Breaking News

Breaking News

ರಾಜಕೀಯ ಮರೆತು ಮಾನವೀಯತೆ ಮೆರೆದ ಕ್ಷಣ: ಚೆನ್ನಮ್ಮ ಅಂತಿಮ ದರ್ಶನದ ವೇಳೆ ದೇವೇಗೌಡರ ಕೈಹಿಡಿದು ಸಿದ್ದರಾಮಯ್ಯ ಸಾಂತ್ವನ

ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಮಾನವೀಯತೆ ಎಲ್ಲಕ್ಕಿಂತ ದೊಡ್ಡದು ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಘಟನೆ ಸಾಕ್ಷಿಯಾಯಿತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧನದ ಸುದ್ದಿ ತಿಳಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದ್ಮನಾಭನಗರದ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಬಳಿಕ ತೀವ್ರ ದುಃಖದಲ್ಲಿದ್ದ ದೇವೇಗೌಡರ ಪಕ್ಕದಲ್ಲೇ ಕುಳಿತು ಅವರ ಕೈ ಹಿಡಿದು ಆತ್ಮೀಯವಾಗಿ ಸಾಂತ್ವನ ಹೇಳಿದರು. ರಾಜಕೀಯವನ್ನು ಬದಿಗಿಟ್ಟು ಹಿರಿಯ ನಾಯಕನಿಗೆ ಧೈರ್ಯ ತುಂಬಿದ ಈ …

Read More »

ದೇವಸ್ಥಾನದ ಚೆಕ್ ನಕಲಿ ಸಹಿ ಪ್ರಕರಣ: ಡಾಟಾ ಎಂಟ್ರಿ ಆಪರೇಟರ್ ಬಂಧನ

ಕಾರ್ಕಳ: ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ಯಾಂಕ್ ಖಾತೆಯ ಚೆಕ್‌ಗಳಿಗೆ ನಕಲಿ ಸಹಿ ಮಾಡಿ ಹಣ ಪಡೆಯಲು ಯತ್ನಿಸಿದ ಆರೋಪದಡಿ ದೇವಸ್ಥಾನದ ಮಾಜಿ ಡಾಟಾ ಎಂಟ್ರಿ ಆಪರೇಟರ್ ಅಕ್ಷಯ ದೇವಾಡಿಗ (29) ಅವರನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿ 2022ರಿಂದ 2026ರ ಮೇ 7ರವರೆಗೆ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸಿದ್ದ. ಲೆಕ್ಕ ಪರಿಶೋಧನೆ ವೇಳೆ ಹಣಕಾಸು ಅಕ್ರಮ ಹಾಗೂ ಕರ್ತವ್ಯ ಲೋಪ ಬೆಳಕಿಗೆ ಬಂದ ಬಳಿಕ ವಿವರಣೆ ನೀಡದೆ ರಾಜೀನಾಮೆ ನೀಡಿ …

Read More »

ವಿಕಲಾಂಗ ಮಹಿಳೆ ಮೇಲೆ ಹಲ್ಲೆ; ಪ್ರಕರಣ ದಾಖಲು

ಕೊಲ್ಲೂರು: ಇಲ್ಲಿನ ಹೆಗ್ಡೆಹಕ್ಲು ನಿವಾಸಿ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿರುವ ಚಂದ್ರಾವತಿ ಎಂಬ ವಿಕಲಾಂಗ ಮಹಿಳೆಯೊಬ್ಬರ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ ಬಗ್ಗೆ ದೂರು ದಾಖಲಾಗಿದೆ. ಚಂದ್ರಾವತಿ ಅವರು ನೀಡಿದ ದೂರಿನ ಪ್ರಕಾರ, ತಮ್ಮ ಮನೆಯ ಸಮೀಪದ ಯಶೋಧ ಎನ್ನುವವರು ಮನೆಯ ಹತ್ತಿರ ಹೋಗುವ ದಾರಿಗೆ ಕಲ್ಲು-ಗಿಡ ಅಡ್ಡವಿಟ್ಟು, 3 ಚಕ್ರದ ಗಾಡಿ ತೆಗೆದುಕೊಂಡು ಹೋಗುವಾಗ ಚಕ್ರ ತಿರುಗಿ ಬಿಳುವ ಹಂತದಲ್ಲಿದ್ದು, ಅಡ್ಡವಿಟ್ಟ ಕಲ್ಲು ತೆಗೆಯಲು ಹೋದಾಗ, ಯಶೋಧ …

Read More »

ಆಕಸ್ಮಿಕ ಬೆಂಕಿ: ಸ್ಕಾರ್ಪಿಯೋ ಕಾರು ಸುಟ್ಟು ಭಸ್ಮ

ವಿಜಯಪುರ: ನಿಲ್ಲಿಸಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಸುಟ್ಟು ಭಸ್ಮವಾಗಿರುವ ಘಟನೆ ನಗರದ ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ (ಜು.18) ನಡೆದಿದೆ. ತಿಡಗುಂದಿಯ ದೇವದಾಸ್‌ ಜಾಧವ್ ಎಂಬುವವರಿಗೆ ಸೇರಿದ ಸ್ಕಾರ್ಪಿಯೋ ಕಾರು ಇದಾಗಿದ್ದು, ಮಾನಸ ಗಂಗೋತ್ರಿ ಶಾಲೆ ಎದುರು ನಿಲ್ಲಿಸಲಾಗಿತ್ತು‌. ಕಾರಿಗೆ ಬೆಂಕಿ ಬಿದ್ದ ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ‌ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಅಷ್ಟು ಹೊತ್ತಿಗಾಗಲೇ ಕಾರು ಸುಟ್ಟು ಭಸ್ಮವಾಗಿದೆ.

Read More »

ತಲವಾರು ಹಿಡಿದು ಮೊಬೈಲ್ ಅಂಗಡಿಗೆ ನುಗ್ಗಿ ಆತಂಕ ಸೃಷ್ಟಿಸಿದ ಯುವಕ

ಮೂಡುಬಿದಿರೆ: ಬಸ್ ನಿಲ್ದಾಣದ ಮೊಬೈಲ್ ಅಂಗಡಿಗೆ ಶನಿವಾರ ಮಧ್ಯಾಹ್ನ ತಲವಾರು ಹಿಡಿದು ನುಗ್ಗಿದ ಯುವಕ ಗಲಾಟೆ ನಡೆಸಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿದ್ದಾನೆ. ಗ್ರಾಹಕರು ಅಂಗಡಿಯಲ್ಲಿದ್ದ ವೇಳೆ ತಲವಾರು ಝಳಪಿಸಿದ ಯುವಕನನ್ನು ಸ್ಥಳೀಯ ಯುವಕರು ಸಮಯಪ್ರಜ್ಞೆಯಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರಂಭದಲ್ಲಿ ಪೆರಿಂಜೆಯವನು ಎಂದು ಹೇಳಿದ್ದ ಆತ, ಬಳಿಕ ಕೋಟೆಬಾಗಿಲಿನ ಸಂದೇಶ್ ಎಂಬಾತ ತಲವಾರು ನೀಡಿದ್ದಾನೆ ಎಂದು ಹೇಳಿರುವುದಾಗಿ ತಿಳಿದುಬಂದಿದೆ. ತಲವಾರು ಹಿಡಿದು ಅಂಗಡಿಗೆ ನುಗ್ಗಿ ಗಲಾಟೆ ನಡೆಸಿದ ದೃಶ್ಯ …

Read More »

ಚಿನ್ನದ ಅಂಗಡಿ ಕಳವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ದೂರು ನೀಡಿದ್ದ ಮಾಲೀಕನೇ ಕಳ್ಳ..!

ಬೆಳಗಾವಿ: ನಗರದ ರಾಮದೇವ ಗಲ್ಲಿಯ ‘ವಿ.ಪಿ. ವೇರ್ಣೇಕರ ಮತ್ತು ಸನ್ಸ್’ ಚಿನ್ನಾಭರಣ ಮಳಿಗೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ತನಿಖೆಯಲ್ಲಿ ಅಚ್ಚರಿಯ ತಿರುವು ಸಿಕ್ಕಿದೆ. ಕಳ್ಳತನವಾಗಿದೆ ಎಂದು ದೂರು ನೀಡಿದ್ದ ಅಂಗಡಿ ಮಾಲೀಕ ಕೃಷ್ಣಾನಂದ ವಿಶ್ವನಾಥ ವೇರ್ಣೇಕರನೇ ಪ್ರಕರಣದ ಮಾಸ್ಟರ್ ಮೈಂಡ್ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಜುಲೈ 17ರಂದು ಕಳ್ಳತನದ ದೂರು ದಾಖಲಿಸಿದ್ದ ಕೃಷ್ಣಾನಂದನ ಹೇಳಿಕೆಯಲ್ಲಿ ಅನುಮಾನ ಕಂಡ ಖಡೇಬಜಾರ್ ಪೊಲೀಸರು ಸ್ಥಳ ಪರಿಶೀಲನೆ ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು …

Read More »

ತಂದೆ ಕೊಂದ ಪಾಪಿ ಮಗನಿಗೆ ಜೀವಾವಧಿ ಶಿಕ್ಷೆ: ಕ್ಷುಲ್ಲಕ ಕಾರಣಕ್ಕೆ ಕಬ್ಬಿಣದ ರಾಡ್ʼನಿಂದ ಹೊಡೆದು ಹತ್ಯೆ!

ಬೆಂಗಳೂರು ರಾಜಾಜಿನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ತಂದೆಯನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿದ ಮಗ ರಘುಗೆ ಸಿಸಿಹೆಚ್-68 ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹5,000 ದಂಡ ವಿಧಿಸಿದೆ. ಕಳೆದ ಜನವರಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 103 ಅಡಿ ಪ್ರಕರಣ ದಾಖಲಾಗಿತ್ತು. ತನಿಖೆ ಪೂರ್ಣಗೊಳಿಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸಾಕ್ಷ್ಯಾಧಾರಗಳು ಹಾಗೂ ವಾದ-ಪ್ರತಿವಾದಗಳನ್ನು ಪರಿಗಣಿಸಿದ ನ್ಯಾಯಾಧೀಶ ಕೆ.ಎಸ್. ಭರತ್ಕುಮಾರ್ ಆರೋಪಿಯನ್ನು ದೋಷಿ …

Read More »

ಹಾಸನದಲ್ಲಿ ಬೆಚ್ಚಿ ಬೀಳಿಸೋ ಘಟನೆ : ತಂದೆಯನ್ನು ಕೊಂದು ಮಗ ನೇಣಿಗೆ ಶರಣು.!

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗೊರನಹಳ್ಳಿಯಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಭೀಕರ ದುರಂತವೊಂದು ಸಂಭವಿಸಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಗನೇ ತಂದೆಯನ್ನು ಭೀಕರವಾಗಿ ಹತ್ಯೆ ಮಾಡಿ, ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ನಿವೃತ್ತ ಶಿಕ್ಷಕರಾಗಿದ್ದ ಚನ್ನಗೌಡ (76) ಅವರೇ ಮಗನಿಂದ ಕೊಲೆಯಾದ ದುರ್ದೈವಿ. ಇವರನ್ನು ಕೊಂದ ಮಗ ಬಿಂದುಕುಮಾರ್ (42) ಎಂಬಾತ ತದನಂತರ ತಾನೂ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾನೆ. ಮನೆಯಲ್ಲಿ ಆಸ್ತಿ ಹಂಚಿಕೆ ವಿಚಾರವಾಗಿ ಕಳೆದ …

Read More »

ಪ್ರಿಯಕರನ ಜೊತೆ ಸೇರಿ ಡೆಡ್ಲಿ ಪ್ಲ್ಯಾನ್: ಪತಿಯ ಸಾವಿನ ಹಿಂದೆ ಬಯಲಾಯ್ತು ಶಾಕಿಂಗ್ ಸತ್ಯ

ಉತ್ತರ ಪ್ರದೇಶದ ಮೀರತ್‌ನಲ್ಲಿ ಹಾವಿನ ಕಡಿತದಿಂದ ಮೃತಪಟ್ಟಿದ್ದಾನೆ ಎಂದು ಭಾವಿಸಲಾಗಿದ್ದ ವ್ಯಕ್ತಿಯ ಸಾವಿನ ಪ್ರಕರಣವು ಪೊಲೀಸರ ತನಿಖೆಯಲ್ಲಿ ಕೊಲೆ ಎಂಬುದು ಬಹಿರಂಗವಾಗಿದೆ. ಪತ್ನಿ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹಾವಿನಿಂದ ಕಚ್ಚಿಸಿ ಹತ್ಯೆ ಮಾಡಿಸಿರುವ ಆರೋಪ ಕೇಳಿಬಂದಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮಹಿಳೆಗೆ ಶಾಲಾ ವಾಹನ ಚಾಲಕನೊಂದಿಗೆ ಅಕ್ರಮ ಸಂಬಂಧವಿದ್ದು, ಪತಿ ಅಡ್ಡಿಯಾಗಿದ್ದರಿಂದ ಕೊಲೆ ಸಂಚು ರೂಪಿಸಲಾಗಿತ್ತು. ಈ ಹಿಂದೆ ಎರಡು ಬಾರಿ ಯತ್ನಿಸಿ ವಿಫಲವಾದ ಆರೋಪಿಗಳು, ಮೂರನೇ …

Read More »

ಅಣ್ಣಿಗೇರಿಯಲ್ಲಿ ಗೀಸರ್ ಸಿಲಿಂಡರ್ ಸ್ಫೋಟ: ಮೂವರಿಗೆ ಗಾಯ

ಹುಬ್ಬಳ್ಳಿ ಸಮೀಪದ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಉದಯನಗರದಲ್ಲಿ ಗೀಸರ್ ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಮೂವರು ಗಾಯಗೊಂಡಿದ್ದಾರೆ. ಬೆಳಗಿನ ಜಾವ ನಡೆದ ಸ್ಫೋಟದಿಂದ ಮನೆಯಲ್ಲಿದ್ದ ಸಾಯಿರಾ ಬಾನು (54), ಅಬ್ಬಾಸ್ ಅಲಿ (29) ಹಾಗೂ ಹಸನ್ ಸಾಬ್ (26) ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೊದಲು ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಘಟನೆ ವೇಳೆ ಮನೆಯ ಮಾಲೀಕ ಅಲ್ಲಾ ಬಕ್ಷ್ ನಮಾಝ್‌ಗೆ …

Read More »