Breaking News

Breaking News

ಕಾರಿನ ಆಸೆ ತೋರಿಸಿ ಹಣಕ್ಕೆ ಕನ್ನ..! ಕಾರೂ ಇಲ್ಲ, ದುಡ್ಡೂ ಇಲ್ಲ..! ಯುವಕರಿಗೆ ವಂಚನೆ..!

News Audio ಹಗಲು ನಾಪತ್ತೆ, ಹಗಲು ಫೋನ್ ಸ್ವಿಚ್ ಆಫ್ ರಾತ್ರಿ ಫೋನ್ ಆನ್..! ವಿಡಿಯೋ–ಆಡಿಯೋ ದಾಖಲೆಗಳೊಂದಿಗೆ ವಂಚಕರ ಬಣ್ಣ ಬಯಲು..! ಮುಂದಿನ ವರದಿಯಲ್ಲಿ ಸ್ಫೋಟಕ ಬಹಿರಂಗ..! ಹಗಲು ಫೋನ್ ಸ್ವಿಚ್ ಆಫ್, ರಾತ್ರಿ ಮಾತ್ರ ಆನ್..! ಚೀಟರ್‌ಗಳ ಬಣ್ಣ ಬಯಲು..! ಸೆಕೆಂಡ್ ಹ್ಯಾಂಡ್ ಕಾರು ಕೊಡಿಸುವ ಹೆಸರಲ್ಲಿ ಹಣ ವಂಚನೆ ಆರೋಪ..! ಕಾರೂ ಇಲ್ಲ, ದುಡ್ಡೂ ಇಲ್ಲ..! ಹುಬ್ಬಳ್ಳಿ: ಹೌದು ವೀಕ್ಷಕರೇ..! ಸೆಕೆಂಡ್ ಹ್ಯಾಂಡ್ ಕಾರು ಕೊಡಿಸುವುದಾಗಿ ನಂಬಿಸಿ …

Read More »

ಶ್ರೀಗಂಧ ಸಾಗಾಟ; ವಾಹನ ಸಹಿತ ಇಬ್ಬರ ಬಂಧನ

ವಿರಾಜಪೇಟೆ: ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಯ ನಂಜರಾಯಪಟ್ಟಣ ಮಾರ್ಗವಾಗಿ ₹5 ಲಕ್ಷಕ್ಕೂ ಅಧಿಕ ಮೌಲ್ಯದ ಶ್ರೀಗಂಧ ಸಾಗಿಸುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಕಂಬಿಬಾಣೆ ಗಿರಿಜನ ಕಾಲನಿಯ ರಘು (34) ಮತ್ತು ಸುಂಟಿಕೊಪ್ಪದ ಸಂತೋಷ್ (40) ಬಂಧಿತರು. ಆರೋಪಿಗಳಿಂದ ಶ್ರೀಗಂಧದ ತುಂಡುಗಳು ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಪ್ರಮುಖ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.

Read More »

ಬೆಂಗಳೂರು: ಡ್ರೈವರ್​​​ ಮೇಲೆ ಗುಂಡಿನ ದಾಳಿ ಮಾಡಿದ ರಿಯಲ್ ಎಸ್ಟೇಟ್ ಉದ್ಯಮಿ!

ಬೆಂಗಳೂರು: ಪಿಳ್ಳಗಾನಹಳ್ಳಿ ನೈಸ್ ರಸ್ತೆ ಸೇತುವೆ ಬಳಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಸಂಪಂಗಿ, ಶ್ರೀನಿವಾಸ್ ಅಲಿಯಾಸ್ ಮೆಂಟಲ್ ಸೀನನ ಕಾಲಿಗೆ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಶ್ರೀನಿವಾಸ್ ಹಿಂದೆ ಸಂಪಂಗಿ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ವೈಯಕ್ತಿಕ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಒಂದು ವರ್ಷದ ಹಿಂದೆ ಶ್ರೀನಿವಾಸ್‌ನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಇತ್ತೀಚೆಗೆ ಶ್ರೀನಿವಾಸ್ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಸಂಪಂಗಿ ದೂರು ನೀಡಿದ್ದ. …

Read More »

ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದ ಸಲ್ಮಾನ್ ಖಾನ್ ಸಿಸಿಬಿ ಬಲೆಗೆ!

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದ್ದ ಆರೋಪದ ಮೇಲೆ ಸಲ್ಮಾನ್ ಖಾನ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ಗೃಹಲಕ್ಷ್ಮಿ ಲೇಔಟ್‌ನಲ್ಲಿ ಆರೋಪಿ ಲಾಂಗ್ ಹಿಡಿದು ವಿಡಿಯೋ ಮಾಡಿದ್ದ ಎನ್ನಲಾಗಿದೆ. ಈ ವಿಡಿಯೋ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಎರಡು ಲಾಂಗ್‌ಗಳನ್ನು ವಶಪಡಿಸಿಕೊಂಡು ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, …

Read More »

ಹಿರಿಯೂರು: ಲವ್‌ ಜಿಹಾದ್‌ಗೆ ಮಹಿಳೆ ಬಲಿ; ಐವರ ವಿರುದ್ಧ ಪ್ರಕರಣ ದಾಖಲು

ಚಿತ್ರದುರ್ಗ: ಹಿರಿಯೂರು ತಾಲೂಕಿನ ಹೊಸಯಳನಾಡು ಗ್ರಾಮದ ಆಶಾ (24), ಇಮ್ರಾನ್ (40) ಎಂಬ ವಾಹನ ಚಾಲಕನನ್ನು ಪ್ರೀತಿಸಿ 2023ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಎರಡೂವರೆ ವರ್ಷದ ಮಗುವಿದೆ. ಆಶಾ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದರೂ, ಪತ್ನಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂದು ಆಶಾ ಪೋಷಕರು ಆರೋಪಿಸಿ ದೂರು ದಾಖಲಿಸಿದ್ದಾರೆ. ಇದು ಲವ್‌ ಜಿಹಾದ್‌ ಪ್ರಕರಣ ಎಂದು ಆರೋಪಿಸಿರುವ ಹಿಂದೂಪರ ಸಂಘಟನೆಗಳು, ಘಟನೆ ಕುರಿತು ಸೂಕ್ತ ತನಿಖೆ ನಡೆಸುವಂತೆ …

Read More »

ಬೆಂಗಳೂರಿನಲ್ಲಿ ಫೈರಿಂಗ್: ಡ್ರೈವರ್​​​ ಮೇಲೆ ಗುಂಡಿನ ದಾಳಿ ಮಾಡಿದ ರಿಯಲ್ ಎಸ್ಟೇಟ್ ಉದ್ಯಮಿ

ಬೆಂಗಳೂರು, ಅ. 14: ಹಳೇ ದ್ವೇಷದ ಹಿನ್ನೆಲೆಯಲ್ಲಿ ಬೆಂಗಳೂರಿನ ಪಿಳ್ಳಗಾನಹಳ್ಳಿ ನೈಸ್ ರಸ್ತೆ ಸೇತುವೆ ಬಳಿ ರಿಯಲ್ ಎಸ್ಟೇಟ್ ಉದ್ಯಮಿ ಸಂಪಂಗಿ, ಶ್ರೀನಿವಾಸ್ ಅಲಿಯಾಸ್ ಮೆಂಟಲ್ ಸೀನನ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ಶ್ರೀನಿವಾಸ್ ಕಾಲಿಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರೀನಿವಾಸ್ ಹಿಂದೆ ಸಂಪಂಗಿ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ವೈಯಕ್ತಿಕ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿದ್ದರಿಂದ ಸುಮಾರು ಒಂದು ವರ್ಷದ ಹಿಂದೆ …

Read More »

ಹೊನ್ನಾಳಿಯಲ್ಲಿ ಹಳೆ ವೈಷಮ್ಯಕ್ಕೆ ಯುವಕನ ಬರ್ಬರ ಹತ್ಯೆ: 6 ಜನರ ವಿರುದ್ಧ ಪ್ರಕರಣ ದಾಖಲು

ಹೊನ್ನಾಳಿ: ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಬನ್ನಿ ಮಹಾಂಕಾಳಿ ದೇವಸ್ಥಾನದ ಸಮೀಪ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಆರು ಮಂದಿ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಹೊನ್ನಾಳಿ ನಿವಾಸಿ ಎಂ.ಕೆ. ಅಮಿತ್ (30) ಕೊಲೆಯಾದವರು. ಮಂಗಳವಾರ ರಾತ್ರಿ ದೇವಸ್ಥಾನದಲ್ಲಿ ಕಾರ್ಯಕ್ರಮ ಮುಗಿಸಿ ತಾಯಿಯೊಂದಿಗೆ ಮನೆಗೆ ಮರಳುತ್ತಿದ್ದ ಅಮಿತ್ ಮೇಲೆ ಸ್ಕೂಟರ್ ಮತ್ತು ಕಾರಿನಲ್ಲಿ ಬಂದ ಆರೋಪಿಗಳು ಖಾರದ ಪುಡಿ ಎರಚಿ ಮಚ್ಚು, ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ತೀವ್ರ ಗಾಯಗೊಂಡ ಅವರನ್ನು ಆಸ್ಪತ್ರೆಗೆ …

Read More »

ಬಿಲ್ ಪಾವತಿಸಲು 9 ಸಾವಿರ ಲಂಚಕ್ಕೆ ಬೇಡಿಕೆ: ಜೆಸ್ಕಾಂ ಅಧಿಕಾರಿಗಳು ಲೋಕಾ ಬಲೆಗೆ

ಯಾದಗಿರಿ: ಸುರಪುರ ತಾಲೂಕಿನಲ್ಲಿ ₹9,000 ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಜೆಸ್ಕಾಂನ ಇಬ್ಬರು ಕಿರಿಯ ಇಂಜಿನಿಯರ್‌ಗಳನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ತಿಂಥಣಿ ಗ್ರಾಮದ ಭೈರಣ್ಣ ಅವರಿಗೆ ಸೇರಿದ ₹3.63 ಲಕ್ಷ ಮೌಲ್ಯದ ಕಾಮಗಾರಿ ಎಂಟು ತಿಂಗಳ ಹಿಂದೆಯೇ ಪೂರ್ಣಗೊಂಡಿತ್ತು. ಬಿಲ್ ಪಾವತಿ ಮತ್ತು ಕಡತ ವಿಲೇವಾರಿಗೆ ಆರೋಪಿಗಳು ₹9,000 ಲಂಚ ಕೇಳಿದ್ದು, ಮೊದಲ ಕಂತಿನ ₹3,000 ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸಚಿನ್ ಯೇಡಕೆ ಹಾಗೂ ಶ್ರೀಶೈಲ್ …

Read More »

ಹಗಲೆಲ್ಲಾ ಹಳೆ ಪಾತ್ರೆ ಮಾರಾಟ – ಕತ್ತಲಲ್ಲಿ ಮನೆಗಳಿಗೆ ಕನ್ನ ಹಾಕ್ತಿದ್ದ ಗ್ಯಾಂಗ್ ಅರೆಸ್ಟ್

ಕೋಲಾರ: ಮುಳಬಾಗಿಲು ಪೊಲೀಸರು ಕಾರ್ಯಾಚರಣೆ ನಡೆಸಿ ತಮಿಳುನಾಡಿನ ತಿರುಪತ್ತೂರು ಮೂಲದ ಮುನಿರಾಜು, ಸತೀಶ್ ಕುಮಾರ್ ಮತ್ತು ಪೆರುಮಾಳ್ ಎಂಬ ಮೂವರು ಅಂತರರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಕೃಷ್ಣ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆರೋಪಿಗಳು ಹಗಲಿನಲ್ಲಿ ಹಳೆಯ ಪಾತ್ರೆ ಮಾರಾಟಗಾರರಂತೆ ಮನೆಗಳನ್ನು ಗುರುತಿಸಿ, ರಾತ್ರಿ ಬೀಗ ಹಾಕಿದ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದರು. ಮುಳಬಾಗಿಲಿನ ಟೀಚರ್ಸ್ ಕಾಲೋನಿ ಸೇರಿದಂತೆ ಜಿಲ್ಲೆಯ ಸುಮಾರು 10 ಕಡೆಗಳಲ್ಲಿ ಕಳ್ಳತನ ಎಸಗಿರುವ ಆರೋಪವಿದೆ. …

Read More »

ಕೋಲಾರ: ಲಂಚ ಪಡೆದಿದ್ದ ಭೂಮಾಪಕನಿಗೆ 4 ವರ್ಷ ಜೈಲು, ₹1 ಲಕ್ಷ ದಂಡ

ಕೋಲಾರ: ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದ ದ್ವಿತೀಯ ದರ್ಜೆ ಭೂಮಾಪಕ ಎಚ್.ಆರ್. ರಾಜೇಶ್‌ಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿದೆ. 2017ರ ಸೆಪ್ಟೆಂಬರ್ 15ರಂದು ಇ-ಸ್ವತ್ತು ಮಾಡಿಕೊಡಲು ₹3 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ₹2,500 ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. ಪ್ರಕರಣದ ವಿಚಾರಣೆ ವೇಳೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ವಿಜಯಕುಮಾರ್ ಎಂ. ಆನಂದಶೆಟ್ಟಿ ಅಕ್ಟೋಬರ್ …

Read More »