Breaking News

ಹುಬ್ಬಳ್ಳಿ

ಸರ್ ಸಿದ್ದಪ್ಪ ಕಂಬಳಿ ಅವರ ಮನೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಭೇಟಿ

ಹುಬ್ಬಳ್ಳಿ: ಹುಬ್ಬಳ್ಳಿಯ ಅಳಗುಂಡಿ ಓಣಿಯಲ್ಲಿರುವ ಸರ್ ಸಿದ್ದಪ್ಪ ಕಂಬಳಿ ಅವರ ಮನೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿ ಅವರ ಮನೆಯಲ್ಲಿ ನಿರ್ಮಾಣ ಮಾಡಿದ ಮ್ಯೂಸಿಯಂ ವೀಕ್ಷಣೆ ಮಾಡಿದರು. ಮನೆಯ ಮೂರನೇ ಮಹಡಿಯಲ್ಲಿ ಚಿಕ್ಕದಾಗಿದ್ದರೂ ಕೂಡಾ ಚೊಕ್ಕದಾಗಿರುವ ಈ ಮ್ಯೂಸಿಯಂನಲ್ಲಿ ಸರ್ ಸಿದ್ದಪ್ಪ ಕಂಬಳಿ ಅವರು ಬಳಸುತ್ತಿದ್ದ ಸಾಮಗ್ರಿಗಳನ್ನು ಸಚಿವರು ವೀಕ್ಷಣೆ ಮಾಡಿದರು. ಮುಖ್ಯವಾಗಿ ಸ‌ರ್ ಸಿದ್ದಪ್ಪ ಕಂಬಳಿ ಅವರ ತದ್ರೂಪದಂತಿರುವ ಮೇಣದ ಪ್ರತಿಮೆಯ ಬಗ್ಗೆ ಅವರ ಕುಟುಂಬಸ್ಥರಿಂದ …

Read More »

ಮುನಿರತ್ನ ವಿಚಾರ: ಉಪ್ಪು ತಿಂದವರು ನೀರು ಕುಡಿಯಲೇಬೇಕು: ಜೋಶಿ

ಹುಬ್ಬಳ್ಳಿ: ಮುನಿರತ್ನ ವಿಚಾರದಲ್ಲಿ ನಾನು ಮಾತಾಡಿದಾಗ ಅನೇಕ ಬೆಳವಣಿಗೆ ಆಗಿವೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಅವರ ಮೇಲೆ ಗಂಭೀರ ಆರೋಪ ಇವೆ. ತನಿಖೆ ಆಗಲೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಆರ್ ಅಶೋಕ್ ಶೋಭಾ ಕರಂದ್ಲಾಜೆ ಮೇಲೆ ದ್ವೇಷ ಮಾಡ್ತೀದಿರಿ. ನಿಮ್ಮ ಶಾಸಕರ ಮೇಲೆ ಕೇಸ್ ಹಾಕಿದ್ರು ಅರೆಸ್ಟ್ ಮಾಡಿಲ್ಲ. ಮುನಿರತ್ನ ಮೇಲೆ ರೇಪ್ ಇತ್ಯಾದಿ ಆರೋಪ ಇದೆ. ತನಿಖೆ ಮಾಡಲಿ …

Read More »

ರೌಡಿ ಶೀಟರ್‌ಗಳಿಗೆ ಜೈಲಿನಲ್ಲಿಯೂ ಬಿಸಿ ಮುಟ್ಟಿಸಿದ ಕಮಿಷನರ್‌ ಎನ್ ಶಶಿಕುಮಾ‌ರ್

ಹುಬ್ಬಳ್ಳಿ: ವಿವಿಧ ಅಕ್ರಮಗಳಲ್ಲಿ ಭಾಗಿಯಾಗಿದ್ದ ನಟೋರಿಯಸ್‌ಗಳನ್ನು ಕಮಿಷನರ್‌ ಎನ್ ಶಶಿಕುಮಾ‌ರ್ ಗುಂಡೇಟು ಕೊಟ್ಟು ಜೈಲಿಗೆ ಅಟ್ಟಿದ್ದು , ಇದೀಗ ರೌಡಿ ಶೀಟರ್‌ಗಳಿಗೆ ಜೈಲಿನಲ್ಲಿಯೂ ಕೂಡಾ ಬಿಸಿ ಮುಟ್ಟಿಸುವ ಕಾರ್ಯವನ್ನು ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಅವಳಿ ನಗರದಲ್ಲಿ ಹದಿಗೆಟ್ಟಿದ್ದ ಕಾನೂನು ಸುವ್ಯವಸ್ಥೆಯನ್ನು ತರುವ ನಿಟ್ಟಿನಲ್ಲಿ ಕಮಿಷನ‌ರ್ ಎನ್ ಶಶಿಕುಮಾ‌ರ್ ಮಾರ್ಗದರ್ಶನದಲ್ಲಿ ಕಮಿಷನರೇಟ್’ನ ಪೊಲೀಸರು ಹಗಲು ರಾತ್ರಿ ಎನ್ನದೇ 2 ತಿಂಗಳ ಕಾಲ ಕಾರ್ಯಾಚರಣೆ ನಡೆಸಿ ಸುಮಾರು 300ಕ್ಕೂ ಹೆಚ್ಚು ಆರೋಪಿಗಳನ್ನು …

Read More »

ಬುದ್ದಿವಾದ ಹೇಳಿದಕ್ಕೆ ಸರ್ಕಾರಿ ಅಧಿಕಾರಿಯ ಮೇಲೆಯೇ ಹಲ್ಲೆ

ಹುಬ್ಬಳ್ಳಿ : ಮದ್ಯಪಾನ ಮಾಡದಂತೆ ಬುದ್ದಿವಾದ ಹೇಳಿದಕ್ಕೆ ಸರ್ಕಾರಿ ಅಧಿಕಾರಿಯ ಮೇಲೆಯೇ ಹಲ್ಲೆ ನಡೆಸಿದ ಘಟನೆ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಅದರಗುಂಚಿ ಗ್ರಾಮದ ಗ್ರಾಮ ಆಡಳಿತ ಅಧಿಕಾರಿಯ ಮೇಲೆಯೇ ಹಲ್ಲೆ ಮಾಡಲಾಗಿದ್ದು, ಇವರು ಎಂದಿನಂತೆ ತಮ್ಮ ಚಾವಡಿಯಲ್ಲಿ ಭೂ ದಾಖಲೆಗಳಿಗೆ ಆಧಾರ ಕಾರ್ಡ್ ಸೀಡಿಂಗ್ ಕಾರ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಚಾವಡಿ ಮುಂಭಾಗದಲ್ಲಿಯೇ ಇಬ್ಬರು ಯುವಕರು ಮದ್ಯಪಾನ ಮಾಡುತ್ತಿದ್ದರು. ಹೀಗಾಗಿ ಗ್ರಾಮ ಆಡಳಿತ …

Read More »

ಶ್ರೀರಾಮ ಸೇನೆಗೆ ತಿರುಗೇಟು ನೀಡಿದ ಅಬ್ಬಯ್ಯ

ಹುಬ್ಬಳ್ಳಿ: ಮಂಟೂರ ರಸ್ತೆಯಲ್ಲಿ ನಿರ್ಮಿಸಲಾಗುತ್ತಿರುವ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸಂಬಂಧಿಸಿದಂತೆ, ಶ್ರೀರಾಮ ಸೇನೆಯ ಮಾತು ಕೇಳುವ ಅವಶ್ಯಕತೆಯಿಲ್ಲ. ಅಲ್ಲಿನ ಜನರ ಅಭಿಪ್ರಾಯ ಆಧರಿಸಿ ಮುಂದುವರೆಯಲಾಗುವುದು ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಶ್ರೀರಾಮ ಸೇನೆಗೆ ತಿರುಗೇಟು ನೀಡಿದರು. ನಗರದಲ್ಲಿ ಮಾತನಾಡಿದ ಅವರು,ಜನರು ಬೇಡ ಅಂದ್ರೆ ಬೇರೆ ಕಡೆಗೆ ಸ್ಥಳಾಂತರ ಮಾಡುತ್ತೇವೆ. ಅಲ್ಲಿಯೇ ಇರಲಿ ಎಂದರೆ ಅಲ್ಲಿಯೇ ಮುಂದುವರೆಸುತ್ತೇವೆ ಇನ್ನು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್ ಅವರನ್ನು ಕ್ಷಮೆ ಕೇಳುವ ಪ್ರಶ್ನೆಯೇ …

Read More »

ಬಿಜೆಪಿಯವರಿಗೆ ಯಾವುದೇ ಅಭಿವೃದ್ಧಿ ಕೆಲಸ ಬೇಡವಾಗಿದೆ :ಶಾಸಕ ಪ್ರಸಾದ್ ಅಬ್ಬಯ್ಯಾ

ಹುಬ್ಬಳ್ಳಿ: ಬಿಜೆಪಿಯವರಿಗೆ ಕೇವಲ ಶಾಂತಿ ಕದಡುವುದು ಬೇಕಾಗಿದೆ.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚನ್ನಾಗಿದೆ ಎಂದು ಶಾಸಕ ಪ್ರಸಾದ್ ಅಬ್ಬಯ್ಯಾ ಆಕ್ರೋಶ ವ್ಯಕ್ತಪಡಿಸಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆ. ಯಾವುದೇ ರೀತಿಯ ಕಾನೂನು ಸುವ್ಯವಸ್ಥೆ ಧಕ್ಕೆ ಬಂದಿಲ್ಲ. ಬಿಜೆಪಿಯವರಿಗೆ ಯಾವುದೇ ಅಭಿವೃದ್ಧಿ ಕೆಲಸ ಬೇಡವಾಗಿದೆ. ಯಾವುದೇ ಶಾಂತಿ ಸುವ್ಯವಸ್ಥೆ ಬೇಡವಾಗಿದೆ. ಅವರು ಸಣ್ಣ ಪುಟ್ಟ ಗಲಭೆಯನ್ನ ದೊಡ್ಡದಾಗಿ ಮಾಡುತ್ತಿದ್ದಾರೆ ಎಂದು ಅಬ್ಬಯ್ಯ ಆಕ್ರೋಶ ವ್ಯಕ್ತಪಡಿಸಿದರು.

Read More »

ಹುಬ್ಬಳ್ಳಿಯಲ್ಲಿ ಕಾಣಿಸಿಕೊಂಡ ನಾಗರಹಾವು ರಕ್ಷಣೆ

ಹುಬ್ಬಳ್ಳಿ: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ನಾಗರಹಾವೊಂದನ್ನು ರಕ್ಷಣೆ ಮಾಡಿ ಕಾಡಿಗೆ ಬಿಡುವಲ್ಲಿ ಉರಗ ರಕ್ಷಕ ಸ್ನೇಕ್ ನಾಗರಾಜ ಯಶಸ್ವಿಯಾಗಿದ್ದಾರೆ. ಅಮರಗೋಳ ಎಪಿಎಂಸಿ ಗೌಸ್ ಕಟ್ಟಿಮನಿ ಎಂಬುವರ ಅಂಗಡಿಯಲ್ಲಿ ಬಂದಂತಹ ನಾಗರ ಹಾವು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಯಿತು. ಜನರು ಓಡಾಡುವ ಸ್ಥಳದಲ್ಲಿಯೇ ಕಾಣಿಸಿಕೊಂಡ ಹಾವಿನಿಂದ ಜನರು ಆತಂಕಗೊಂಡಿದ್ದರು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಉರಗ ರಕ್ಷಕ ಜನರ ಆತಂಕ ದೂರ ಮಾಡಿದ್ದಾರೆ.

Read More »

ಇಂದಿರಾ ಕ್ಯಾಂಟೀನ್ ಹಾಗೂ ಇನ್ನಿತರ ಕಾಮಗಾರಿಗಳನ್ನು ತಕ್ಷಣ ಸ್ಥಗಿತಗೊಳಿಸುವಂತೆ ಮನವಿ ಸಲ್ಲಿಕೆ

ಹುಬ್ಬಳ್ಳಿ: ನಗರದ ಮಂಟೂರು ರಸ್ತೆಯಲ್ಲಿನ ಸತ್ಯಹರಿಶ್ಚಂದ್ರ ಸ್ಮಶಾನ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್ ಹಾಗೂ ಇನ್ನಿತರ ಕಾಮಗಾರಿಗಳನ್ನು ತಕ್ಷಣ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಸತ್ಯ ಹರಿಶ್ಚಂದ್ರ ರುದ್ರಭೂಮಿ ಅಭಿವೃದ್ಧಿ ಹಾಗೂ ರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಸಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ನಗರದ ಮಂಟೂರ ರಸ್ತೆಯಲ್ಲಿನ ಸ್ಮಶಾನ ಭೂಮಿಯಲ್ಲಿ ಕಳೆದ ನೂರಾರು ವರ್ಷಗಳಿಂದ 30ಕ್ಕೂ ಹೆಚ್ಚು ಬಡಾವಣೆಗಳ ಜನರು ಮೃತರ ಅಂತ್ಯಸಂಸ್ಕಾರ ನೆರವೇರಿಸುತ್ತಾರೆ ಎಂದರು. ಇತರರು ಗ್ರಾಮಸ್ಥರು ಭಾಗಿಯಾಗಿದ್ದರು.

Read More »

ನೀರು ಪೂರೈಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ: ಪ್ರವೀಣಕುಮಾರ ಶೆಟ್ಟಿ

ನವಲಗುಂದ: ರಾಜ್ಯದ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣಕುಮಾರ ಶೆಟ್ಟಿ ಆರೋಪಿಸಿದ್ದಾರೆ. ಕಪ್ಪತಗುಡ್ಡ ರಕ್ಷಣೆ ಹಾಗೂ ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆಗೆ ನರಗುಂದಕ್ಕೆ ಹೋಗುವ ವೇಳೆ ಪಟ್ಟಣದ ರೈತ ಭವನದಲ್ಲಿ ಹುತಾತ್ಮ ಬಸಪ್ಪ ಲಕ್ಕುಂಡಿ ಅವರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ಕುಡಿಯುವ ನೀರಿನ ಯೋಜನೆಗೆ ಸಾವಿರಾರು ಕೋಟಿ ರೂ ಮೀಸಲಿಟ್ಟಿದ್ದೇವೆ …

Read More »

ಸಂಗೊಳ್ಳಿ ರಾಯಣ್ಣನ ಮೂರ್ತಿ ವಿರೂಪ : ತಹಶೀಲ್ದಾ‌ರ್ ಕಚೇರಿ ಎದುರಿಗೆ ಪ್ರತಿಭಟನೆ

ಹುಬ್ಬಳ್ಳಿ: ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ, ಸ್ವಾತಂತ್ರ್ಯ ಹೋರಾಟಗಾರ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಹಾಗೂ ರೈತ ಹುತಾತ್ಮ ಬಸಪ್ಪ ಲಕ್ಕುಂಡಿ ಅವರ ಮೂರ್ತಿ ವಿರೂಪಗೊಳಿಸಿದ್ದನ್ನು ಖಂಡಿಸಿ, ಜಯ ಕರ್ನಾಟಕ ಸಂಘಟನೆ ವತಿಯಿಂದ ಹುಬ್ಬಳ್ಳಿಯ ತಹಶೀಲ್ದಾ‌ರ್ ಕಚೇರಿ ಎದುರಿಗೆ ಪ್ರತಿಭಟನೆ ಮಾಡಿದರು. ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ರೈತ ಹುತಾತ್ಮ ಬಸಪ್ಪ ಲಕ್ಕುಂಡಿ ಅವರ ಮೂರ್ತಿ ವಿರೂಪಗೊಳಿಸಿದ ವ್ಯಕ್ತಿಗೆ ಉಗ್ರವಾದ ಶಿಕ್ಷೆಯಾಗಬೇಂದು ಜಯ ಕರ್ನಾಟಕ ಸದಸ್ಯರು ಆಕ್ರೋಶ …

Read More »