Breaking News

ಧಾರವಾಡ

ವರುಣನ ಆರ್ಭಟಕ್ಕೆ ನೆಲಕ್ಕೆ ಉರುಳಿದ ಮರ

ಧಾರವಾಡ: ನಗರದ ಸೇರಿದ ಭಾರಿ ಮಳಿಗೆ ನಗರದ ಹೊರವಲಯದಲ್ಲಿರುವ ಕಮಲಾಪುರ ರಸ್ತೆ ಯಲ್ಲಿ ಪ್ರತ್ಯೇಕ ಮಠದ ಮುಂದೆ ಮರವೊಂದು ಬಿದ್ದಿದೆ. ಮರಬಿದ್ದ ಪರಿಣಾಮ ವಾಹನಗಳ ಜಖಂ ವಾಗಿವೆ ವಿದ್ಯುತ್ ತಂತಿಗಳು ಹರಿದು ಬಿದ್ದಿವೆ. ಇದೇ ರಸ್ತೆ ಮೇಲೆ ಹಾದು ಹೇಗುವ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Read More »

ಶ್ರೀ ಹನುಮ ಜಯಂತಿ ಸಂಭ್ರಮ: ನುಗ್ಗಿಕೇರಿ ಶ್ರೀ ಅಂಜನೇಯ‌ ದೇವಸ್ಥಾನಕ್ಕೆ ಹರಿದು ಭಕ್ತರ ದಂಡು

ಧಾರವಾಡ: ಶ್ರೀ ರಾಮನ ಭಂಟ ಎಂದೇ ಖ್ಯಾತಿ ಪಡೆದುಕೊಂಡು ಅಪಾರ ಭಕ್ತರನ್ನು ಹೊಂದಿರುವ ಶ್ರೀ ಹನುಮ ಜಯಂತಿಯನ್ನು ಪೇಡಾ ನಗರಿ ಧಾರವಾಡದಲ್ಲಿ ಹನುಮ‌ ಭಕ್ತರು ಶ್ರದ್ಧಾ ಭಕ್ತಿಯಿಂದ ಹನುಮ‌ ಜಯಂತಿಯನ್ನು ಆಚರಣೆ ಮಾಡಿದರು. ನಗರದಾದ್ಯಂತ ಹನುಮ ಜಯಂತಿ ಸಂಭ್ರಮ ಕಳೆಗಟ್ಟಿದ್ದು, ನಗ್ಗುಕೇರಿ ಶ್ರೀ ಅಂಜನೇಯ ದೇವಸ್ಥಾನಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ. ಬೀರು ಬೀಸಿಲಿನ ನಡುವೆಯು ಭಕ್ತರು ಕುಟುಂಬ ಸಮೇತವಾಗಿ ಶ್ರೀಅಂಜನೇಯ ದೇವರ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ನಗರದ ಹೊರವಲಯದ ಧಾರವಾಡ …

Read More »

ಸಂವಿಧಾನ ಶಿಲ್ಪಿಯ ಜಯಂತಿ ಆಚರಣೆ

ಧಾರವಾಡ: ವಿಶ್ವ ರತ್ನ , ಭಾರತರತ್ನ , ವಿಶ್ವಚೇತನ , ಭಾರತದ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರರ 131 ನೇಯ ಜಯಂತಿ ಅಂಗವಾಗಿ ಧಾರವಾಡದ ದಲಿತ ಹಿತ ಸಭಾ ವತಿಯಿಂದ ಲಕ್ಷಣ ಬೀಳಗಿ ಹಾಗೂ ಪದಾಧಿಕಾರಿಗಳು ಅಂಬೇಡ್ಕರರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು .

Read More »

ಧಾರವಾಡದಲ್ಲಿ ಮಹಾವೀರ ಜಯಂತಿ ಆಚರಣೆ

ಧಾರವಾಡ: ನಗರದ ಸಂಗಮ ಸರ್ಕಲ್ ಬಳಿ ನಡೆದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಲಾದ್ ಜೋಷಿ ಭಾಗಿಯಾಗಿ ಮಾತನಾಡಿದ ಅವರು ಮಹಾವೀರರ ಚಿಂತನೆಗಳನ್ನು ಭಾರತ ಅಳವಡಿಸಿಕೊಂಡಿರುವುದೇ ಇಂದು ಭಾರತದಲ್ಲಿ ಶಾಂತಿ ನೆಲೆಸಲು ಕಾರಣವಾಗಿದೆ ಇದನ್ನು ಜಗತ್ತು ಅರಿತುಕೊಂಡು ಸಾಗಿದರೆ ಜಗತ್ತಿನಲ್ಲಿ ಕೂಡ ಶಾಂತಿಯುತ ವಾತಾವರಣ ನಿರ್ಮಿಸಲು ಸಾಧ್ಯ ಎಂದರು ಕಾರ್ಯಕ್ರಮದಲ್ಲಿ ಜೈನ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು .

Read More »

ಏ.16 ರಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ

ಧಾರವಾಡ: ಏಪ್ರೀಲ್ ತಿಂಗಳ 3 ನೇ ಶನಿವಾರವಾದ 16 ರಂದು ಜಿಲ್ಲೆಯ ಏಳು ತಾಲೂಕುಗಳ ಆಯ್ದ ಗ್ರಾಮಗಳಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ತಹಸೀಲ್ದಾರರು ಗ್ರಾಮವಾಸ್ತವ್ಯ ಮಾಡಲಿದ್ದಾರೆ . ಕುಂದಗೋಳ ತಾಲೂಕಿನ ಬರದ್ವಾಡ , ಕಲಘಟಗಿ ತಾಲೂಕಿನ ಎಮ್ಮೆಟ್ಟಿ , ಧಾರವಾಡ ತಾಲೂಕಿನ ತಡಕೋಡ , ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಕಿರೇಸೂರ , ನವಲಗುಂದ ತಾಲೂಕಿನ ಗೊಬ್ಬರಗುಂಪಿ , ಅಣ್ಣಿಗೇರಿ ತಾಲೂಕಿನ ಕಿತ್ತೂರ ಹಾಗೂ ಅಳ್ಳಾವರ …

Read More »

ಏ.16 ರಂದು ಗ್ರಾಹಕರ ಸಂವಾದ ಸಭೆ

ಧಾರವಾಡ : ಗ್ರಾಮೀಣ ಉಪವಿಭಾಗದ ಶಾಖೆ -1,2 , ಹೆಬ್ಬಳ್ಳಿ , ಗರಗ ಮತ್ತು ಉಪ್ಪಿನಬೆಟಗೇರಿ , ಅಳ್ಳಾವರ , ಬೇಲೂರು ಶಾಖೆಗಳಲ್ಲಿ ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸಲು ಏ . 16 ಶನಿವಾರದಂದು ಧಾರವಾಡದ ಗ್ರಾಮೀಣ ಉಪವಿಭಾಗ ಕಚೇರಿಯಲ್ಲಿ ಗ್ರಾಹಕರ ಸಂವಾದ ಸಭೆ ಹಾಗೂ ಸುರಕ್ಷತಾ ದಿನವನ್ನು ಆಯೋಜಿಸಲಾಗಿದೆ . ಈ ಸಭೆಯ ಸದುಪಯೋಗ ಪಡೆದುಕೊಳ್ಳುವಂತೆ ಹೆಸ್ಕಾಂ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

Read More »
Featured Video Play Icon

ಅವನು ಬಡವ, ಲಾರಿ ಖರೀದಿಸಿ ಭೋಗ್ಯಕ್ಕೆ ಬಿಟ್ಟಿದ್ದ. ತೆಗೆದುಕೊಂಡವನು ಆಡಿದ್ದು ಕಳ್ಳತನದ ಆಟ… FIR ದಾಖಲಿಸಿ ಪರಿಹಾರದ ಭರವಸೆ ಕೊಟ್ಟ ಖಾಕಿ ಕೊನೆಗೆ ಮಾಡಿದ್ದೇನು..!?

ಧಾರವಾಡದ : ನೀವೆ ದೇವರು ಅಂತ ದೂರು ಕೊಟ್ಟರೆ ಪರಿಹಾರ ಕೊಡಿಸಬೇಕಾದ ಪೊಲೀಸರೇ ಸುಮ್ಮನಾಗಿದ್ದಾರೆ, ದುಡಿಯಲು ಲಾರಿ ತೆಗೆದುಕೊಂಡವನು ನಂಬಿಂದವರಿದಲೇ ಮೋಸಕ್ಕೊಳಗಾಗಿ ಪೊಲೀಸರ ಬಳಿಗೆ ಹೋದವನಿಗೆ ಸಿಕ್ಕಿದ್ದೇನು..!? ಹೌದು ದುಡಿಯೋಕೆ ಅಂತಾ ಗಾಡಿ ಖರೀದಿಸಿ ಅದನ್ನು ಬೇರೆಯವನ ಹತ್ತಿರ ದುಡಿಸೊಕೆ ಬಿಟ್ಟಿದ್ದ ಆದ್ರೆ ಆತ ಅದನ್ನು ಕೆಲದಿನಗಳ‌ ಕಾಲ ದುಡಿಸಿ ನಂತರ ಅದನ್ನು ಸ್ಕ್ರ್ಯಾಪ್ ಮಾಡಿ ಬಿಡಿ ಭಾಗಗಳನ್ನು ಮಾರಾಟ ಮಾಡಿ,ಗಾಡಿ ಕಳ್ಳತನವಾಗಿದೆ ಅಂತಾ ಸುಳ್ಳಿ ಹೇಳಿದ್ದಾನೆ. ನಂತರ ಈ‌ …

Read More »

ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಆಮ್ ಆದ್ಮಿ ಪಕ್ಷ ಪ್ರತಿಭಟನೆ

ಧಾರವಾಡ: ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ಇಳಿಸಿ,ಐಪಿಸಿ 306ಪ್ರಕಾರಸಂತೋಷ ಪಾಟೀಲ ಅವರ ಆತ್ಮಹತ್ಯೆಯ ಸಂಬಂಧದಲ್ಲಿಬಂಧಿಸುವಂತೆ ಆಗ್ರಹಿಸಿ ಆಮ್ ಆದ್ಮಿ ಪಕ್ಷದವರು ಇಂದು ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು. ಬೆಳಗಾವಿಯ ಬಿಜೆಪಿ ಕಾರ್ಯಕರ್ತರೂ ಹಾಗೂ ಗುತ್ತಿಗೆದಾರರಾಗಿದ್ದಸಂತೋಷ ಪಾಟೀಲ ಅವರು ತಮ್ಮ ಡೆತ್ ನೋಟ್ ದಲ್ಲಿ ಕಾಮಗಾರಿಗಾಗಿ ಶೇ. 40 ಕಮಿಷನ್ ಕೇಳಿ ಕಿರುಕುಳ ಕೊಟ್ಟಿದ್ದ ಕಾರಣ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆರೋಪಿಸಿ ತಮ್ಮ ಡೆತ್ ನೋಟ್ ನ್ನು ಮಾಧ್ಯಮದವರಿಗೆ …

Read More »

ಕಾನೂನು ವಿಶ್ವವಿದ್ಯಾಲಯದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಅರವಿಂದ್ ಬೆಲ್ಲದ್ ಚಾಲನೆ

ಹುಬ್ಬಳ್ಳಿ: ಅವಳಿ ನಗರದ ವಾರ್ಡ್ ಸಂಖ್ಯೆ 26 ರ ರಾಯಪುರದಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅರವಿಂದ್ ಬೆಲ್ಲದ್ ಚಾಲನೆ ನೀಡಿದರು . ಈ ಸಂದರ್ಭದಲ್ಲಿ , ಕೆ.ಸಿ.ಸಿ.ಬ್ಯಾಂಕ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಹೊರಕೇರಿ , ಪಾಲಿಕೆ ಸದಸ್ಯರಾದ ಶ್ರೀಮತಿ ನೀಲವ್ವ ಅರವಳದ , ಶ್ರೀಮತಿ ಸುನೀತಾ ಮಾಳವದಕರ್‌ , ಮುಖಂಡರಾದ ರಮೇಶ್ ನಂದ್ಯಾಳ , ಶ್ರೀಮತಿ ರೂಪಾ ಬೊಂಗಾಳೆ , ಬಸವರಾಜ್ ಅರವಳದ ಸೇರಿದಂತೆ …

Read More »

ನುಗ್ಗಿಕೇರಿಯಲ್ಲಿ ನಡೆದ ಅಹಿತಕರ ಘಟನೆ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು : ಕುಮಟಾಕರ್

ಧಾರವಾಡ: ಸುಮಾರು 15 ವರ್ಷಗಳಿಂದ ಧಾರವಾಡದ ನುಗ್ಗಿಕೆರಿ ಶ್ರೀ ಹನುಮಂತ ದೇವಸ್ಥಾನ ಸುತ್ತ ವ್ಯಾಪಾರ ಮಾಡುತ್ತಿದ್ದ ಮುಸ್ಲಿಂ ಅಂಗಡಿಗಳನ್ನು ಶ್ರೀ ರಾಮ ಸೇನೆ ಕಾರ್ಯಕರ್ತರು ದಬ್ಬಾಳಿಕೆ ಮಾಡಿ ಅಂಗಡಿಯಲ್ಲಿ ಇದ್ದ ಕಲ್ಲಂಗಡಿ ಹಣ್ಣುನ್ನು ನಡು ರಸ್ತೆಯಲ್ಲಿ ಒಡೆದು ಮುಸ್ಲಿಂ ಅಂಗಡಿ ವ್ಯಾಪಾರಸ್ಥರ ಮೇಲೆ ದೌರ್ಜನ್ಯವನ್ನು ಮಾಡಿರುವುದು ಖಂಡನೀಯವಾಗಿದೆ ಎಂದು ಕಾಂಗ್ರೆಸ್ ಮುಖಂಡರು ಅಶಾಕ್ ಕುಮಟಾಕರ್ ಹೇಳಿದರು . ಅಲ್ಲದೇ ಕೂಡಲೇ ಸರ್ಕಾರ ಹಾಗೂ ಜಿಲ್ಲಾ ಆಡಳಿತ ತಪ್ಪಿತಸ್ಥರ ಮೇಲೆ ಕಾನೂನು …

Read More »