Breaking News

ಧಾರವಾಡ

ಆರೇಕುರಹಟ್ಟಿ ಗ್ರಾಮದ ಕೆರೆ ವೀಕ್ಷಣೆ…

ನವಲಗುಂದ : ತಾಲೂಕಿನ ಆರೇಕುರಹಟ್ಟಿ ಗ್ರಾಮದಲ್ಲಿ ಕುಡಿಯಲು ಬಳಸುವ ಕೆರೆ ಅಸ್ವಚ್ಛತೆಯಿಂದ ಇದ್ದು, ಅದನ್ನು ಸ್ವಚ್ಛಗೊಳಿಸಿ ನೀರು ಸರಬರಾಜು ಮಾಡಿ ಅಂತಾ ಗ್ರಾಮಸ್ಥರು ಆಗ್ರಹಿಸಿದ್ದರು. ಈಗಾ ಸ್ವಚ್ಛತೆ ಕಾರ್ಯ ಬಿರುಸಿನಿಂದ ನಡೆದಿದ್ದು, ತಾಪಂ ಇಓ ಭಾಗ್ಯಶ್ರೀ ಜಹಾಗೀರದಾರ ಅವರು ಇಂದು ಗ್ರಾಮಕ್ಕೆ ಭೇಟಿ ನೀಡಿ ನಡೆಯುತ್ತಿರುವ ಸ್ವಚ್ಛತಾ ಕಾರ್ಯ ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾಮಸ್ಥರು ಅವರೊಂದಿಗೆ ಇದ್ದರು.

Read More »

ಪೋಲಿಸ್ ಇಲಾಖೆಯ ಅಗಷ್ಟ 24 ರಂದು ಜೆ ಎಸ್ ಎಸ್ ಕಾಲೇಜಿನಲ್ಲಿ ಪೋಲಿಸ್ ದಿನ ಆಚರಣೆ

ಧಾರವಾಡ ಇಂದು ಧಾರವಾಡ ಜೆ ಎಸ್ ಎಸ್ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು .ಹುಬ್ಬಳ್ಳಿ ಧಾರವಾಡ ಪೋಲಿಸ್ ಕಮಿಷನರ್ ರೇಣುಕಾ ಸುಕುಮಾರ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಿದರು.ಇನ್ನು‌ ಸಾಮಾಜಿಕ ಜಾಲತಾಣಗಳಲ್ಲಿ ಮೋಸ್ ಮಾಡುವವರ ವಿರುದ್ದ ಹೇಗೆ ನಾವು ಹುಷಾರ ನಿಂದ‌ ಇರಬೇಕು, ಮತ್ತು ಇಂದಿನ ಯುವಕರು ಅತಿ‌ ಹೆಚ್ಚಾಗಿ ಕಾನೂನಿನ ಬಗ್ಗೆ‌ ತಿಳಿದುಕ್ಕೊಳ್ಳಬೇಕು. ಪೋಲಿಸರ ಜೊತೆ ಸಹಬಾಗಿತ್ವದಿಂದ ವಿದ್ಯಾರ್ಥಿಗಳು ಇರಬೇಕು.. ಸಮಾಜಕ್ಕೆ‌ ನಮ್ಮ‌ ನಿಮ್ಮೆಲ್ಲ‌ ಕೊಡುಗೆ …

Read More »

ನಿವೃತ್ತಿ ಶಿಕ್ಷಕನಿಗೆ ಲಂಚದ ಬೇಡಿಕೆ : ಇಬ್ಬರು ಲೋಕಾ ಬಲೆಗೆ

ಧಾರವಾಡ ಶಿಕ್ಷಕನಿಗೆ , ನಿವೃತ್ತಿ ವೇತನ ಕೊಡುವದಕ್ಕೆ ಲಂಚದ ಬೇಡಿಕೆ ಇಟ್ಟ ಕಾಲೇಜು ಶಿಕ್ಷಣ ಇಲಾಖೆಯ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸುಬಾಸ ಜವರೆಡ್ಡಿ ಎಂಬ ನಿವೃತ್ತ ಶಿಕ್ಷಕ ನಿವೃತ್ತಿ ವೇತನ ಕೇಳಲು ಹೋದಾಗ ದುರ್ಗಾದಾಸ ಮಸೂತಿ ಮತ್ತು ನಾಗರಾಜ ಹೂಗಾರ ಎಂಬ ಅಧಿಕಾರಿಗಳು ಲಂಚ ಕೇಳಿದ್ದರು. ಇಂದು 15 ಸಾವಿರ ರೂಪಾಯಿ ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಇಬ್ಬರು ಲೋಕಾಯುಕ್ತರ ಕೈಗೆ ಸಿಕ್ಕು ಬಿದ್ದಿದ್ದಾರೆ.

Read More »

ಆಸ್ತಿ ವಿವಾದ ಸಂಬಂಧ ಗಲಾಟೆ ಗಾಳಿಯಲ್ಲಿ ಗುಂಡು….

ಧಾರವಾಡ: ಆಸ್ತಿ ವಿವಾದ ಸಂಬಂಧ ಎರಡು ಕಡೆಯವರ ನಡುವೆ ಗಲಾಟೆ ನಡೆದು, ಆತಂಕದಿಂದ ವ್ಯಕ್ತಿಯೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಇಲ್ಲಿನ ಅತ್ತಿಕೊಳ್ಳ ಬಡಾವಣೆಯಲ್ಲಿ ಬುಧವಾರ ನಡೆದಿದೆ. ಮುಂಬೈ ಮೂಲದ ಸುಶಾಂತ ಅಗರವಾಲ್‌ ಎಂಬಾತ ಗುಂಡು ಹಾರಿಸಿದ್ದು, ಮತ್ತೊಂದು ಕಡೆಯವರನ್ನು ಹೆದರಿಸಲು ಫೈರಿಂಗ್​ ಮಾಡಿರುವುದಾಗಿ ಪೊಲೀಸ್​ ವಿಚಾರಣೆಯಿಂದ ತಿಳಿದುಬಂದಿದೆ. ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ ಆರೋಪಿ ಸುಶಾಂತ ಮುಂಬೈನಲ್ಲಿದ್ದ ಎಂದು ತಿಳಿದುಬಂದಿದೆ. ನಿವೇಶನದ ಸಂಬಂಧ ಸುಶಾಂತ್​ ಹಾಗೂ ಪವನ …

Read More »

ಮಹಿಳಾ ಮಂಡಳಿಗಳ ಹಾಗೂ ಡಿಎಸ್ಎಸ್ ವತಿಯಿಂದ ಪೊಲೀಸ್ ಆಯುಕ್ತ ರಿಗೆ ಸನ್ಮಾನ…

ಧಾರವಾಡ: ಭೀಮಸೇನಾ ಮಹಿಳಾ ಘಟಕ ಹಾಗೂ ನವಶಕ್ತಿ ಮಹಿಳಾ ಮಂಡಳ ಈಶ್ವರ್ ನಗರ ಎಪಿಎಂಸಿ ಗಣೇಶ್ ಕಾಲೋನಿ ಹುಬ್ಬಳ್ಳಿ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ವತಿಯಿಂದ ನೂತನವಾಗಿ ಪೊಲೀಸ್ ಆಯುಕ್ತರಾಗಿ ಆಗಮಿಸಿದಂತ ಶ್ರೀಮತಿ ರೇಣುಕಾ ಸುಕುಮಾರ್ ಐಪಿಎಸ್ ಇವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು . ಈ ಸಂದರ್ಭದಲ್ಲಿ ಮುಖಂಡರುಗಳಾದ ಗಂಗಾ ಎಸ್ ಗಸ್ತಿ, ಗೀತಾ ಪಾಟೀಲ್, ಸುರೇಖಾ ಪೂಜಾರಿ, ಗೌರಮ್ಮ ಸತ್ಯಮ್ಮನವರ್, ಶಶಿಕಲಾ ಮುಗುದಯ್ಯನ ಮಠ …

Read More »

ಕಾರ್ಯನಿರತ ಪತ್ರಕರ್ತರ ಸಂಘದಿಂದ ವಾರ್ಷಿಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಇಂದು ಹುಬ್ಬಳ್ಳಿ ಆರ್‌ನ್ ಶಟ್ಟಿ ಕಲ್ಯಾಣ ಮಂಟಪದಲ್ಲಿ ನೆರೆವೇರಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಕೆ.ವಿ ಪ್ರಭಾಕರ, ಮುಖ್ಯಮಂತ್ರಿ ಮಾಧ್ಯಮ ಸಂಯೋಜಕರು, ಕ.ಕಾ.ನಿ.ಪ ಸಂಘದ ಅಧ್ಯಕ್ಷ ಶಿವಾನಂದ ತಗಡೂರ, ಕ.ಕಾ.ನಿ.ಪ ಸಂಘದ ಉಪಾಧ್ಯಕ್ಷ ಪುಂಡಲಿಕ ಬಾಳೋಜಿ, ಕ.ಕಾ.ನಿ.ಪ ಕಾರ್ಯಕಾರಿಣಿ ಸದಸ್ಯ ಗಣಪತಿ ಗಂಗೋಳಿ, ಧಾರವಾಡ ಜಿಲ್ಲಾ ಕಾರ್ಯ …

Read More »

ಅಭಿವೃದ್ಧಿಯ ಪಥದಂತ. ಸಾಗಲು ಎಮ್.ಎನ್ ಮೋರೆ ಬಣ ಬೆಂಬಲಿಸಿ

ಧಾರವಾಡ:– ಮರಾಠಾ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಮರಾಠಾ ವಿದ್ಯಾಪ್ರಸಾರಕ ಮಂಡಳ ಮಂಡಳದ ಚುನಾವಣೆಯಲ್ಲಿ ನನ್ನನ್ನು ಹಾಗೂ ಎಮ್.ಎನ್.ಮೋರೆ ತಂಡವನ್ನು ಬೆಂಬಲಿಸಿ ಅಮುಲ್ಯವಾದ ಮತವನ್ನು ಉದಯಿಸುತ್ತಿರುವ ಸೂರ್ಯನ ಗುರುತಿಗೆ ನೀಡಿ ಪ್ರಚಂಡ ಬಹುಮತದಿಂದ ಗೆಲ್ಲಸಿ, ಆಶೀರ್ವದಿಸಬೇಕೆಂದು ಮರಾಠಾ ಸಮಾಜದ ಮುಖಂಡರಾದ ಸುಭಾಸ ಶಿಂದೆ ಕೋರಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮರಾಠಾ ಸಮಾಜ ಬಾಂಧವರು ಅಭಿವೃದ್ಧಿಗೆ ಒತ್ತು ಕೊಟ್ಟು ನಮ್ಮನ್ನು ಜಯಶಾಲಗೊಳಿಸಿದ್ದೀರಿ, ಅದರಂತೆ ಮರಾಠಾ ಮಂಡಳದ ಅನೇಕ ಅಭಿವೃದ್ಧಿ ಹಗಲರುಳು ನಮ್ಮ ತಂಡದೊಂದಿಗೆ …

Read More »

ಎಮ್ಮಿಕೇರಿ ಸರ್ಕಾರಿ ಶಾಲೆಯ ಆವರಣದಲ್ಲಿ ಸ್ವಚ್ಛತಾ ಅಭಿಯಾನ ಮತ್ತು ವನಮಹೋತ್ಸವ ಆಚರಣೆ….

ಧಾರವಾಡದ ಎಮ್ಮಿಕೇರಿ ಸರ್ಕಾರಿ ಶಾಲೆಯ ಆವರಣದಲ್ಲಿ ಮಾಳಮಡ್ಡಿಯ ನಿವಾಸಿಗಳಿಂದ ಸ್ವಚ್ಛತಾ ಅಭಿಯಾನ ಮತ್ತು ವನಮಹೋತ್ಸ ಕಾರ್ಯಕ್ರಮ ಆಚರಿಸಲಾಯಿತು. ವಾರ್ಡ್ನನ ಕಾರ್ಪೊರೇಟರ್ ಶ್ರೀ ವಿಷ್ಣುತೀರ್ಥ ಕೊರ್ಲಹಳ್ಳಿ ಅವರ ನೇತ್ರತ್ವದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದ ಜೊತೆಗೆ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಾಗರಿಕರು ಹಾಗೂ ಪೌರ ಕಾರ್ಮಿಕರ ಜೊತೆಗೂಡಿ ಸ್ವಚ್ಚತಾ ಕಾರ್ಯ ಹಾಗೂ ಗಿಡ ನೆಡುವ ಕಾರ್ಯಕ್ರಮ ಜರಗಿತು. ಈ …

Read More »

ಗಾಂಜಾ ಮಾರಾಟಕ್ಕೆ ಯತ್ನ ಧಾರವಾಡ ಮೂವರ ಬಂಧನ

ಧಾರವಾಡ: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಧಾರವಾಡದ ತಡಸಿನಕೊಪ್ಪ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ದರ್ಶನ ದುಗ್ಗಾಣಿ, ಗುರುರಾಜ ಯರೇಸೀಮಿ ಹಾಗೂ ಮಂಜುನಾಥ ಮಾನೆ ಎಂಬುವವರೇ ಬಂಧಿತರು. ಬಂಧಿತರಿಂದ 510 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ತಡಸಿನಕೊಪ್ಪದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ವಿದ್ಯಾಗಿರಿ ಠಾಣೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಇಬ್ಬರು ಪರಾರಿಯಾಗಿದ್ದು, ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Read More »

ಧಾರವಾಡದ ಅಜ್ಜಿಗೆ ಆಸರೆದ ಜಯ ಕರ್ನಾಟಕ ಜನಪರ ವೇದಿಕೆಯಿಂದ

ಧಾರವಾಡದ ತಪೋವನ ಬೈಪಾಸ್ ರಸ್ತೆಯ ಪಕ್ಕದಲ್ಲಿ ಸುಮಾರು ತಿಂಗಳಗಳಿಂದ ಸುಮಾರು 65, ವಯಸ್ಸಿನ ಒಬ್ಬ ಅಜ್ಜಿಯು ಇವತ್ತು ನಾಳೆ ಬಿದ್ದು ಹೋಗುವಂತಹ ಗುಡಿಸಿಲಿನಲ್ಲಿ ಅನ್ನ ನೀರು ಇಲ್ಲದೆ ವಾಸಿಸುತ್ತಿದ್ದಳು, ಈ ವಿಷಯ ನಮ್ಮ ವೇದಿಕೆಗೆ ರಂದು ಗೊತ್ತಾಗಿ ಅಜ್ಜಿ ಹತ್ತಿರ ಹೋಗಿ ವಿಚಾರಣೆ ಮಾಡಿದಾಗ ಅವಳ‌‌ ಹೆಸರು ಶಿವಗಂಗವ್ವ ಮೆಣಸಿನಕಾಯಿ, ಇವಳಿಗೆ ನಾಲ್ಕು ಜನ ಅಣ್ಣ – ತಮ್ಮಂದಿರು ಇವರು ಧಾರವಾಡದ‌ ನೆಹರೂ ನಗರದ ನಿವಾಸಿಯಾಗಿದ್ದು, ಆದರೆ ಈ ಅಜ್ಜಿಯನ್ನು …

Read More »