Breaking News

Breaking News

ವಾಟ್ಸ್‌ಆಯಪ್‌ಗೆ ಲಿಂಕ್‌ ಕಳಿಸಿ ವ್ಯಕ್ತಿಗೆ 3 ಲಕ್ಷ ರೂ. ವಂಚನೆ

ರಾಮನಗರ: ವ್ಯಕ್ತಿಯೊಬ್ಬರಿಗೆ ಆರ್‌ಟಿಒ ಚಲನ್‌ ಹೆಸರಿನ ಎಪಿಕೆ ಆಯಪ್‌ ಲಿಂಕ್‌ ಅನ್ನು ವಾಟ್ಸ್‌ಆಯಪ್‌ಗೆ ಕಳುಹಿಸಿ, ಲಿಂಕ್‌ ತೆರೆಯುತ್ತಿದ್ದಂತೆ ಬ್ಯಾಂಕ್‌ ಖಾತೆಯಲ್ಲಿದ್ದ 3 ಲಕ್ಷ ರೂ. ಹಣವನ್ನು ಸೈಬರ್‌ವಂಚಕರು ಡ್ರಾ ಮಾಡಿಕೊಂಡಿರುವ ಘಟನೆ ಮಾಗಡಿ ತಾಲೂಕಿನ ಬಿಟ್ಟಸಂದ್ರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಸೈಯ್ಯದ್‌ ಮುಬಾರಕ್‌ ಎಂಬುವರ ವಾಟ್ಸ್‌ಆಯಪ್‌ ಸಂಖ್ಯೆಗೆ ಸೈಬರ್‌ವಂಚಕರು ಎಪಿಕೆ ಲಿಂಕ್‌ ಕಳುಹಿಸಿದ್ದಾರೆ. ಲಿಂಕ್‌ಮೇಲೆ ಕ್ಲಿಕ್‌ ಮಾಡಿ ಆಯಪ್‌ ಅನ್ನು ಡೌನ್‌ಲೌಡ್‌ ಮಾಡುತ್ತಿದ್ದಂತೆ ವಂಚಕರು ಅವರ ಬ್ಯಾಂಕ್‌ ಖಾತೆ …

Read More »

ಲೈಂಗಿಕ ದೌರ್ಜನ್ಯದ ದೃಶ್ಯಾವಳಿ ಸೆರೆ ಹಿಡಿದವನ ಸೆರೆ

ಹುಬ್ಬಳ್ಳಿ: ಹಿಂದೂ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅಂದಿನ ದೃಶ್ಯಾವಳಿ ಸೆರೆ ಹಿಡಿದಿದ್ದ ಡ್ಯಾಪ್ಸನ್ ಹೆಲ್ತ್ ಕೇರ್ ಇನ್ಶೂರೆನ್ಸ್ ಕಂಪನಿಯ ಸೀನಿಯರ್ ಅಕೌಂಟ್ ರಿಸೀವರ್ ಅಸೋಸಿಯೇಟ್ ನವನಗರದ ಅಬ್ದುಲ್ ಮಲಿಕ್ ಶೇಖ್‌ನನ್ನು ಇಲ್ಲಿಯ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯುವತಿಯನ್ನು ಖಾಸಗಿ ಹೋಟೆಲ್‌ಗೆ ಕರೆದುಕೊಂಡು ಹೋಗಿ ಅಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಇದನ್ನು ತನ್ನ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದುಕೊಂಡಿದ್ದ. ಯುವತಿ ಕೈಗೆ ಮೊಬೈಲ್ ಪೋನ್ ಸಿಕ್ಕಾಗಿ ಈ ವಿಷಯ …

Read More »

ಕನಕಪುರ: ಬೀಡಿ ಕೊಡದ ವ್ಯಕ್ತಿ ಮೇಲೆ ಕುಡುಗೋಲಿನಿಂದ ಹಲ್ಲೆ

ಕನಕಪುರ: ಹಾರೋಹಳ್ಳಿ ತಾಲ್ಲೂಕಿನ ಮರಳವಾಡಿ ಹೋಬಳಿ ದುನ್ನಸಂದ್ರ ಗ್ರಾಮದಲ್ಲಿ ಗುರುವಾರ ಸೇದಲು ಬೀಡಿ ಕೊಡದ ವ್ಯಕ್ತಿ ಮೇಲೆ ಮತ್ತೊಬ್ಬ ಕುಡುಗೋಲಿನಿಂದ ಹಲ್ಲೆ ಮಾಡಿದ್ದಾನೆ. ಗುರುವಾರ ಮಧ್ಯಾಹ್ನ ಗ್ರಾಮದ ದೇವಸ್ಥಾನದ ಬಳಿ ಕುಳಿತಿದ್ದ ಚಂದ್ರಾಚಾರ್ ಅವರನ್ನು ಗ್ರಾಮದ ಗವೀಶ ಬೀಡಿ ಕೇಳಿದ್ದಾನೆ. ಬೀಡಿ ಇಲ್ಲ ಎಂದು ಹೇಳಿದ ಚಂದ್ರಚಾರ್ ಅವರನ್ನು ಮದ್ಯ ಕುಡಿಯಲು ಮನೆಯ ಹಿಂಭಾಗಕ್ಕೆ ಕರೆದೊಯ್ದ ಗವೀಶ, ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ. ಚಂದ್ರಚಾರ್ ರಕ್ಷಣೆಗಾಗಿ ಕೂಗಿಕೊಂಡಾಗ ಗವೀಶ ಸ್ಥಳದಿಂದ ಓಡಿ …

Read More »

ಮಚ್ಚು ಹಿಡಿದು ಪುಂಡಾಟ; ಚನ್ನಗಿರಿ ತಾಲ್ಲೂಕಿನ ಮರವಂಜಿ ಗ್ರಾಮದಲ್ಲಿ ಬಂಧನ

ಚನ್ನಗಿರಿ: ವ್ಯಕ್ತಿಯೊಬ್ಬ ಕೈಯಲ್ಲಿ ಹರಿತವಾದ ಮಚ್ಚನ್ನು ಹಿಡಿದು ಬೀರೂರು- ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನಗಳನ್ನು ತಡೆದು ಚಾಲಕರನ್ನು ಹೆದರಿಸಿದ ಘಟನೆ ತಾಲ್ಲೂಕಿನ ಮರವಂಜಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಅದೇ ಗ್ರಾಮದ ಕಾರ್ತಿಕ್ ಪುಂಡಾಟ ಮೆರೆದಿದ್ದು, ಕಾರು, ಬಸ್ಸು, ಲಾರಿ ಹಾಗೂ ಇನ್ನಿತರ ವಾಹನಗಳನ್ನು ತಡೆದು ಚಾಲಕರಿಗೆ ತೊಂದರೆ ನೀಡಿದ್ದಾನೆ. ಕೌಟುಂಬಿಕ ಜಗಳದ ಕಾರಣಕ್ಕೆ ಹೆಂಡತಿಯನ್ನು ಕೊಲೆ ಮಾಡುವುದಾಗಿ ಹೇಳಿಕೊಂಡು ಕೈಯಲ್ಲಿ ಮಚ್ಚು ಹಿಡಿದು ರಾಜ್ಯ ಹೆದ್ದಾರಿಗೆ ಬಂದಿದ್ದಾನೆ. ಈ …

Read More »

ಚಾಮರಾಜನಗರ: ರಾಜಕೀಯ ದ್ವೇಷ; ಚೂರಿಯಿಂದ ಹಲ್ಲೆ

ಚಾಮರಾಜನಗರ: ತಾಲ್ಲೂಕಿನ ಹೊಂಗನೂರು ಗ್ರಾಮದಲ್ಲಿ ಈಚೆಗೆ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಮಹದೇವಯ್ಯ ಎಂಬುವರಿಗೆ ಚೂರಿಯಿಂದ ಹಲ್ಲೆ ಮಾಡಲಾಗಿದೆ. ಮಹದೇವಯ್ಯ ಅವರಿಗೆ ಸಿಮ್ಸ್‌ನಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಹಲ್ಲೆ ಸಂಬಂಧ ಮಹದೇವಸ್ವಾಮಿ ಎಂಬುವರ ವಿರುದ್ಧ ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌ ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಹಲ್ಲೆ ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Read More »

ಮಾದಕವಸ್ತು ಸೇವನೆ, ಮೂವರ ಅರೆಸ್ಟ್

ಮೂಲ್ಕಿ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ವಿಶೇಷ ರೌಂಡ್ಸ್ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಕೊಳಚಿಕಂಬಳ ನದಿ ಬದಿ ಓರ್ವ ವ್ಯಕ್ತಿ ಹೊಗೆಬತ್ತಿ ಸೇದುತ್ತಿರುವುದು ಕಂಡುಬಂದಿದೆ. ಆತನನ್ನು ವಿಚಾರಿಸಿದಾಗ ಹೊಗೆ ಬತ್ತಿಯೊಂದಿಗೆ ಗಾಂಜವನ್ನು ಸೇವಿಸಿರುವುದಾಗಿ ತಿಳಿಸಿದ್ದಾನೆ. ಆರೋಪಿ ಕೆ. ಎಸ್.ರಾವ್ ನಗರದ ನಿವಾಸಿ ಮೊಹಮ್ಮದ್ ಅಖಿಲ್( 24) ನನ್ನು ವಶಕ್ಕೆ ಪಡೆದು ವ್ಯೆದ್ಯಕೀಯ ತಪಾಸಣೆ ನಡೆಸಿದಾಗ ಮಾದಕ ದೃವ್ಯ ಸೇವನೆ ಮಾಡಿರುವುದು ದೃಢಪಟ್ಟಿದೆ. ಇನ್ನೊಂದು ಪ್ರಕರಣದಲ್ಲಿ ಬಪ್ಪನಾಡು ಶಾಂಭವಿ ಸೇತುವೆ ಬಳಿ ಓರ್ವ ಅಮಲಿನಲ್ಲಿ …

Read More »

ಕುಣಿಗಲ್ -ಕಾರು ಮತ್ತು ಲಾರಿ ನಡುವೆ ಭೀಕರ ರಸ್ತೆ ಅಪಘಾತ – ಕಾರಿನಲ್ಲಿದ್ದ ನಾಲ್ವರು ಸಾವು

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ಶನಿವಾರ ಲಾರಿ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂಡ್ಯದ ಗಾಯತ್ರಿ, (63) ಪತಿ ಕುಮಾರ ನರಸಿಂಹ ಸ್ವಾಮಿ(65) ಮೃತರು. ಮತ್ತಿಬ್ಬರ ವಿಳಾಸ ಇನ್ನೂ ಪತ್ತೆಯಾಗಿಲ್ಲ. ತುಮಕೂರು ಕಡೆಯಿಂದ ಹೊರಟಿದ್ದ ಕಾರಿಗೆ ಎದುರುಗಡೆಯಿಂದ ಬಂದ ಲಾರಿ ಡಿಕ್ಕಿಯಾಗಿದೆ. ಕಾರಿನಲ್ಲಿದ್ದ ಎಲ್ಲರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಲಾರಿ ಡಿಕ್ಕಿ ಹೊಡೆದು ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಪೋಲಿಸರು …

Read More »

ದಾಂಡೇಲಿ: ಡ್ರಗ್ಸ್ ಪೆಡ್ಲರ್‌ ಬಂಧನ

ದಾಂಡೇಲಿ: ಮಾದಕ ವಸ್ತುಗಳ ಸಂಗ್ರಹ, ಮಾರಾಟ ಪ್ರಕರಣದಲ್ಲಿ ಸಿಲುಕಿದ್ದ ಇಲ್ಲಿನ ಸುಭಾಷ ನಗರದ ನಿವಾಸಿ ಆಯಾನ್ ಶಾನವಾಜ್ ಇಮ್ಮಿಯಾಜ್ ಖಾನ್ (22) ಎಂಬಾತನನ್ನು ಬಂಧಿಸಿ, ಬಳ್ಳಾರಿ ಕಾರಾಗೃಹಕ್ಕೆ ರವಾನಿಸಲಾಗಿದೆ. ‘ಮಾದಕ ವಸ್ತುಗಳನ್ನು ಸಂಗ್ರಹ, ಸಾಗಾಟ, ಸರಬರಾಜು ಮತ್ತು ಮಾರಾಟ ಮಾಡುವ ವೃತ್ತಿಪರ ಡ್ರಗ್ ಪೆಡ್ಲರ್ ಆಗಿದ್ದ ಆಯಾನ್ ಮೇಲೆ ದಾಂಡೇಲಿ ಠಾಣೆಯಲ್ಲಿ 5 ಹಾಗೂ ಹುಬ್ಬಳ್ಳಿ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದೆ. ಹಲವಾರು ಬಾರಿ ನ್ಯಾಯಾಂಗ …

Read More »

ಕಲಬುರಗಿ: ಹಣ ದ್ವಿಗುಣ ಗೊಳಿಸುವುದಾಗಿ ನಂಬಿಸಿ ₹2.90 ಕೋಟಿ ವಂಚನೆ

ಕಲಬುರಗಿ: ಹಣ ದ್ವಿಗುಣ ಗೊಳಿಸುವುದಾಗಿ ನಂಬಿಸಿ ಮಹಿಳೆಯೊಬ್ಬರು 32 ಜನರಿಗೆ ₹2.90 ಕೋಟಿ ವಂಚಿಸಿರುವ ಕುರಿತು ವಿಶ್ವವಿದ್ಯಾಲಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿನ ಸಭಾಫಂಕ್ಷನ್‌ ಹಾಲ್‌ ಹತ್ತಿರದ ನಿವಾಸಿ ಮಿರಾಜ ಬೇಗಂ ಸೈಯದ್‌ ಸಮೀರ ಖಾನ್‌ ಅವರ ವಿರುದ್ಧ ಸಮಾಜ ಸೇವಕಿ ಫಾತಿಮಾ ಖಾನ್‌ ಫಿರೋಜ ಖಾನ್‌ ದೂರು ನೀಡಿದ್ದಾರೆ. ‘ಖಾಸಗಿ ಕಂಪನಿಯ ಏಜೆನ್ಸಿ ಇದ್ದು, ಹಣ ಕೊಟ್ಟರೆ ಹೆಚ್ಚಿನ ಹಣ ಮರಳಿಸುವ ಆಮಿಷ ಒಡ್ಡಿದ್ದರು. ಫೆ.6ರಂದು ₹10 …

Read More »

ಗಾಂಜಾ ಸೇವನೆ: ನಾಲ್ವರ ಬಂಧನ

ಮಂಗಳೂರು: ಶಕ್ತಿನಗರದ ರಾಜೀವ ನಗರ ಬಳಿ ಮತ್ತು ನಗರದ ಸೆಂಟ್ರಲ್‌ ರೈಲ್ವೇ ನಿಲ್ದಾಣ ಬಳಿ ಗಾಂಜಾ ಸೇವನೆ ಮಾಡಿದ ಆರೋಪದಡಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಶಕ್ತಿನಗರದ ರಾಜೀವನಗರ ಬಳಿ ಶಕ್ತಿನಗರ ಮುಗ್ರೋಡಿ ನಿವಾಸಿ ರಾಹುಲ್‌ (28) ಎಂಬಾತನನ್ನು ಮಂಗಳೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ನಗರದ ಸೆಂಟ್ರಲ್‌ ರೈಲು ನಿಲ್ದಾಣ ಬಳಿ ವೆಲೆನ್ಸಿಯಾ ಸೂಟರ್‌ಪೇಟೆ ನಿವಾಸಿ ಜೇಸನ್‌ ಮಾಡ್ತ (23), ಬಿಕರ್ನಕಟ್ಟೆ ಕಲ್ಪನೆ ನಿವಾಸಿ …

Read More »