Breaking News

Breaking News

ಹುಬ್ಬಳ್ಳಿಯ ರೈಲ್ವೇ ನಿಲ್ದಾಣ ಅವಘಡ: 3 ರೈಲ್ವೇ ಸಿಬ್ಬಂದಿ ಅಮಾನತು

ಹುಬ್ಬಳ್ಳಿ: ಹುಬ್ಬಳ್ಳಿಯ ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಎಲೆಕ್ನಿಕ್ ವಾಹನ ಪ್ಲಾಟ್ ಫಾರ್ಮ್‌ನಿಂದ ರೈಲು ಹಳಿಯ ಮೇಲೆ ಬಿದ್ದ ಪರಿಣಾಮ ವಾಹನದಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಒಂದನೇ ಪ್ಲಾಟ್ ಫಾರ್ಮ್‌ನಿಂದ ಆರನೇ ಪ್ಲಾಟ್ ಫಾರ್ಮ್‌ಗೆ ಇಬ್ಬರು ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಎಲೆಕ್ಟ್ರಾನಿಕ್ ವಾಹನ ಏಕಾಏಕಿ ಪ್ಲಾಟ್ ಫಾರ್ಮ್ ಬಿಟ್ಟು ರೈಲು ಹಳಿಗೆ ಬಿದ್ದಿದೆ,ಈ ಸಂದರ್ಭದಲ್ಲಿ ಯಾವುದೇ ರೈಲು ಈ ಹಳಿಯಲ್ಲಿ ಬಾರದ ಹಿನ್ನೆಲೆ ನಡೆಯಬಹುದಾದ ದೊಡ್ಡ …

Read More »

ಹಿಂದುಳಿದ ವರ್ಗಗಳ ಬೆನ್ನಿಗೆ ನಿಂತಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ: ಸಚಿವ ಮಂಕಾಳ ವೈದ್ಯ

ಚನ್ನಪಟ್ಟಣ: ಹಿಂದುಳಿದ ವರ್ಗಗಳ ಬೆನ್ನಿಗೆ ನಿಂತಿರುವ ಕಾಂಗ್ರೆಸ್ ಪಕ್ಷವನ್ನು ತಾಲ್ಲೂಕಿನ ಗಂಗಾಮತಸ್ಥ ಸಮುದಾಯ ಬೆಂಬಲಿಸಬೇಕು ಎಂದು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಮನವಿ ಮಾಡಿದರು. ನಗರದಲ್ಲಿ ಗಂಗಾಮತಸ್ಥ ಸಮುದಾಯದ ಸಭೆ ನಡೆಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಈ ಸಮುದಾಯ ಹಿಂದಿನಿಂದಲೂ ಕಾಂಗ್ರೆಸ್ ಬೆಂಬಲಿಸುತ್ತಾ ಬಂದಿದೆ. ಈ ಬಾರಿ ಸಿ.ಪಿ.ಯೋಗೇಶ್ವರ್ ಅವರನ್ನು ಬೆಂಬಲಿಸಬೇಕು. ಕ್ಷೇತ್ರದಲ್ಲಿ ಸಮುದಾಯದ 17 ಸಾವಿರಕ್ಕೂ ಹೆಚ್ಚು ಮತಗಳಿದ್ದು, ಸಮುದಾಯವು ಕಾಂಗ್ರೆಸ್ ಅನ್ನು ಬೆಂಬಲಿಸುವ ಮೂಲಕ ಸರ್ಕಾರಕ್ಕೆ ಶಕ್ತಿ …

Read More »

ಪ್ರಿಯಕರನೊಂದಿಗೆ ಬಂದಿದ್ದ ಯುವತಿಗೆ ಪಾಲಕರಿಂದ ಹಿಗ್ಗಾಮುಗ್ಗಾ ಥಳಿತ

ಹುಬ್ಬಳ್ಳಿ: ಪ್ರಿಯಕರನೊಂದಿಗೆ ಬಂದಿದ್ದ ಯುವತಿ ನಿಂತಿರೋದನ್ನ ನೋಡಿ, ಜಗಳ ತಗೆದ ಯುವತಿಯ ತಾಯಿ, ಮತ್ತು ತಾಯಿಯ ಸಹೋದರ ಇಬ್ಬರೂ ಪ್ರೇಮಿಗಳಿಗೆ ಥಳಿಸಿರುವ ಘಟನೆ ಹುಬ್ಬಳ್ಳಿ ಲ್ಯಾಮಿಂಗ್‌ಟನ್‌ ರಸ್ತೆ, ಕಾರ್ಪೊರೇಷನ್‌ ಬಸ್ ನಿಲ್ದಾಣದ ಪಕ್ಕದಲ್ಲಿ ನಡೆದಿದೆ. ಮನೆಗೆ ಬಾ ಮಾತಾಡೋಣ ಎಂದು ಕರೆದಿದ್ದಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಪ್ರೀತಿ ಮಾಡಿದ್ದಕ್ಕೆ ರೊಚ್ಚಿಗೆದ್ದು ಯುವತಿಯ ತಾಯಿಯ ಸಹೋದರ ಇಬ್ಬರಿಗೂ ಇಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ. ಈ ಘಟನೆ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ …

Read More »

ವಾಹನ ಸವಾರರಿಗೆ ಭರ್ಜರಿ ಸಿಹಿಸುದ್ದಿ: ಶೀಘ್ರವೇ ಪೆಟ್ರೋಲ್, ಡೀಸೆಲ್ ಬೆಲೆ 10 ರೂ. ಇಳಿಕೆ

ನವದೆಹಲಿ : ವಾಹನ ಸವಾರರಿಗೆ ಸರ್ಕಾರಿ ಭರ್ಜರಿ ಸಿಹಿಸುದ್ದಿ ನೀಡಿದ್ದು, ಶೀಘ್ರವೇ ಪೆಟ್ರೋಲ್, ಡೀಸೆಲ್ 10 ರೂ. ಇಳಿಕೆಯಾಗುವ ಸಾಧ್ಯತೆ ಇದೆ. ಹೌದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡಲು ಸರ್ಕಾರ ಒಂದು ಮಾರ್ಗವನ್ನು ಕಂಡುಕೊಂಡಿದೆ. ಆದರೆ, ಅದನ್ನು ಆರಂಭಿಸಲು ಸರ್ಕಾರ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ. ಆದರೆ ಕ್ರಮೇಣ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅವಲಂಬನೆ ನಿವಾರಣೆಯಾಗುತ್ತಿದೆ. ಇದರಿಂದ ಪೆಟ್ರೋಲ್ ಬೆಲೆಯನ್ನು ನಿಯಂತ್ರಿಸಬಹುದು ಆದ್ದರಿಂದ, ಮಿಶ್ರ ಇಂಧನದಿಂದ ಚಲಿಸುವ …

Read More »

ಪೊಲೀಸ್ ಬಾಲಕಿಯರ ಮೇಲೆ ಅನುಚಿತ ವರ್ತನೆ:ಟೆಂಗಿನಕಾಯಿ ಭೇಟಿ

ಹುಬ್ಬಳ್ಳಿ: ಕೇಶ್ವಾಪುರದ ಶಬರಿ ನಗರ ಬಡಾವಣೆಯಲ್ಲಿ ಪೊಲೀಸ್ ಹೆಡ್ ಕಾನ್ಸೆಬಲ್ ಒಬ್ಬರು ಬಾಲಕಿಯರ ಮೇಲೆ ಅನುಚಿತ ವರ್ತನೆ ತೋರಿದ ಹಿನ್ನೆಲೆಯಲ್ಲಿಂದು ಸ್ಥಳಕ್ಕೆ ಶಾಸಕ ಮಹೇಶ್ ಟೆಂಗಿನಕಾಯಿ ಭೇಟಿ ನೀಡಿ, ಪೊಲೀಸ್‌ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇನ್ನೂ ಇದೆ ವೇಳೆಯಲ್ಲಿ ಬಾಲಕಿಯ ಕುಟುಂಬದ ಸದಸ್ಯರೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.

Read More »

ಪೋಲಿಸರೇ ಮುಗಿಸಿ ಕೊಡ್ತಾರೆ ವ್ಯವಹಾರ: ಪೋನ್ ಕಾಲ್ ಬಿಚ್ಚಿಟ್ಟ ಕಹಾನಿ..

ಹುಬ್ಬಳ್ಳಿ – ಧಾರವಾಡದಲ್ಲಿ ಪೊಲೀಸರ ಹಾಗೂ ಪತ್ರಕರ್ತರ ನಡುವೆ ಡೀಲ್..! ಹುಬ್ಬಳ್ಳಿ – ಧಾರವಾಡದಲ್ಲಿ ಒಂದಲ್ಲಾ ಒಂದು ಘಟನೆಗಳು ಸದ್ದು ಮಾಡುತ್ತಿರುತ್ತವೆ, ಕೆಲವೊಂದು ಪ್ರಕರಣಗಳು ಮಾಸಿ ಹೋಗುವ ಮುನ್ನ ಛೋಟಾ ಮುಂಬೈನಲ್ಲಿ ಮತ್ತೊಂದು ಪ್ರಕರಣ ಕೇಳಿ ಬಂದಿದ್ದು, ಕೆಲವೊಂದಿಷ್ಟು ಪೊಲೀಸ್ ಅಧಿಕಾರಿಗಳನ್ನು ಇಟ್ಟುಕೊಂಡು ದೊಡ್ಡ ದೊಡ್ಡ ಚಾನಲ್ ಗಳನ್ನು ಹೇಳಿಕೊಂಡು ಡೀಲಿಗಿಳಿದ ಪ್ರಕರಣ ಕೇಳಿ ಬಂದಿದೆ. ವಿಡಿಯೋ ಆಡಿಯೋ ಸಮೇತ ಹುಬ್ಬಳ್ಳಿ ಕೆಲವೊಂದಿಷ್ಟು ಪತ್ರಕರ್ತರ ಕರಾಬ್ ಕಹಾನಿ.. ಹೌದು..ಸಮಾಜವನ್ನು ಕಾಪಾಡಬೇಕಾದುದು …

Read More »

ಸಂವಿಧಾನದ 370 ನೇ ವಿಧಿ ಮರುಸ್ಥಾಪಿಸುವ ನಿರ್ಣಯ ಅಂಗೀಕರಿಸಿದ ಜಮ್ಮುಕಾಶ್ಮೀರ ವಿಧಾನಸಭೆ

ಶ್ರೀನಗರ: ಪ್ರಮುಖ ಬೆಳವಗೆಯಲ್ಲಿ ಬಿಜೆಪಿ ಸದಸ್ಯರ ಪ್ರತಿಭಟನೆಯ ನಡುವೆಯೇ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯು ಇಂದು ಸಂವಿಧಾನದ 370 ನೇ ವಿಧಿಯನ್ನು ಮರುಸ್ಥಾಪಿಸುವ ನಿರ್ಣಯವನ್ನು ಅಂಗೀಕರಿಸಿದೆ. ಇಂದು ಜಮ್ಮು-ಕಾಶ್ಮೀರ ಸದನ ಸಭೆಯ ನಂತರ ನ್ಯಾಶನಲ್ ಕಾನ್ಫರೆನ್ಸ್ ಹಿರಿಯ ನಾಯಕ ಮತ್ತು ಡಿಸಿಎಂ ಸುರೀಂದರ್ ಸಿಂಗ್ ಚೌಧರಿ ಅವರು ಸಂವಿಧಾನ ಪರಿಚ್ಛೇದ 370 ಮರುಸ್ಥಾಪನೆ ಕುರಿತು ನಿರ್ಣಯವನ್ನು ಮಂಡಿಸಿದರು. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ, ಸಾಂವಿಧಾನಿಕ ಖಾತರಿಯನ್ನು ಮರುಸ್ಥಾಪಿಸಲು ಮತ್ತು ಈ ನಿಬಂಧನೆಗಳನ್ನು …

Read More »

ಇ-ಶ್ರಮ: ಕಾರ್ಮಿಕರಿಗೆ ಬಿಪಿಎಲ್ ಚೀಟಿ ವಿತರಣೆಗೆ ಚಾಲನೆ

ಬೆಂಗಳೂರು: ಇ-ಶ್ರಮ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿರುವ ಎಲ್ಲ ಕಾರ್ಮಿಕರಿಗೆ ಬಿಪಿಎಲ್‌ (ಆದ್ಯತಾ ಪಡಿತರ ಚೀಟಿ) ಚೀಟಿ ವಿತರಣೆ ಕಾರ್ಯಕ್ಕೆ ಆಹಾರ ಇಲಾಖೆ ಚಾಲನೆ ನೀಡಿದೆ. ಇ-ಶ್ರಮದಲ್ಲಿ ನೋಂದಾಯಿತ ಕಾರ್ಮಿಕರಿಗೆ ಬಿ‍ಪಿಎಲ್‌ ಚೀಟಿ ವಿತರಣೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ಈ ಪ್ರಕಾರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈ ಕಾರ್ಯವನ್ನು ಆರಂಭಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. ಅರ್ಹ ಮತ್ತು ಇ-ಶ್ರಮದಲ್ಲಿ ನೋಂದಾಯಿಸಿಕೊಂಡಿರುವ ಕಾರ್ಮಿಕರು ತಮ್ಮ ಹತ್ತಿರದ ಆಹಾರ ಇಲಾಖೆಯ ಕಚೇರಿಯನ್ನು ಸಂಪರ್ಕಿಸಬೇಕು …

Read More »

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ-ನಂತರದ ವಿದ್ಯಾರ್ಥಿಗಳ ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸುವ ಅವಧಿ ನ.10 ರವರೆಗೆ ವಿಸ್ತರಣೆ

ಧಾರವಾಡ : 2024-25ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ನಂತರದ ಕೋರ್ಸಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1 ಅಲೆಮಾರಿ, ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ಸ್ನಾತಕೋತ್ತರ ಪದವಿ, ವೃತ್ತಿ ಪರ ಪದವಿ ಹಾಗೂ ವೃತ್ತಿ ಪರ ಸ್ನಾತಕೋತ್ತರ ಪದವಿಗಳ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1 ಅಲೆಮಾರಿ, ಅರೆ ಅಲೆಮಾರಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಶುಲ್ಕ …

Read More »

ಲೋಕಾಯುಕ್ತ ಹಾಗೂ ಸಿಎಂ ಸಿದ್ದರಾಮಯ್ಯ ನಡುವೆ ಮ್ಯಾಚ್ ಫಿಕ್ಸಿಂಗ್ ಆಗಿದೆ: ಆರ್.ಅಶೋಕ್ ಗಂಭೀರ ಆರೋಪ

ಬೆಂಗಳೂರು : ಮುಡಾ ಹಗರಣ ಸಂಬಂಧ ಇಂದು ಮೈಸೂರಿನ ಲೋಕಾಯುಕ್ತ ಕಚೇರಿಗೆ ಸಿಎಂ ಸಿದ್ಧರಾಮಯ್ಯ ವಿಚಾರಣೆಗೆ ಹಾಜರಾಗಿದ್ದು, ವಿಪಕ್ಷ ನಾಯಕ ಆರ್. ಅಶೋಕ್ ಸಿಎಂ ಸಿದ್ದರಾಮಯ್ಯ ಹಾಗೂ ಲೋಕಾಯುಕ್ತ ನಡುವೆ ಮ್ಯಾಚ್ ಫಿಕ್ಸಿಂಗ್ ಆಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ಲೋಕಾಯುಕ್ತ ನಡುವೆ ಮ್ಯಾಚ್ ಫಿಕ್ಸಿಂಗ್ ಆಗಿದ್ದು, ಸಿದ್ದರಾಮಯ್ಯ ಇಂದು ವಿಚರಣೆಗೆ ಹೋಗಿದ್ದಾರೆ. ಇದನ್ನು ನೋಡಿ ನಮಗೆ …

Read More »