Breaking News

Breaking News

ಕೊಡಲಿಯಿಂದ ಹೊಡೆದು ತಮ್ಮನ ಹತ್ಯೆ

ಮಂಗಳೂರು: ಮೊಬೈಲ್‌ನಲ್ಲಿ ಯುವತಿಯೊಂದಿಗೆ ಮಾತನಾಡಿದ್ದ ವಿಚಾರಕ್ಕೆ ಅಣ್ಣನೇ ತಮ್ಮನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟುವಿನಲ್ಲಿ ನಡೆದಿದೆ. ಮೃತನು ಮಲ್ಲಿಕಾರ್ಜುನ (20) ಆಗಿದ್ದು, ಆರೋಪಿ ಸೋಮನಾಥ (21)ನನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈ 19ರ ರಾತ್ರಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ಸೋಮನಾಥ ಕೊಡಲಿಯಿಂದ ತಲೆ ಹಾಗೂ ಮುಖಕ್ಕೆ ಹಲ್ಲೆ ನಡೆಸಿದ ಪರಿಣಾಮ ಮಲ್ಲಿಕಾರ್ಜುನ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಳಿಕ ಆರೋಪಿ ಪರಾರಿಯಾಗಿದ್ದ. ಪೊಲೀಸರು …

Read More »

ಫ್ರೆಂಡ್​ಶಿಪ್​ ಕ್ಲಬ್​ ಹೆಸರಲ್ಲಿ ಆನ್​ಲೈನ್​ ವಂಚನೆ

ಉಡುಪಿ: ಫ್ರೆಂಡ್​ಶಿಪ್​ ಕ್ಲಬ್​ ಸದಸ್ಯತ್ವ ಪಡೆಯುವ ಆಸೆಗೆ ಬಿದ್ದ ವೃದ್ಧರೊಬ್ಬರು ಸೈಬರ್​ ವಂಚಕರ ಜಾಲಕ್ಕೆ ಸಿಲುಕಿ ಬರೋಬ್ಬರಿ 5,11,882 ರೂ. ಕಳೆದುಕೊಂಡಿರುವ ಘಟನೆ ಕಡಿಯಾಳಿಯಲ್ಲಿ ನಡೆದಿದೆ. ಕಡಿಯಾಳಿ ನಿವಾಸಿ ಉಸ್ಮಾನ್​ ಸಾಹೇಬ್​ (66) ವಂಚನೆಗೊಳಗಾದವರು. ಇವರು ತಮ್ಮ ಎಸ್​ಬಿ ಖಾತೆಯಿಂದ ಜೂನ್​ 27 ರಿಂದ ಜುಲೈ 14ರ ಅವಧಿಯಲ್ಲಿ ಹಂತ ಹಂತವಾಗಿ ಹಣವನ್ನು ವರ್ಗಾಯಿಸಿದ್ದರು. ಜೂನ್​ 27 ರಂದು 29,000 ರೂ., ಜುಲೈ 9 ರಂದು ಒಂದೇ ದಿನ ಮೂರು …

Read More »

ಬೆಳ್ತಂಗಡಿ| ಬಾಲಕಿಯ ಅತ್ಯಾಚಾರ ಪ್ರಕರಣ: ಆರೋಪಿ ಶುಭರಾಜ್ ಬಂಧನ

ಬೆಳ್ತಂಗಡಿ: 16 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಉಪ್ಪಿನಂಗಡಿ ನಿವಾಸಿ ಶುಭರಾಜ್ (28) ಅವರನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ದಾಗ ಆಕೆ ಗರ್ಭಿಣಿಯಾಗಿರುವುದು ತಿಳಿದುಬಂದಿದೆ. ಬಳಿಕ ತಾಯಿ ನೀಡಿದ ದೂರಿನ ಮೇರೆಗೆ ಜುಲೈ 18ರಂದು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಜುಲೈ 19ರಂದು ಲಾಯಿಲ ಗ್ರಾಮದ ಪುತ್ರಬೈಲಿನಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು, ಜುಲೈ 20ರಂದು ಮಂಗಳೂರು …

Read More »

ಬೆಳ್ತಂಗಡಿ| ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಯುವತಿಯಿಂದ ಉದ್ಯಮಿಗೆ 87 ಲಕ್ಷ ರೂ. ವಂಚನೆ; ಪ್ರಕರಣ ದಾಖಲು

ಬೆಳ್ತಂಗಡಿ: ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ಪರಿಚಯವಾಗಿ ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬಳು ಬೆಳ್ತಂಗಡಿಯ ಉದ್ಯಮಿಯಿಂದ ₹87.22 ಲಕ್ಷ ಪಡೆದು ವಂಚಿಸಿರುವ ಆರೋಪದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಯ್ಯೂರು ನಿವಾಸಿ ಉದ್ಯಮಿ ಅನನ್ಯ ಕೃಷ್ಣ (36) ಅವರಿಗೆ 2024ರ ಮೇ ತಿಂಗಳಲ್ಲಿ ಶಿವಮೊಗ್ಗ/ಬೆಂಗಳೂರು ಮೂಲದ ಅನಿಷಾ ಪಾಲನ್ನ (35) ಪರಿಚಯವಾಗಿತ್ತು. ಇನ್‌ಸ್ಟಾಗ್ರಾಂ ಹಾಗೂ ಮೊಬೈಲ್ ಮೂಲಕ ಇಬ್ಬರೂ ಸಂಪರ್ಕದಲ್ಲಿದ್ದು, ಮದುವೆ ಕುರಿತು ಮಾತುಕತೆ ನಡೆಸುತ್ತಿದ್ದರು. ಇದೇ ವೇಳೆ ವ್ಯವಹಾರದಲ್ಲಿ ಆರ್ಥಿಕ ಸಂಕಷ್ಟವಿದೆ …

Read More »

ಕಡಿಮೆ ಬಡ್ಡಿ ಸಾಲದ ಆಸೆಗೆ ಬಿದ್ದು ತಾಳಿ ಅಡವಿಟ್ಟ ಮಹಿಳೆಯರಿಗೆ ಮಕ್ಮಲ್ ಟೋಪಿ!

ವಿಜಯಪುರ: ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ನೂರಾರು ಗ್ರಾಮೀಣ ಮಹಿಳೆಯರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಸಾಲದ ಆಸೆಗೆ ₹50 ಸಾವಿರದಿಂದ ₹1 ಲಕ್ಷದವರೆಗೆ ಮುಂಗಡ ಹಣ ಪಾವತಿಸಿದ ಮಹಿಳೆಯರಲ್ಲಿ ಹಲವರು ತಮ್ಮ ಮಂಗಳಸೂತ್ರ (ತಾಳಿ) ಅಡವಿಟ್ಟು ಹಣ ತಂದಿದ್ದರೂ, ವಂಚಕರು ನಕಲಿ ರಸೀದಿ, ಬಿಲ್ ಹಾಗೂ ಬಾಂಡ್ ಪೇಪರ್‌ಗಳನ್ನು ನೀಡಿ ನಂಬಿಸಿ ಬಳಿಕ ಕಚೇರಿಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಸಾರ್ವಜನಿಕರಿಂದ ಒಂದು ಕೋಟಿಗೂ ಅಧಿಕ …

Read More »

ಗರ್ಲ್‌ಫ್ರೆಂಡ್ ಮಾತನಾಡುತ್ತಿಲ್ಲವೆಂದು ದೇವಸ್ಥಾನದ ಮುಂಭಾಗದಲ್ಲೇ ಮರಕ್ಕೆ ನೇಣು ಬಿಗಿದುಕೊಂಡ ವ್ಯಕ್ತಿ!

ಬೆಂಗಳೂರು: ಪ್ರೇಯಸಿ ಮಾತನಾಡುತ್ತಿಲ್ಲ ಎಂಬ ಬೇಸರದಿಂದ 41 ವರ್ಷದ ವ್ಯಕ್ತಿಯೊಬ್ಬ ಸಾರ್ವಜನಿಕ ಸ್ಥಳದಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೈಯಾಲಿಕಾವಲ್ ಠಾಣೆ ವ್ಯಾಪ್ತಿಯ ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿ ನಡೆದಿದೆ. ಮೃತರನ್ನು ಡಾರ್ಜಿಲಿಂಗ್ ಮೂಲದ ಸುದೀಪ್ (41) ಎಂದು ಗುರುತಿಸಲಾಗಿದೆ. ದೇವಸ್ಥಾನದ ಮುಂಭಾಗದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತದೇಹದ ಬಳಿ ಇದ್ದ ಸೂಟ್‌ಕೇಸ್‌ನಲ್ಲಿ ನಗದು ಹಣ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸ್ಥಳಕ್ಕೆ ವೈಯಾಲಿಕಾವಲ್ ಪೊಲೀಸರು ಭೇಟಿ ನೀಡಿ …

Read More »

ಅಡ್ಮಿಷನ್‌ಗೆ ₹20 ಸಾವಿರ ಲಂಚ ಕೇಳಿದ ಪ್ರಿನ್ಸಿಪಾಲ್ ಲೋಕಾಯುಕ್ತ ಬಲೆಗೆ!

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಹುಣಸೆಕಟ್ಟೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಿನ್ಸಿಪಾಲ್ ನಾಮದೇವ ಅವರು ವಿದ್ಯಾರ್ಥಿನಿಯ ದಾಖಲಾತಿಗೆ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. 7ನೇ ತರಗತಿಗೆ ದಾಖಲಾತಿ ಮಾಡಿಕೊಡಲು ಪೋಷಕರಿಂದ ₹20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅವರು, ಮೊದಲ ಕಂತಿನ ₹10 ಸಾವಿರವನ್ನು ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ರೆಡ್‌ಹ್ಯಾಂಡ್‌ ಆಗಿ ಬಂಧಿಸಿದ್ದಾರೆ. ಆರೋಪಿ ವಿರುದ್ಧ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ …

Read More »

ಪೊಲೀಸ್ ಸಮವಸ್ತ್ರದಲ್ಲಿ ರೀಲ್ಸ್, ಫೋಟೋಶೂಟ್ ಪೋಸ್ಟ್‌ಗೆ ಬ್ರೇಕ್..? ಡಿಜಿಪಿಗೆ ಶಿಫಾರಸು ಪತ್ರ..

ಪೊಲೀಸ್ ಸಮವಸ್ತ್ರದಲ್ಲಿ ರೀಲ್ಸ್ ಬೇಡ..! ಖಾಕಿಯ ಘನತೆ ಉಳಿಸಲು ಕಠಿಣ ನಿಯಮಕ್ಕೆ ಶಿಫಾರಸು… ಬೆಂಗಳೂರು: ಪೊಲೀಸ್ ಸಮವಸ್ತ್ರ ಧರಿಸಿ ರೀಲ್ಸ್, ಫೋಟೋಶೂಟ್, ಪ್ರಿ-ವೆಡ್ಡಿಂಗ್ ಶೂಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಪ್ರವೃತ್ತಿಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ಈ ಕುರಿತು ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರವು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಶಿಫಾರಸು ಪತ್ರ ಬರೆದಿದೆ… ಪತ್ರದಲ್ಲಿ, ಕೆಲವು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯದ ವೇಳೆ …

Read More »

ಆಪ್‌ನಲ್ಲಿ ಅಪ್ಸರೆಯರ ಆಸೆ ತೋರಿಸಿ ಹನಿಟ್ರ್ಯಾಪ್‌.. ಆಟೋದಲ್ಲಿ ಕಿಡ್ನ್ಯಾಪ್, ಆಮೇಲೆ ಬೆತ್ತಲೆಗೊಳಿಸಿ ವಿಕೃತಿ..!

ಬೆಂಗಳೂರು: ಲೋಕಾಂಟೊ ಆಪ್‌ನಲ್ಲಿ ಸುಂದರಿಯರ ಫೋಟೋ ಹಾಕಿ ಯುವಕರನ್ನು ಸೆಳೆದು, ಬಳಿಕ ಅಪಹರಿಸಿ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ಸುಲಿಗೆ ಮಾಡುತ್ತಿದ್ದ 11 ಮಂದಿ ಗ್ಯಾಂಗ್ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತನೊಬ್ಬ ಹೆಚ್‌ಆರ್‌ಬಿಆರ್ ಲೇಔಟ್‌ಗೆ ಹೋದಾಗ, ಇಬ್ಬರು ಮಹಿಳೆಯರ ಮೂಲಕ ಆತನನ್ನು ಆಟೋದಲ್ಲಿ ಕೂರಿಸಿಕೊಂಡು ಗ್ಯಾಂಗ್ ಸದಸ್ಯರು ಅಪಹರಿಸಿ, ಪ್ರಾಣ ಬೆದರಿಕೆ ಹಾಕಿ ಚಿನ್ನದ ಸರ, ಮೊಬೈಲ್ ಹಾಗೂ ನಗದನ್ನು ಕಸಿದುಕೊಂಡಿದ್ದಾರೆ. ಬಳಿಕ ಆತನನ್ನು ಅವಮಾನಿಸಿ ಬಿಟ್ಟು ಹೋಗಿದ್ದಾರೆ. …

Read More »

ವಾಟ್ಸಪ್‌ ಗೆ ಬಂದ ಮದುವೆ ಆಹ್ವಾನ ಪತ್ರಿಕೆ ಓಪನ್‌ ಮಾಡಿದ ಅರಣ್ಯಾಧಿಕಾರಿ – ಖಾತೆಯಲ್ಲಿದ್ದ 10 ಲಕ್ಷ ರೂ. ಮಂಗಮಾಯ!

ಬೆಂಗಳೂರು: ವಾಟ್ಸ್‌ಆಪ್‌ನಲ್ಲಿ ಸ್ನೇಹಿತನ ಸಂಖ್ಯೆಯಿಂದ ಬಂದ ನಕಲಿ ಎಂಗೇಜ್‌ಮೆಂಟ್ ಆಮಂತ್ರಣದ APK ಫೈಲ್ ಲಿಂಕ್ ಕ್ಲಿಕ್ ಮಾಡಿದ ಯಶವಂತಪುರದ ಡಿಆರ್‌ಎಫ್‌ಒ ರಮೇಶ್ ಬಾಬು ಅವರು ಸೈಬರ್ ವಂಚಕರಿಗೆ ₹9.96 ಲಕ್ಷ ಕಳೆದುಕೊಂಡಿದ್ದಾರೆ. ಲಿಂಕ್ ಕ್ಲಿಕ್ ಮಾಡಿದ ಬಳಿಕ ಅವರ ಮೊಬೈಲ್ ಹ್ಯಾಕ್ ಆಗಿದೆ. ಕೇವಲ 30 ನಿಮಿಷಗಳಲ್ಲಿ 7 ಬಾರಿ ಅವರ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗಿದ್ದು, ಒಟ್ಟು ₹9,96,659 ವಂಚಕರ ಪಾಲಾಗಿದೆ. ಬಳಿಕ ಸ್ನೇಹಿತನ ಮೊಬೈಲ್ ಈಗಾಗಲೇ ಹ್ಯಾಕ್ …

Read More »