admin
December 6, 2021
Breaking News, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಗ್ರಾಹಕರೊಬ್ಬರು ಆಟೋದಲ್ಲಿ ಮರೆತು ಹೋಗಿದ್ದು 50 ಸಾವಿರ ರೂ ಹಾಗೂ 15 ಸಾವಿರ ರೂ ಇರುವ ಬ್ಯಾಗ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಇಮ್ರಾನ್ ಕಾಲಿವಾರ್ ಎಂಬುವವರೇ ಆಟೋ ಚಾಲಕನಾಗಿದ್ದು, ಮಹೇಶ ಹಾಗೂ ರೂಪಾಲಿ ಎಂಬುವವರು ಇವರ ಆಟೋದಲ್ಲಿ ಪ್ರಯಾಣಿಸಿ ನಂತರ ಇಳಿಯುವಾಗ ಬ್ಯಾಗ ಆಟೋದಲ್ಲಿ ಮರೆತು ಹೋಗಿದ್ದಾರೆ.ಕೂಡಲೇ ಇಮ್ರಾನ್ ಆಟೋದಲ್ಲಿದ್ದ ಬ್ಯಾಗ ಕಂಡು ಹಳೇ ಹುಬ್ಬಳ್ಳಿಯ ಪೋಲಿಸ್ ಠಾಣೆಗೆ ತಂದು ಒಪ್ಪಿಸಿ ಪ್ರಾಮಣಿಕತೆ ಮೆರೆದಿದ್ದಾನೆ. ನಂತರ ಠಾಣಾ ಎಸ್ …
Read More »
admin
December 6, 2021
Breaking News, ಅಪರಾಧ, ಕರ್ನಾಟಕ, ಧಾರವಾಡ
ಹುಬ್ಬಳ್ಳಿ : ಬೈಕ್ ಹಾಗೂ ಟ್ರ್ಯಾಕ್ಟರ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಧಾರವಾಡ ಜಿಲ್ಲೆ ಶಿವಳ್ಳಿ ಗ್ರಾಮದ ಬಳಿ ನೆಡೆದಿದೆ. ಬೆಳಗಿನ ಜಾವ ಈ ಅಪಘಾತ ನೆಡೆದಿದ್ದು, 29 ವರ್ಷದ ಶ್ರೀಕಾಂತ ಎಂಬ ಯುವಕನೇ ಸಾವನ್ನಪ್ಪಿದ್ದು, ಸ್ಥಳದಲ್ಲಿದ್ದು ಜನರು ಶ್ರೀಕಾಂತನನ್ನು ಆಸ್ಪತ್ರೆ ಸಾಗಿಸುವ ಮಾರ್ಗ ಮದ್ಯದಲ್ಲಿಯೇ ಸಾವನ್ನಪ್ಪಿದ್ದಾನೆ. ಈ ಕುರಿತು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
admin
December 6, 2021
Breaking News, ಕರ್ನಾಟಕ, ಬೆಂಗಳೂರು, ರಾಜಕೀಯ ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ರೂಪಾಂತರಿ ಒಮಿಕ್ರಾನ್ ಹಾಗು ಡೆಲ್ಟಾ ಹೆಚ್ಚಳ ಹಿನ್ನೆಲೆಯಲ್ಲಿ ಮಾಲ್ ಹಾಗು ಚಿತ್ರಮಂದಿರದಲ್ಲಿ ಸಾರ್ವಜನಿಕರಿಗೆ ಶೇ50ರಷ್ಟು ಅನುಮತಿ ನೀಡುವ ಪ್ರಸ್ತಾವನೆಯನ್ನು ತಜ್ಞರ ಸಮಿತಿ ಮುಂದಿಟ್ಟು ಪರಿಶೀಲನೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ತಜ್ಞರ ಸಲಹೆಗಳನ್ನು ಪಡೆದು ನಿರ್ಧಾರ ಕೈಗೊಳ್ಳಲಾಗುವುದು. ಬೆಂಗಳೂರು ವೈದ್ಯರಿಗೆ ಒಮಿಕ್ರಾನ್ ಸೋಂಕು ಹಿನ್ನೆಲೆಯಲ್ಲಿ ಅವರ ಪ್ರಾಥಮಿಕ ಹಾಗು ದ್ವಿತೀಯ ಸಂಪರ್ಕ ಪತ್ತೆ ಮಾಡಿದ್ದೇವೆ ಎಂದು ತಿಳಿಸಿದರು. ಸಂಪುಟ ವಿಸ್ತರಣೆ …
Read More »
admin
December 6, 2021
Breaking News, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ವರದಿಗೆ ಎಚ್ಚೆತ್ತು ರಸ್ತೆ ಕಾಮಗಾರಿ ಪ್ರಾರಂಭ ಧಾರವಾಡ : ತೇಜಸ್ವಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಳೆಯಿಂದ ಸಂಪೂರ್ಣ ಹಾಳಾಗಿತ್ತು, ಈ ಕುರಿತು ಬಿಗ್ ಟಿವಿ ವಾಹಿನಿ ವರದಿ ಪ್ರಸಾರ ಮಾಡಿತ್ತು .ವರದಿಗೆ ಎಚ್ಚೆತ್ತು ಅಧಿಕಾರಿಗಳು ನಿನ್ನೆ ರಾತ್ರಿಯಿಂದಲೇ ರಸ್ತೆ ಕಾಮಗಾರಿ ಪ್ರಾರಂಭಿಸಿದ್ದು,ಇದು ಬಿಗ್ ಟಿವಿ ವಾಹನಿಯ ಬಿಗ್ ಇಂಪ್ಯಾಕ್ಟ್. ದುರಸ್ತಿ ಪಡಿಸೋ ಮುನ್ನ ರಸ್ತೆಯ ಸಾಂದರ್ಭಿಕ ಚಿತ್ರ ಒಟ್ಟಿನಲ್ಲಿ ನಿತ್ಯ ವಾಹನ ಸವಾರರ ಸಂಚಾರಕ್ಕೆ ಕಿರಿಕಿರಿಯಾಗಿದ್ದ ರಸ್ತೆಗೆ ಕೊನೆಗೂ …
Read More »
BigTv News
December 5, 2021
Breaking News, ಕರ್ನಾಟಕ, ಬೆಂಗಳೂರು, ರಾಜಕೀಯ ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ ರಾಜ್ಯದಲ್ಲಿ ಸಿಎಂ ಬದಲಾವಣೆ ಹೇಳಿಕೆ ವಿಚಾರ ಸಿಎಂ ಬದಲಾವಣೆ ಅನ್ನೋದು ಕೇವಲ ರುಮರ್ಸ್ ಅವರು ಹೇಳಿದ್ದು ಈಗಲೇ ಆಗ್ತಾರೆ ಅಂತ ಅಲ್ಲ ಬಸವರಾಜ ಬೊಮ್ಮಾಯಿ ಬದಲಾಗಲ್ಲ, ರಾಜ್ಯದ ನಾಯಕರಿಗೆ ಕೇಂದ್ರದ ಪರವಾಗಿ ನಾನು ಹೇಳುತ್ತಿದ್ದೇನೆ ಸಿಎಂ ಬದಲಾವಣೆ ಬಗ್ಗೆ ಯಾರು ಹಾಗೆ ಮಾತನಾಡಬಾರದು ಪ್ರಧಾನಿ ಮತ್ರಿಗಳನ್ನ ದೇವೇಗೌಡರು ಭೇಟಿಯಾಗಿದ್ರು ಆದ್ರೆ ಅದರಲ್ಲಿ ಯಾವುದೇ ರಾಜಕೀಯ ಇಲ್ಲ ಮೈತ್ರಿ ಬಗ್ಗೆ ನನಗೆ ಗೊತ್ತಿಲ್ಲ ಆದ್ರೆ ಹಾಸನದಲ್ಲಿ ಐಐಟಿ ಆಗಬೇಕು ಅಂತ …
Read More »
BigTv News
December 5, 2021
Breaking News, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ ಹುಬ್ಬಳ್ಳಿಯ ಗಬ್ಬೂರು ಬೈಪಾಸ್ ಬಳಿ ಹೊತ್ತಿ ಉರಿದ ಕಾರ್ಚವರ್ಲೆಟ್ ಟವೆರಾ ಕಾರ್ ಗೆ ತಗುಲಿದ ಬೆಂಕಿ ಬೆಂಕಿ ಹತ್ತಿದ ಕೆಲವೇ ನಿಮಿಷಗಳಲ್ಲಿ ಹೊತ್ತಿ ಉರಿದ ಕಾರ್ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಾರ್ ಎಂಜಿಂಗ್ ಗೆ ಬೆಂಕಿ ಎನ್ನುವ ಮಾಹಿತಿ ಸದ್ಯ ಕಾರ್ ಯಾರಿಗೆ ಸೇರಿದ್ದು, ಎಲ್ಲಿಗೆ ಹೊರಟಿದ್ರು ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ಬೆಂಕಿ ಅವರಿಸುತ್ತಿರುತ್ತಿದ್ದಂತೆ ಅದರಲ್ಲಿದ್ದ ಜನರು ಎಸ್ಕೇಪ್ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ …
Read More »
BigTv News
December 5, 2021
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಧಾರವಾಡ: ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಇತ್ತೀಚೆಗೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿಕೊಂಡು ಗಲಾಟೆ ಮಾಡಿದವರನ್ನು ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಮನು ಅಲಿಯಾಸ್ ಮನ್ಮಥ ಕೊರವರ ಎಂಬಾತನೂ ಆ ಗಲಾಟೆಯಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪದ ಮೇಲೆ ಧಾರವಾಡ ಉಪನಗರ ಠಾಣೆ ಪೊಲೀಸರು ಆತನನ್ನೂ ಕರೆತಂದು ವಿಚಾರಣೆ ನಡೆಸಿದ್ದಾರೆ. ಪೊಲೀಸರ ಈ ವಿಚಾರಣೆಯಿಂದ ಮನು ತನ್ನ ಕೈಗಳನ್ನು ಬ್ಲೇಡ್‌ನಿಂದ ಕೊಯ್ದುಕೊಂಡು ಅಸಮಾಧಾನ ಹೊರಹಾಕಿದ್ದಾನೆ. ನಾನು …
Read More »
admin
December 5, 2021
Breaking News, ಕರ್ನಾಟಕ, ಬೆಂಗಳೂರು
ಬೆಂಗಳೂರು: ರಾಜ್ಯ ಸರ್ಕಾರದಿಂದ ಇತ್ತೀಚಿಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇದ್ದಂತ 3 ಸಾವಿರ ಪರವಾನಗಿ ಭೂಮಾಪಕರ ಆಯ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಆದ್ರೇ ಈಗ ಈ ಅಧಿಸೂಚನೆಯನ್ನು ವಾಪಸ್ ಪಡೆಯಲಾಗಿದೆ. ಈ ಕುರಿತಂತೆ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಹೊಸದಾಗಿ ಪರವಾನಗಿ ಭೂಮಾಪಕರನ್ನು ಆಯ್ಕೆ ಮಾಡಿಕೊಳ್ಳುವ ಸಂಬಂಧ ಹೊರಡಿಸಿರುವ ಅಧಿಸೂಚನೆಯನ್ನು ವಿಧಾನ …
Read More »
BigTv News
December 4, 2021
Breaking News, ಕರ್ನಾಟಕ, ವಿಶೇಷ ಸುದ್ದಿ, ಹುಬ್ಬಳ್ಳಿ-ಧಾರವಾಡ
ಸಿದ್ದರೂಡರ ಮಠದಲ್ಲಿ ಕಾರ್ತಿಕ ದೀಪೋತ್ಸವ! ಹುಬ್ಬಳ್ಳಿ:– ಕಾರ್ತಿಕ ಮಾಸದ ಲಕ್ಷ ದೀಪೋತ್ಸವ ಸಂಭ್ರಮಕ್ಕೆ ದಿನಗಣನೆ ಆರಂಭ ಆಗಿದೆ ಆದರೆ ಕೊರೊನಾ ಹಿನ್ನಲೆಯಲ್ಲಿ ಸಿದ್ದರೂಡರ ಮಠದಲ್ಲಿಂದ ನಡೆಯಬೇಕಿದ್ದ, ಲಕ್ಷ ದೀಪೋತ್ಸವ ಕಾರ್ಯಕ್ರಮ ರದ್ದು ಆಗಿರುವ ಬೆನ್ನಲ್ಲೇ ಭಕ್ತರು ಮಾತ್ರ ಮಠದ ಆವರಣದಲ್ಲಿ, ಕಾರ್ತಿಕೋತ್ಸವ ಆಚರಣೆ ಮಾಡುತ್ತಿದ್ದಾರೆ.ದೀಪದೊಂದಿಗೆ, ಮಹಿಳೆಯರು ವೈಭವದ ದೀಪೋತ್ಸವ ಸಂಭ್ರಮಕ್ಕೆ ಮೆರುಗು ತಂದರು.
Read More »
admin
December 4, 2021
Breaking News, ಕರ್ನಾಟಕ, ಮೈಸೂರು
ಮೈಸೂರು: ಅಂಬೇಡ್ಕರ್ ಪ್ರತಿಮೆ ವಶ ಹಿನ್ನೆಲೆಯಲ್ಲಿ ಪಡುವಾರಹಳ್ಳಿ ನಿವಾಸಿಗಳು ಹಾಗೂ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದರು. ಮೈಸೂರಿನ ಮಾತೃ ಮಂಡಳಿ ವೃತ್ತದ ಬಳಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಾತೃ ಮಂಡಳಿ ವೃತ್ತ ಬಂದ್ ಮಾಡಿದ್ದು, ಇದರಿಂದಾಗಿ ಕೆಲ ಸಮಯ ವಾಹನ ಸವಾರರಿಗೆ ತೊಂದರೆ ಉಂಟಾಯಿತು. ಶಾಸಕ ಎಲ್.ನಾಗೇಂದ್ರ, ನಗರ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತರೆಡ್ಡಿ, ಡಿಸಿಪಿ ಪ್ರದೀಪ್ ಗುಂಟಿ ಸ್ಥಳಕ್ಕಾಗಮಿಸಿ ವಾತಾವರಣವನ್ನು ತಿಳಿಗೊಳಿಸಲು …
Read More »