Breaking News

Breaking News

ಬಟ್ಟೆ ಎಳೆದಾಡಿ “ಬೇಬಿ ಡಾರ್ಲಿಂಗ್ ನನ್ನ ಇಷ್ಟಪಡ್ತೀಯಾ?, ವಿದ್ಯಾರ್ಥಿನಿಯರಿಗೆ ದಾವಣಗೆರೆ ಉಪನ್ಯಾಸಕನ ಕಾಟ!

ದಾವಣಗೆರೆ: ಜಿಲ್ಲೆಯ ಮಲೆಬೆನ್ನೂರಿನಲ್ಲಿ ಕಾಲೇಜಿನ ಉಪನ್ಯಾಸಕನೊಬ್ಬ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಆರೋಪಿ ಮಲ್ಲಿಕಾರ್ಜುನ ವಿರುದ್ಧ POCSO ಕಾಯ್ದೆಯಡಿ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ದೂರಿನ ಪ್ರಕಾರ, ಉಪನ್ಯಾಸಕ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿ, ಅನುಚಿತವಾಗಿ ಸ್ಪರ್ಶಿಸುವುದು ಹಾಗೂ ಲೈಂಗಿಕ ಉದ್ದೇಶದ ಮಾತುಗಳ ಮೂಲಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಇತರ ವಿದ್ಯಾರ್ಥಿನಿಯರ ಮೇಲೆಯೂ ಇದೇ ರೀತಿಯ ವರ್ತನೆ ನಡೆಸಿದ್ದಾನೆ …

Read More »

ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ : ನಾಯಿ ಬೆಲ್ಟ್ ನಿಂದ ಪತ್ನಿಯ ಕುತ್ತಿಗೆ ಬಿಗಿದು ಕೊಂದ ಬಳಿಕ ಪತಿ ಆತ್ಮಹತ್ಯೆ!

ಬೆಂಗಳೂರಿನಲ್ಲಿ ಬೆಚ್ಚಿ ಬಿಳಿಸುವಂತಹ ಘಟನೆ ನಡೆದಿದ್ದು ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ ಶರಣಾಗಿದ್ದಾನೆ 4 ತಿಂಗಳ ಗರ್ಭಿಣಿ ಸ್ವಪ್ನಾಳನ್ನು ಕೊಲೆಗೈದು ಪತಿ ಮನೋಜ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ನಾಯಿ ಬೆಲ್ಟನಿಂದ ಕುತ್ತಿಗೆ ಬಿಗಿದು ಸ್ವಪ್ನಳನ್ನು ಮನೋಜ್ ಕೊಲೆ ಮಾಡಿದ್ದಾನೆ. ಬಳಿಕ ಫ್ಯಾನಿಗೆ ನೇಣು ಹಾಕಿಕೊಂಡು ಪತಿ ಮನೋಕ್ ಸಹ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳಕ್ಕೆ ದಕ್ಷಿಣ ವಿಭಾಗದ ಡಿಸಿಪಿ ವಂಶಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ …

Read More »

ಧಾರವಾಡದಲ್ಲಿ ಭೀಕರ ಅಗ್ನಿ ದುರಂತ – ಆಕಸ್ಮಿಕ ಬೆಂಕಿಗೆ ಕೊಟ್ಟಿಗೆ ಭಸ್ಮ, 12 ಜಾನುವಾರುಗಳು ಸಜೀವ ದಹನ!

ಧಾರವಾಡ ಜಿಲ್ಲೆಯ ಮುಮ್ಮಿಗಟ್ಟಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅವಘಡದಲ್ಲಿ ಎರಡು ಕೊಟ್ಟಿಗೆಗಳು ಹೊತ್ತಿ ಉರಿದು 12 ಜಾನುವಾರುಗಳು ಸಜೀವ ದಹನಗೊಂಡಿವೆ. ಅವಘಡದಲ್ಲಿ ರೈತರಾದ ಸಾಗರ ಅಸುಂಡಿ ಹಾಗೂ ಧರಣೇಂದ್ರ ಅಸುಂಡಿಗೆ ಸೇರಿದ ಆಕಳು, ಎಮ್ಮೆ ಮತ್ತು ಕರುಗಳು ಮೃತಪಟ್ಟಿದ್ದು, ನಾಲ್ಕು ಲೋಡ್‌ ಹುಲ್ಲು ಹಾಗೂ ಎರಡು ಕೊಟ್ಟಿಗೆಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಇದರಿಂದ ರೈತರಿಗೆ ಭಾರಿ ನಷ್ಟ ಉಂಟಾಗಿದೆ. ಸುದ್ದಿ ತಿಳಿದು ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ …

Read More »

ಮಂಗಳೂರು: ನಕಲಿ ನೋಟು ಮುದ್ರಣ ಜಾಲ ಪತ್ತೆ, 7 ಮಂದಿ ಬಂಧನ

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ಅಂಡಿಂಜೆ ಗ್ರಾಮದಲ್ಲಿ ನಕಲಿ ₹500 ನೋಟುಗಳನ್ನು ತಯಾರಿಸುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿ ಏಳು ಮಂದಿಯನ್ನು ಬಂಧಿಸಿದ್ದಾರೆ. ಬಾಡಿಗೆ ಮನೆಯಲ್ಲಿ ನೋಟು ಮುದ್ರಿಸುತ್ತಿದ್ದ ಆರೋಪಿಗಳಿಂದ ನಕಲಿ ನೋಟುಗಳು, ಪ್ರಿಂಟರ್, ಕಂಪ್ಯೂಟರ್, ಕಟಿಂಗ್ ಬ್ಲೇಡ್, ಗಾಂಧೀಜಿ ಚಿತ್ರದ ಸೀಲ್ ಹಾಗೂ ಆರ್‌ಬಿಐ ಸೆಕ್ಯುರಿಟಿ ಥ್ರೆಡ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಿಂದ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದು, ಈ ಜಾಲದ ಹಿಂದೆ ಇನ್ನೂ …

Read More »

ಈ ಒಂದು ಕಾರಣಕ್ಕೆ ಡಾಕ್ಟರ್ ಗಂಡನ ಜೀವ ತೆಗೆದಳಾ ಹೆಂಡ್ತಿ? ಕೊಂದಿದ್ದು ನಾನೇ ಎಂದ ಪ್ರಿಯಾಂಕಾ ಕೊಟ್ಟ ಕಾರಣ ಏನು?

ಧಾರವಾಡದಲ್ಲಿ ವೈದ್ಯ ಡಾ. ಕಿರಣ್ ಹೊನ್ನಣ್ಣನವರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಡಾ. ಪ್ರಿಯಾಂಕಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ತಾನೇ ಪತಿಯನ್ನು ಚಾಕುವಿನಿಂದ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಸುಮಾರು 9 ವರ್ಷಗಳ ಹಿಂದೆ ಮದುವೆಯಾಗಿದ್ದರು. ಪ್ರಾಥಮಿಕ ತನಿಖೆಯ ಪ್ರಕಾರ, ಪತಿ ಬೇರೊಬ್ಬರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಅನುಮಾನದಿಂದ ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ. ಆಸ್ಪತ್ರೆಯಿಂದ ಮನೆಗೆ …

Read More »

ಹಾಡಹಗಲೇ ಖಾಸಗಿ ಬಸ್ ಕಂಡಕ್ಟರ್‌ಗಳ ಮಾರಾಮಾರಿ- ಪ್ರಯಾಣಿಕರ ಎದುರೇ ಕಬ್ಬಿಣದ ರಾಡ್‌ ಹಿಡಿದು ಹೊಡೆದಾಟ!

ಮಂಗಳೂರು ಸಮೀಪದ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳ ಟೈಮಿಂಗ್ ವಿಚಾರವಾಗಿ ಇಬ್ಬರು ಕಂಡಕ್ಟರ್‌ಗಳ ನಡುವೆ ಭೀಕರ ಮಾರಾಮಾರಿ ನಡೆದಿದೆ. ಮಂಗಳೂರು–ಉಪ್ಪಿನಂಗಡಿ ಮಾರ್ಗದಲ್ಲಿ ಸಂಚರಿಸುವ ‘ಅರಫಾ’ ಬಸ್‌ನ ಕಂಡಕ್ಟರ್ ನೌಶಾದ್ ಹಾಗೂ ‘ಲಕ್ಷ್ಮೀ’ ಬಸ್‌ನ ಕಂಡಕ್ಟರ್ ಖಲಂದರ್ (ಶಾಹೀದ್) ನಡುವೆ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದೆ. ಜಗಳ ತಾರಕಕ್ಕೇರುತ್ತಿದ್ದಂತೆ, ನೌಶಾದ್ ಕಬ್ಬಿಣದ ರಾಡ್ ಹಿಡಿದು ಬಸ್‌ನೊಳಗೆ ನುಗ್ಗಿ ಖಲಂದರ್ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಖಲಂದರ್ ಕೂಡ …

Read More »

ದೇವರ ದರ್ಶನಕ್ಕೆಂದು ಕರೆದೊಯ್ದು, ಪರ್ಸ್ ಬೀಳಿಸಿ ಗಂಡನನ್ನು ಹಂತಕರಿಗೆ ಒಪ್ಪಿಸಿದ ಪತ್ನಿ, ಮಗುವಿನೆದುರೇ ಭೀಕರ ಹತ್ಯೆ

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗುಡಿಪಲ್ಲಿ ಮಂಡಲದಲ್ಲಿ ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಹತ್ಯೆ ಮಾಡಿಸಿದ ಆರೋಪ ಕೇಳಿಬಂದಿದೆ. ತಮಿಳುನಾಡಿನ ಸುಳಗಿರಿ ನಿವಾಸಿ ರಮೇಶ್ ಕೊಲೆಯಾದವರಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಪತ್ನಿ ಹಾಸಿನಿ, ಆಕೆಯ ಪ್ರಿಯಕರ ಯುಗಂಧರ್ ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳುವ ವೇಳೆ ಹಾಸಿನಿ ಉದ್ದೇಶಪೂರ್ವಕವಾಗಿ ಪರ್ಸ್ ಕೆಳಗೆ ಬೀಳಿಸಿದ್ದಳು. ಅದನ್ನು ಎತ್ತಲು ರಮೇಶ್ …

Read More »

ಅಣ್ಣನ ಲವ್ ರಿಜೆಕ್ಟ್​ ಮಾಡಿದ್ದಕ್ಕೆ ಯುವತಿಯನ್ನೇ ಕೊಂದ ತಮ್ಮ; ನಡುರಸ್ತೆಯಲ್ಲೇ ಸಹೋದರರ ಅಟ್ಯಾಕ್

ಬೆಂಗಳೂರು ಹೆಚ್‌ಎಎಲ್‌ ರಸ್ತೆಯ ಕೋಡಿಹಳ್ಳಿಯಲ್ಲಿ ನಡೆದ ಚಾಕು ಇರಿತ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಲಾ ವಿದ್ಯಾರ್ಥಿನಿ ಅಮೃತಾ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಜುಲೈ 13ರಂದು ನಡೆದ ದಾಳಿಯ ಬಳಿಕ ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಜುಲೈ 15ರಂದು ಕೊನೆಯುಸಿರೆಳೆದರು. ಪ್ರಾಥಮಿಕ ಮಾಹಿತಿಯ ಪ್ರಕಾರ, ಅಮೃತಾ ಮತ್ತು ಧನುಷ್ ನಡುವೆ ಪ್ರೀತಿಯ ಸಂಬಂಧವಿತ್ತು. ಆದರೆ ಧನುಷ್ ಈಗಾಗಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದು, ಒಂದು ಮಗು ಇರುವ ವಿಚಾರವನ್ನು …

Read More »

ಎಂಟನೇ ತರಗತಿ ಬಾಲಕಿ ಗರ್ಭಿಣಿ, ಆರೋಪಿಯ ಬಂಧನ

ಚಿಕ್ಕಬಳ್ಳಾಪುರ: ೧೩ ವರ್ಷದ ಅಪ್ರಾಪ್ತ ಬಾಲಕಿಯನ್ನು ಗರ್ಭಿಣಿಯಾಗಿಸಿದ ವ್ಯಕ್ತಿಯನ್ನು ಬಂಧಿಸಿ, ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಬಂಧಿತ ಶಿಡ್ಲಘಟ್ಟ ತಾಲೂಕಿನ ಚರಣ್‌ (೨೫) ಎಂಬುದಾಗಿ ಗುರುತಿಸಲಾಗಿದೆ. ೮ ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯು ಹೊಟ್ಟೆನೋವಿನಿಂದ ಬಳಲುತ್ತಿದ್ದಳು. ಈ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಪಾಲಕರು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇದೇ ವೇಳೆ ತಪಾಸಣೆ ಕೈಗೊಂಡ ವೈದ್ಯರಿಗೆ ಬಾಲಕಿ ಗರ್ಭಿಣಿಯಾಗಿರುವುದು ಗೊತ್ತಾಗಿದೆ. ತಕ್ಷಣ ಶಿಡ್ಲಘಟ್ಟ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದ್ದಾರೆ. ಇದರಿಂದ …

Read More »

ಪ್ರೊಬೇಷನರಿ ಪಿಎಸ್‌ಐ ವಿರುದ್ಧ ವರದಕ್ಷಿಣೆ ಕಿರುಕುಳ, ಕೊಲೆ ಯತ್ನ ಪ್ರಕರಣ: ಆರೋಪಿ ಬಂಧನ

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರೊಬೇಷನರಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ದೊರೆನಾಯ್ಕ್ ಪಿ.ಆರ್. ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಯತ್ನದ ಆರೋಪದಡಿ ಪ್ರಕರಣ ದಾಖಲಾಗಿದೆ. ಮೊದಲ ಮದುವೆಯ ವಿಚಾರವನ್ನು ಮುಚ್ಚಿಟ್ಟು ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದ ದಾವಣಗೆರೆಯ ಯುವತಿ ಚಂದು ಅವರನ್ನು ವಿವಾಹವಾಗಿದ್ದ ಆರೋಪವೂ ಕೇಳಿಬಂದಿದೆ. ಮದುವೆಯ ಬಳಿಕ ಅರಳಿಹಳ್ಳಿಯಲ್ಲಿ ವಾಸವಿದ್ದ ದಂಪತಿಗಳ ನಡುವೆ ವರದಕ್ಷಿಣೆ ವಿಚಾರವಾಗಿ ಜಗಳಗಳು ನಡೆದಿದ್ದು, 10 ಲಕ್ಷ ರೂ. ತರುವಂತೆ ಪತ್ನಿಗೆ …

Read More »