Breaking News

Breaking News

ಅನೈತಿಕ ಸಂಬಂಧದ ಆರೋಪದ ಹಿನ್ನೆಲೆ ಯುವಕನ ಬರ್ಬರ ಹತ್ಯೆ – ಆರೋಪಿ ಪರಾರಿ!

ದಾವಣಗೆರೆ: ಅನೈತಿಕ ಸಂಬಂಧದ ಆರೋಪದ ಹಿನ್ನೆಲೆಯಲ್ಲಿ ಹೊನ್ನಾಳಿ ಪಟ್ಟಣದ ದುರ್ಗಿಗುಡಿ ಪ್ರದೇಶದಲ್ಲಿ ಅಮಿತ್ (27) ಎಂಬ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಪುರಸಭೆಯಲ್ಲಿ ಚಾಲಕನಾಗಿದ್ದ ಅಮಿತ್, ದೇವಸ್ಥಾನಕ್ಕೆ ಬಂದಿದ್ದಾಗ ಗಣೇಶ್ ಎಂಬಾತನೊಂದಿಗೆ ಜಗಳ ನಡೆದಿದೆ ಎನ್ನಲಾಗಿದೆ. ಈ ವೇಳೆ ಗಣೇಶ್, ಅಮಿತ್ ಕಣ್ಣಿಗೆ ಕಾರದಪುಡಿ ಎರಚಿ ಚಾಕುವಿನಿಂದ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಅಮಿತ್, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಗಣೇಶ್ ಪತ್ನಿಯೊಂದಿಗೆ ಅಮಿತ್ …

Read More »

ಚೂರಿಯಿಂದ ಇರಿದು ಕೊಲ್ಲಲು ಯತ್ನ

ಮಂಗಳೂರು: ಲೇಡಿಗೋಷನ್ ಆಸ್ಪತ್ರೆ ಬಳಿಯ ಬಸ್ ತಂಗುದಾಣದಲ್ಲಿ ಕುಳಿತಿದ್ದ ವ್ಯಕ್ತಿಗೆ ಫೋನ್ ಕೇಳುವ ನೆಪದಲ್ಲಿ ಚೂರಿಯಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಘಟನೆ ಅ.11ರಂದು ರಾತ್ರಿ ನಡೆದಿದೆ. ನೆಕ್ರಾಜೆಯ ಸಿರಾಜು ಬಿ.ಎನ್. (35) ಗಾಯಗೊಂಡಿದ್ದು, ಆರೋಪಿ ಇರ್ಷಾದ್‌ನನ್ನು ಪೊಲೀಸರು ಬಂಧಿಸಿದ್ದಾರೆ. ರಾತ್ರಿ 10 ಗಂಟೆ ಸುಮಾರಿಗೆ ಸಿರಾಜು ಫೋನ್ ನೋಡುತ್ತಿದ್ದಾಗ ಬಂದ ಆರೋಪಿ, ಫೋನ್ ನೀಡುವಂತೆ ಕೇಳಿದ್ದಾನೆ. ನಿರಾಕರಿಸಿದಾಗ ಜಗಳವಾಡಿ, ಜೀವ ಬೆದರಿಕೆ ಹಾಕಿ ಕುತ್ತಿಗೆಗೆ ಚೂರಿಯಿಂದ ಇರಿಯಲು ಯತ್ನಿಸಿದ್ದಾನೆ. …

Read More »

ಮದುವೆಯಾಗುವುದಾಗಿ ನಂಬಿಸಿ ವಂಚನೆ: ಪ್ರೇಮಿಯ ಮನೆ ಮುಂದೆ ಯುವತಿಯ ಅಹೋರಾತ್ರಿ ಧರಣಿ!

ಕೋಲಾರ: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಯುವತಿಯೊಬ್ಬಳು ಮಾಲೂರು ತಾಲೂಕಿನ ಹನುಮನಾಯಕನಹಳ್ಳಿ ಗ್ರಾಮದ ಪೃಥ್ವಿರಾಜ್ ಮನೆ ಎದುರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಪೃಥ್ವಿರಾಜ್ ಹಾಗೂ ಯುವತಿ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿ, ಸುಮಾರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಮದುವೆಯಾಗುವುದಾಗಿ ನಂಬಿಸಿ ಬಳಿಕ ಜಾತಿಯ ನೆಪವೊಡ್ಡಿ ಮದುವೆಗೆ ನಿರಾಕರಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ. ಈ ಹಿಂದೆ ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ಪೃಥ್ವಿರಾಜ್‌ನನ್ನು ಬಂಧಿಸಿದ್ದರು. ಜಾಮೀನಿನ ಮೇಲೆ …

Read More »

1 ಎಕರೆ ಆಸ್ತಿಗಾಗಿ ಚಿಕ್ಕಪ್ಪನಿಂದಲೇ ತಂದೆ-ತಾಯಿ ಇಲ್ಲದ 15 ವರ್ಷದ ಬಾಲಕನ ಕೊಲೆ: ಅಣ್ಣ ಪ್ರೇಮದ ಊರಲಿ ಚಿತ್ರ ನೋಡಲು ಹೋದಾಗ ಕೃತ್ಯ!

ಬೆಂಗಳೂರು: ಆಸ್ತಿ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಅಣ್ಣನ 15 ವರ್ಷದ ಮಗನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಂದಿರಾ ಕಾಲೋನಿಯ ಕೃಷ್ಣ (15) ಕೊಲೆಯಾದ ಬಾಲಕ. ಆರೋಪಿ ಮೋಹನ್‌ (45)ನನ್ನು ಪೊಲೀಸರು ಬಂಧಿಸಿದ್ದಾರೆ. ಮುನಿರಾಜು ಅವರ ಪಿತ್ರಾರ್ಜಿತ ಒಂದು ಎಕರೆ ಜಮೀನಿನ ವಿಚಾರವಾಗಿ ಕುಟುಂಬದಲ್ಲಿ ವಿವಾದ ಉಂಟಾಗಿತ್ತು. ಜಮೀನು ಮಾರಾಟದ ಪ್ರಕ್ರಿಯೆಯಲ್ಲಿ ಅಣ್ಣನ ಮಕ್ಕಳಿಗೂ ಪಾಲು ಸಿಕ್ಕಿದ್ದರಿಂದ ದ್ವೇಷ ಬೆಳೆಸಿಕೊಂಡಿದ್ದ …

Read More »

ಬಳ್ಳಾರಿಯಲ್ಲಿ ಘೋರ ದುರಂತ : ಇಬ್ಬರು ಮಕ್ಕಳ ಜೊತೆಗೆ ಕಾಲುವೆಗೆ ಹಾರಿ ತಾಯಿ ಆತ್ಮಹತ್ಯೆ!

ಬಳ್ಳಾರಿ: ನಗರದ ಮಿಲ್ಲರ್ ಪೇಟೆ ಕಾಲುವೆಗೆ ಇಬ್ಬರು ಮಕ್ಕಳೊಂದಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಲತಿಫಾ ಸಿಮ್ರಾನ್ (29) ಹಾಗೂ ಮಕ್ಕಳಾದ ಮೊಹಮ್ಮದ್ ಅಯಾನ್ (3), ಆಯಿಷಾ ಫಾತಿಮಾ (2) ಕಾಲುವೆಗೆ ಹಾರಿದ್ದಾರೆ ಎನ್ನಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಕಾಲುವೆಯಲ್ಲಿ ತಾಯಿ ಲತಿಫಾ ಸಿಮ್ರಾನ್ ಅವರ ಮೃತದೇಹ ಪತ್ತೆಯಾಗಿದ್ದು, ಇಬ್ಬರು ಮಕ್ಕಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಘಟನೆ ಕುರಿತು ಬಳ್ಳಾರಿ …

Read More »

ಅಕ್ರಮ ಸಂಬಂಧ ಶಂಕೆ, 10 ವರ್ಷ ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯನ್ನೇ ಹತ್ಯೆಗೈದ ಪತಿ..!

ಮಂಡ್ಯ: ಮಳವಳ್ಳಿ ತಾಲ್ಲೂಕಿನ ಜವನಗಹಳ್ಳಿ ಗುಡ್ಡದಲ್ಲಿ ಪತ್ನಿ ಅರ್ಚನಾ (24) ಅವರನ್ನು ಕತ್ತು ಬಿಗಿದು ಕೊಲೆ ಮಾಡಿದ ಆರೋಪದ ಮೇಲೆ ಪತಿ ಚಂದ್ರಶೇಖರ್ ಅಲಿಯಾಸ್ ಚೇತನ್‌ನನ್ನು ಬೆಳಕವಾಡಿ ಪೊಲೀಸರು ಬಂಧಿಸಿದ್ದಾರೆ. ಐದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ದಂಪತಿ ನಡುವೆ ಅಕ್ರಮ ಸಂಬಂಧದ ವಿಚಾರವಾಗಿ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಅಕ್ಟೋಬರ್ 10ರಂದು ನಡೆದ ಗಲಾಟೆ ವೇಳೆ ಚಂದ್ರಶೇಖರ್ ವೇಲ್‌ನಿಂದ ಪತ್ನಿಯ ಕತ್ತು ಬಿಗಿದು ಕೊಲೆ ಮಾಡಿ, ಮೃತದೇಹವನ್ನು ಗುಡ್ಡದಲ್ಲಿ …

Read More »

ಎರಡನೇ ಮದುವೆಯೇ ಕಾರಣ… ಚಿಂತಾಮಣಿಯಲ್ಲಿ ನಡುಬೀದಿಯಲ್ಲೇ ಮಹಿಳೆಯ ಭೀಕರ ಹತ್ಯೆ!

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರದ ಅಂಜನಿ ಬಡಾವಣೆಯ ಫಿಲ್ಟರ್ ಬೀಟ್ ಸರ್ಕಲ್‌ನಲ್ಲಿ ಸುಮಿತ್ರಮ್ಮ (40) ಎಂಬ ಮಹಿಳೆಯನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮೊದಲ ಪತಿ ವೆಂಕಟರೆಡ್ಡಿಯೇ ಕೊಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಆತ ಪರಾರಿಯಾಗಿದ್ದಾನೆ. ಕಾಪ್ಪಲ್ಲಿ ಗ್ರಾಮದ ಸುಮಿತ್ರಮ್ಮ ಒಂದು ವರ್ಷದ ಹಿಂದೆ ಪತಿಯಿಂದ ದೂರವಾಗಿ ರಮೇಶ್ ಎಂಬುವವರನ್ನು ಎರಡನೇ ಮದುವೆಯಾಗಿದ್ದರು ಎನ್ನಲಾಗಿದೆ. ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇರುವಾಗಲೇ ಎರಡನೇ ಮದುವೆಯಾಗಿದ್ದ ವಿಚಾರವೇ …

Read More »

ಕೋಲಾರ: ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ 20 ವರ್ಷ ಶಿಕ್ಷೆ

ಕೋಲಾರ: 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮುಳಬಾಗಿಲು ತಾಲ್ಲೂಕಿನ ಪಿ. ಗಂಗಾಪುರ ಗ್ರಾಮದ ಶಿವಕುಮಾರ್‌ಗೆ ಪೋಕ್ಸೋ ವಿಶೇಷ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ಹಾಗೂ ₹40 ಸಾವಿರ ದಂಡ ವಿಧಿಸಿದೆ. 2023ರ ಸೆಪ್ಟೆಂಬರ್ 30ರಂದು ದಾಖಲಾದ ದೂರಿನ ಮೇರೆಗೆ ನಂಗಲಿ ಪೊಲೀಸರು ಪೋಕ್ಸೋ ಹಾಗೂ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ …

Read More »

ಕುಂದಾಪುರ : ಪತಿಯ ಕಿರುಕುಳಕ್ಕೆ ಮನನೊಂದ ಗೃಹಿಣಿ ಫಿನಾಯಿಲ್‌ ಸೇವನೆ, ದೂರು ದಾಖಲು

ಉಡುಪಿ: ಪತಿಯ ಕಿರುಕುಳದಿಂದ ಮನನೊಂದ ಗೃಹಿಣಿಯೊಬ್ಬರು ಫಿನಾಯಿಲ್ ಸೇವಿಸಿ ಅಸ್ವಸ್ಥಗೊಂಡ ಘಟನೆ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆಲೂರಿನ ಜಯಶ್ರೀ ಅಸ್ವಸ್ಥಗೊಂಡ ಮಹಿಳೆ. 2024ರ ನವೆಂಬರ್‌ನಲ್ಲಿ ಅಮಾಸೆಬೈಲಿನ ಪ್ರಕಾಶ್ ಆಚಾರ್ಯ ಅವರನ್ನು ವಿವಾಹವಾಗಿದ್ದರು. ಮದುವೆಯ ಬಳಿಕ ಪತಿಯ ಅಣ್ಣ ಪ್ರಭಾಕರ ಹಾಗೂ ತಂಗಿ ಪ್ರಶಾಂತಿ ಕಿರುಕುಳ ನೀಡುತ್ತಿದ್ದರು ಎಂದು ಜಯಶ್ರೀ ಆರೋಪಿಸಿದ್ದಾರೆ. 2025ರ ಡಿಸೆಂಬರ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಪತಿ ಆರು ತಿಂಗಳಿಂದ ಮನೆಗೆ ಬಾರದೆ …

Read More »

ಬೆಂಗಳೂರು ಪಬ್​ನಲ್ಲಿ ಐಡಿ ಕಾರ್ಡ್​ ಕೇಳಿದ್ದಕ್ಕೆ ಇನ್​ಸ್ಪೆಕ್ಟರ್ ಕಪಾಳಕ್ಕೆ ಹೊಡೆದ ಐಎಎಸ್​ ಅಧಿಕಾರಿ: FIR ದಾಖಲು

ಬೆಂಗಳೂರು: ನಗರದ ಕಬ್ಬನ್ ಪಾರ್ಕ್ ಠಾಣೆ ವ್ಯಾಪ್ತಿಯ ಪಬ್‌ನಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್ ಮೇಲೆ ಹಲ್ಲೆ ನಡೆಸಿ ಗಲಾಟೆ ಮಾಡಿದ ಆರೋಪದಡಿ ಆಂಧ್ರಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿ ವಿಕಾಸ್ ಮರ್ಮಠ್ ಹಾಗೂ ಅವರ ಮೂವರು ಸ್ನೇಹಿತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವಿಕಾಸ್ ಮರ್ಮಠ್ ಅವರು ಸ್ನೇಹಿತರಾದ ನಿತೇಶ್, ಅಭಯ್, ಉದಯ್ ಸಿಂಗ್ ಮತ್ತು ರೋಷನ್ ಅವರೊಂದಿಗೆ ಪಬ್‌ಗೆ ಬಂದಿದ್ದರು ಎನ್ನಲಾಗಿದೆ. ರಾತ್ರಿ 1.30ರ ಸುಮಾರಿಗೆ ಪರಿಶೀಲನೆಗೆ ತೆರಳಿದ್ದ ಸಿಸಿಬಿ ಅಧಿಕಾರಿಗಳು ಗುರುತಿನ …

Read More »