Breaking News

ಹುಬ್ಬಳ್ಳಿ

ರಸ್ತೆ ಕಾಮಗಾರಿಗೆ ಮಾಜಿ ಸಿಎಂ ಚಾಲನೆ

ಹುಬ್ಬಳ್ಳಿ: ಮುಖ್ಯ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿ ಮತ್ತು ಯುಜಿಡಿ ಲೈನ್ ಕಾಮಗಾರಿಗೆ ಶಾಸಕ ಜಗದೀಶ್ ಶೆಟ್ಟರ್ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು . ಹುಬ್ಬಳ್ಳಿಯ ವಾರ್ಡ್ ನಂ .55 ರ ಆಸರೆ ಹೊಂಡದಲ್ಲಿ , ಸುಮಾರು 1 ಕೋಟಿ 86 ಲಕ್ಷ ರೂ . ವೆಚ್ಚದಲ್ಲಿ ಈ ಕಾಮಗಾರಿ ಗೆ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಪಾಂಡುರಂಗ ಪಾಟೀಲ್ , ಶತೊಟಪ್ಪ ನಿಡಗುಂದಿ , ಮಂಜುನಾಥ ದಲಭಂಜನ್ , …

Read More »

ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ: ಹಿಜಾಬ್ ಗೆ ಇಲ್ಲ ಪರೀಕ್ಷಾ ಕೇಂದ್ರದಲ್ಲಿ ಅವಕಾಶ

Read More »

ಇಂದಿನಿಂದ ಎಸ್ಸೆಸ್ಸೆಲ್ಸಿ ಏಕ್ಸಾಮ್ : ಪರೀಕ್ಷಾ ಕೇಂದ್ರದಲ್ಲಿ ಹಿಜಾಬ್ ಗೆ ನೋ ಎಂಟ್ರಿ

ಹುಬ್ಬಳ್ಳಿ : ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.ಜಿಲ್ಲೆಯಲ್ಲಿ 116 ಕೇಂದ್ರಗಳಲ್ಲಿ ಪರೀಕ್ಷೆ 29,599 ವಿದ್ಯಾರ್ಥಿ,‌ ವಿದ್ಯಾರ್ಥಿನಿಯರ ಪರೀಕ್ಷೆ ಬರೆಯಲು ನೋಂದಣಿ ಮಾಡಿದ್ದಾರೆ. ಹೀಗಾಗಿ ಪರೀಕ್ಷಾ ಕ್ಷೇತ್ರಗಳ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು,ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರವಾಗಿ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸಕಲ ಸಿದ್ಧತೆ ಮಾಡಿಕೊಂಡಿದೆ. ಪರೀಕ್ಷೆ ಬರೆಯುವ ಮಕ್ಕಳಿಗೆ ಏನೂ ಅಡಚಣೆ ಆಗದ ರೀತಿಯಲ್ಲಿ ನಿರ್ಭೀತಿಯಿಂದ ಪರೀಕ್ಷೆ ಬರೆಯುವ ವಾತಾವರಣ …

Read More »

SSLC ಪರೀಕ್ಷೆ : ಅವಳಿ ನಗರದಲ್ಲಿ ಸಕಲ ಸಿದ್ಧತೆ

ಹುಬ್ಬಳ್ಳಿ : ಇಂದನಿಂದ SSLC ಪರೀಕ್ಷೆ ಆರಂಭವಾಗಿ ಎಪ್ರಿಲ್ 11ರವರೆಗೆ ಪರೀಕ್ಷೆ  ನಡೆಯಲಿವೆ.  ಇಂದು ‘ಕನ್ನಡ’ ವಿಷಯ ಪರೀಕ್ಷೆ ಬರೆಯಲಿರೊ ವಿದ್ಯಾರ್ಥಿಗಳುಕೋವಿಡ್ ನಿಯಮಾವಳಿ ಕಟ್ಟುನಿಟ್ಟಿನ ಪಾಲನೆ ಮಾಡುವಂತೆ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಜಿಲ್ಲೆಯಲ್ಲಿ 116 ಕೇಂದ್ರಗಳಲ್ಲಿ ಪರೀಕ್ಷೆ 29,599 ವಿದ್ಯಾರ್ಥಿ,‌ ವಿದ್ಯಾರ್ಥಿನಿಯರ ನೋಂದಣಿ ಮಾಡಲಾಗಿದೆ. ಬರೆಯುವ ವಾತಾವರಣ ರೂಪಿಸುವಲ್ಲಿ ಹಲವು ಕ್ರಮಗಳನ್ನ ಕೈಗೊಂಡ ಶಿಕ್ಷಣ ಇಲಾಖೆ ಅಧಿಕಾರಿಗಳುಪರೀಕ್ಷಾ ಕೇಂದ್ರದ ಸುತ್ತ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿ  ಹೊರಡಿಸಲಾಗಿದೆ. …

Read More »

ಉತ್ತರ ಕರ್ನಾಟಕಕ್ಕೆ ಹೆಚ್ವಿನ ಆದ್ಯತೆ ನೀಡಲಾಗುತ್ತದೆ; ಸಿಎಂ ಬೊಮ್ಮಾಯಿ

ಹುಬ್ಬಳ್ಳಿ : ನಾಳೆಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಹಿನ್ನೆಲೆಯಲ್ಲಿ, ರಾಜ್ಯಾದ್ಯಂತ ಪರೀಕ್ಷೆಗೆ ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಪರೀಕ್ಷೆ ಬರೆಯಿರಿ. ವಿದ್ಯಾರ್ಥಿಗಳು ಮುಂದಿನ ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು. ಮಾತನಾಡಿದ ಅವರು, ಹಿಜಾಬ್ ವಿಚಾರ ಕೋರ್ಟ್ ನಲ್ಲಿ ತೀರ್ಪು ಬಂದಿದೆ. ತೀರ್ಪು ಬಂದ ನಂತರ ವಿವಾದಾತ್ಮಕ ಹೇಳಿಕೆ ನೀಡುವ ಅವಶ್ಯಕತೆ ಇಲ್ಲ. 30 ರಂದು ಬಜೆಟ್ …

Read More »

ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

ಹುಬ್ಬಳ್ಳಿ :ಸುಸಜ್ಜಿತ ರಸ್ತೆ, ಕುಡಿಯುವ ನೀರು ಹಾಗೂ ಮೂಲಭೂತ ಸೌಕರ್ಯಗಳನ್ನು ಪೂರೈಸಲು ಸಮಾಜ ಕಲ್ಯಾಣ ನಿರ್ಮಾಣ ಅಡಿಯಲ್ಲಿ ರಸ್ತೆ ನಿರ್ಮಾಣವನ್ನು ಮಾಡಲಾಗುತ್ತಿದ್ದು, ಗ್ರಾಮಸ್ಥರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕಿ ಕುಸುಮಾವತಿ ಸಿ ಶಿವಳ್ಳಿ ಹೇಳಿದರು. ಹುಬ್ಬಳ್ಳಿ ತಾಲೂಕಿನ ಪಾಳೇ ಗ್ರಾಮದಲ್ಲಿ ಎಸ್.ಸಿ.ಪಿ.ಟಿ.ಎಸ್. ಯೋಜನೆಯ ಅಡಿಯಲ್ಲಿ 30 ಲಕ್ಷ ರೂ.ಗಳ ಮೊತ್ತದ ರಸ್ತೆ ನಿರ್ಮಾಣದ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಈಗಾಗಲೇ ತಮ್ಮ ಗ್ರಾಮದಲ್ಲಿ ಹಲವಾರು …

Read More »

ಜೀವನದಲ್ಲಿ ಕೊಟ್ಟು ಬದುಕುವುದನ್ನು ಕಲಿಯಬೇಕು : ಕೃತಾತ್ಮಾನಂದಜಿ

ಹುಬ್ಬಳ್ಳಿ: ಜೀವನದಲ್ಲಿ ಕೊಟ್ಟು ಬದುಕುವುದನ್ನು ಕಲಿಯಬೇಕು, ಅದರಲ್ಲಿ ಸಿಗುವ ಸುಖವೇ ಬೇರೆ ಎಂದು ಚಿನ್ಮಯ ಮಿಷನ್ ಸ್ವಾಮೀಜಿ ಕೃತಾತ್ಮಾನಂದಜಿ ಹೇಳಿದರು. ಇಲ್ಲಿನ ಜೆ.ಸಿ.ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಎಲಿಜಿಬತ್ ಶ್ರೀನಿವಾಸ ಪ್ಯಾಟ್ಟೋನ ನಾಯ್ಡು ಚಾರಿಟೇಬಲ್ ಟ್ರಸ್ಟ್ ಲೋಕಾರ್ಪಣೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಣೆಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು, ಅದರಿಂದ ಬಂದ ಲಾಭದಲ್ಲಿ ಎಲ್ಲರೂ ಹಂಚಿ ತಿನ್ನಬೇಕು. ಅಂತಹ ಕಾರ್ಯಕ್ಕೆ ನಾಯ್ಡು ಟ್ರಸ್ಟ್ …

Read More »

ಕ್ರಿಕೆಟ ದಿಗ್ಗಜ ಹುಬ್ಬಳ್ಳಿಗೆ ಆಗಮನ

ಹುಬ್ಬಳ್ಳಿ : 1983 ರ ಕ್ರಿಕೆಟ್ ವಿಶ್ವಕಪ್ ವಿಜೇತ ಭಾರತ ತಂಡದ ಕ್ಯಾಪ್ಟನ್‌ ಕಪಿಲ್ ದೇವ್ ನಿನ್ನೆ ಛೋಟಾ ಮುಂಬೈ ಹುಬ್ಬಳ್ಳಿಗೆ ಆಗಮಿಸಿದ್ದರು.ಇನ್ನೂ ಕ್ರಿಕೆಟ್ ದಿಗ್ಗಜನನ್ನು ಕಂಡ ಕ್ರಿಕೆಟ್ ಪ್ರೇಮಿಗಳು ಅವರ ಜೊತೆ ಫೋಟೋ , ಸೆಲ್ಸಿ ತೆಗೆದುಕೊಳ್ಳಲು ಮುಗಿಬಿದ್ದರು. ನಗರದ ಟೈಕಾನ್ ಸಮಾವೇಶದಲ್ಲಿ ‘ ಇವನಿಂಗ್ ವಿತ್ ಲೆಜೆಂಡ್ ‘ ಕಾರ್ಯಕ್ರಮದಲ್ಲಿ ಭಾಗಿಯಾದ ಕಪೀಲ್ ದೇವಗೆ ಕ್ರಿಕೆಟ್ ಪ್ರೇಮಿಗಳು ಅವರನ್ನು ಸುತ್ತುವರೆದು ಕೆಲವರು ಫೋಟೋ ತೆಗೆಸಿಕೊಂಡರೆ,ಇನ್ನೂ ಕೆಲವರು ಆಟೋಗ್ರಾಫ್ …

Read More »

ಸಿದ್ದಪ್ಪಜ್ಜನ ದೇವಸ್ಥಾನಕ್ಕೆ ಮಾಜಿ ಸಿಎಂ ಭೇಟಿ

ಹುಬ್ಬಳ್ಳಿ : ಯುಗಾದಿ ಹಬ್ಬದ ಹಿನ್ನಲೆಯಲ್ಲಿ ನಗರದ ಉಣಕಲ್ ನ ಸಿದ್ದಪ್ಪಜ್ಜನ ಯುಗಾದಿ ಮಹೋತ್ಸವ ಮತ್ತು ರಥೋತ್ಸವದಲ್ಲಿ ಭಾಗಿಯಾಗಿ ಸಿದ್ದಪ್ಪಜ್ಜನ ದೇವಾಸ್ಥಾನಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭೇಟಿ ನೀಡಿ ಆರ್ಶಿವಾದ ಪಡೆದರು . ಈ ಸಂದರ್ಭದಲ್ಲಿ ರಾಜಣ್ಣ ಕೊರವಿ , ಮಲ್ಲಿಕಾರ್ಜುನ ಸಾವಕಾರ , ಶಂಕರಗೌಡ ಕಾಮಧೇನು ಹಾಗೂ ಉಣಕಲ್ ನ ಸಕಲ ಸದ್ಭಕ್ತರು ಗುರುಹಿರಿಯರು ಇದ್ದರು .

Read More »

ಎಫ್.ಎಂ.ಜಿ.ಸಿ. ಕ್ಲಸ್ಟರ್ ಸ್ಥಾಪನೆ ವಿಶೇಷ ಪ್ರೋತ್ಸಾಹ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ : ಸ್ಟಾರ್ಟ್‌ಅಪ್ ಉದ್ದಿಮೆಗಳ ಸ್ಥಾಪನೆಯಲ್ಲಿ ರಾಜ್ಯ ಮಂಚೂಣಿಯಲ್ಲಿದೆ . ಕೈಗಾರಿಕೆ ಹಾಗೂ ಉದ್ದಿಮೆ ಸ್ಥಾಪನೆ ಮಾಡಲು ಹೆಚ್ಚಿನ ಸವಲತ್ತು ಹಾಗೂ ಸಹಾಯಧನವನ್ನು ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ನೀಡಲಾಗಿದೆ . ಮಹಿಳಾ ಉದ್ದಿಮೆದಾರರಿಗೆ ಆರ್ಥಿಕ ಸಹಾಯವನ್ನು ಘೋಷಿಸಲಾಗಿದೆ . ನಗರದಲ್ಲಿ ಎಫ್.ಎಂ.ಜಿ.ಸಿ. ಕ್ಲಸ್ಟರ್ ಸ್ಥಾಪನೆಗೆ ವಿಶೇಷ ಪ್ರೋತ್ಸಾಹ ನೀಡಿದ್ದು , ಒಂದು ಲಕ್ಷ ಉದ್ಯೋಗ ಅವಕಾಶಗಳು ಸೃಷ್ಠಿಯಾಗಲಿವೆ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು . ಆನ್ ಇವನಿಂಗ್ …

Read More »