Breaking News

Breaking News

ವೀರ ಸಾವರ್ಕರ್‌ ಅನ್ನು ಟಿಪ್ಪು ಸುಲ್ತಾನ್‌ ಗೆ ಹೋಲಿಸುವುದು ಮಾಡುವುದು ಸರಿಯಲ್ಲ : ಯತ್ನಾಳ್

ಬೆಳಗಾವಿ: ವೀರ ಸಾವರ್ಕರ್‌ ಅನ್ನು ಟಿಪ್ಪು ಸುಲ್ತಾನ್‌ ಗೆ ಹೋಲಿಸುವುದು ಮಾಡುವುದು ಸರಿಯಲ್ಲ. ಸಾವರ್ಕರ್ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ನೀಡಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಾವರ್ಕರ್‌ ಭಾವಚಿತ್ರಕ್ಕೆ ಕಾಂಗ್ರೆಸ್ ಪಕ್ಷ ಮೃದು ಧೋರಣೆ ತೋರಿರುವ ಬಗ್ಗೆ ಪ್ರತಿಕ್ರಿಯಿಸಿ, ಈ ವಿಷಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುದ್ಧಿ ಕಲಿತಂತೆ ತೋರ್ತಿದೆ. ರಾಹುಲ್ ಗಾಂಧಿಯೂ ಸಹ ಬುದ್ಧಿ ಕಲಿಯುವಂತಾಗಲಿ ಎಂದು ಹೇಳಿದರು.ರಾಜಕೀಯ ದುರುದ್ದೇಶ ಇಲ್ಲ: ಸಿಬಿಐ, …

Read More »

ಸ್ಮಶಾನದ ಬಾವಿಯಲ್ಲಿ ನವಜಾತ ಹೆಣ್ಣು ಶಿಶುವಿನ ಶವ ಪತ್ತೆ

ವಿಜಯಪುರ: ವಿಜಯಪುರ ನಗರದ ದೇವಗಿರಿ ಸ್ಮಶಾನದ ಬಾವಿಯಲ್ಲಿ ನವಜಾತ ಹೆಣ್ಣು ಶಿಶುವಿನ ಶವ ಪತ್ತೆಯಾಗಿದೆ. ಸ್ಮಶಾನದ ಬಾವಿಯಲ್ಲಿನ ಮೋಟರ್ ಸ್ಟಾರ್ಟ್ ಮಾಡಲು ಹೋದಾಗ ಶಿಶುವಿನ ಶವ ಪತ್ತೆಯಾಗಿದ್ದು, ಪಾಪಿಗಳು ಆಗತಾನೆ ಜನಿಸಿದ ನವಜಾತ ಹೆಣ್ಣು ಶಿಶುವನ್ನು ಬಾವಿಯಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಹೆಣ್ಣು ಮಗುವಾಗಿದೆ ಎಂಬ ಕಾರಣಕ್ಕೆ ಬಾವಿಯಲ್ಲಿ ಬಿಸಾಕಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಯಾರು ಎಸೆದು ಹೋಗಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ಆದರ್ಶ ನಗರ ಪಿಎಸ್‌ಐ …

Read More »

ಟಿಪ್ಪರ್ ಪಲ್ಟಿಯಾಗಿ ಚಾಲಕ, ಕ್ಲೀನರ್ ಸ್ಥಳದಲ್ಲೇ ಸಾವು

ದಾವಣಗೆರೆ: ಜಲ್ಲಿಕಲ್ಲು ಟಿಪ್ಪರ್ ಪಲ್ಟಿಯಾಗಿ ಚಾಲಕ, ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ನಾಗರಸನಹಳ್ಳಿ ಬಳಿ ನಡೆದಿದೆ. ಹೊನ್ನಾಯಕನಹಳ್ಳಿಯ ನಿವಾಸಿ, ಚಾಲಕ ಶಿವರಾಜ್(25), ಹೆಬ್ಬಾಳದ ನಿವಾಸಿ, ಕ್ಲೀನರ್​​​ ತೇಜಸ್ ಕುಮಾರ್​(32) ಮೃತ ದುರ್ದೈವಿಗಳು. ಮೃತರು ಕಳೆದ ಎರಡು ವರ್ಷಗಳಿಂದ ಕ್ವಾರೆಗಳಿಂದ ಜಲ್ಲಿ ಕಲ್ಲು ಸಾಗಿಸುತ್ತಿದ್ದರು. ಹೀಗೆ ಇಂದು (ಡಿ.20) ಜಲ್ಲಿ ಕಲ್ಲು ಸಾಗಿಸುವಾಗ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ಪಾಲಕರ ಜಗಳಕ್ಕೆ ಬೇಸತ್ತು ಮಗ ಆತ್ಮಹತ್ಯೆಗೆ ಶರಣು

ಮೈಸೂರು: ಅಪ್ಪ ಅಮ್ಮನ ಜಗಳದಿಂದ ಬೇಸತ್ತು ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲ್ಲೂಕು ಹುಣಸನಾಳು ಗ್ರಾಮದಲ್ಲಿ ನಡೆದಿದೆ. ಮಹೇಂದ್ರ (20) ಮೃತ ದುರ್ದೈವಿ. ಮನೆಯಲ್ಲಿ ತಂದೆ ತಾಯಿಯ ನಡುವಿನ ಗಲಾಟೆ ಕಂಡು ಮಹೇಂದ್ರ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದನು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಜನವರಿ ತಿಂಗಳನಲ್ಲಿ‌ 1500 ಎಎಇ ನೇಮಕಾತಿ

ಬೆಳಗಾವಿ- ಇಂಧನ ಇಲಾಖೆಯಲ್ಲಿ ಕರೆಯಲಾಗಿದ್ದ 1500 ಸಹಾಯಕ ಕಾರ್ಯಪಾಲಕ ಅಭಿಯಂತರ(ಎಎಇ) ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆದೇಶವನ್ನು ಜನವರಿ ತಿಂಗಳ ಮೊದಲ ವಾರದಲ್ಲಿ ನೇಮಕಾತಿ ಆದೇಶ ನೀಡಲಾಗುವುದು ಎಂದು ಇಂಧನ ಸಚಿವ ವಿ.ಸುನೀಲ್‍ಕುಮಾರ್ ವಿಧಾನಸಭೆಗೆ ತಿಳಿಸಿದರು. ಶೂನ್ಯವೇಳೆಯಲ್ಲಿ ಶಾಸಕ ಎಸ್.ಸುರೇಶ್‍ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಇಇ ಹುದ್ದೆಗಳಿಗೆ ನೇರನೇಮಕಾತಿಯನ್ನು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಇ)ಕ್ಕೆ ನೀಡಲಾಗಿತ್ತು. ಕೆಲವು ಕಾರಣದಿಂದ ಪರೀಕ್ಷೆ ಫಲಿತಾಂಶ ತಡವಾಗಿದೆ ಎಂದು ಒಪ್ಪಿಕೊಂಡರು. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ …

Read More »

ನಟನ ಮೇಲೆ ಚಪ್ಪಲಿ ಎಸೆತ : ಮೌನ ಮುರಿದ ಕಿಚ್ಚ

ಬೆಂಗಳೂರು . ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ನಡೆದ ಘಟನೆ ಕುರಿತು ಸ್ಯಾಂಡಲ್ ವುಡ್ ಆಕ್ರೋಶ ವ್ಯಕ್ತಪಡಿಸುತ್ತಿದೆ. ಶಿವಣ್ಣ,ಜಗ್ಗೇಶ್ ಸುದೀಪ್ ನಂತಹ ನಟರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಒತ್ತಾಯಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಘಟನೆ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಕಿಚ್ಚ ಸುದೀಪ್ ಸಹ ಟ್ವೀಟ್ ಮಾಡುವ ಮುಖಾಂತರ ದರ್ಶನ್ ಪರ ನಿಂತಿದ್ದಾರೆ. ಕಿಚ್ಚ ಸುದೀಪ್ ಈ ರೀತಿ ಟ್ವೀಟ್ ಮಾಡಿದ್ದಾರೆ. ನಮ್ಮ ನೆಲ, ಭಾಷೆ ಮತ್ತು ಸಂಸ್ಕೃತಿ …

Read More »

ಭಾರತದಲ್ಲಿ ಇಳಿಮುಖ ಕಂಡ ಕರೋನಾ

ನವದೆಹಲಿ: ಚೀನಾ ಸೇರಿ ಪ್ರಪಂಚದ ವಿವಿಧ ಭಾಗಗಳಲ್ಲಿ ಕೋವಿಡ್‌ ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಿರುವ ವೇಳೆಯಲ್ಲಿ ಭಾರತದಲ್ಲಿ ಕೋವಿಡ್‌ ಪ್ರಕರಣಗಳ ಪ್ರಮಾಣ ತೀವ್ರವಾಗಿ ಇಳಿಮುಖವಾಗಿದೆ. ಕಳೆದ ವಾರ ಕೇವಲ 1103 ಪ್ರಕರಣ ದಾಖಲಾಗಿದ್ದು, 12 ಮಂದಿ ಸಾವನ್ನಪ್ಪಿದ್ದಾರೆ.ಈ ಮೂಲಕ ಸೋಂಕು, ಸಾವು 32 ತಿಂಗಳ (ಸುಮಾರು 2.5 ವರ್ಷ) ಕನಿಷ್ಠ ಎನ್ನಿಸಿಕೊಂಡಿವೆ. ನವೆಂಬರ್‌ ಮೊದಲ ವಾರದಿಂದಲೂ ಇಳಿಕೆ ಹಾದಿಯಲ್ಲಿರುವ ಕೋವಿಡ್‌ ಕೇಸುಗಳು ಡಿ.12-18ನೇ ತಾರೀಖಿನ ವಾರದಲ್ಲಿ ಕನಿಷ್ಠಕ್ಕಿಳಿದಿವೆ. ಈ ಅವಧಿಯಲ್ಲಿ 1103 …

Read More »

ಚಿತ್ರದುರ್ಗ ಶ್ರೀ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವುದನ್ನು ಖಂಡಿಸುತ್ತೇನೆ : ಬಸವಪ್ರಭು ಸ್ವಾಮಿ

ಚಿತ್ರದುರ್ಗ : ರಾಜ್ಯ ಸರ್ಕಾರವು ಬೆಳಗಾವಿಯ ಸುವರ್ಣಸೌಧ ಅಧಿವೇಶನದಲ್ಲಿ ಬಸವಣ್ಣನವರ ಭಾವಚಿತ್ರವನ್ನು ಅನಾವರಣಗೊಳಿಸಿರುವ ಮುಖ್ಯಮಂತ್ರಿಗಳ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.ಆದರೆ ಚಿತ್ರದುರ್ಗ ಶ್ರೀ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವುದನ್ನು ಖಂಡಿಸುತ್ತೇನೆಂದು ಶ್ರೀ ಬಸವಪ್ರಭು ಸ್ವಾಮಿಗಳು ಹೇಳಿದರು. ನಗರದ ಶ್ರೀ ಮುರುಘಾಮಠದ ಶಿರಸಂಗಿ ಮಹಾಲಿಂಗಸ್ವಾಮಿ ಸಭಾಂಗಣದಲ್ಲಿ ನಡೆದ ಮಠಾಧೀಶರ ಸಮಾಗಮ ಸಭೆಯಲ್ಲಿ ನೇತೃತ್ವ ವಹಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸರ್ಕಾರ ಮಠಗಳನ್ನು ನಿಯಂತ್ರಿಸಲು ಆಡಳಿತಾಧಿಕಾರಿ ನೇಮಕ ಮಾಡಿದ್ದು ಇದು ಮಠಗಳ ಸ್ವಾತಂತ್ರ್ಯವನ್ನು …

Read More »


ಕಾಂಗ್ರೆಸ್ ಬಸ್ ಯಾತ್ರೆಗೆ ಬಿಜೆಪಿ ಟಕ್ಕರ್

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಈಗಿನಿಂದಲೇ ಕಾವೇರುತ್ತಾ ಇದೆ. ಈಗಾಗಲೇ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಪ್ರತಿಪಕ್ಷ ಕಾಂಗ್ರೆಸ್‌ ಬಸ್‌ ಯಾತ್ರೆ ಮಾಡೋಕೆ ಸಜ್ಜಾಗಿದೆ. ಇದೀಗ ಅದಕ್ಕೆ ರಾಜ್ಯ ಬಿಜೆಪಿ ಘಟಕ ಕೂಡ ಟಕ್ಕರ್‌ ಕೊಡೋಕೆ ಮುಂದಾಗಿದೆ. ಜನವರಿ 11ರಂದು ಕಾಂಗ್ರೆಸ್‌ನ ಬಸ್‌ ಯಾತ್ರೆಗೆ ಮೂಹರ್ತ ಫಿಕ್ಸ್‌ ಆಗಿದ್ದು, ಜನವರಿ 12ಕ್ಕೆ ಪ್ರಧಾನಿ ಮೋದಿ ರಾಜ್ಯಕ್ಕೆ ಬರೋದು ಬಹುತೇಕ ಖಚಿತವಾಗಿದೆ. ಕೇಂದ್ರ ಯುವ ಸಬಲೀಕರಣ ಇಲಾಖೆಯಿಂದ ಆಯೋಜಿಸಿರೊ ರಾಷ್ಟ್ರೀಯ ಯುವಜನ ಮೇಳ ಉದ್ಘಾಟಿಸೋಕೆ ಮೋದಿ …

Read More »

ಉದ್ದೇಶ ಪೂರ್ವಕವಾಗಿ ದರ್ಗಾ ತೆರವು ನಡೀತಿದೆ : ಮುಸ್ಲಿಂ ಮುಖಂಡ ಅಲ್ತಾಫ್ ಹಳ್ಳೂರ

ಹುಬ್ಬಳ್ಳಿ : ಉದ್ದೇಶ ಪೂರ್ವಕವಾಗಿ ತೆರವು ನಡೀತಿದೆ. ಟೆಕ್ನಾಲಜಿ ಬಳಸಿ ದರ್ಗಾ ಉಳಿಸಲು ಮನವಿ ಮಾಡಿದ್ವಿ. ಮಸ್ಜಿದ್ ತೆರವುಗೊಳಿಸಬಹುದು, ಆದರೆ ದರ್ಗಾದಲ್ಲಿ ಗೋರಿ ಇರುತ್ತೆ. ಅದನ್ನ ಸ್ಥಳಾಂತರ, ತೆರವು ಮಾಡುವುದು ಕಷ್ಟ. ಎಂದು ಕಾಂಗ್ರೆಸ್ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮುಸ್ಲಿಂ ಮುಖಂಡ ಅಲ್ತಾಫ್ ಹಳ್ಳೂರ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಅಧಿಕಾರಿಗಳು ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ. ಬಿಜೆಪಿ ಹಿಂದೂ ಮುಸ್ಲಿಂ ಜನರನ್ನ ಒಡೆಯುತ್ತಿದ್ದಾರೆ.ಈ ದರ್ಗಾ ಭಾವೈಕ್ಯತೆಯ ಸಂಕೇತ. …

Read More »