಿಸಿಎಂ ಡಿಕೆ ಶಿವಕುಮಾರ್ ಬೆಳಗಾವಿಗೆ ಆಗಮಿಸಿದ್ದಾರೆ. ಬುಧವಾರ ಬೆಳಗಾವಿಗೆ ಆಗಮಿಸಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಿರುಕಿಲ್ಲ. 136 ಶಾಸಕರೂ ನಮ್ಮವರೇ. ನಮ್ಮಲ್ಲಿ ಬಿರುಕಿದೆ ಎಂದು ಹೇಳುವ ಬಿಜೆಪಿ ನಾಯಕರು ಒಮ್ಮೆ ಜೆ.ಎಚ್. …

Read More »

ಬೆಂಗಳೂರಿನಲ್ಲಿ ಸಿಲಿಂಡರ್‌ ಸ್ಟೋಟದಿಂದ ಮತ್ತೊಂದು ಅಗ್ನಿ ಅವಘಡ….

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಕೋರಮಂಗಲ ಸಮೀಪರ ಪಬ್‌ ನಲ್ಲಿ ಸಿಲಿಂಡರ್‌ ಸ್ಟೋಟದಿಂದ ಅಗ್ನಿ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ಕಟ್ಟಡದ ನಾಲ್ಕನೇ ಮಹಡಿ ಸಂಪೂರ್ಣ ಹೊತ್ತಿ ಉರಿದಿದೆ. ಇನ್ನೂ ನೋಡ ನೋಡುತ್ತಿದ್ದಂತೆ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಪ್ರಾಣ ಉಳಿಸಿಕೊಳ್ಳಲು ವ್ಯಕ್ತಿಯೊರ್ವ ನಾಲ್ಕನೇ ಮಹಡಿಯಿಂದ ಜಿಗಿದಿದ್ದಾನೆ. ಸಿಲಿಂಡರ್ ಸ್ಫೋಟದಿಂದ ಕೋರಮಂಗಲದ ಮಡ್‌ ಪೈಪ್ ಹುಕ್ಕಾ ಪಬ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆ ಕಟ್ಟಡದ ನಾಲ್ಕನೇ ಮಹಡಿ ಸಂಪೂರ್ಣ …

Read More »

ಇಂದು ನಟ ಚಿರಂಜೀವಿ ಸರ್ಜಾ ಹುಟ್ಟುಹಬ್ಬ…

ಇಂದು ನಟ ಚಿರಂಜೀವಿ ಸರ್ಜಾ ಅವರ ಹುಟ್ಟು ಹಬ್ಬ . ಈ ದಿನದಂದು ಚಿರು ಪತ್ನಿ ಮೇಘನಾ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೊಂದನ್ನು ಮಾಡಿದ್ದಾರೆ. ‘ಕೆಲವನ್ನಷ್ಟೇ ಆಚರಿಸಲು ಆಯ್ಕೆ ಮಾಡಿಕೊಳ್ಳುತ್ತೇವೆ. ನಿಮ್ಮನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಹ್ಯಾಪಿ ಬರ್ತಡೇ ಹಸ್ಬೆಂಡ್’ ಎಂದು ಅವರು ಭಾವುಕವಾಗಿ ಪೋಸ್ಟ್ ಮಾಡಿದ್ದಾರೆ. ನಟ ಧ್ರುವ ಸರ್ಜಾ ಸಮಯ ಸಿಕ್ಕಾಗೆಲ್ಲ ಸಹೋದರ ಚಿರಂಜೀವಿ ಸರ್ಜಾ ಅವರ ಪುತ್ರ ರಾಯನ್ ಜೊತೆ ಕಾಲ ಕಳೆಯುತ್ತಾರೆ. ರಾಯನ್ ಕೂಡ …

Read More »

ಶಿಸ್ತು, ಸಂಯಮ, ಕಾರ್ಯಪ್ರವೃತ್ತತೆ ಬಗ್ಗೆ ವಿವೇಚನೆ ಮೂಡಿಸುವದೇ ಎನ್.ಎಸ್.ಎಸ್ ಮುಖ್ಯ ಉದ್ದೇಶ…

ಕುಂದಗೋಳ : ಶಿಸ್ತು, ಸಂಯಮ, ಕಾರ್ಯಪ್ರವೃತ್ತತೆ ಬಗ್ಗೆ ವಿವೇಚನೆ ಮೂಡಿಸುವದೇ ಎನ್.ಎಸ್.ಎಸ್ ಮುಖ್ಯ ಉದ್ದೇಶ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಹೇಳಿದರು. ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಭಾನುವಾರ ಸಂಶಿ ಕೆಎಲ್ಇ ಕಾಲೇಜು ವಿದ್ಯಾರ್ಥಿಗಳ ಎನ್ಎಸ್‌ಎಸ್‌ ಶಿಬಿರಕ್ಕೆ ಅವರು ಚಾಲನೆ ನೀಡಿ ಮಾತನಾಡಿ ಮಹಾತ್ಮ ಗಾಂಧಿ ಅವರ ಕನಸಿನ ಕೂಸಾದ ಎನ್ಎಸ್ಎಸ್ ಶಿಬಿರದಿಂದ ವಿದ್ಯಾರ್ಥಿಗಳಿಗೆ ಅನೇಕ ಪ್ರಯೋಜನ ಸಿಗಲಿದ್ದು, ಸೇವಾ ಮನೋಭಾವ ಬೆಳೆಸುವ ಸುಗಮ ದಾರಿಯಾಗಿದೆ ಎಂದು …

Read More »

ಜೆಡಿಎಸ್‌ ಪಾಳಯದಲ್ಲಿ ಅಸಮಾಧಾನದ ಬೆಂಕಿ ಹೊತ್ತಿಕೊಂಡಿದೆ….

ಬೆಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯಾದ ಬೆನ್ನಲ್ಲೇ ಜೆಡಿಎಸ್‌ ಪಾಳಯದಲ್ಲಿ ಅಸಮಾಧಾನದ ಬೆಂಕಿ ಹೊತ್ತಿಕೊಂಡಿದ್ದು, ನಮ್ಮದೇ ಒರಿಜಿನಲ್‌, ನಾನೃ ಅದರ ಅಧ್ಯಕ್ಷ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ ದಳಪತಿಗಳ ಕೋಟೆಯಲ್ಲಿ ಸಂಚಲನ ಸೃಷ್ಟಿಸುವಂತೆ ಮಾಡಿದೆ. ಈ ಕುರಿತು ವಿಧಾನಸೌಧದಲ್ಲಿ ವಿಧಾನ ಪರಿಷತ್‌ ಸದಸ್ಯ ಟಿ. ಎ. ಶರವಣ ಮಾತನಾಡಿ, ನಾನೊಬ್ಬ ಸಾಮಾನ್ಯ ಕಾರ್ಯಕರ್ತ, ಹಿರಿಯರಾದ ಹಾಗು ನಮ್ಮ ವರಿಷ್ಠರು ಪ್ರತಿಯೊಂದು ನಡೆಗಳನ್ನು ಗಮನಿಸುತ್ತಿದ್ದಾರೆ. ನಮ್ಮ …

Read More »

ನಾಲ್ವರು ಆರೋಪಿಗಳನ್ನು ಧಾರವಾಡ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ…

ಧಾರವಾಡ: ಮೊನ್ನೆಯಷ್ಟೇ ಧಾರವಾಡ ಹೊರವಲಯದ ಹಳಿಯಾಳ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ರಜಾಕ್ ಕವಲಗೇರಿ ಎಂಬುವವರನ್ನು ಕೊಚ್ಚಿ ಕೊಲೆ ಮಾಡಿದ ನಾಲ್ವರು ಆರೋಪಿಗಳನ್ನು ಧಾರವಾಡ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.ನಾಲ್ವರು ಅಣ್ಣ, ತಮ್ಮಂದಿರೇ ಸೇರಿಕೊಂಡು ರಜಾಕ್‌ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಹತ್ಯೆಗೆ ಆಸ್ತಿ ವಿಚಾರವೇ ಕಾರಣ ಎಂದು ಗೊತ್ತಾಗಿದೆ. ಕೆಇಬಿಯಲ್ಲಿ ಬಿಲ್ ಕಲೆಕ್ಟರ್ ಆಗಿದ್ದ ಬಾಡ ಗ್ರಾಮದ ರಜಾಕ್ ಕವಲಗೇರಿ ಮೊನ್ನೆ ತಮ್ಮೂರಿನತ್ತ ಹೋಗುತ್ತಿದ್ದ ಸಂದರ್ಭದಲ್ಲಿ ದಾವಲಮಲೀಕ್ ಶರೀಫಸಾಬ್ ಕವಲಗೇರಿ, ದಾದಾಕಲಂದರ್ …

Read More »

ಪಕ್ಷ ಸಂಘಟನೆ ವಿಚಾರಕ್ಕಾಗಿ ಪ್ರವಾಸ ಕೈಗೊಂಡಿರಬಹುದು: ಲಾಡ್

ಧಾರವಾಡ : ಮೈಸೂರಿನಲ್ಲಿ 20 ಶಾಸಕರ ಜೊತೆ ಸಚಿವ ಸತೀಶ್ ಜಾರಕಿಹೊಳಿ ಪ್ರವಾಸ ಹೋಗಿರುವ ವಿಚಾರದ ಬಗ್ಗೆ ಮಾಹಿತಿ ಇಲ್ಲ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪಕ್ಷ ಸಂಘಟನೆ ವಿಚಾರಕ್ಕಾಗಿ ಪ್ರವಾಸ ಕೈಗೊಂಡಿರಬಹುದು. ಈ ಕುರಿತು ನನಗೆ ಹೆಚ್ಚಿಗೆ ಗೊತ್ತಿಲ್ಲ. ಸಚಿವ ಸತೀಶ್ ಜಾರಕಿಹೊಳಿ ಪ್ರವಾಸ ಹೋಗಿರುವ ವಿಚಾರದ ಬಗ್ಗೆ ಮಾಹಿತಿ ಇಲ್ಲ ಎಂದು ಪ್ರತಿಕ್ರಿಯಿಸಿದರು. ಬಿಜೆಪಿಯವರು ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಎಟಿಎಂ …

Read More »

ಒಕ್ಕಲಿಗರ ವಿರುದ್ಧ ಪ್ರೊ.ಭಗವಾನ್ ನೀಡಿದ್ದ ಹೇಳಿಕೆ ದಿನಕ್ಕೊಂದು ವಿವಾದ ಪಡೆದುಕೊಳ್ಳುತ್ತಿದೆ…..

ಮೈಸೂರು: ಒಕ್ಕಲಿಗರ ವಿರುದ್ಧ ಪ್ರೊ.ಭಗವಾನ್ ನೀಡಿದ್ದ ಹೇಳಿಕೆ ದಿನಕ್ಕೊಂದು ವಿವಾದ ಪಡೆದುಕೊಳ್ಳುತ್ತಿದ್ದು, ಇದೀಗ ಖಾಸಗಿಯಾಗಿ ಮೈಸೂರಿನಲ್ಲಿ ಆಯೋಜನೆಗೊಂಡಿದ್ದ ದಸರಾ ಯುವ ಕವಿಗೋಷ್ಠಿಯಿಂದ ಭಗವಾನ್‌ಗೆ ಕೊಕ್ ನೀಡಲಾಗಿದೆ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸ್ಪಂದನ ಸಾಂಸ್ಕೃತಿಕ ಪರಿಷತ್ ವತಿಯಿಂದ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಇಂದು (ಅಕ್ಟೋಬರ್‌ 16ರಂದು) ‘ದಸರಾ ಯುವ ಕವಿಗೋಷ್ಠಿ’ಯ ಉದ್ಘಾಟನೆಯನ್ನು ವಿಚಾರವಾದಿ ಕೆ.ಎಸ್.ಭಗವಾನ್ ಅವರ ಬದಲಿಗೆ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ …

Read More »

ಕೋಳಿ ಮಾಂಸ ಹಿಡಿದು ಬಸ್‌ ಹತ್ತಿದಕ್ಕೆ ಸಾರಿಗೆ ಬಸ್‌ನಲ್ಲಿ ಅವಾಂತರ ಸೃಷ್ಟಿ…

ಮಂಗಳೂರು: ಕೂಲಿ ಕಾರ್ಮಿಕನೊಬ್ಬ ಕೋಳಿ ಮಾಂಸ ಹಿಡಿದು ಬಸ್‌ ಹತ್ತಿದಕ್ಕೆ ಸಾರಿಗೆ ಬಸ್‌ನಲ್ಲಿ ಅವಾಂತರ ಸೃಷ್ಟಿಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ.ಸುರೇಶ್ ಎನ್ನುವವರು ತುಂಬೆಯಲ್ಲಿ ಸ್ಟೇಟ್ ಬ್ಯಾಂಕ್ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದಾರೆ. ಬಸ್ ನಿರ್ವಾಹಕ ಟಿಕೆಟ್ ನೀಡಲು ಬಂದಾಗ ಈತನ ಕೈಯಲ್ಲಿ ಚೀಲವೊಂದ್ದಿದ್ದು, ಅದರ ಬಗ್ಗೆ ವಿಚಾರಿಸಿದ್ದಾರೆ. ಪ್ರಯಾಣಿಕ ಕೋಳಿ ಮಾಂಸ ಎಂದು ನಿಜ ವಿವಾರ ತಿಳಿಸಿದಾಗ ಬಸ್‌ನಿಂದ ಇಳಿಯುವಂತೆ ನಿರ್ವಾಹಕ ಒತ್ತಾಯಿಸಿದ್ದಾರೆ. ಕೋಳಿ ಮಾಂಸ …

Read More »