BigTv News
July 18, 2026
Breaking News
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಲಕ್ಕೂರು ಗ್ರಾಮದಲ್ಲಿ ನೈತಿಕ ಪೊಲೀಸ್‌ಗಿರಿ ಪ್ರಕರಣ ಬೆಳಕಿಗೆ ಬಂದಿದೆ. ಮುಸ್ಲಿಂ ಯುವತಿ ಕೌಸರ್ ಬಾನು ಜೊತೆ ನಡೆದುಕೊಂಡು ಹೋಗುತ್ತಿದ್ದ ಯಶವಂತ್ ಎಂಬ ಹಿಂದೂ ಯುವಕನ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತಹರೀಕ್ ಪಾಷಾ, ಸೋಹೇಲ್ ಪಾಷಾ ಹಾಗೂ ಸಯ್ಯದ್ ಕರೀಂ ಎಂಬವರು ಯುವಕನನ್ನು ತಡೆದು ನಿಂದಿಸಿ ಹಲ್ಲೆ ನಡೆಸಿದ್ದು, ಅದರ ವಿಡಿಯೋವನ್ನು ಚಿತ್ರೀಕರಿಸಿ ವಾಟ್ಸಾಪ್ ಗುಂಪುಗಳಲ್ಲಿ ಹರಿಬಿಟ್ಟಿದ್ದಾರೆ ಎನ್ನಲಾಗಿದೆ. …
Read More »
BigTv News
July 18, 2026
Breaking News
ಮೈಸೂರಿನ ಹೊರವಲಯದಲ್ಲಿ ಗುತ್ತಿಗೆದಾರ ರಾಮು ಅವರನ್ನು ನಾಲ್ವರ ತಂಡ ಅಪಹರಿಸಿ, ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿ ರಾತ್ರಿಯಿಡೀ ಕಾರಿನಲ್ಲಿ ಸುತ್ತಾಡಿಸಿ 16 ಲಕ್ಷ ರೂ. ನಗದು ಹಾಗೂ ಸುಮಾರು 3.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು “ನಿನ್ನನ್ನು ಕೊಲ್ಲಲು 9 ಲಕ್ಷಕ್ಕೆ ಸುಫಾರಿ ನೀಡಲಾಗಿದೆ. ಬದುಕಬೇಕಾದರೆ 40 ಲಕ್ಷ ಕೊಡು” ಎಂದು ಬೆದರಿಕೆ ಹಾಕಿದ್ದಾರೆ. ಬಳಿಕ ರಾಮು ಅವರಿಂದ ಹೆಂಡತಿಗೆ ಕರೆ …
Read More »
BigTv News
July 18, 2026
Breaking News
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಿಕ್ಕಬುದನೂರ ಗ್ರಾಮದ ಸಮೀಪದ ಲಕ್ಷ್ಮೀದೇವರ ಗುಡಿಯಲ್ಲಿ ಮೊಬೈಲ್ ವಾಪಸ್ ನೀಡುವ ವಿಚಾರಕ್ಕೆ ಸ್ನೇಹಿತರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಪಕೀರಪ್ಪ ಮಲ್ಲಪ್ಪ ಪಿಡ್ಡೆನ್ನವರ (40) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರೋಪಿ ಮಲ್ಲಿಕಾರ್ಜುನ (25) ತನ್ನ ಮೊಬೈಲ್ ವಾಪಸ್ ಕೇಳಿದಾಗ, ಪಕೀರಪ್ಪ “ರಾತ್ರಿ ಕೊಡುತ್ತೇನೆ” ಎಂದಿದ್ದರಿಂದ ಕೋಪಗೊಂಡು ಗುಡಿಯಲ್ಲಿದ್ದ ಭಾರವಾದ ಕಲ್ಲನ್ನು ತಲೆಯ ಮೇಲೆ ಎಸೆದಿದ್ದಾನೆ. ತೀವ್ರ ಗಾಯಗೊಂಡ ಪಕೀರಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾಹಿತಿ ತಿಳಿದ …
Read More »
BigTv News
July 18, 2026
Breaking News
ಕೊಪ್ಪಳ : ನಗರದ ಶ್ರೀಶೈಲ ನಗರದ 3ನೇ ವಾರ್ಡ್‌ನ ರಸ್ತೆ ಬದಿಯಲ್ಲಿ ನವಜಾತ ಗಂಡು ಮಗುವನ್ನು ಯಾರೋ ಬಿಟ್ಟು ಹೋಗಿರುವ ಆಘಾತಕಾರಿ ಘಟನೆ ಶನಿವಾರ ನಡೆದಿದೆ.ರಸ್ತೆ ಬದಿಯಲ್ಲಿ ಮಗು ಅಳುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಮಗುವನ್ನು ರಕ್ಷಿಸಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದ ಮೇಲೆ ವೈದ್ಯರು ನಿಗಾ ವಹಿಸಿದ್ದಾರೆ. ಈ ಕುರಿತು ವಾರ್ತಾಭಾರತಿ ಜೊತೆ ಮಾತನಾಡಿದ ಕೊಪ್ಪಳ ಕಿಮ್ಸ್ ಆಡಳಿತ ಮಂಡಳಿ ಸದಸ್ಯ …
Read More »
BigTv News
July 18, 2026
Breaking News
ಬೆಂಗಳೂರು ಬಾಣಸವಾಡಿಯ ಇಂದಿರಾ ಸ್ಟ್ರೀಟ್‌ನಲ್ಲಿ ಎರಡು ವರ್ಷದ ಕಾರ್ಲೆಟ್ ಡೈಸಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಉಸಿರಾಟದ ಸಮಸ್ಯೆಯಿಂದ ಮಗು ಸಾವನ್ನಪ್ಪಿದೆ ಎಂದು ಮಗುವಿನೊಂದಿಗೆ ವಾಸವಾಗಿದ್ದ ಜೈಸನ್ ಆಂಥೋನಿ ಹಾಗೂ ರೋಸ್ಲಿನ್ ಲಿವಿನ್ ತಿಳಿಸಿದ್ದಾರೆ. ಆದರೆ, ಮಗುವಿನ ಸಾವಿನ ಬಗ್ಗೆ ದಂಪತಿಯ ಸ್ನೇಹಿತೆಯೇ ಪೊಲೀಸರಿಗೆ ದೂರು ನೀಡಿದ್ದು, ಮಗುವಿಗೆ ತಾಯಿ ಹಲ್ಲೆ ಮಾಡುತ್ತಿದ್ದುದನ್ನು ತಾನು ನೋಡಿದ್ದಾಗಿ ಹಾಗೂ ಮಗುವಿನ ದೇಹದ ಮೇಲೆ ಗಾಯದ ಗುರುತುಗಳಿದ್ದವು ಎಂದು ಆರೋಪಿಸಿದ್ದಾರೆ. ಇದರಿಂದ …
Read More »
BigTv News
July 18, 2026
Breaking News
ಧಾರವಾಡದ ನರೇಂದ್ರ ಬೈಪಾಸ್ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ಅಂದಾಜು 4–5 ಟನ್ ಗೋಮಾಂಸವನ್ನು ಪೊಲೀಸರು ಜಪ್ತಿ ಮಾಡಿ, ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳದ ಕಾರ್ಯಕರ್ತರು ನೀಡಿದ ಮಾಹಿತಿಯ ಮೇರೆಗೆ ವಾಹನವನ್ನು ತಡೆದು ಪೊಲೀಸರಿಗೆ ಒಪ್ಪಿಸಲಾಗಿದೆ. ಪ್ರಾಥಮಿಕ ಮಾಹಿತಿಯಂತೆ, ಬೆಳಗಾವಿ ಜಿಲ್ಲೆಯ ಹಥರ್ಗಿ ಪ್ರದೇಶದಲ್ಲಿ ಸುಮಾರು 70 ಗೋಕರುಗಳನ್ನು ಹತ್ಯೆ ಮಾಡಿ ಮಾಂಸವನ್ನು ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಟ್ರಕ್ ಚಾಲಕ ಅಲೀಂ ಜಮಾದಾರ್ ಹಾಗೂ …
Read More »
BigTv News
July 18, 2026
Breaking News
ಬಂಟ್ವಾಳದ ಬಿ.ಸಿ.ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಯುವತಿ ಲಾವಣ್ಯಾ (21) ಅವರನ್ನು ತಲವಾರಿನಿಂದ ಹತ್ಯೆ ಮಾಡಿದ ಪ್ರಕರಣದಲ್ಲಿ ಆರೋಪಿ ಚೇತನ್ (22)ನನ್ನು ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ. ಬಂಧನದ ವೇಳೆ ಆತ ವಿಷ ಸೇವಿಸಿದ್ದರಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಸ್‌ಪಿ ಅರುಣ್ ಕುಮಾರ್ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ದೂರದ ಸಂಬಂಧಿಯಾಗಿದ್ದ ಚೇತನ್ ಲಾವಣ್ಯಾಳನ್ನು ಏಕಪಕ್ಷೀಯವಾಗಿ ಪ್ರೀತಿಸುತ್ತಿದ್ದು, ಇದೇ ಕಾರಣಕ್ಕೆ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಲಾವಣ್ಯಾ ಕಳೆದ …
Read More »
BigTv News
July 18, 2026
Breaking News
ಮಂಗಳೂರು: ಬಂಟ್ವಾಳದಲ್ಲಿ ಗುರುವಾರ ನಡೆದ ಯುವತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹಾಗೂ ಪ್ರಚೋದನಾತ್ಮಕ ಪೋಸ್ಟ್ ಹಾಕಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಡಾ. ಅರುಣ್ ಕೆ ತಿಳಿಸಿದ್ದಾರೆ. ಯುವತಿಯನ್ನು ಹತ್ಯೆ ಮಾಡಿದ ಆರೋಪಿ ಭಾವಚಿತ್ರಕ್ಕೆ ಕೇಸರಿ ಶಾಲು, ಕುಂಕುಮ ಅಳವಡಿಸಿ ಬಜರಂಗದ ಕಾರ್ಯಕರ್ತರು ಎಂದು ಎಡಿಟ್ ಮಾಡಿ, ಸುಳ್ಳು ಹಾಗೂ ಸಮಾಜದ ಶಾಂತಿ ಕದಡುವ ಬರಹ ಹಾಕಿರುವ ಆರೋಪದ ಮೇಲೆ …
Read More »
BigTv News
July 18, 2026
Breaking News
ಬೆಂಗಳೂರು ನಗರದ ಕೋಡಿಹಳ್ಳಿಯಲ್ಲಿ ಪ್ರೀತಿಸಲು ನಿರಾಕರಿಸಿದ್ದ 24 ವರ್ಷದ ಕಾನೂನು ವಿದ್ಯಾರ್ಥಿನಿ ಅಮೃತಾಳನ್ನು ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಧನುಷ್ ಹಾಗೂ ಆತನ ಸಹೋದರ ಸೂರ್ಯರನ್ನು ಜೀವನ್ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ವಿವಾಹಿತನಾಗಿರುವ ಧನುಷ್ ತನ್ನ ವೈವಾಹಿಕ ಜೀವನದ ವಿಚಾರವನ್ನು ಮುಚ್ಚಿಟ್ಟಿದ್ದ. ಸತ್ಯ ತಿಳಿದ ಬಳಿಕ ಅಮೃತಾ ಆತನಿಂದ ದೂರವಾಗಿದ್ದು, ಇದರಿಂದ ಉಂಟಾದ ದ್ವೇಷವೇ ಹತ್ಯೆಗೆ ಕಾರಣವಾಗಿದೆ. ಜುಲೈ 13ರಂದು ನಡೆದ ದಾಳಿಯಲ್ಲಿ …
Read More »
BigTv News
July 17, 2026
Breaking News
ಮುಂಬೈ–ಮಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರನ್ನು ಚಾಕು ತೋರಿಸಿ ಬೆದರಿಸಿ ದರೋಡೆ ಮಾಡಲು ಯತ್ನಿಸಿದ ಯುವಕನನ್ನು ಎಚ್ಚೆತ್ತ ಪ್ರಯಾಣಿಕರು ಹಿಡಿದು ಗೋವಾ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ರೈಲು ಟಿಕೆಟ್ ಕಲೆಕ್ಟರ್ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯುವಕನನ್ನು ಪ್ರಶ್ನಿಸಿದಾಗ ಆತ ಓಡಲು ಯತ್ನಿಸಿದ್ದಾನೆ. ಕುಂದಾಪುರದ ನಾಗರಾಜ್ ಪೂಜಾರಿ ಸೇರಿದಂತೆ ಹಲವು ಪ್ರಯಾಣಿಕರು ಬೆನ್ನಟ್ಟಿ ಹಿಡಿದ ವೇಳೆ ಆತ ಚಾಕು ತೋರಿಸಿ ಬೆದರಿಸಿದ್ದರೂ, ಪ್ರಯಾಣಿಕರು ಧೈರ್ಯದಿಂದ ಚಾಕುವನ್ನು ಕಸಿದುಕೊಂಡಿದ್ದಾರೆ. ಬಂಧಿತ ಯುವಕ ಮುಂಬೈನ ಮುಂಬ್ರಾ …
Read More »