Breaking News

Breaking News

ಹಸು ಮಾರಾಟ ಆರೋಪ: 2 ಪ್ರಕರಣ ದಾಖಲು

ಬಂಟ್ವಾಳ: ದನಕರುಗಳಿಗೆ ಮದ್ದು ನೀಡಲು ಹಾಗೂ ಕೃತಕ ಗರ್ಭದಾರಣೆ ಮಾಡುವ ಕಾರಣ ನೀಡಿ ತಂದ ಹಸುವನ್ನು ಮಾರಾಟ ಮಾಡಿದ ಆರೋಪದಲ್ಲಿ ಕಾವಳಮುಡೂರು ಗ್ರಾಮದ ಪ್ರಶಾಂತ್ ನಾಯ್ಕ್ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾವಳಪಡೂರುವಿನ ಮನೆಯಿಂದ ಪ್ರಶಾಂತ್ ನಾಯ್ಕ್ ಎಂಬವರು ದನಕರುಗಳನ್ನು ಮದ್ದು ನೀಡಲು ಹಾಗೂ ಕೃತಕ ಗರ್ಭಧಾರಣೆ ಮಾಡಲು 1 ಗಂಡು ಕರುವನ್ನು ತೆಗೆದುಕೊಂಡು ಹೋಗಿದ್ದಾರೆ. ಆದರೆ ಮನೆಯವರ ಅನುಮತಿ ಇಲ್ಲದೆ ಅವುಗಳನ್ನು ಮಾರಾಟ ಮಾಡಿರುವ ಮಾಹಿತಿ ಇದೆ …

Read More »

ಕರೆದ ತಕ್ಷಣ ಬರಲಿಲ್ಲ ಎಂಬ ಕಾರಣಕ್ಕೆ ಕೆಫೆ ಕಾರ್ಮಿಕನ ಮೇಲೆ ಕಾಂಗ್ರೆಸ್ ಕಾರ್ಯಕರ್ತನಿಂದ ಹಲ್ಲೆ

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಸಿಂಸೆ ಗ್ರಾಮದಲ್ಲಿ ಕರೆದ ತಕ್ಷಣ ಬರಲಿಲ್ಲ ಎಂಬ ಕಾರಣಕ್ಕೆ ನೇಪಾಳ ಮೂಲದ ಕೆಫೆ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತ ಹರ್ಷ ಹಾಗೂ ಆತನ ಸ್ನೇಹಿತ ಶಶಿ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ಬಾಬುರಾಮ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರಾತ್ರಿ ವೇಳೆ ಕೆಫೆಯ ಹೊರಗೆ ನಿಂತಿದ್ದ ಆರೋಪಿಗಳು ಕಾರ್ಮಿಕನನ್ನು ಕರೆದಿದ್ದು, ಆತ ತಡವಾಗಿ ಬಂದಿದ್ದಕ್ಕೆ ಆಕ್ರೋಶಗೊಂಡು …

Read More »

ವನ್ಯಜೀವಿ ಬೇಟೆಗಾರರನ್ನು ಬಂಧಿಸಲು ಹೋದ ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ! ನಾಲ್ವರ ಬಂಧನ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರ ಅರಣ್ಯ ಪ್ರದೇಶದಲ್ಲಿ ಕಾಡುಹಂದಿ ಬೇಟೆಯಾಡಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಆರೋಪಿಗಳನ್ನು ಬಂಧಿಸಲು ತೆರಳಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಬೇಟೆಗಾರರ ತಂಡ ಹಲ್ಲೆ ನಡೆಸಿದೆ. ಆರ್‌ಎಫ್‌ಒ ಭಾಗಪ್ಪಗೌಡ ಹಾಗೂ ಇಬ್ಬರು ಗಸ್ತುಪಾಲಕರನ್ನು ಆರೋಪಿಗಳು ಮರಕ್ಕೆ ಕಟ್ಟಿಹಾಕಿ ದೊಣ್ಣೆಗಳಿಂದ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ. ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಆರ್‌ಎಫ್‌ಒ ಭಾಗಪ್ಪಗೌಡ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಡುಹಂದಿ ಬೇಟೆಯ ವಿಡಿಯೋ …

Read More »

ಕಚೇರಿ ಒಳಗಡೆಯೇ ಮಾಜಿ ಪ್ರೇಯಸಿಯನ್ನು ಕೊಚ್ಚಿಕೊಂದ ಯುವಕ,

ಬೆಂಗಳೂರುದಲ್ಲಿ ಪ್ಯಾಕರ್ಸ್ ಮತ್ತು ಮೂವರ್ಸ್ ಕಂಪನಿಯೊಂದರಲ್ಲಿ ಯುವತಿಯ ಮೇಲೆ ಸಹೋದ್ಯೋಗಿಯೇ ಚಾಕುವಿನಿಂದ ದಾಳಿ ನಡೆಸಿ ಹತ್ಯೆ ಮಾಡಿದ ಘಟನೆ ನಡೆದಿದೆ. ಆರೋಪಿಯನ್ನು ಹರ್ಜಿಂದರ್ ಸಿಂಗ್ ಮಾನ್ ಅಲಿಯಾಸ್ ಹ್ಯಾರಿ ಎಂದು ಗುರುತಿಸಲಾಗಿದ್ದು, ಆತ ಮತ್ತು ಮೃತ ಯುವತಿ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರ ನಡುವೆ ಪ್ರೀತಿಯಿದ್ದು, ಸುಮಾರು ಆರು ತಿಂಗಳ ಹಿಂದೆ ಬ್ರೇಕಪ್ ಆಗಿತ್ತು ಎನ್ನಲಾಗಿದೆ. ಗುರುವಾರ ಸಂಜೆ ಕಂಪನಿಗೆ ಬಂದ ಆರೋಪಿ, ಯುವತಿಯ ಮೇಲೆ ಏಕಾಏಕಿ ದಾಳಿ …

Read More »

ಮನೆಯೊಳಗಿತ್ತು ಚಿತ್ರವಿಚಿತ್ರ ಹೆಬ್ಬಾವು, ಹಲ್ಲಿ, ಆಮೆ- ಖತರ್ನಾಕ್ ಡಾಕ್ಟರ್ ಗ್ಯಾಂಗ್ ಅರೆಸ್ಟ್!

ಬೆಂಗಳೂರು ನಗರದಲ್ಲಿ ಅಕ್ರಮವಾಗಿ ವಿದೇಶಿ ಹಾಗೂ ಅಪರೂಪದ ವನ್ಯಜೀವಿಗಳನ್ನು ಸಾಕಿದ್ದ ಆರೋಪದ ಮೇಲೆ ವೈದ್ಯ ಡಾ. ರಾಜ್ ಕಮಲ್ ಸೇರಿದಂತೆ ಆರು ಮಂದಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ವೈದ್ಯರ ಮನೆಯಲ್ಲಿ ನಡೆಸಿದ ದಾಳಿಯಲ್ಲಿ ಬಾಲ್ ಹೆಬ್ಬಾವು, ಅಪರೂಪದ ಆಮೆಗಳು ಹಾಗೂ ಇತರೆ ಎಕ್ಸೋಟಿಕ್ ಪ್ರಾಣಿ-ಪಕ್ಷಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಗಳ ಪ್ರಕಾರ, ಈ ಪ್ರಾಣಿಗಳನ್ನು ಸಾಕಲು ಅಗತ್ಯವಿರುವ ಯಾವುದೇ ಕಾನೂನುಬದ್ಧ ದಾಖಲೆಗಳು ಅಥವಾ ಪರವಾನಗಿಗಳು ಆರೋಪಿಗಳ ಬಳಿ ಇರಲಿಲ್ಲ. ದಾಳಿ ವೇಳೆ …

Read More »

ರು.2.95 ಲಕ್ಷ ಮೌಲ್ಯದ ಸ್ವತ್ತು ಕಳವು

ಕಲಬುರಗಿ: ಮನೆಯವರು ಮಾಳಿಗೆ ಮೇಲೆ ಮಲಗಿದ್ದಾಗ ರಾತ್ರಿ ಮನೆಯ ಬೀಗ ಮುರಿದು 2.95 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು ಮಾಡಿದ ಟನೆ ಶಹಬಜಾರ್​ನ ಸುವರ್ಣ ನಗರದ ಮನೆಯೊಂದರಲ್ಲಿ ನಡೆದಿದೆ. ಈರಣ್ಣ ದಂಡಿ ಅವರ ಮನೆಯಲ್ಲಿ ಕಳ್ಳತನವಾಗಿದೆ. ಈರಣ್ಣ ಅವರ ಮಗಳು, ಮೊಮ್ಮಕಳ ಜತೆಗೆ ರಾತ್ರಿ ಊಟ ಮಾಡಿ, 11ಗಂಟೆ ಸುಮಾರಿಗೆ ಮಾಳಿಗೆಯಲ್ಲಿ ಮಲಗಿದ್ದಾರೆ. ಮಧ್ಯರಾತ್ರಿ ಕಳ್ಳತನ ಮಾಡಲಾಗಿದೆ. ರಾತ್ರಿ 3.30ಗಂಟೆ ಸುಮಾರಿಗೆ ಮಳೆ ಬರುತ್ತಿದೆ ಎಂದು ಕೆಳಗೆ …

Read More »

ಉಗ್ರ ಸಂಘಟನೆ ಜತೆ ಸಂಪರ್ಕ ಇಬ್ಬರ ಬಂಧನ!

ತುಮಕೂರು: ಸಾಮಾಜಿಕ ಜಾಲತಾಣದ ಮೂಲಕ ಶತೃ ರಾಷ್ಟ್ರದ ಉಗ್ರ ಸಂಘಟನೆ ಜತೆ ಸಂಪರ್ಕ ಸಾಧಿಸಿರುವ ಶಂಕಿತರನ್ನು ಬಂಧಿಸಲಾಗಿದೆ. ಐಸಿಸ್ ಉಗ್ರ ಸಂಘಟನೆ ಜತೆ ಇನ್ ಸ್ಟಾಗ್ರಾಂ ಮೂಲಕ ಸಂಪರ್ಕ ಸಾಧಿಸಿರುವ ತುಮಕೂರಿನ ಅಲ್ಲಾಭಕ್ಷ ದಾವಣಗೆರೆಯ ಜಮೀರ್ ಖಾನ್ ಬಂಧಿತರು. ದೇಶಗಳಲ್ಲಿ ವಿದ್ವಾಂಸಕ ಕೃತ್ಯ ನಡೆಸಲು ಸ್ಕೆಚ್ ಹಾಕಿದ್ದ ತಂಡದ ಜತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಯುವಕರಿಬ್ಬರು ಸಂಪರ್ಕ ಹೊಂದಿದ್ದು ಭಯೋತ್ಪಾದಕ ಕೃತ್ಯಗಳಿಗೆ ಬೆಂಬಲ ಕೊಟ್ಟಿರುವ ಅನುಮಾನಗಳನ್ನು ‌ಮೂಡಿಸಿದೆ. ತುಮಕೂರು ನಗರ …

Read More »

ಪದವಿ ಓದುತ್ತಿದ್ದ ಯುವತಿಯ ಎಳೆದೊಯ್ದು ಅತ್ಯಾಚಾರ ಯತ್ನ

ಬೆಂಗಳೂರು: ಟೀ ಕುಡಿದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ 23 ವರ್ಷದ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಯನ್ನು ವೈಟ್‌ಫೀಲ್ಡ್‌ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಸೈಫಲ್‌ ಮಂಡಲ್‌ (27) ಬಂಧಿತ. ಆರೋಪಿ ಕೆಲ ವರ್ಷಗಳಿಂದ ನಗರದಲ್ಲಿ ಚಿಂದಿ ಆಯುವ ಕೆಲಸ ಮಾಡುತ್ತಿದ್ದ. ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಕೋರ್ಟ್‌ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಜೂನ್‌ 2 ರಂದು ವೈಟ್‌ಫೀಲ್ಡ್‌ …

Read More »

ಪ್ರವಾಸಿಗರ ಜೊತೆ ಗಲಾಟೆ: ಸುಳ್ಳು ದೂರು ನೀಡಿ ಪೊಲೀಸರನ್ನೇ ದಾರಿ ತಪ್ಪಿಸಿದ ಹೋಟೆಲ್ ಮಾಲೀಕ?

ಮಡಿಕೇರಿ: ಅಬ್ಬಿ ಜಲಪಾತ ವೀಕ್ಷಣೆಗೆ ಬಂದಿದ್ದ ಬೆಂಗಳೂರು ಮೂಲದ ಪ್ರವಾಸಿಗರ ತಂಡ ಹಾಗೂ ಖಾಸಗಿ ಹೋಟೆಲ್ ಮಾಲೀಕರ ನಡುವೆ ಚಿಪ್ಸ್ ತೆಗೆದುಕೊಂಡ ವಿಚಾರಕ್ಕೆ ವಾಗ್ವಾದ ನಡೆದಿದೆ. ಗಲಾಟೆ ತೀವ್ರಗೊಂಡ ಬಳಿಕ ಹೋಟೆಲ್ ಮಾಲೀಕ ಆಗ್ನೇಶ್, ಪ್ರವಾಸಿಗರು ತನ್ನ ಹಾಗೂ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇನ್ನೊಂದೆಡೆ, ಹೋಟೆಲ್ ಮಾಲೀಕನೇ ಪ್ರವಾಸಿಗರನ್ನು …

Read More »

ದಾವಣಗೆರೆಯಲ್ಲಿ ಇಬ್ಬರು ಶಂಕಿತ ಪಾಕ್‌ ಉಗ್ರರ ಸೆರೆ

ದಾವಣಗೆರೆಯಲ್ಲಿ ಅಡಗಿಕೊಂಡು ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರೆಂಬ ಆರೋಪದ ಮೇಲೆ ಇಬ್ಬರು ಶಂಕಿತ ಭಯೋತ್ಪಾದಕರನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ದಾವಣಗೆರೆಯ ಜಮೀರ್ ಖಾನ್ (22) ಹಾಗೂ ತುಮಕೂರಿನ ಅಲ್ಲಾಭಕ್ಷಿ ಎಂದು ಗುರುತಿಸಲಾಗಿದೆ. ಗುಪ್ತಚರ ಇಲಾಖೆಯ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಇಬ್ಬರೂ ವಿದೇಶದಲ್ಲಿದ್ದ ಉಗ್ರರೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕದಲ್ಲಿದ್ದರೆಂದು ಶಂಕಿಸಿದ್ದಾರೆ. ದೇಶದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಸಂಚು ರೂಪಿಸಿದ್ದ ಆರೋಪವೂ ಕೇಳಿಬಂದಿದೆ. ಸದ್ಯ …

Read More »