Breaking News

Breaking News

ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಭೀಕರ ಕೊಲೆ, ಪತ್ನಿ, ಮಗನಿಗೆ ಅರಿವಿಲ್ಲ

ಹರಿಹರ: ತಾಲ್ಲೂಕಿನ ಚಿಕ್ಕಬಿದರೆ ಗ್ರಾಮದಲ್ಲಿ ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಗ್ರಾಮದ ಶಿವಪ್ಪ (44) ಎಂಬಾತನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಶಿವಪ್ಪ ಹೆಂಡತಿ ಮತ್ತು ಮಗನೊಂದಿಗೆ ಚಿಕ್ಕಬಿದರೆ ಕ್ಯಾಂಪ್‌ನಲ್ಲಿ ವಾಸವಿದ್ದರು. ನರೇಗಾ ಕೆಲಸಕ್ಕೆ ಹೋಗುತ್ತಿದ್ದ ಪತ್ನಿ ಸಾವಿತ್ರಮ್ಮ ಬೆಳಿಗ್ಗೆ 11.30ಕ್ಕೆ ವಾಪಸ್‌ ಬಂದಾಗ ಗಂಡ ಮನೆಯಲ್ಲಿರಲಿಲ್ಲ.ರಾತ್ರಿ 10ರವರೆಗೂ ಕಾದು, ಆತ ಬಾರದಿದ್ದಾಗ ಪತ್ನಿ ಹಾಗೂ ಮಗ ಊಟ ಮಾಡಿ ಮಲಗಿದ್ದರು. ಜೂನ್ 23ರ ಮುಂಜಾನೆ 4.30ರ ಸುಮಾರಿಗೆ ಎಂದಿನಂತೆ ಶಿವಮ್ಮ ಎದ್ದು, …

Read More »

ಗೋವಾ ಮದ್ಯ ಸಾಗಾಟಕ್ಕೆ ಖತರ್ನಾಕ್ ಪ್ಲಾನ್! ಮೇಲೆ ಗೊಬ್ಬರ ಒಳಗೆ ಕೋಟಿ ಮೌಲ್ಯದ ಲಿಕ್ಕರ್

ಗೋವಾದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಅಂತರರಾಜ್ಯ ಜಾಲವನ್ನು ವಿಜಯಪುರ ಪೊಲೀಸರು ಭೇದಿಸಿದ್ದಾರೆ. ಕೊಲ್ಹಾರ ಟೋಲ್‌ ಬಳಿ ಖಚಿತ ಮಾಹಿತಿ ಮೇರೆಗೆ ಟ್ರಕ್‌ ತಪಾಸಣೆ ನಡೆಸಿದ ವೇಳೆ ಎರೆಹುಳ ಗೊಬ್ಬರದ ಚೀಲಗಳ ಕೆಳಗೆ ಅಡಗಿಸಿಟ್ಟಿದ್ದ ಗೋವಾ ಮದ್ಯ ಪತ್ತೆಯಾಗಿದೆ. ಆರಂಭದಲ್ಲಿ ಟ್ರಕ್‌ನಲ್ಲಿ ಗೊಬ್ಬರ ಮಾತ್ರ ಇದೆ ಎಂದು ಚಾಲಕರು ಪೊಲೀಸರನ್ನು ದಾರಿ ತಪ್ಪಿಸಲು ಯತ್ನಿಸಿದ್ದರು. ಪೊಲೀಸರ ತನಿಖೆಯಲ್ಲಿ ಖದೀಮರು ಅತ್ಯಂತ ಚಾಣಾಕ್ಷತನದಿಂದ ಮದ್ಯ ಸಾಗಾಟ ನಡೆಸುತ್ತಿದ್ದದ್ದು ಬೆಳಕಿಗೆ ಬಂದಿದೆ. ಮಾರ್ಗದ …

Read More »

ಅಕ್ರಮ ಬಡಾವಣೆಯ 50ಕ್ಕೂ ಅಧಿಕ ನಿವೇಶನಗಳಿಗೆ ಇ-ಖಾತಾ: ಕಂದಾಯ ಅಧಿಕಾರಿ ಅಮಾನತು

ಬೆಂಗಳೂರು: ಅಕ್ರಮವಾಗಿ ನಿರ್ಮಿಸಿದ್ದ ಬಡಾವಣೆಯ 50ಕ್ಕೂ ಅಧಿಕ ನಿವೇಶನಗಳಿಗೆ ಕಾನೂನು ಬಾಹಿರವಾಗಿ ಎ-ಖಾತಾ ಮತ್ತು ಇ- ಖಾತಾ ಮಾಡಿಕೊಟ್ಟು ನಗರ ಪಾಲಿಕೆಗೆ ಕೋಟ್ಯಂತರ ರೂ. ನಷ್ಟ ಉಂಟು ಮಾಡಿದ ಆರೋಪದ ಮೇಲೆ ಹೆರೋಹಳ್ಳಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ಕೆ.ಎಸ್.ಮಂಜುಳಾ ಅವರನ್ನು ಜಿಬಿಎ ಅಮಾನತು ಮಾಡಿದೆ. ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಈ ಕುರಿತಾಗಿ ಪಶ್ಚಿಮ ನಗರ ಪಾಲಿಕೆ ಆಯುಕ್ತರಿಗೆ ದೂರು ನೀಡಿದ್ದರು. ಸರ್ವೇ …

Read More »

ಮಹಿಳೆಗೆ 4 ಲಕ್ಷ ರೂ. ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಹಿರಿಯಡ್ಕ: ಮಹಿಳೆಯೊಬ್ಬರಿಗೆ ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ. ಶೀಲಾವತಿ ಎಂಬವರ ಮೊಬೈಲ್‌ಗೆ ಕಳೆದ 2 ತಿಂಗಳುಗಳ ಹಿಂದೆ ಅಪರಿಚಿತರು ವೆಬ್‌ಸೈಟ್ ಲಿಂಕ್ ಕಳುಹಿಸಿ, ಇದರಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಹೆಚ್ಚಿನ ಹಣ ಕೊಡುವುದಾಗಿ ನಂಬಿಸಿದ್ದರು. ಅದರಂತೆ ಶೀಲಾವತಿ ಹಂತ ಹಂತವಾಗಿ 4,02,000ರೂ. ಹಣವನ್ನು ಹೂಡಿಕೆ ಮಾಡಿದ್ದರು. ನಂತರ ಸ್ವಲ್ಪ ಹಣವನ್ನು ಆರೋಪಿಗಳು ವಾಪಾಸ್ಸು ನೀಡಿದ್ದರು. ಉಳಿದ 3,50,000ರೂ. ಹಣವನ್ನು …

Read More »

ವಿಜಯಪುರ: ಹಣಕ್ಕಾಗಿ ವ್ಯಕ್ತಿ ಅಪಹರಣ; ಎಂಟು ಆರೋಪಿಗಳ ಬಂಧನ

ವಿಜಯಪುರದಲ್ಲಿ ವ್ಯಕ್ತಿಯೊಬ್ಬರನ್ನು ಅಪಹರಿಸಿ ₹12 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಗ್ಯಾಂಗ್‌ನ್ನು ಗಾಂಧಿ ಚೌಕಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯ ಅಡುಗೆ ಸಹಾಯಕ ಸಾಹಿಲ್‌ ಚಪ್ಪರಬಂಧ್‌ ಅವರನ್ನು ಅಪಹರಿಸಿ ಹಣಕ್ಕಾಗಿ ಒತ್ತಾಯ ಮಾಡಲಾಗಿತ್ತು. ಸಾಹಿಲ್‌ ಕುಟುಂಬವು ಇತ್ತೀಚೆಗೆ ಜಮೀನು ಮಾರಾಟ ಮಾಡಿದ್ದ ವಿಷಯ ತಿಳಿದಿದ್ದ ಸಹೋದ್ಯೋಗಿ ಮಹಮ್ಮದ್‌ ರಫೀಕ್‌ ಹಾಗೂ ಇತರರು ಸೇರಿ ಹನಿಟ್ರ್ಯಾಪ್‌ ಸಂಚು ರೂಪಿಸಿ ಅಪಹರಣ ನಡೆಸಿದ್ದರು. ಬಳಿಕ ಸಾಹಿಲ್‌ನ ಮೊಬೈಲ್‌ನಿಂದಲೇ ಆತನ ತಾಯಿಗೆ ಕರೆ ಮಾಡಿ …

Read More »

ಜಿಂಕೆ ಬೇಟೆ… ಅರಣ್ಯ ಇಲಾಖೆ ಮಿಂಚಿನ ದಾಳಿ, ಇಬ್ಬರು ಅರೆಸ್ಟ್!

ಧಾರವಾಡ ತಾಲೂಕಿನ ಲಾಳಗಟ್ಟಿ ಗ್ರಾಮದಲ್ಲಿ ಚುಕ್ಕೆ ಜಿಂಕೆಯನ್ನು ಬೇಟೆಯಾಡಿ ಅದರ ಮಾಂಸ ಬೇಯಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಫಕ್ಕೀರಪ್ಪ ಮ್ಯಾಗಡಿ (42) ಮತ್ತು ವಾಸುದೇವ ನಾಯಕ (34) ಬಂಧಿತರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಆರೋಪಿಗಳನ್ನು ವಶಕ್ಕೆ ಪಡೆದು, ಜಿಂಕೆಯ ಮಾಂಸ ಹಾಗೂ ಬೇಟೆಗೆ ಬಳಸಿದ್ದ ಮದ್ದುಗುಂಡು ಮತ್ತು ಮಾರಕಾಸ್ತ್ರಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. …

Read More »

74.68 ಲಕ್ಷ ರೂ. ಮೌಲ್ಯದ ವಿವಿಧ ಬ್ರಾಂಡ್‌ನ ಮದ್ಯ ಜಪ್ತಿ

ವಿಜಯಪುರ ಜಿಲ್ಲೆಯ ಕೊಲ್ಹಾರ ನಾಕಾ ಬಳಿ ಪೊಲೀಸರು ₹74.68 ಲಕ್ಷ ಮೌಲ್ಯದ ವಿವಿಧ ಬ್ರಾಂಡ್‌ಗಳ ಅಕ್ರಮ ಮದ್ಯವನ್ನು ಜಪ್ತಿ ಮಾಡಿದ್ದಾರೆ. ಗೋವಾದಿಂದ ಲಾರಿಯಲ್ಲಿ ಮದ್ಯವನ್ನು ಸಾಗಿಸಲಾಗುತ್ತಿತ್ತು. ಲಾರಿಯಲ್ಲಿದ್ದ ಗೊಬ್ಬರದ ಚೀಲಗಳ ಕೆಳಗೆ ಮದ್ಯದ ಬಾಕ್ಸ್‌ಗಳನ್ನು ಅಡಗಿಸಿಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಚಾಲಕರಿಗೆ ಗೂಗಲ್ ಲೊಕೇಷನ್ ಮೂಲಕ ಸೂಚನೆ ನೀಡಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಮದ್ಯದ ಮಾಲೀಕರು ಹಾಗೂ ಸಾಗಾಟದ ಜಾಲದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Read More »

ಕೊನೆಗೂ ಪೊಲೀಸರಿಗೆ ಯಶಸ್ಸು ಸಿಕ್ಕಿದೆ..! ತಡಸಿನಕೊಪ್ಪ ಶೂಟೌಟ್ ಪ್ರಕರಣದಲ್ಲಿ ಪೊಲೀಸರ ನಿದ್ದೆ ಕೆಡಿಸಿದ್ದ ಪ್ರಮುಖ ಆರೋಪಿ ಸುಂದರ್ ಪೌಲ್ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ…

ಕೊನೆಗೂ ಪೊಲೀಸರಿಗೆ ಯಶಸ್ಸು ಸಿಕ್ಕಿದೆ..! ತಿಂಗಳ ಹಂಟ್‌ಗೆ ಬಂತು ಅಂತ್ಯ..! ಧಾರವಾಡ ಹೊರವಲಯದ ತಡಸಿನಕೊಪ್ಪದಲ್ಲಿ ಮೇ 26ರಂದು ನಡೆದಿದ್ದ ಶೂಟೌಟ್ ಪ್ರಕರಣದಲ್ಲಿ ಪೊಲೀಸರ ನಿದ್ದೆ ಕೆಡಿಸಿದ್ದ ಪ್ರಮುಖ ಆರೋಪಿ ಸುಂದರ್ ಪೌಲ್ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ… ವಿವಾದಿತ ಜಮೀನು ವಿಚಾರವಾಗಿ ನಡೆದ ಗಲಾಟೆ ಕ್ಷಣಾರ್ಧದಲ್ಲೇ ಫೈರಿಂಗ್‌ಗೆ ತಿರುಗಿ ಭಾರೀ ಆತಂಕ ಸೃಷ್ಟಿಸಿತ್ತು. ಘಟನೆ ಬಳಿಕ ಹಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರೂ, ಪ್ರಕರಣದ ಪ್ರಮುಖ ಆರೋಪಿ ಸುಂದರ್ ಪೌಲ್ ಮಾತ್ರ …

Read More »

ತಡಸಿನಕೊಪ್ಪ ಶೂಟೌಟ್​ ಪ್ರಕರಣದ ಪ್ರಮುಖ ಆರೋಪಿ ಸುಂದರ್​ ಪೌಲ್​ ಬಂಧನ

ಧಾರವಾಡ: ನಗರ ಹೊರವಲಯದ ತಡಸಿನಕೊಪ್ಪ ಸರಹದ್ದಿನ ಜಮೀನಿನಲ್ಲಿ ಮೇ 26ರಂದು ನಡೆದಿದ್ದ ಫೈರಿಂಗ್​ ಪ್ರಕರಣದ ಪ್ರಮುಖ ಆರೋಪಿ ಸುಂದರ್​ ಪೌಲ್​ನನ್ನು ಹುಬ್ಬಳ್ಳಿ- ಧಾರವಾಡ ನಗರ ಪೊಲೀಸರು ತಮಿಳುನಾಡಿನ ನಾಗಪಟ್ಟಣಂದಲ್ಲಿ ಮಂಗಳವಾರ ಬಂಧಿಸಿದ್ದಾರೆ. ತಡಸಿನಕೊಪ್ಪ ವಿವಾದಿತ ಜಮೀನು ವಿಚಾರವಾಗಿ ನಡೆದ ಗಲಾಟೆಯಲ್ಲಿ ಸುಂದರ್​ ಪಾಲ್​ ಹಾಗೂ ಇನ್ನೊಬ್ಬ ವಿಠ್ಠಲ ವಾಲೀಕಾರ ಎಂಬಾತನ ಕಾಲಿಗೆ ಗುಂಡು ಹಾರಿಸಿದ್ದರು. ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಮೇ 27ರಂದು ಫಿಲೋಮಿನಾ, ಪ್ರವಿಣ ಸುತಾರ, ಇಂದ್ರಪಾಲ್​ ಸಿಂಗ್​, ಬೆಂಜಮಿನ್​, …

Read More »

ಮೂಡುಬಿದಿರೆ : ಮಾರುತಿ ಸಿಯಾಜ್ ಕಾರಿಗೆ ಬೆಂಕಿ; ಪ್ರಾಣಾಪಾಯದಿಂದ ಪಾರು!

ಮೂಡುಬಿದಿರೆ : ಚಲಿಸುತ್ತಿದ್ದ ಮಾರುತಿ ಸಿಯಾಜ್ ಕಾರಿಗೆ ಬೆಂಕಿ ಕಾಣಿಸಿಕೊಂಡು ವಾಹನ ಭಾಗಶಃ ಸುಟ್ಟ ಘಟನೆ ಸೋಮವಾರ ಸಂಜೆ ಮೂಡುಬಿದಿರೆ ಪೇಟೆಯಲ್ಲಿ ನಡೆದಿದೆ. ಕಾರಿನಲ್ಲಿದ್ದವರು ಸಮಯಪ್ರಜ್ಞೆಯಿಂದ ಹೊರಬಂದ ಪರಿಣಾಮ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೋಟೆಬಾಗಿಲಿನ ಮಸೂದು ಅವರು ಸೋಮವಾರ ಸಂಜೆ ಸುಮಾರು 4 ಗಂಟೆ ವೇಳೆಗೆ ಕುಟುಂಬದೊಂದಿಗೆ ಮೂಡುಬಿದಿರೆಗೆ ಬರುತ್ತಿದ್ದರು ಈ ವೇಳೆ ಪುರಸಭೆಯ ಹಳೆಯ ಕಟ್ಟಡದ ಸಮೀಪ ಕಾರಿನ ಫಾಗ್ ಲೈಟ್ ಭಾಗದಲ್ಲಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಕಾರನ್ನು …

Read More »