BigTv News
August 31, 2024
Breaking News, ಬೆಂಗಳೂರು
ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ಓಡಾಡುವವರಿಗೆ ಡಿಜಿಟಲ್ ಮಾದರಿಯ ಬಸ್‌ಪಾಸ್ ವ್ಯವಸ್ಥೆಯನ್ನು ಸರ್ಕಾರ ಜಾರಿಗೊಳಿಸುತ್ತಿದೆ. ಆ ಮೂಲಕ ಡಿಜಿಟಲ್ ಸೇವೆಗೆ ಉತ್ತೇಜನ ನೀಡುವುದರ ಜೊತೆಗೆ ಪ್ರಯಾಣವನ್ನು ಸುಗಮವನ್ನಾಗಿಸಲು ಸಹಾಯ ಮಾಡುತ್ತಿದೆ. ಸೆ.15ರಂದು ಮೊಬೈಲ್ ಆ್ಯಪ್ ಮೂಲಕ ಈ ಸೇವೆಯನ್ನು ವಿತರಿಸಲು ಮುಂದಾಗಿದೆ. ಬಿಎಂಟಿಸಿ ಬಸ್ ಪ್ರಯಾಣಿಕರು ಈವರೆಗೆ ವಾರದ ಮತ್ತು ಮಾಸಿಕ ಬಸ್‌ಪಾಸ್ ಬಳಸುತ್ತಿದ್ದರು. ಪೂರ್ವ ಮುದ್ರಿತ ಪಾಸ್ ಇದಾಗಿತ್ತು. ಆದರೆ ಇನ್ಮುಂದೆ ಡಿಜಿಟಲ್ ಮಾದರಿಯ ಟುಮೋಕ್ ಹೆಸರಿನ ಆ್ಯಪ್‌ನಲ್ಲಿ ಬಸ್ …
Read More »
Shaikh BigTv
August 31, 2024
Breaking News, ಧಾರವಾಡ
ನವಲಗುಂದ : ಶಹರ ಹಾಗೂ ತಾಲೂಕಿನ ಗ್ರಾಮಗಳಲ್ಲಿ ಸಾರ್ವಜನಿಕ ಗಣೇಶ ಮಂಡಳಿಯವರು ಗಣೇಶ ಮೂರ್ತಿ ಪ್ರತಿಷ್ಠಾಪನೆಯನ್ನು ಹೆಸ್ಕಾಂ ಕಂಪನಿಯ ವಿದ್ಯುತ್ ಲೈನ್ ಕೆಳಗಡೆ ಹಾಗೂ ಲೈನಿನ ಅಕ್ಕಪಕ್ಕದಲ್ಲಿ ಪೆಂಡಾಲನ್ನು ಹಾಕಬಾರದು ಮತ್ತು ಸುರಕ್ಷತಾ ಅಂತರವನ್ನು ಕಾಯ್ದುಕೊಂಡು ಪೆಂಡಾಲ ಹಾಕಿಕೊಳ್ಳಬೇಕು ಎಂದು ಹೆಸ್ಕಾಂ ಶಾಖಾಧಿಕಾರಿ ಹಣಮರಡ್ಡಿ ರೋಗಿ ತಿಳಿಸಿದ್ದಾರೆ. ಗಣೇಶ ಮಂಡಳಿ ಆಯೋಜಕರು ಅನಧಿಕೃತವಾಗಿ ವಿದ್ಯುತ್ತನ್ನು ಬಳಸದೆ ತಾತ್ಕಾಲಿಕ ಸ್ಥಾವರವನ್ನು ಪಡೆದು ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ವಿದ್ಯುತ್ತನ್ನು ಪಡೆಯಬಹುದು. …
Read More »
Shaikh BigTv
August 31, 2024
Breaking News, Crime, Dharwad, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಅಕ್ರಮ ಮರಳಿಗೆ ಸಕ್ರಮ ಪಾಲುದಾರಿಕೆ!!!!!! ಅವಳಿನಗರದ ಅನಧಿಕೃತ ಮರಳು ದಂಧೆ!!!!! ಟಫ್ ಕಮಿಷನರ್ ಬಂದ್ರು ಅವರ ಕಣ್ಣಿಗೆ ಉಸಕು ಚೆಲ್ಲುತ್ತಿರುವ ಖತರ್ನಾಖ್ ಪೊಲೀಸರು..???? ತಿಂಗಳ ಕಮಿಷನ್.. ಊರ ಹೊರಗೆ ವ್ಯವಹಾರ!!! ಮೀಡಿಯಾ ಪಾಲುದಾರರಿಗೆ ಇನ್ ಟೈಮ್ ಮುಟ್ಟುತ್ತೆ ಮಂತ್ಲಿ ಕಮಿಷನ್!!!! ಕೇಶ್ವಾಪೂರ ಹಾಗು ಗಬ್ಬೂರ್ ಬೈ ಪಾಸ್ ಮತ್ತು ಕಾರವಾರ ರೋಡ್ ನಲ್ಲಿ ಮರಳು ದಂಧೆಯ ಹೀರೋಗಳ ರಾತ್ರಿ ಡ್ಯೂಟಿ!!!! ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅನಧಿಕೃತ ಮರಳು ಮಾಫಿಯಾ …
Read More »
Shaikh BigTv
August 30, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ವಿವಿಧ ಬೇಡಿಕೆ ಹಾಗೂ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ ಅವರು ಹುಬ್ಬಳ್ಳಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಂಡರು. ನಂತರ ಸಿಎಂ ಅವರಿಗೆ ಸ್ವಾಗತ ಕೋರಿ ವಿಶೇಷವಾಗಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಉಪಮೇಯರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Read More »
Shaikh BigTv
August 30, 2024
Breaking News, ಧಾರವಾಡ
ಕಲಘಟಗಿ : ದೇವಿಕೊಪ್ಪ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ಒಂಬತ್ತು ಗಂಟೆಗೆ ಸರಣಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕೆಎಸ್ ಆರ್‌ಟಿ ಸಿ ಬಸ್, ಎರಡು ಕಾರಗಳು ಹಾಗೂ ಒಂದು ಟ್ಯಾಂಕರ್ ಲಾರಿ ಜಖಂಗೊಂಡಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿಸದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.. ಅದೃಷ್ಟವಶಾತ್ ಯಾವದೇ ಪ್ರಾಣಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಕಲಘಟಗಿ ಪೊಲೀಸ್ ಠಾಣೆಯ ಸಿಬ್ಬಂದಿ ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.
Read More »
Shaikh BigTv
August 30, 2024
Breaking News, ಧಾರವಾಡ
ನವಲಗುಂದ: ನಿವೃತ್ತ ನೌಕರರ ವತಿಯಿಂದ ವಿವಿಧ ಬೇಡಿಕೆಗಳಿಗಾಗಿ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರು ಹಾಗೂ ನಿವೃತ್ತ ಶಿಕ್ಷಕರಾದ ಎನ್.ಎನ್.ಹಾಲಿಗೇರಿ 7 ನೇ ವೇತನ ಆಯೋಗದಲ್ಲಿ ನಿವೃತ್ತ ನೌಕರರಿಗೆ ಅನ್ಯಾಯವಾಗಿರುವ ನ್ಯೂನತೆಗಳನ್ನು ಸರಿಪಡಿಸಿ ಆರ್ಥಿಕ ಸೌಲಭ್ಯಗಳನ್ನು ಒದಗಿಸಬೇಕೆಂದು ಪರಿವರ್ತಿತ ಪಿಂಚಣೆ, ನಿವೃತ್ತಿ ಅಥವಾ ಮರಣ ಉಪಧಾನ ಮತ್ತು ಗಳಿಕೆ ರಜೆ ಸೌಲಭ್ಯವನ್ನು ನೀಡಬೇಕೆಂದು ಹೇಳಿದರು. ನಿವೃತ್ತಿ ನೌಕರರನ್ನು ಸರಕಾರ ಕಡೇಗಣಿಸಬಾರದು ನಮ್ಮ ಬೇಡಿಕೆಗಳನ್ನು ಆದಷ್ಟು …
Read More »
Shaikh BigTv
August 30, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ವಿಜಯೇಂದ್ರ ಕೇಳಿದ ಕೂಡ್ಲೇ ನಾನು ರಾಜೀನಾಮೆ ಕೊಡಬೇಕಾ.? ಮುಡಾ ಹಗರಣದಲ್ಲಿ ಯಾಕೆ ರಾಜೀನಾಮೆ ಕೊಡಬೇಕು..? ವಿಜಯೇಂದ್ರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಅಂತಾ ನಾನು ಹೇಳುತ್ತೇನೆ. ಹಾಗೆ ನೋಡಿದರೆ ವಿಜಯೇಂದ್ರ ರಾಜೀನಾಮೆ ಕೊಡಬೇಕು. ಅವರು ರಾಜೀನಾಮೇ ಕೊಡುತ್ತಾರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ನಾನು ತಪ್ಪೇ ಮಾಡಿಲ್ಲ. ನಾಳೆ ಶಾಸಕರು, ಸಂಸದರು, ಎಮ್ ಎಲ್ ಸಿ ಗಳು …
Read More »
Shaikh BigTv
August 30, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರದ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಹಿನ್ನಲೆಯಲ್ಲಿ, ಪೊಲೀಸರು ಗೌರವ ವಂದನೆ ಸಲ್ಲಿಸಿದರು. ಇಂದು ಹಾವೇರಿಯ ದೇವರಗುಡ್ಡದಲ್ಲಿ ಒಂದು ಕಾರ್ಯಕ್ರಮಕ್ಕೆ ಹಾಜರಾಗಲಿದ್ದು, ಬೆಂಗಳೂರಿನಿಂದ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ರಸ್ತೆ ಮೂಲಕ ಹಾವೇರಿಯತ್ತ ಪ್ರಯಾಣ ಬೆಳೆಸಿದರು.
Read More »
BigTv News
August 30, 2024
Breaking News, Crime
ದಲಿತ ಬಾಲಕ ಮತ್ತು ಆತನ ಅಜ್ಜಿಯನ್ನು ಮಹಿಳಾ ಅಧಿಕಾರಿ ಕೋಣೆಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸದ್ಯ ಈ ಪ್ರಕರಣ ಮಧ್ಯಪ್ರದೇಶದಲ್ಲಿ ನಡೆದಿದ್ದು ರೈಲ್ವೇ ಪೊಲೀಸ್ ಠಾಣೆ ಅಧಿಕಾರಿಗಳು ಕೃತ್ಯ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರಕರಣ 2023 ರ ಅಕ್ಟೋಬರ್‌ನಲ್ಲಿ ಜಬಲ್‌ಪುರದ ಕಟ್ಟಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಉಸ್ತುವಾರಿ ಅಧಿಕಾರಿ ಅರುಣಾ ವಗಾನೆ ಹಲ್ಲೆ ನಡೆಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಹಿನ್ನಲೆ ಅಧಿಕಾರಿಯನ್ನು …
Read More »
BigTv News
August 30, 2024
Breaking News
ಸಮಸ್ಯೆ ಹೇಳಿಕೊಳ್ಳಲು ಬಂದ ಸಿಆರ್‌ಪಿಎಫ್ ಯೋಧ ಕಾಂಗ್ರೆಸ್ ಶಾಸಕನ ವರ್ತನೆಯಿಂದ ಕೋಪಗೊಂಡು ಪಬ್ಲಿಕ್ ನಲ್ಲೇ ಥಳಿಸಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ರಫೀಕ್ ಖಾನ್ ಹಲ್ಲೆಗೊಳಗಾದ ಕಾಂಗ್ರೆಸ್ ಶಾಸಕ ಎಂದು ತಿಳಿದುಬಂದಿದೆ. ಹಲ್ಲೆ ಮಾಡಿದ ನಿವೃತ್ತ ಯೋಧನನ್ನು ವಿಕಾಸ್ ಜಾಖಾ ಎಂದು ಗುರುತಿಸಲಾಗಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನಿವೃತ್ತ ಯೋಧನಿಗೆ ಸಾರ್ವಜನಿಕರು ಥಳಿಸುತ್ತಿರುವುದನ್ನು ಕಾಣಬಹುದಾಗಿದೆ.
Read More »