Breaking News

ಹುಬ್ಬಳ್ಳಿ

ದಾರಾವತಿ ಹನುಮಂತ ದೇವರ ಜಾತ್ರಾ ಮಹೋತ್ಸವದಲ್ಲಿ ಅರವಿಂದ್ ಬೆಲ್ಲದ್ ಭಾಗಿ

ಹುಬ್ಬಳ್ಳಿ: ನಗರದ ಶ್ರೀ ದಾರಾವತಿ ಹನುಮಂತ ದೇವರ ದೇವಸ್ಥಾನದ ಕಳಸಾರೋಹಣ , ಶ್ರೀ ಬಸವಣ್ಣ ಮಂಟಪ ಲೋಕಾರ್ಪಣೆ , ನಂದಿ ಮೂರ್ತಿಯ ಪ್ರತಿಷ್ಠಾಪನೆ ಮತ್ತು ಜಾತ್ರಾ ಮಹೋತ್ಸವದಲ್ಲಿ ಶಾಸಕ ಅರವಿಂದ್ ಬೆಲ್ಲದ್ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ದೇಶಿಸಿ ಶಾಸಕರು ಮಾತನಾಡಿದರು . ಇದೆ ಶಾಸಕರಿಗೆ ಸನ್ಮಾನ ಮಾಡಲಾಯಿತು . ಈ ಸಂದರ್ಭದಲ್ಲಿ , ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ , ಕೆ.ಸಿ.ಸಿ.ಬ್ಯಾಂಕ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಹೊರಕೇರಿ , ಪಾಲಿಕೆ ಸದಸ್ಯರಾದ ರಾಮಣ್ಣ …

Read More »

ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಪ್ರಸಾದ ಅಬ್ಬಯ್ಯ ಭಾಗಿ

ಹುಬ್ಬಳ್ಳಿ: ದಿ ಹುಬ್ಬಳ್ಳಿ ಬುದ್ದಿಸ್ಟ್ ಅಸೋಸಿಯೇಶನ್ ವತಿಯಿಂದ ಇಂದು ಇಲ್ಲಿನ ಮಂಟೂರು ರಸ್ತೆಯ ಬುದ್ಧ ವಿಹಾರದಲ್ಲಿ ಹಮ್ಮಿಕೊಂಡಿದ್ದ “ ಬುದ್ಧ ಪೂರ್ಣಿಮೆ ” ಕಾರ್ಯಕ್ರಮವನ್ನು ಶಾಸಕ ಪ್ರಸಾದ ಅಬ್ಬಯ್ಯ ಅವರು ಉದ್ಘಾಟಿಸಿ , ಅಂಬೇಡ್ಕರರ ಜ್ಞಾನ ಹಾಗೂ ಭಗವಾನ್ ಬುದ್ಧರ ಧ್ಯಾನ ಪ್ರಸ್ತುತ ವಿಶ್ವದಲ್ಲಿ ಭಾರತವನ್ನು ಗುರುತಿಸುವಂತಾಗಿದೆ ಎಂದು ತಿಳಿಸಿದರು . ಶಾಂತಿ- ಸಮಾನತೆಯ ಸಾರವೇ ಬೌದ್ಧಧರ್ಮವಾಗಿದೆ.ಶಾಂತಿ ಬಯಸುವ ವಿಶ್ವದ ಬಹುತೇಕ ರಾಷ್ಟ್ರಗಳು ನಮಗೆ ಯುದ್ಧ ಬೇಡ.ಭಗವಾನ್ ಬುದ್ಧಬೇಕು ಎಂದು …

Read More »

ಭಾರೀ ಹಣಾಹಣಿಯ ಪ್ರತಿಷ್ಠಿತ ಚುನಾವಣೆ : ತೆರೆಮರೆಯಲ್ಲಿ ಭಾರೀ ಕಸರತ್ತು

ಹುಬ್ಬಳ್ಳಿ: ಭಾರೀ ಹಣಾಹಣಿಯ ಪ್ರತಿಷ್ಠಿತ ಚುನಾವಣಾ ಅಖಾಡ ಪಶ್ಚಿಮ ಶಿಕ್ಷಕರ ಕ್ಷೇತ್ರ. ಈ ಕ್ಷೇತ್ರಕ್ಕೆ ಚುನಾವಣೆಯ ದಿನಾಂಕ ಈಗಾಗಲೇ ಘೋಷಣೆಯಾಗಿದೆ. ಸಾಕಷ್ಟು ಚಟುವಟಿಕೆಗಳು ಒಳೊಳಗೆ ತಯಾರು ಮಾಡಿಕೊಳ್ಳಲಾಗುತ್ತಿದೆ. ಶಿಕ್ಷಕರ ಕ್ಷೇತ್ರದಲ್ಲಿ ಇದೀಗ ಮಿಂಚಿನ ರಾಜಕೀಯ ಚಟುವಟಿಕೆಗಳು ನಡೆದಿವೆ. ಈ ಮೊದಲು ನಡೆದ ಚುನಾವಣೆಗಳಂತೆ ಈ ಸಲದ ಚುನಾವಣೆಯಲ್ಲಿ ಅಲ್ಲಾ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಹಾಲಿ ವಿಧಾನ ಸಭಾ ಸಭಾಪತಿ ಬಸವರಾಜ ಹೊರಟ್ಟಿ ಕಣಕ್ಕೆ ಇಳಿಯಲು ಕಸರತ್ತು ನಡೆಸಿದ್ದಾರೆ. ಇನ್ನೊಂದು …

Read More »

ಮಾಜಿ‌ ಸಿಎಂ ನಿವಾಸ ಬಳಿವಿರುವ ಓವರ್ ಹೆಡ್ ಟ್ಯಾಂಕ್ ನೆಲಸಮ

ಹುಬ್ಬಳ್ಳಿ: ಮಾಜಿ‌ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ನಿವಾಸವಿರುವ ಬಾದಾಮಿ ನಗರದಲ್ಲಿ ಹಲವಾರು ವರ್ಷಗಳಿಂದ ನಿರುಪಯುಕ್ತವಾಗಿ‌ದ್ದ ಓವರ್ ಹೆಡ್ ಟ್ಯಾಂಕ್ ನ್ನು ನೆಲಸಮಗೊಳಿಸಲಾಗಿದೆ. ಶಿಥಿಲಾವಸ್ತೆಯಲ್ಲಿತ್ತು ಎನ್ನಲಾದ ಓವರ್ ಹೆಡ್ ಟ್ಯಾಂಕ್ ನ್ನು ಮುನ್ನೆಚ್ಚರಿಕೆ ಕ್ರಮವಾಗಿ ನೆಲಸಮಗೊಳಿಸಲಾಗಿದೆ. ಮಹಾನಗರ ಪಾಲಿಕೆ ಅಧಿಕಾರಿಗಳ‌ ಮೇಲುಸ್ತುವಾರಿಯಲ್ಲಿ ಟ್ಯಾಂಕ್ ನೆಲಸಮಗೊಳಿಸಲಾಗಿದೆ.

Read More »

ಬಿಗ್ ಟಿವಿ ಬಿಗ್ ಇಂಪಾಕ್ಟ್ : ಕಸದ ರಾಶಿ ಸ್ವಚ್ಛ ಗೊಳಿಸಿದ ಹುಬ್ಬಳ್ಳಿ ಕಾರ್ಪೋರೇಶನ್

ಹುಬ್ಬಳ್ಳಿ : ಸ್ವಚ್ಛತೆ ಕಾಪಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಎಂದು ಅಭಿಯಾನ ಕೂಡ ಮಾಡಿದ್ದರು ಅದು ಕೇವಲ ನಾಮಕಾವಸ್ಥೆ ಮಾತ್ರ ಆಗಿದೆ ಎಂದು ಬಿಗ್ ಟಿವಿ ಇತ್ತೀಚಿಗೆ ಸುದ್ದಿ ಬಿಟ್ಟರಿಸಿಟ್ಟು ಈ ನಗರದ ಪ್ರದೇಶವನ್ನು ನೋಡಿದ್ರ ಸ್ವಚ್ಛ ಭಾರತ ಮಾಯವಾಗಿದೆ ಎಂದು ತೋರಿಸಿದ ಬೆನ್ನಲ್ಲೇ ಹೀಗೆ ರಸ್ತೆ ಮಧ್ಯದಲ್ಲೇ ಕಸದ ರಾಶಿ . ಒಂದು ಕಡೆ ಮಕ್ಕಳ ಆಟ ಇಷ್ಟೆಲ್ಲ ದೃಶ್ಯಗಳು …

Read More »

ಹಳೆಯ ವೈಷಮ್ಯ : ಕೊಲೆಯಲ್ಲಿ ಅಂತ್ಯ

ಹುಬ್ಬಳ್ಳಿ: ತಾಲೂಕಿನ ಹೊರವಲಯದ ನೂಲ್ವಿ ಗ್ರಾಮದ ಗೊರಂಪುಲ್ ಬಳಿ ಯುವಕನನ್ನು ಶುಕ್ರವಾರ ರಾತ್ರಿ ಬಡಿದು ಕೊಲೆ ಮಾಡಲಾಗಿದೆ. ಶಂಕು ಕಮಡೊಳ್ಳಿ (34) ಕೊಲೆಯಾದವರು. ನೂಲ್ವಿ ಗ್ರಾಮದ ನಿವಾಸಿಯಾಗಿದ್ದರು. ಕಳೆದ ದಿನ ಎಂದಿನಂತೆ ಮನೆಯಿಂದ ಹೊರ ಹೋಗುವುದಾಗಿ ಹೇಳಿ ಹೋಗಿದ್ದನು. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Read More »

ಬೆಳಗಲಿ ಗ್ರಾ.ಪಂ ಅಧ್ಯಕ್ಷನಾಗಿ ಹನಮಂತಪ್ಪ ಸೊಟ್ಟಮ್ಮನವರ ಆಯ್ಕೆ

ಹುಬ್ಬಳ್ಳಿ: ಬೆಳಗಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಬೆಳಗಲಿ ಗ್ರಾಮದ 2ನೆ ವಾರ್ಡಿನ ಸದಸ್ಯ ಹನಮಂತಪ್ಪ ಸೊಟ್ಟಮ್ಮನವರ  ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ,ಅಧಿಕಾರ ಹಂಚಿಕೆಯ ಒಪ್ಪಂದದ ಆಧಾರದಲ್ಲಿ ನಿಕಟಪೂರ್ವ ಅಧ್ಯಕ್ಷ ಹನಮಂತ ಖಂಡಣ್ಣವರ  ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕೆಲ ದಿನಗಳ ಹಿಂದೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಚುನಾವಣೆ ನಡೆದು ಹನಮಂತಪ್ಪ ಸೊಟ್ಟಮ್ಮನವರ ಅವರು ಅವಿರೋಧ ಆಯ್ಕೆಯಾದರು. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿರುವ ಹನಮಂತಪ್ಪ ಸೊಟ್ಟಮ್ಮನವರ ಇವರಿಗೆ ಕುಂದಗೋಳ ಮಾಜಿ ಶಾಸಕ ಎಸ್ ಐ ಚಿಕ್ಕನಗೌಡರ್ …

Read More »

ಕಾಮಗಾರಿಗೆ ಚಾಲನೆ ನೀಡಿದ ಮಾಜಿ ಸಿಎಂ

ಹುಬ್ಬಳ್ಳಿ: ನಗರದ ವಾರ್ಡ್ ನಂ . 39 ರ ಫಾರೆಸ್ಟ್ ಕಾಲೋನಿಯಲ್ಲಿ , ಉದ್ಯಾನವನ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜಗದೀಶ್ ಶೆಟ್ಟರ್ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು . ಈ ಸಂದರ್ಭದಲ್ಲಿ ಶ್ರೀ ಸಿದ್ದು ಮೊಗಳಿಶೆಟ್ಟರ್ , ಶ್ರೀ ಮೊಹನ ಬಡಿಗೇರ , ಶ್ರೀ ದೊಡ್ಡಯ್ಯ ಹಿರೇಮಠ , ಶ್ರೀ ಶ್ರೀನಿವಾಸ ಶಾಸ್ತ್ರಿ ಸೇರಿದಂತೆ ಕಾಲೋನಿಯ ಪ್ರಮುಖರು ಉಪಸ್ಥಿತರಿದ್ದರು .

Read More »

ಹುಬ್ಬಳ್ಳಿಯಲ್ಲಿ ನಿರ್ಮಾಣಗೊಂಡಿದೆ ಏಷ್ಯಾದ ಅತಿದೊಡ್ಡ ಮ್ಯೂಸಿಯಂ: ಜ್ಞಾನಲೋಕದ ಭವ್ಯ ವೇದಿಕೆ

ಹುಬ್ಬಳ್ಳಿ: ಇಷ್ಟು ದಿನ ವಾಣಿಜ್ಯನಗರಿಯಾಗಿ ಬಿಂಬಿತವಾಗಿದ್ದ ಹುಬ್ಬಳ್ಳಿ ಈಗ ಧಾರ್ಮಿಕ ಹಾಗೂ ಆಧ್ಯಾತ್ಮಿಕ ನಗರವಾಗಿ ಹೊರಹೊಮ್ಮಲಿದೆ. ಇಲ್ಲಿನ ಭೈರಿದೇವರಕೊಪ್ಪದಲ್ಲಿ ನಿರ್ಮಾಣಗೊಂಡಿರುವ ಮ್ಯೂಸಿಯಂ ಏಷ್ಯಾದಲ್ಲಿಯೇ ಅತಿದೊಡ್ಡ ಮ್ಯೂಸಿಯಂ ಆಗಿದೆ‌. ಮುಗಿಲೆತ್ತರಕ್ಕೆ ತಲೆಯೆತ್ತಿರುವ ಕಟ್ಟಡಗಳು. ಒಳಗೆ ಹೋದಂತೆ ಭವ್ಯವಾದ ನಿಸರ್ಗ ಸೌಂದರ್ಯ ಉಣಬಡಿಸುವ ಪರಿಸರ. ಇನ್ನೂ ಒಳಗೆ ಎಂಟ್ರಿ ಕೊಟ್ಟರೇ ಆಧ್ಯಾತ್ಮಿಕ ಜೀವನಕ್ಕೆ ಅಗತ್ಯವಾದ ಚಿತ್ರಣಗಳು. ಹೌದು.. ಇದೆಲ್ಲದಕ್ಕೂ ಸಾಕ್ಷಿಯಾಗಿರುವುದು ಪ್ರಜಾಪೀತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ನಿರ್ಮಾಣ ಮಾಡಿರುವ ಜ್ಞಾನ ಲೋಕ …

Read More »

ತೋಳನಕೆರೆಯನ್ನು ಶಾಸಕರಿಂದ ಪರಿಶೀಲನೆ

ಹುಬ್ಬಳ್ಳಿ: ಬಹು ನಿರೀಕ್ಷಿತ ನಗರದ ತೋಳನಕೆರೆಯ ಉದ್ಯಾನವನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿರುವ ಹಿನ್ನಲೆಯಲ್ಲಿ , ಉದ್ಯಾನವನವನ್ನು ಶಾಸಕ ಅರವಿಂದ್ ಬೆಲ್ಲದ್ ಪರಿಶೀಲಿಸಿದರು . ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಶ್ರೀ ರಾಮಣ್ಣ ಬಡಿಗೇರ್ , ಮುಖಂಡರಾದ ಶ್ರೀ ಚೇತನ್ ಬಾರಡ್ಡಡ್ , ಶ್ರೀ ರಘು ಹಿರೇಗೌಡ್ರ , ಶ್ರೀ ರಾಚಯ್ಯ ಮಠಪತಿ , ಶ್ರೀ ಮಂಜುನಾಥ್ ಗುರನಳ್ಳಿಮಠ , ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ …

Read More »