BigTv News
August 9, 2026
Breaking News
ಬೆಂಗಳೂರು: ಮಧ್ಯರಾತ್ರಿ ಪ್ರೇಯಸಿ ಮನೆಗೆ ತೆರಳಿ ಬಾಗಿಲು ಬಡಿದಿದ್ದ ಯುವಕ, ಮನೆಯವರು ಹೊರಬರುತ್ತಿದ್ದಂತೆ ಭಯಗೊಂಡು ಪರಾರಿಯಾಗಲು ಯತ್ನಿಸುವ ವೇಳೆ ಮೊದಲ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ಜೆ.ಪಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಾರಕ್ಕಿ ನಿವಾಸಿ ಮಹದೇವಸ್ವಾಮಿ (21) ಮೃತ ಯುವಕ. ಡೆಲಿವರಿ ಬಾಯ್ ಆಗಿದ್ದ ಆತ, ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆ.5ರಂದು ಸ್ನೇಹಿತರೊಂದಿಗೆ ಪಾರ್ಟಿ ಮುಗಿಸಿ ಮದ್ಯದ ಅಮಲಿನಲ್ಲಿ ರಾತ್ರಿ 12.30ರ ಸುಮಾರಿಗೆ ಯುವತಿ …
Read More »
BigTv News
August 8, 2026
Breaking News
ಬಿಡದಿ (ರಾಮನಗರ): ಇಲ್ಲಿನ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅವರೆಗೆರೆ ಸೇತುವೆ ಬಳಿ ಬೆಳಿಗ್ಗೆ ಕೇರಳದ ಬಸ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದರಿಂದ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದಾರೆ. ಹಲವರಿಗೆ ಗಾಯವಾಗಿದ್ದು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇರಳದಿಂದ ರಾತ್ರಿ ಹೊರಟಿದ್ದ ಬಸ್ ಬೆಂಗಳೂರಿಗೆ ಬರುತ್ತಿತ್ತು. ಅತಿ ವೇಗವಾಗಿ ಬಸ್ ಚಾಲನೆ ಮಾಡುತ್ತಿದ್ದ ಚಾಲಕ ನಿದ್ರೆ ಮಂಪರಿನಲ್ಲಿ ರಸ್ತೆ ವಿಭಜಕಕ್ಕೆ ಗುದ್ದಿದಾಗ ಬಸ್ ಪಲ್ಟಿಯಾಗಿದೆ. ಶವಗಳನ್ನು ಚಲ್ಲಘಟ್ಟದಲ್ಲಿರುವ ರಾಜರಾಜೇಶ್ವರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು …
Read More »
BigTv News
August 8, 2026
Breaking News
ಉಡುಪಿ, ಆ. 8: ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದಿಂದ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಕಳೆದ ಒಂದು ತಿಂಗಳಲ್ಲಿ ದಾಖಲಾದ ಮೂರು ಪ್ರಕರಣಗಳಲ್ಲಿ ಒಟ್ಟು ₹84.69 ಲಕ್ಷ ಹಣವನ್ನು ಮೋಸ ಮಾಡಿರುವುದು ವರದಿಯಾಗಿದೆ. ಮಹಿಳೆಯರ ಆರ್ಥಿಕ ಸಬಲೀಕರಣ, ಸ್ವಾವಲಂಬನೆ ಮತ್ತು ಉಳಿತಾಯ ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ಆರಂಭಿಸಲಾದ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳಲ್ಲಿ ನಡೆಯುತ್ತಿರುವ ವಂಚನೆ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಈ ಸಂಬಂಧ ಹಿರಿಯಡ್ಕ, …
Read More »
BigTv News
August 8, 2026
Breaking News
ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಗಟ್ಟಿಗುಂದ ಗ್ರಾಮದ ಬಳಿ ಒಂದು ತಿಂಗಳು ಹಸುಗೂಸನ್ನು ಪಾಪಿಗಳು ದೇಗುಲದಲ್ಲಿ ಬಿಟ್ಟು ಹೋಗಿದ್ದಾರೆ. ಸೇವಾಲಾಲ್ ದೇವಸ್ಥಾನದ ಬಳಿ ಪಾಪಿಗಳು ಒಂದು ತಿಂಗಳ ಗಂಡು ಮಗುವನ್ನು ಬಿಟ್ಟು ಹೋಗಿದ್ದಾರೆ. ಮಗುವಿನ ಚಿರಾಟ ಕೇಳಿ ಸ್ಥಳೀಯರು ಮಗುವನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಸ್ಥಳಕ್ಕೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಪೊಲೀಸರು ಭೇಟಿ ನೀಡಿದ್ದಾರೆ. ಮಗುವನ್ನು ಕನಕಪುರ ತಾಲೂಕು, ಆಸ್ಪತ್ರೆಗೆ ದಾಖಲಿಸಿದ್ದು, ನಂತರ ರಾಮನಗರ ದತ್ತು …
Read More »
BigTv News
August 8, 2026
Breaking News
ಬೆಳಗಾವಿ: ಸ್ನ್ಯಾಕ್ಸ್ ಪ್ಯಾಕೆಟ್‌ಗಳಲ್ಲಿ ಗಾಂಜಾ ಚಾಕ್ಲೆಟ್ ಬಚ್ಚಿಟ್ಟು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಉದ್ಯಮಬಾಗ ಪೊಲೀಸರು ಬಂಧಿಸಿದ್ದಾರೆ. ಭೋಲು ಪ್ರಜಾಪತಿ ಎಂಬಾತ ಕಾಲೇಜೊಂದರ ಬಳಿ ಗಾಂಜಾ ಚಾಕ್ಲೆಟ್ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯಿಂದ ₹54 ಸಾವಿರ ಮೌಲ್ಯದ 6 ಕೆಜಿ ಗಾಂಜಾ, ಮೊಬೈಲ್ ಹಾಗೂ ಸ್ಕೂಟಿಯನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ಸುಮಾರು ₹94 ಸಾವಿರ …
Read More »
BigTv News
August 8, 2026
Breaking News
ಚಿಕ್ಕೋಡಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಹತ್ಯೆ ಮಾಡಿ ಹೊಲದಲ್ಲಿ ಮುಚ್ಚಿಟ್ಟಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು 6 ತಿಂಗಳ ಬಳಿಕ ಖಡಕಲಾಟ ಪೊಲೀಸರು ಬಂಧಿಸಿದ್ದಾರೆ. ಮೃತರನ್ನು ರಾಘು ಗಾವಡೆ (40) ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಬಂಗಾರಿ ಗಾವಡೆ ಹಾಗೂ ರಾಮಾ ರಾಣಗೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಗಾರಿ ಹಾಗೂ ರಾಮಾ ರಾಣಗೆ ನಡುವೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದ್ದು, ಇದಕ್ಕೆ ಪತಿ ರಾಘು ಅಡ್ಡಿಯಾಗಿದ್ದರಿಂದ ಇಬ್ಬರೂ ಸೇರಿ …
Read More »
BigTv News
August 8, 2026
Breaking News
ವಿಜಯಪುರ : ನಗರದ ಮುಬಾರಕ್ ಚೌಕ್ ಬಳಿ ವ್ಯಕ್ತಿಯ ಕೊಲೆಯಾಗಿರುವ ಘಟನೆ ನಡೆದಿದೆ.ಶರಣು ಮಲ್ಲೇಶಪ್ಪ ಜೀವರ್ಗಿ (48) ಕೊಲೆಯಾದ ವ್ಯಕ್ತಿ. ಸ್ವಂತ ಪೈನಾನ್ಸ್ ನನ್ನು ಶರಣಪ್ಪ ನಡೆಸುತ್ತಿದ್ದರು. ಕಾಳಿಕಾ ನಗರದ ವಾಸಿ ಶರಣಪ್ಪ ಜೀವರ್ಗಿ ನಿತ್ಯ ಪೈನಾನ್ಸ್ ಪಿಗ್ಮಿ ಕಲೆಕ್ಷನ್ ಮಾಡುತ್ತಿದ್ದನು. ಇಂದು ಸಾಯಂಕಾಲದ ವೇಳೆ ಪಿಗ್ಮಿ ಕಲೆಕ್ಷನ್ ಗೆ ಬಂದಾಗ ಅಪರಿಚಿತ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಮಚ್ಚಿನಿಂದ ಕೊಚ್ಚಿ ಕಲ್ಲು ಹಾಕಿ ಕೊಲೆ ಮಾಡಿದ್ದಾರೆ. ಕೊಲೆಗೆ ನಿಖರ ಕಾರಣ …
Read More »
BigTv News
August 8, 2026
Breaking News
ಚಾಮರಾಜನಗರ : ಅನೈತಿಕ ಸಂಬಂಧಕ್ಕೆ ಹಿನ್ನೆಲೆಯಲ್ಲಿ ಯುವಕನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಚಾಮರಾಜನಗರ ತಾಲೂಕಿನ ಕೊಕ್ಕನಹಳ್ಳಿ ಎಲ್ಲಿ ಮಹೇಶ್ (26) ಎನ್ನುವ ಯುವಕನನ್ನು ಕುಮಾರಸ್ವಾಮಿ ಕೊಲೆ ಮಾಡಿದ್ದಾನೆ. ಕುಮಾರಸ್ವಾಮಿ ತಾಯಿಯ ಜೊತೆಗೆ ಮಹೇಶ್‌ಗೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಅಕ್ರಮ ಸಂಬಂಧ ಹೊಂದಿದ್ದಾನೆ ಎನ್ನುವ ಅನುಮಾನದಲ್ಲಿ ಮಹೇಶನನ್ನ ಕುಮಾರಸ್ವಾಮಿ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಎಸ್ಪಿ, ಎಎಸ್ಪಿ ಹಾಗೂ ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೇ ನಡೆಸುತ್ತಿದ್ದು ರಾಮಸಮುದ್ರ ಪೂರ್ವ ಠಾಣೆಯಲ್ಲಿ ಪ್ರಕರಣ …
Read More »
BigTv News
August 8, 2026
Breaking News
ಬೆಂಗಳೂರು, ಆಗಸ್ಟ್ 08: ನಗರದಲ್ಲಿ ಭಾಷಾ ವಿವಾದಕ್ಕೆ ಸಂಬಂಧಿಸಿದಂತೆ ಭೀಕರ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ನಗರದ ಯಲಹಂಕ ನ್ಯೂ ಟೌನ್‌ನಲ್ಲಿ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಹಿಂದಿ ಭಾಷೆ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಸ್ಥಳೀಯ ಫುಡ್ ಡೆಲಿವರಿ ಬಾಯ್ ಮೇಲೆ ಅನ್ಯ ರಾಜ್ಯದ ಮೂಲದವರು ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಒಬ್ಬ ಯುವತಿ ಹಾಗೂ ಇಬ್ಬರು ಯುವಕರು ಸೇರಿ ನಡುರಸ್ತೆಯಲ್ಲೇ ಡೆಲಿವರಿ ಬಾಯ್ ಮುಖಕ್ಕೆ ತೀವ್ರವಾಗಿ ಪಂಚ್ …
Read More »
BigTv News
August 8, 2026
Breaking News
ಚಿಕ್ಕಮಗಳೂರು: ದೇವಸ್ಥಾನ ಪ್ರವೇಶಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿಗೆ ಸೇರಿದ 16 ವರ್ಷದ ಬಾಲಕನಿಗೆ ಅವಾಚ್ಯವಾಗಿ ನಿಂದಿಸಿ, ಕತ್ತಿಯಿಂದ ಹಲ್ಲೆ ನಡೆಸಲು ಯತ್ನಿಸಿದ ಆರೋಪದ ಮೇಲೆ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ಆಗಸ್ಟ್ 5ರಂದು ಸ್ನೇಹಿತನನ್ನು ಬಸ್‌ಗೆ ಹತ್ತಿಸಿ ಮನೆಗೆ ತೆರಳುತ್ತಿದ್ದ ವೇಳೆ ವಿಜಯ ಅಲಿಯಾಸ್ ವಿಜಯರಾಜ್ ಎಂಬಾತ ಕತ್ತಿಯಿಂದ ಹಲ್ಲೆಗೆ ಯತ್ನಿಸಿದ್ದಾನೆ ಎಂದು ಬಾಲಕ ದೂರಿನಲ್ಲಿ ಆರೋಪಿಸಿದ್ದಾನೆ. ಸ್ಥಳೀಯ ಮಹಿಳೆಯೊಬ್ಬರು ಬಾಲಕನನ್ನು ಪಕ್ಕಕ್ಕೆ ಎಳೆದ ಪರಿಣಾಮ …
Read More »