Breaking News

Breaking News

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಅರೆಸ್ಟ್, ₹3.45 ಲಕ್ಷದ ಚಿನ್ನಾಭರಣ ವಶ…

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಆರೋಪಿಗಳ ಬಂಧನ, ₹3.45 ಲಕ್ಷ ಮೌಲ್ಯದ ಚಿನ್ನಾಭರಣ ವಶ! ಹುಬ್ಬಳ್ಳಿ: ಮನೆಗೆ ಬೀಗ ಹಾಕಿರುವುದನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಹಳೇಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು ₹3,45,000 ಮೌಲ್ಯದ ಚಿನ್ನಾಭರಣ, ಬೆಳ್ಳಿಯ ಒಡವೆಗಳು ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ… ಇತ್ತೀಚೆಗೆ ಹಳೇಹುಬ್ಬಳ್ಳಿ ಆನಂದನಗರದ ಮರಿಯಮ್ಮ ದೇವಸ್ಥಾನದ ಸಮೀಪ ಬೀಗ ಹಾಕಿದ್ದ ಮನೆಯ ಬೀಗ ಮುರಿದು ಒಳನುಗ್ಗಿ ಕಳ್ಳತನ ಮಾಡಲಾಗಿತ್ತು. …

Read More »

ನಂಗೆ ಅವನೇ ಬೇಕು! : ಯೂಟ್ಯೂಬ್ ನೋಡಿ, ಇಡ್ಲಿಯಲ್ಲಿ ದತ್ತೂರಿ ಬೀಜ ಹಾಕಿ ಪತಿಯನ್ನು ಕೊಂದ ಪತ್ನಿ!

ಮೈಸೂರು: ಹುಣಸೂರು ತಾಲೂಕಿನ ವಿನೋಬ ಕಾಲೋನಿಯಲ್ಲಿ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿದ ಆರೋಪದಡಿ ಪತ್ನಿ ಪವಿತ್ರಾ ಹಾಗೂ ಆಕೆಯ ಪ್ರಿಯಕರ ಸುನೀಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಗಾರೆ ಕೆಲಸ ಮಾಡುತ್ತಿದ್ದ ರಾಮಪ್ರಸಾದ್ (35) ಕೊಲೆಯಾದ ವ್ಯಕ್ತಿ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊಲ್ಲಲು ಸಂಚು ರೂಪಿಸಿದ್ದ ಪವಿತ್ರಾ, ಅಕ್ಟೋಬರ್ 16ರಂದು ರಾತ್ರಿ ಇಡ್ಲಿಯಲ್ಲಿ ದತ್ತೂರಿ ಬೀಜದ ಪುಡಿ ಬೆರೆಸಿ ತಿನ್ನಿಸಿದ್ದಳು ಎನ್ನಲಾಗಿದೆ. ಇದರಿಂದ ಆತ ಮೃತಪಟ್ಟಿರದ ಕಾರಣ ಪ್ರಿಯಕರನ …

Read More »

ನಡುರಸ್ತೆಯಲ್ಲಿ ಯುವಕ ಕಿತ್ತಾಟ – ಕಳ್ಳರೆಂದು ಭಾವಿಸಿ ಧರ್ಮದೇಟು ನೀಡಿದ ಸ್ಥಳೀಯರು

ಬೆಂಗಳೂರು: ಕಳ್ಳರೆಂಬ ಅನುಮಾನದ ಮೇಲೆ ಇಬ್ಬರು ಯುವಕರನ್ನು ಸ್ಥಳೀಯರು ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ ಘಟನೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯ ಆರ್.ಟಿ. ಸ್ಟ್ರೀಟ್ ಬಳಿ ನಡೆದಿದೆ. ವಾಹನಕ್ಕೆ ಅಡ್ಡ ಬಂದ ವಿಚಾರವಾಗಿ ಶಾಹಿದ್ (19) ಮತ್ತು ಫರ್ದೀನ್ ಪಾಷಾ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬರು ಇಬ್ಬರನ್ನೂ ಕಳ್ಳರೆಂದು ಕೂಗಿದ ಹಿನ್ನೆಲೆಯಲ್ಲಿ ಸ್ಥಳೀಯರ ಗುಂಪು ಬೆನ್ನಟ್ಟಿ ಹಲ್ಲೆ ನಡೆಸಿದೆ ಎನ್ನಲಾಗಿದೆ. ಘಟನೆಯಲ್ಲಿ ಶಾಹಿದ್ ಗಂಭೀರವಾಗಿ ಗಾಯಗೊಂಡಿದ್ದು, …

Read More »

ಹುಬ್ಬಳ್ಳಿಯಲ್ಲಿ ಮಾಂಜಾ ದಾರ ಹಾವಳಿ: ಮಹಿಳೆ ಸಾವಿನ ಬೆನ್ನಲ್ಲೇ ಯುವಕನ ಮೂಗು ಕಟ್

ಹುಬ್ಬಳ್ಳಿ: ನಿಷೇಧಿತ ಮಾಂಜಾ ದಾರದ ಹಾವಳಿ ಮುಂದುವರಿದಿದ್ದು, ಮಹಿಳೆಯೊಬ್ಬರು ಮೃತಪಟ್ಟ ಬೆನ್ನಲ್ಲೇ ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ಉಣಕಲ್ ಬಳಿ ನಡೆದಿದೆ. ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಯುವಕನ ಮುಖಕ್ಕೆ ಮಾಂಜಾ ದಾರ ಸಿಲುಕಿ ಮೂಗಿಗೆ ಗಂಭೀರ ಗಾಯವಾಗಿದೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಯುವಕನನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ. ಸರಣಿ ಅವಘಡಗಳ ಹಿನ್ನೆಲೆಯಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿರುವ ಪೊಲೀಸರು, ಧಾರವಾಡದ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ …

Read More »

ದೊಣ್ಣೆಯಿಂದ ಹೊಡೆದು ವ್ಯಕ್ತಿ ಕೊಲೆ

ಆನೇಕಲ್: ದಸರಾ ನೋಡಲು ಬಂದಿದ್ದ ತಮಿಳುನಾಡು ಮೂಲದ ಯಲ್ಲಪ್ಪ (56) ಅವರನ್ನು ದುಷ್ಕರ್ಮಿಗಳ ಗುಂಪೊಂದು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ಆನೇಕಲ್‌ನ ಚಿಕ್ಕಕೆರೆ ಮೈದಾನದಲ್ಲಿ ಬುಧವಾರ ರಾತ್ರಿ ನಡೆದಿದೆ. ಕಳೆದ 10 ವರ್ಷಗಳಿಂದ ತಟ್ಟನಹಳ್ಳಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಯಲ್ಲಪ್ಪ, ದಸರಾ ನೋಡಲು ಬಂದಿದ್ದರು. ರಾತ್ರಿ ಮದ್ಯ ಸೇವಿಸುವ ವೇಳೆ ಗಲಾಟೆ ನಡೆದಿದ್ದು, ದುಷ್ಕರ್ಮಿಗಳು ತಲೆಗೆ ದೊಣ್ಣೆಯಿಂದ ಬಲವಾಗಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಶೇಷವೆಂದರೆ, ಆರೋಪಿಗಳೇ ಮೃತರ …

Read More »

ಬಾಗಲಕೋಟೆ ಅಜ್ಜಿ ಸಾವಿಗೆ ಬಿಗ್ ಟ್ವಿಸ್ಟ್: 7 ತಿಂಗಳ ಬಳಿಕ ಮಗ, ಸೊಸೆಯ ಕೃತ್ಯ ಬಯಲು

ಬಾಗಲಕೋಟೆ: ಬೀಳಗಿ ಪಟ್ಟಣದಲ್ಲಿ ಏಳು ತಿಂಗಳ ಹಿಂದೆ ನಡೆದಿದ್ದ 65 ವರ್ಷದ ಗೌರವ್ವ ಕೊಡೆಕಲ್ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಕಿರಿಯ ಮಗ ಪಡಿಯಪ್ಪ, ಸೊಸೆ ಶಾಂತವ್ವ ಹಾಗೂ ಆಕೆಯ ಸಹೋದರಿಯ ಮಗ ಶಂಕರ್‌ನನ್ನು ಬಂಧಿಸಿದ್ದಾರೆ. ಮಾರ್ಚ್ 18ರ ರಾತ್ರಿ ಬೀರದೇವರ ದೇವಸ್ಥಾನದಲ್ಲಿ ಮಲಗಿದ್ದ ಗೌರವ್ವ ಅವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿತ್ತು. ಆರೋಪಿಗಳ ಪತ್ತೆಗೆ ಪೊಲೀಸರು AI ತಂತ್ರಜ್ಞಾನ ಬಳಸಿದ್ದು, 30 ಸಾವಿರಕ್ಕೂ ಹೆಚ್ಚು ಜನರ …

Read More »

ಧಾರವಾಡದಲ್ಲಿ ಲೇಡೀಸ್ ಪಿಜಿಗೆ ಬೆತ್ತಲೆಯಾಗಿ ನುಗ್ಗಲು ಯತ್ನಿಸಿದ ವ್ಯಕ್ತಿ! ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಧಾರವಾಡ: ಮಹಿಳೆಯರ ವಸತಿ ನಿಲಯಕ್ಕೆ (ಲೇಡೀಸ್ ಪಿಜಿ) ವ್ಯಕ್ತಿಯೊಬ್ಬ ಬೆತ್ತಲೆಯಾಗಿ ನುಗ್ಗಲು ಯತ್ನಿಸಿ ಅಸಭ್ಯವಾಗಿ ವರ್ತಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ. ವ್ಯಕ್ತಿಯ ಅಸಭ್ಯ ವರ್ತನೆ ಪಿಜಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಘಟನೆ ಸಂಬಂಧ ಎಚ್ಚೆತ್ತುಕೊಂಡಿರುವ ಧಾರವಾಡ ಉಪನಗರ ಪೊಲೀಸರು ಆರೋಪಿಯ ಪತ್ತೆಗೆ ಮುಂದಾಗಿದ್ದು, ತನಿಖೆ ಕೈಗೊಂಡಿದ್ದಾರೆ.

Read More »

ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್..?

ಧಾರವಾಡದಲ್ಲಿ ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್…? 3 ತಿಂಗಳಿಂದ ಯುವತಿಯರಿಗೆ ಕಿರುಕುಳ ಆರೋಪ — ಸಿಸಿಟಿವಿಯಲ್ಲಿ ಬೆತ್ತಲೆ ಓಡಾಟದ ದೃಶ್ಯ ಸೆರೆ! ಧಾರವಾಡ: ವಿದ್ಯಾನಗರಿ ಧಾರವಾಡದಲ್ಲಿ ಯುವತಿಯರ ಸುರಕ್ಷತೆಗೇ ಸವಾಲು ಎದುರಾಗಿದೆಯಾ? ರಾತ್ರಿ ಆಗುತ್ತಿದ್ದಂತೆ ಯುವತಿಯರು ವಾಸಿಸುವ ಪಿಜಿಗಳತ್ತ ಬೆತ್ತಲೆಯಾಗಿ ನುಗ್ಗುವ ವ್ಯಕ್ತಿಯೊಬ್ಬನ ಅಸಭ್ಯ ವರ್ತನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಪ್ತಾಪುರ ಪ್ರದೇಶದ ಪಿಜಿಗಳಲ್ಲಿ ಇಂತಹ ಕೃತ್ಯಗಳು ನಡೆಯುತ್ತಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ…. ಯುವತಿಯರು ನೆಮ್ಮದಿಯಿಂದ …

Read More »

ಟ್ರ್ಯಾಕ್ಟರ್ ಗೆ ದಾರಿ ಬಿಡದ ವಿಚಾರಕ್ಕೆ ಗಲಾಟೆ,ದೊಣ್ಣೆಯಿಂದ ಹೊಡೆದು ಹಲ್ಲೆ

ಚಿಕ್ಕಮಗಳೂರು: ತಾಲೂಕಿನ ಸಗನೀಪುರ ಗ್ರಾಮದಲ್ಲಿ ಟ್ರ್ಯಾಕ್ಟರ್‌ಗೆ ದಾರಿ ಬಿಡದ ವಿಚಾರಕ್ಕೆ ವ್ಯಕ್ತಿಯೊಬ್ಬರ ಮೇಲೆ ಮರದ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ. ತಿಂಗಳ ಹಿಂದೆ ಜಾನುವಾರುಗಳನ್ನು ಮೇಯಿಸಲು ಕರೆದೊಯ್ಯುವಾಗ ನಡೆದ ಗಲಾಟೆಯ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ತೆರಳುತ್ತಿದ್ದ ಮದನ್ ಎಂಬವರ ಮೇಲೆ ಮಲ್ಲೇಶ, ಮಂಜು ಹಾಗೂ ಮತ್ತೋರ್ವ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಮದನ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ …

Read More »

ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ: ಜೆಸಿಬಿಯಿಂದ ಅಂಗಡಿ ಧ್ವಂಸಕ್ಕೆ ಯತ್ನ

ತುಮಕೂರು: ಶಿರಾದ ಕೈಗಾರಿಕಾ ಪ್ರದೇಶದಲ್ಲಿ ಚಹಾ ಸಾಲ ನೀಡಲು ನಿರಾಕರಿಸಿದ ಟೀ ಅಂಗಡಿ ಮಾಲೀಕರಿಗೆ ಜೆಸಿಬಿಯಿಂದ ಅಂಗಡಿ ಧ್ವಂಸಗೊಳಿಸುವುದಾಗಿ ಬೆದರಿಕೆ ಹಾಕಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಬಿಹಾರ ಮೂಲದ ಯುವಕರ ಗುಂಪೊಂದು ಚಹಾ ಸಾಲ ನೀಡುವ ವಿಚಾರಕ್ಕೆ ಅಂಗಡಿ ಮಾಲೀಕರೊಂದಿಗೆ ಜಗಳವಾಡಿದ್ದು, ಜೆಸಿಬಿ ತಂದು ಅಂಗಡಿ ನೆಲಸಮಗೊಳಿಸುವುದಾಗಿ ಬೆದರಿಕೆ ಒಡ್ಡಿದೆ ಎಂದು ಆರೋಪಿಸಲಾಗಿದೆ. ವಿಷಯ ತಿಳಿದು ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಅಂಗಡಿ ಮಾಲೀಕರ ನೆರವಿಗೆ ಧಾವಿಸಿದ್ದಾರೆ. ಈ …

Read More »