BigTv News
October 22, 2026
Breaking News
ಹುಬ್ಬಳ್ಳಿ: ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆಯ ಕುತ್ತಿಗೆಗೆ ಗಾಳಿಪಟದ ಮಾಂಜಾ ದಾರ ಸಿಲುಕಿ ಮೃತಪಟ್ಟಿರುವ ಘಟನೆ ಶಿವಶಂಕರ ಕಾಲೋನಿಯಲ್ಲಿ ನಡೆದಿದೆ. ಮೃತರನ್ನು ಭರತ್ ನಗರದ ನಿವಾಸಿ ವಿದ್ಯಾ ಮಂಜುನಾಥ ಗೌಡರ (38) ಎಂದು ಗುರುತಿಸಲಾಗಿದೆ. ಇವರು ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸದ ನಿಮಿತ್ತ ತೆರಳುತ್ತಿದ್ದ ವೇಳೆ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಕಿಮ್ಸ್‌ಗೆ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಭೇಟಿ ನೀಡಿದ್ದು, ಹೆಚ್ಚಿನ ಮಾಹಿತಿ …
Read More »
BigTv News
October 22, 2026
Breaking News
ಗದಗ: ನರಗುಂದ ತಾಲೂಕಿನ ಸುರಕೋಡ ಗ್ರಾಮದಲ್ಲಿ ಕಡಲೆ ಮಾರಾಟದ ಹಣದ ವಿಚಾರವಾಗಿ ಗೆಳೆಯನನ್ನೇ ಕೊಡಲಿಯಿಂದ ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ದ್ಯಾಮಪ್ಪ ಗೊಜನೂರು (62) ಕೊಲೆಯಾದ ವ್ಯಕ್ತಿಯಾಗಿದ್ದು, ಶರಣಪ್ಪ ನರಗುಂದ ಆರೋಪಿ. ದ್ಯಾಮಪ್ಪನಿಗೆ ಸೇರಿದ 45 ಕ್ವಿಂಟಾಲ್ ಕಡಲೆಯನ್ನು ಶರಣಪ್ಪ ಅವರಿಗೆ ತಿಳಿಯದಂತೆ ಮಾರಾಟ ಮಾಡಿ ಹಣ ಖರ್ಚು ಮಾಡಿದ್ದನು. ಹಣ ವಾಪಸ್ ನೀಡುವುದನ್ನು ತಪ್ಪಿಸಲು ಅಕ್ಟೋಬರ್ 8ರಂದು ದ್ಯಾಮಪ್ಪನನ್ನು ಹೊಲಕ್ಕೆ ಕರೆದೊಯ್ದು ಕೊಡಲಿಯಿಂದ ಹಲ್ಲೆ ನಡೆಸಿ ಕೊಲೆ …
Read More »
Shaikh BigTv
October 22, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
News Audio ಸ್ಕೂಟಿಯಲ್ಲಿ ಲ್ಯಾಬ್‌ಗೆ ತೆರಳುತ್ತಿದ್ದಾಗ ಅವಘಡ | ರಸ್ತೆಯಲ್ಲೇ ತೀವ್ರ ರಕ್ತಸ್ರಾವ, ಮಾಂಜಾ ದಾರದ ಅಪಾಯಕ್ಕೆ ಮತ್ತೊಂದು ಜೀವ ಬಲಿ… ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗಾಳಿಪಟ ಹಾರಿಸಲು ಬಳಸುವ ಅಪಾಯಕಾರಿ ಮಾಂಜಾ ದಾರಕ್ಕೆ ಸಿಲುಕಿ ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆಯ ಕುತ್ತಿಗೆಗೆ ಮಾಂಜಾ ದಾರ ಸಿಲುಕಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಅವರು ಪ್ರಾಣ ಕಳೆದುಕೊಂಡಿದ್ದಾರೆ…. ಮೃತ ಮಹಿಳೆಯನ್ನು ಹುಬ್ಬಳ್ಳಿಯ ಭರತ್ ನಗರದ …
Read More »
BigTv News
October 22, 2026
Breaking News
ಬೆಂಗಳೂರು: AI ಬಳಸಿ ವಿಧಾನಸೌಧವನ್ನು ಸ್ಫೋಟಿಸಿದಂತೆ ನಕಲಿ ರೀಲ್ಸ್ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಬಿಹಾರ ಮೂಲದ ಹಜರತ್ ಅಲಿ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಜೆ.ಸಿ. ರಸ್ತೆಯ ಪೈಪ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ, ವಿಧಾನಸೌಧದ ಮುಂದೆ ತೆಗೆದಿದ್ದ ತನ್ನ ಫೋಟೋಗಳಿಗೆ ಸ್ಫೋಟದ ದೃಶ್ಯಗಳನ್ನು ಸೇರಿಸಿ ನಕಲಿ ವಿಡಿಯೋ ತಯಾರಿಸಿದ್ದ. ರೀಲ್ಸ್ ವೈರಲ್ ಆದ ಬಳಿಕ ಪ್ರಕರಣ ಪೊಲೀಸರ ಗಮನಕ್ಕೆ ಬಂದಿದೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, …
Read More »
BigTv News
October 22, 2026
Breaking News
ಹುಣಸೂರು: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಕೊಲೆ ಮಾಡಿರುವ ಘಟನೆ ತಾಲೂಕಿನ ವಿನೋಬ ಕಾಲೊನಿಯಲ್ಲಿ ನಡೆದಿದೆ. ಗಾರೆ ಕೆಲಸಗಾರ ರಾಮಪ್ರಸಾದ್ (35) ಮೃತರಾಗಿದ್ದು, ಪತ್ನಿ ಪವಿತ್ರ ಹಾಗೂ ಆಕೆಯ ಪ್ರಿಯಕರ ಸುನೀಲ್ ಬಂಧಿತ ಆರೋಪಿಗಳು. ಅ.16ರಂದು ಪವಿತ್ರ ಪತಿಗೆ ಇಡ್ಲಿಯಲ್ಲಿ ವಿಷಕಾರಿ ದತ್ತೂರಿ ಬೀಜದ ಪುಡಿ ಬೆರೆಸಿ ತಿನ್ನಿಸಿದ್ದಳು. ಬಳಿಕ ಪ್ರಿಯಕರನೊಂದಿಗೆ ಸೇರಿ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು …
Read More »
BigTv News
October 22, 2026
Breaking News
ಮಂಗಳೂರು: ಕೊಣಾಜೆ ಸಮೀಪದ ಬೋಳಿಯಾರ್‌ನಲ್ಲಿ ಸ್ಕೂಟರ್‌ಗೆ ಹಿಂಬದಿಯಿಂದ ಪಿಕಪ್ ವಾಹನ ಢಿಕ್ಕಿ ಹೊಡೆದು ಇಬ್ಬರು ಯುವಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚಾಲಕ ಹಫೀಝ್ ಯಾನೆ ಅಪ್ಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅ.19ರಂದು ಕುರ್ನಾಡು ಪಡೀಲ್ ಪೆಟ್ರೋಲ್ ಪಂಪ್ ಬಳಿ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರ ಮುಹಮ್ಮದ್ ಅರ್ಫಾಝ್ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮುಹಮ್ಮದ್ ಜುನೈದ್ ಅವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರೂ ಮೃತಪಟ್ಟಿದ್ದಾರೆ. …
Read More »
BigTv News
October 22, 2026
Breaking News
ಕಾಸರಗೋಡು: ತಳಂಗರೆಯ ಕಡವತ್‌ನ ಕಟ್ಟಡವೊಂದರ ಮೇಲಿನ ಕೊಠಡಿಯಲ್ಲಿ ಅಪರಿಚಿತ ಯುವಕನನ್ನು ಕತ್ತು ಹಿಸುಕಿ ಕೊಲೆ ಮಾಡಿದ ಪ್ರಕರಣದ ತನಿಖೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಅಧೀನದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಅ.5ರಂದು ದಾವಣಗೆರೆಯವರು ಎಂದು ಹೇಳಿಕೊಂಡ ನಾಲ್ವರು ಕೊಠಡಿ ಬಾಡಿಗೆಗೆ ಪಡೆದಿದ್ದರು. ಕಳೆದ ಗುರುವಾರ ಕೊಠಡಿಯಲ್ಲಿ ಯುವಕನ ಕೊಳೆತ ಮೃತದೇಹ ಪತ್ತೆಯಾಗಿದ್ದು, ನಾಲ್ವರಲ್ಲಿ ಒಬ್ಬನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಬಳಿಕ ಮೂವರು ಬ್ಯಾಗ್‌ಗಳೊಂದಿಗೆ ತೆರಳಿರುವ ಸಿಸಿಟಿವಿ ದೃಶ್ಯ ಪೊಲೀಸರಿಗೆ …
Read More »
BigTv News
October 22, 2026
Breaking News
ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯ ರೂಢಗಿ ಗ್ರಾಮದಲ್ಲಿ ಮದುವೆಯಾಗಿ ಆರು ತಿಂಗಳಾಗಿದ್ದ ಗಣೇಶ ಬಸಪ್ಪ ಕೋಲಕಾರ (27) ಎಂಬ ಯುವಕನನ್ನು ಮನೆಯಲ್ಲೇ ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ಅ.21ರಂದು ಬೆಳಕಿಗೆ ಬಂದಿದೆ. ಪತ್ನಿ ಪೂಜಾ ತನ್ನ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರಬಹುದು ಎಂದು ಶಂಕಿಸಿ ಮೃತನ ಸಹೋದರಿ ಮುತ್ತಕ್ಕ ಮುದ್ದೇಬಿಹಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಕ್ರಮ ಸಂಬಂಧದ ವಿಚಾರವಾಗಿ ದಂಪತಿ ನಡುವೆ ಪದೇಪದೇ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಅ.20ರ …
Read More »
Shaikh BigTv
October 21, 2026
Breaking News, Crime, ಕರ್ನಾಟಕ, ಬೆಂಗಳೂರು, ಹುಬ್ಬಳ್ಳಿ-ಧಾರವಾಡ
ಆಸ್ತಿ ವ್ಯಾಜ್ಯದಲ್ಲಿ ಪೊಲೀಸರ ಆಟಕ್ಕೆ ಕಡಿವಾಣ..! ಸುತ್ತೋಲೆ ಉಲ್ಲಂಘಿಸಿದರೆ ಅಧಿಕಾರಿಗಳೇ ನೇರ ಹೊಣೆ — ಇಲಾಖೆಯ ಖಡಕ್ ವಾರ್ನಿಂಗ್..! ಸಿವಿಲ್ ವ್ಯಾಜ್ಯದಲ್ಲಿ ಖಾಕಿ ಹಸ್ತಕ್ಷೇಪಕ್ಕೆ ಬ್ರೇಕ್..! ಹೈಕೋರ್ಟ್ ಆಕ್ಷೇಪದ ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್..! ಜಮೀನು, ಆಸ್ತಿ ವಿವಾದಗಳಲ್ಲಿ ಅಧಿಕಾರ ಮೀರಿದರೆ ಶಿಸ್ತು ಕ್ರಮ ಫಿಕ್ಸ್..! ಸುತ್ತೋಲೆ ಉಲ್ಲಂಘಿಸಿದ ಅಧಿಕಾರಿಗಳೇ ನೇರ ಹೊಣೆ..! ವ್ಯಾಜ್ಯದಲ್ಲಿ ಸಿವಿಲ್ ವ್ಯಾಜ್ಯಗಳ ನೆಪದಲ್ಲಿ ಪೊಲೀಸ್ ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಹಸ್ತಕ್ಷೇಪ …
Read More »
Shaikh BigTv
October 21, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಸ್ಪಾಗಳ ಒಳಗೆ ನಡೆಯುತ್ತಿದೆಯಾ ಅಕ್ರಮದ ಆಟ..? ದಂಧೆ ಸಾಬೀತಾದರೆ ಬುಲ್ಡೋಜರ್ ಕ್ರಮ ಬೇಡ, ಕಾನೂನಿನ ಕಠಿಣ ಕ್ರಮವಾಗಲಿ! ಮಸಾಜ್ ಹೆಸರಿನಲ್ಲಿ ಅಕ್ರಮದ ಶಂಕೆ..! ವಾಣಿಜ್ಯ ನಗರಿಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವವರು ಯಾರು..? ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸ್ಪಾ ಮತ್ತು ಮಸಾಜ್ ಸೆಂಟರ್‌ಗಳ ಹೆಸರಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದೆ. ಆರೋಗ್ಯ ಮತ್ತು ದೇಹದ ಆರೈಕೆಯ ಹೆಸರಿನಲ್ಲಿ ಕಾರ್ಯನಿರ್ವಹಿಸುವ ಕೇಂದ್ರಗಳಲ್ಲಿ ನಿಯಮ ಉಲ್ಲಂಘನೆ ಅಥವಾ ಕಾನೂನುಬಾಹಿರ …
Read More »