Breaking News

ಹುಬ್ಬಳ್ಳಿ

ಪ್ರಮೋದ್‌ ಮುತಾಲಿಕ್‌ಗೆ ಬೆಂಕಿ ಹಚ್ಚೇದನ್ನ ಬಿಟ್ಟರೆ ಏನೂ ಗೊತ್ತಿಲ್ಲ: ಪ್ರಸಾದ ಅಬ್ಬಯ್ಯ

ಹುಬ್ಬಳ್ಳಿ: ಪ್ರಮೋದ್‌ ಮುತಾಲಿಕ್‌ಗೆ ಬೆಂಕಿ ಹಚ್ಚೇದನ್ನ ಬಿಟ್ಟರೆ ಏನೂ ಗೊತ್ತಿಲ್ಲ. ಅವನ ತಾಕತ್ತು ನಾನು ನೋಡಿದ್ದೇನೆ. ಅವನು ಹೇಳಿದ್ದಕ್ಕೆ ನಾನು ಉತ್ತರ ಕೊಡಬೇಕಿಲ್ಲ. ನನ್ನನ್ನು ಜನರು ಆರಿಸಿ ತಂದಿದ್ದಾರೆ ಅವನಲ್ಲ ಎಂದು ಶಾಸಕ ಪ್ರಸಾದ ಅಬ್ಬಯ್ಯ ಅವರು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ಗೆ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಮಂಟೂರ ರೋಡ್‌ನ ರುಧ್ರಭೂಮಿಯಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಿರುವ ವಿಚಾರವಾಗಿ ಮಾತನಾಡಿದ್ದ ಪ್ರಮೋದ್‌ ಮುತಾಲಿಕ್, ಪ್ರಸಾದ್ ಅಬ್ಬಯ್ಯ ಅವರಿಗೆ …

Read More »

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈಲ್ವೆ ರಾಜ್ಯ ಸಚಿವ ಸೋಮಣ್ಣಗೆ ಮನವಿ

ಹುಬ್ಬಳ್ಳಿ : ಹುಬ್ಬಳ್ಳಿ-ಅಂಕೋಲಾ ನೂತನ ರೈಲು ಮಾರ್ಗ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ನೇತೃತ್ವದ ನಿಯೋಗ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಬೆಳಗಾವಿಯಲ್ಲಿ ಮನವಿ ಸಲ್ಲಿಸಿತು. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ 2000ನೇ ಇಸ್ವಿಯಲ್ಲಿ ಹುಬ್ಬಳ್ಳಿ-ಅಂಕೋಕಾ ರೈಲು ಮಾರ್ಗ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿತ್ತು. ಹುಬ್ಬಳ್ಳಿಯಿಂದ 47 ಕಿಮೀವರೆಗೆ ಭೂಮಿ ವಶಪಡಿಸಿಕೊಂಡು, …

Read More »

ಕುಮಾರಸ್ವಾಮಿಯವರು ಬೇಕಾದಾಗ ಒಂದೊಂದು ಕಥೆ ಹೇಳ್ತಾರೆ : ಶಾಸಕ ಪ್ರಸಾದ ಅಬ್ಬಯ್ಯ

ಹುಬ್ಬಳ್ಳಿ: ಕುಮಾರಸ್ವಾಮಿಯವರು ಬೇಕಾದಾಗ ಒಂದೊಂದು ಕಥೆ ಹೇಳ್ತಾರೆ. ಕಾಂಗ್ರೆಸ್ ಪಕ್ಷ ಯಾವತ್ತಿಗೂ ಪ್ರಜಾಪ್ರಭುತ್ವ, ಸಂವಿಧಾನ ಉಳಿಸುವ ಕಾರ್ಯವನ್ನು ಮಾಡುತ್ತಿದ್ದರೆ ಅದು ಕೇವಲ ಕಾಂಗ್ರೆಸ್ ಪಕ್ಷ ಮಾತ್ರ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು. ಬಿಜೆಪಿ ಪಕ್ಷ ಬಂದಿದ್ದೇ ಸಂವಿಧಾನವನ್ನು ಬದಲಿ ಮಾಡಲಿಕ್ಕೆ. ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ಬೆಳವಣಿಗೆಗಳನ್ನು ದಿನ ಬೆಳಗಾದ್ರೆ ನಾವು ನೋಡ್ತೀವಿ. ಸಂವಿಧಾನವನ್ನು ಅಸ್ಥಿರ ಗೊಳಿಸುವ ಕಾರ್ಯವನ್ನು ಮಾಡೋದಿದ್ರೆ ಅದು ಕೇವಲ ಬಿಜೆಪಿ ಸರ್ಕಾರ ನಿರ್ಮಾಣ ಮಾಡ್ತಿದೆ. ಕಾಂಗ್ರೆಸ್ …

Read More »

ಮೀಸಲಾತಿ ವಿಚಾರವಾಗಿ ಬೆಳಗಾವಿಯಲ್ಲಿ ಬೃಹತ್ ಸಭೆ ಮಾಡಳಿದ್ದೇವೆ : ಬಸವಜಯ ಮೃತ್ಯುಂಜಯ

ಹುಬ್ಬಳ್ಳಿ : ಮೀಸಲಾತಿ ವಿಚಾರವಾಗಿ ಬೆಳಗಾವಿಯಲ್ಲಿ ಬೃಹತ್ ಸಭೆ ಮಾಡಳಿದ್ದೇವೆ .2ಎ ಮೀಸಲಾತಿ ಚಳುವಳಿ ಹರಿಯುವ ಗಂಗೋತ್ರಿ ಇದ್ದಂತೆ ಆದೇಶ ಸಿಗುವವರೆಗೂ ನಿರಂತರ ಹೋರಾಟ ಮಾಡ್ತೇವೆ .2ಎ ಮೀಸಲಾತಿಗಾಗಿ ಮತ್ತೊಂದು ಹೋರಾಟಕ್ಕೆ ಸಜ್ಜು ಆಗಲಿದ್ದೇವೆ ಎಂದು ಕೂಡಲಸಂಗಮ ಪಂಚಮಸಾಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ರಾಜ್ಯ ಮಟ್ಟದ ವಕೀಲ ಸಮಾಜ ಸಂಘಟನೆ ಮಾಡ್ತಾ ಇದ್ದೇವೆ .7ನೇ ಹಂತದ ಹೋರಾಟ ಈಗಾಗಲೇ ಆರಂಭ ಮಾಡಿದ್ದೇವೆ. ಸರ್ಕಾರ ರಚನೆಯಾದ ಮೇಲೆ 20 ಜನ …

Read More »

ಶಾಲೆಗೆ ಹೋದ ಬಾಲಕ ಕಾಣೆ

ಹುಬ್ಬಳ್ಳಿ: ಶಾಲೆಗೆ ಹೋಗಿ ಬರುತ್ತೇನೆಂದು ಎಂದು ಹೇಳಿ ಆಟೋ ಹತ್ತಿ ಹೋದ ಬಾಲಕ ಮರಳಿ ಮನೆಗೆ ಬಾರದೆ ಕಾಣೆ ಘಟನೆ ಹುಬ್ಬಳ್ಳಿ ಯಲ್ಲಿ ನಡೆದಿದೆ. ಇಬ್ರಾನ್ ಮಕ್ಬುಲ್ ಕಾಗಿನೆಲೆ ವಯಸ್ಸು 16 ಕಾಣೆಯಾದ ಯುವಕ. ನಗರದ ಪಿಳ್ಳೆ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾಭ್ಯಾಸ ಮಾಡುತ್ತಿದ್ದ. ಅಶೋಕ ನಗರದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವಿದ್ಯಾರ್ಥಿ ಸಿಕ್ಕಿದಲ್ಲಿ 9591718790 ಈ ನಂಬರ್ ಗೆ ಪೋನ್ ಮಾಡಿ ತಿಳಿಸಬಹುದು …

Read More »

ಶೆಟ್ಟರ್ ಹೇಳಿಕೆಗೆ ತಿರಿಗೇಟು ನೀಡಿದ ಎಚ್‌. ಕೆ. ಪಾಟೀಲ್

ಹುಬ್ಬಳ್ಳಿ : ಮುನಿರತ್ನ, ಪ್ರಕರಣಗಳ ಬೆಂಬಲಿಸೋ ಮನಸ್ಥಿತಿ ಇವರಿಗೆ ಹೇಗೆ ಬರುತ್ತೋ ಗೊತ್ತಿಲ್ಲ ಎಚ್‌. ಕೆ. ಪಾಟೀಲ್ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಹೇಳಿಕೆ ಸಚಿವ ತಿರುಗೇಟು ನೀಡಿದ್ದು ಅವರು, ಜಿಗಜಿಣಗಿ ಅವರು ಏನ್ ಹೇಳಿದರು ಅಂತಾ ಶೆಟ್ಟರ ಕೇಳಲಿ. ಹೆಣ್ಣು ಮಕ್ಕಳನ್ನು ಕನಿಷ್ಠವಾಗಿ ನೋಡುವ ವ್ಯಕ್ತಿಗೆ ಇವರ ಬೆಂಬಲ ಎಷ್ಟು ಸರಿ..? ಬಿಜೆಪಿಯವರೇ ಮುನಿರತ್ನವರಿಗೆ ಸೋಕಾಸ್‌ ನೋಟಿಸ್‌ ನೀಡಿದ್ದಾರೆ.ಮುನಿರತ್ನ ತಪ್ಪೇ ಮಾಡಿಲ್ಲ ಅಂದ್ರೆ ನೋಟಿಸ್‌ …

Read More »

ನಾಭಿರಾಜ ಸಾವು ಪ್ರಕರಣ : 11 ಜನ ಬಂಧನ

ಹುಬ್ಬಳ್ಳಿ: ಪ್ರೈ ಓವರ್ ಮೇಲಿಂದ ಕಬ್ಬಣದ ಬಾರ್ ಬಿದ್ದು ಎ ಎಸ್‌ಐ ನಾಭಿರಾಜ ದಯಣ್ಣವರ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹನ್ನೊಂದು ಜನರನ್ನ ಹುಬ್ಬಳ್ಳಿ ಉಪನಗರ ಪೋಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಹರ್ಷಾ ಹೊಸಗಾಣಿಗೇರ..ಜಿತೇಂದ್ರಪಾಲ..ಭೂಪೇಂದ್ರ,.ಮೊಹಮ್ಮದ ಸೇರಿದಂತೆ ಹನ್ನೊಂದು ಜನರನ್ನು ಬಂಧಿಸಿದ್ದಾರೆ ಇನ್ನೂ ಕೆಲವರನ್ನು ಬಂಧಿಸಬೇಕಿದೆ ಎಂದು ಉಪನಗರ ಪೋಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರೈಓವರ್ ಕಾಮಗಾರಿಯನ್ನು ಮಾಡುತ್ತಿರುವ ಝಂಡು ಕನ್ಸಟ್ರಕ್ಷನ್ ಕಂಪನಿಯ ನೌಕರರು ಕಾಮಗಾರಿ ಸ್ಥಳದಲ್ಲಿ ಯಾವುದೇ ಸುರಕ್ಷತಾಕ್ರಮ ಕೈಕೊಳ್ಳದ ಹಿನ್ನೆಲೆಯಲ್ಲಿ ಹಾಗೂ ಅಲ್ಲಿಯ …

Read More »

ಮಲ್ಲಕಂಬ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಅಯನ್ ಹುಸೈನ್ ನೂಲ್ವಿ

ಹುಬ್ಬಳ್ಳಿ : ಅವಳಿ ನಗರದ ವಿದ್ಯಾರ್ಥಿಗಳು ಒಂದಿಲ್ಲಾಒಂದು ಸಾಧನೆ ಮಾಡುತ್ತಲೇ ಇರುತ್ತಾರೆ ಹುಬ್ಬಳ್ಳಿ ಧಾರವಾಡ ಹೆಸರನ್ನು ಉತ್ತಂಗಮಟ್ಟಕ್ಕೆ ಹೆಸರು ಮಾಡುತ್ತಾರೆ.ಮಲ್ಲಕಂಬ ಕಲೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ ಯಾದ ವಿದ್ಯಾರ್ಥಿ ಹೆಸರು ಅಯನ್ ಹುಸೈನ್ ನೂಲ್ವಿ . ಈ ಯುವಕ ನವನಗರದ ರೋಟರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಾನೆ. ಇತ್ತೀಚಿಗೆ ಸೆ. 13ರಂದು ಪ್ರಥಮ ಬಾರಿಗೆ ಶೀರಗುಪ್ಪಿಯಲ್ಲಿ ನಡೆದ ಜಿಲ್ಲಾಮಟ್ಟದಲ್ಲಿ ಮಲಕಂಬ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾನೆ . ಕರ್ನಾಟಕ …

Read More »

ಮುನಿರತ್ನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ: ಶಾಸಕ ಪ್ರಸಾದ ಅಬ್ಬಯ್ಯ

ಹುಬ್ಬಳ್ಳಿ: ಮುನಿರತ್ನ ವಿರುದ್ಧ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಕೇಸ್ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಕಂಪ್ಲೇಂಟ್ ಕೊಟ್ಟ ಚೆಲುವರಾಜ ಇದೀಗ ಯೂ ಟರ್ನ್ ಹೊಡೆದಿದ್ದು, ಈ ಪ್ರಕರಣ ತಿರುವು ಪಡೆದಿದೆ ಶಾಸಕ ಪ್ರಸಾದ ಅಬ್ಬಯ್ಯ ಎಂದರು. ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಕೇಸ್ ಪ್ರಕರಣಕ್ಕೆ ಸಂಭಂದಿಸಿದಂತೆ ಪ್ರತಿಕ್ರಿಯಿಸಿದ ಅವರು, ಗುತ್ತಿಗೆದಾರ ಚೆಲುವರಾಯನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಜೀವ ಬೆದರಿಕೆ …

Read More »

ವಾಹನಗಳ ಹರಾಜಿಗೆ ಮುಗಿಬಿದ್ದ ಜನ

ಹುಬ್ಬಳ್ಳಿ: ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಡೆದ ವಾಹನಗಳ ಹರಾಜಿಗೆ ಜನರು ಮುಗಿಬಿದ್ದಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಹೊರಠಾಣೆ ಬಂಡಿವಾಡದಲ್ಲಿ ವಿವಿಧ ಮೊಕದ್ದಮೆಗಳಲ್ಲಿ ವಶಪಡಿಸಿಕೊಂಡಿದ್ದ, 12 ದ್ವಿಚಕ್ರ ವಾಹನಗಳ ಹರಾಜು ಪ್ರಕ್ರಿಯೆಯನ್ನು ಹಮ್ಮಿಕೊಂಡಿದ್ದು ಖರೀದಿ ಮಾಡಲು ಜನರು ಮುಗಿಬಿದ್ದಿದ್ದಾರೆ. ಬೆಳಗ್ಗೆಯಿಂದಲೇ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ನೂರಾರು ಜನ ಹಾಜರಿದ್ದರು. ಬಳಿಕ ಪಿಎಸ್‌ಐ ಸಚಿನ್‌ ಅಲಮೇಲ್ಕ‌ರ್ ವಾಹನ ಹರಾಜು ಪ್ರಕ್ರಿಯೆ ನಡೆಸಿದರು. ಮುಂಗಡ 5,000 ಸಾವಿರ ರೂ. ಪಾವತಿಸಿ ರಸೀದಿ ಪಡೆದವರಿಗೆ ಮಾತ್ರ …

Read More »