BigTv News
October 20, 2026
Breaking News
ಚನ್ನಪಟ್ಟಣ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಾಯಕಾರಿ ಬೈಕ್ ವೀಲಿಂಗ್ ನಡೆಸಿ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿಬಿಟ್ಟಿದ್ದ 9 ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲಾ ಎಸ್‌ಪಿ ರೋಹನ್ ಜಗದೀಶ್ ಸೂಚನೆಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು, 13 ಬೈಕ್‌ಗಳನ್ನು ಜಪ್ತಿ ಮಾಡಿ, ಚನ್ನಪಟ್ಟಣ ಸಂಚಾರಿ ಠಾಣೆಯಲ್ಲಿ 6 ಎಫ್‌ಐಆರ್ ದಾಖಲಿಸಿದ್ದಾರೆ. ಹೆಚ್ಚು ಲೈಕ್ಸ್ ಹಾಗೂ ವೀಕ್ಷಣೆಗಾಗಿ ಯುವಕರು ಅಪಾಯಕಾರಿ ಸ್ಟಂಟ್ ನಡೆಸುತ್ತಿದ್ದರು ಎನ್ನಲಾಗಿದೆ. ಅಪ್ರಾಪ್ತರಿಗೆ ಠಾಣಾ ಜಾಮೀನು ನೀಡಿ ಬಿಡುಗಡೆ …
Read More »
BigTv News
October 20, 2026
Breaking News
ಬೆಂಗಳೂರು: ಪ್ರಿಯಕರನಿಗೆ ಸ್ನ್ಯಾಪ್‌ಚಾಟ್ ಮೂಲಕ ಕಳುಹಿಸಿದ್ದ ಖಾಸಗಿ ಫೋಟೋ ಹಾಗೂ ವೀಡಿಯೊಗಳು ಅಶ್ಲೀಲ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದ್ದು, 28 ವರ್ಷದ ಟೆಕ್ಕಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಇಂದಿರಾನಗರ ನಿವಾಸಿಯಾದ ಯುವತಿ, ಪ್ರಿಯಕರನ ಕೋರಿಕೆಯಂತೆ ಖಾಸಗಿ ದೃಶ್ಯಗಳನ್ನು ಕಳುಹಿಸಿದ್ದರು. ಬಳಿಕ ಅವು ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವುದು ಗಮನಕ್ಕೆ ಬಂದಿದ್ದು, ಸ್ನ್ಯಾಪ್‌ಚಾಟ್ ಖಾತೆ ಹ್ಯಾಕ್ ಆಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪೂರ್ವ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿರುವ ಯುವತಿ, ಖಾಸಗಿ ದೃಶ್ಯಗಳನ್ನು …
Read More »
BigTv News
October 20, 2026
Breaking News
ಬಾಗಲಕೋಟೆ: ಮುಧೋಳದ ವಿನಾಯಕ ನಗರದಲ್ಲಿ ದಸರಾ ದಂಡಿಯಾ ಕಾರ್ಯಕ್ರಮದ ವೇಳೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದ್ದು, ನಿತಿನ್ ನಿಂಬಾಳ್ಕರ್ (25) ಮೃತಪಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದನ್ನು ಪ್ರಶ್ನಿಸಿದ ವಿಚಾರಕ್ಕೆ ನಿತಿನ್ ಹಾಗೂ ಶ್ರೀನಿವಾಸ್ ಕಡರಿ ನಡುವೆ ಜಗಳ ನಡೆದಿದೆ. ಬಳಿಕ ಸ್ನೇಹಿತರೊಂದಿಗೆ ಮರಳಿದ ಶ್ರೀನಿವಾಸ್, ನಿತಿನ್‌ಗೆ ಚಾಕುವಿನಿಂದ ಇರಿದಿರುವ ಆರೋಪ ಕೇಳಿಬಂದಿದೆ. ಜಗಳ ತಡೆಯಲು ಬಂದ ನಿತಿನ್ ಚಿಕ್ಕಪ್ಪ ಸಂಜಯ್ ನಿಂಬಾಳ್ಕರ್ ಕೂಡ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಧೋಳ …
Read More »
BigTv News
October 20, 2026
Breaking News
ಕಲಬುರಗಿ: ಚಿತ್ತಾಪುರ ತಾಲೂಕಿನ ರಾಂಪುರಹಳ್ಳಿಯಲ್ಲಿ ರಸ್ತೆ ಕಾಮಗಾರಿ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ. ರಸ್ತೆ ಕಾಮಗಾರಿ ಕುರಿತು ಆರಂಭವಾದ ವಾಗ್ವಾದ ವಿಕೋಪಕ್ಕೆ ತಿರುಗಿ, ಎರಡೂ ಗುಂಪಿನವರು ದೊಣ್ಣೆಗಳಿಂದ ಪರಸ್ಪರ ಹಲ್ಲೆ ನಡೆಸಿದ್ದಾರೆ. ಗಾಯಾಳುಗಳನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಾಡಿ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿವೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read More »
BigTv News
October 20, 2026
Breaking News
ಕೊಪ್ಪಳ: ಮದುವೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ಖಾಸಗಿ ಶಾಲಾ ಶಿಕ್ಷಕಿ ಸಂಗೀತ ಮೇಟಿ ತುಂಗಭದ್ರಾ ಜಲಾಶಯದ ಹಿನ್ನೀರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಾತರಕಿ ಗ್ರಾಮದ ಸಂಗೀತ ಅ.19ರಂದು ಕೊಪ್ಪಳಕ್ಕೆ ಹೋಗುವುದಾಗಿ ಹೇಳಿ ತೆರಳಿದ್ದರು. ಇಂದು ಬೆಳಗ್ಗೆ ವಿಜಯನಗರ ಜಿಲ್ಲೆಯ ಗಡಿಭಾಗದಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಸುಮಾರು 14 ವರ್ಷಗಳಿಂದ ಸಂಬಂಧಿ ವಿಕಾಸ್‌ನನ್ನು ಪ್ರೀತಿಸುತ್ತಿದ್ದು, ಮದುವೆಗೆ ಆತನ ಸಹೋದರ ವಸಂತ್ ಹಾಗೂ ಪತ್ನಿ ರೇಣುಕಾ ಅಡ್ಡಿಪಡಿಸುತ್ತಿದ್ದಾರೆ ಎಂದು ಸಂಗೀತ …
Read More »
BigTv News
October 20, 2026
Breaking News
ಬಂಟ್ವಾಳ: ಸಿದ್ದಕಟ್ಟೆ ಜಂಕ್ಷನ್‌ನಲ್ಲಿ ಯುವಕನಿಗೆ ಚೂರಿಯಿಂದ ಇರಿದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಅಕ್ಟೋಬರ್ 18ರ ರಾತ್ರಿ ಸಂಗಬೆಟ್ಟು ನಿವಾಸಿ ಪ್ರಕಾಶ್ ಸ್ನೇಹಿತರೊಂದಿಗೆ ನಿಂತಿದ್ದ ವೇಳೆ ಆರು ಮಂದಿ ಆರೋಪಿಗಳು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಅಕ್ಷಿತ್ ಎಂಬಾತ ಚೂರಿಯಿಂದ ಹಲವು ಬಾರಿ ಇರಿದು ಗಾಯಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ. ಗಾಯಾಳುವಿನ ಸಹೋದರ ಗಣೇಶ್ ನೀಡಿದ ದೂರಿನ ಮೇರೆಗೆ ಕಿರಣ್ ಕೆ. …
Read More »
BigTv News
October 20, 2026
Breaking News
ನೆಲಮಂಗಲ: ಗಲಾಟೆ ಸಂಬಂಧ ಎಫ್‌ಐಆರ್ ದಾಖಲಿಸಿದ್ದಕ್ಕೆ ಆಕ್ರೋಶಗೊಂಡ ರೌಡಿಶೀಟರ್‌ವೊಬ್ಬ ಲಾಂಗ್ ಹಿಡಿದು ಮನೆಗೆ ನುಗ್ಗಿ ಕುಟುಂಬಕ್ಕೆ ಬೆದರಿಕೆ ಹಾಕಿರುವ ಘಟನೆ ತಾಲೂಕಿನ ಬೆಟ್ಟಹಳ್ಳಿ ಪಾಳ್ಯದಲ್ಲಿ ನಡೆದಿದೆ. ಯತೀಶ್ ಎಂಬಾತ ಬೈಕ್‌ನಲ್ಲಿ ಬಂದು ರಂಗಣ್ಣ ಎಂಬುವರ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾನೆ ಎನ್ನಲಾಗಿದೆ. ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಈ ಹಿಂದೆ ಎರಡೂ ಕಡೆಯವರ ನಡುವೆ ಗಲಾಟೆ ನಡೆದಿದ್ದು, ಅಕ್ಟೋಬರ್ 16ರಂದು ನ್ಯಾಯಾಲಯದ ಮೂಲಕ ಎಫ್‌ಐಆರ್ ದಾಖಲಿಸಲು ಅರ್ಜಿ ಸಲ್ಲಿಸಲಾಗಿತ್ತು. ಇದರಿಂದ ಆಕ್ರೋಶಗೊಂಡ …
Read More »
BigTv News
October 20, 2026
Breaking News
ವಿಜಯಪುರ: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಅಪಘಾತದ ರೂಪದಲ್ಲಿ ಕೊಲೆ ಮಾಡಿಸಿರುವ ಆರೋಪದಡಿ ಪತ್ನಿ ಸೇರಿದಂತೆ ನಾಲ್ವರನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ. ರಾಜಶೇಖರ್ ಕೊಲೆಯಾದ ವ್ಯಕ್ತಿಯಾಗಿದ್ದು, ಪತ್ನಿ ಅಶ್ವಿನಿ ಪ್ರಮುಖ ಆರೋಪಿಯಾಗಿದ್ದಾಳೆ. ಹೊಸ ಮನೆಯ ಪೇಂಟಿಂಗ್ ಕೆಲಸಕ್ಕೆ ಬಂದಿದ್ದ ಆನಂದ್ ಕಲ್ಲೂರನೊಂದಿಗೆ ಅಶ್ವಿನಿಗೆ ಪ್ರೇಮ ಸಂಬಂಧ ಬೆಳೆದಿತ್ತು ಎನ್ನಲಾಗಿದೆ. ಪತಿಯನ್ನು ಮುಗಿಸಲು ಸಂಚು ರೂಪಿಸಿದ್ದ ಆರೋಪಿಗಳು, ರಾಜಶೇಖರ್ ವಾಕಿಂಗ್‌ಗೆ ತೆರಳಿದ್ದ ವೇಳೆ ನಂಬರ್ ಪ್ಲೇಟ್ ಇಲ್ಲದ ಸ್ಕಾರ್ಪಿಯೋ ವಾಹನದಿಂದ ಡಿಕ್ಕಿ …
Read More »
BigTv News
October 20, 2026
Breaking News
ಆನೇಕಲ್: ಪತ್ನಿಯ ಅಕ್ರಮ ಸಂಬಂಧದ ಆರೋಪ ಹಾಗೂ ಮಾನಸಿಕ ಕಿರುಕುಳದಿಂದ ಮನನೊಂದು ಆಟೋ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ನೆರಿಗಾ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಮುನಿಕೃಷ್ಣ (35) ಎಂದು ಗುರುತಿಸಲಾಗಿದೆ. ಮುನಿಕೃಷ್ಣ ಅವರಿಗೆ 10 ವರ್ಷಗಳ ಹಿಂದೆ ನಯನಾ ಎಂಬುವರೊಂದಿಗೆ ವಿವಾಹವಾಗಿದ್ದು, ದಂಪತಿಗೆ 6 ವರ್ಷದ ಮಗನಿದ್ದಾನೆ. ಪತ್ನಿಗೆ ಅದೇ ಗ್ರಾಮದ ಕ್ಯಾಬ್ ಚಾಲಕ ಕುಮಾರ್ ಎಂಬಾತನೊಂದಿಗೆ ಅಕ್ರಮ ಸಂಬಂಧವಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ವಿಚಾರವಾಗಿ ದಂಪತಿ …
Read More »
BigTv News
October 20, 2026
Breaking News
ಬೆಂಗಳೂರು: ಬಾಡಿಗೆ ಹಣದ ವಿಚಾರವಾಗಿ ಮನೆ ಮಾಲಿಕರಾಗಿದ್ದ ವಕೀಲ ಮಂಜುನಾಥ್ (42) ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ವೈಟ್‌ಫೀಲ್ಡ್‌ನ ಪಟ್ಟಂದೂರು ಅಗ್ರಹಾರದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಕಳೆದ ನಾಲ್ಕು ತಿಂಗಳಿಂದ ಬಾಡಿಗೆ ನೀಡದ ವಿಚಾರಕ್ಕೆ ಜಗಳ ನಡೆದಿತ್ತು. ಆರೋಪಿಗಳು ಬಾಡಿಗೆ ಹಣ ನೀಡುವ ನೆಪದಲ್ಲಿ ಮಂಜುನಾಥ್ ಅವರನ್ನು ಮನೆಯಿಂದ ಹೊರಗೆ ಕರೆದು, ಹಣ ಎಣಿಸುತ್ತಿದ್ದ ವೇಳೆ ಕಂಟ್ರಿಮೇಡ್ ಪಿಸ್ತೂಲ್‌ನಿಂದ ಹಣೆ ಹಾಗೂ ಎದೆಗೆ ಮೂರು ಸುತ್ತು ಗುಂಡು ಹಾರಿಸಿ …
Read More »