BigTv News
May 9, 2026
Breaking News
ಬೆಳಗಾವಿ ನಗರದಲ್ಲಿ ಇತ್ತಿಚೆಗೆ ಹೆಚ್ಚುತ್ತಿರುವ ಸ್ಟಾಬಿಂಗ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ಬೆಳಗಾವಿ ನಗರದ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ “ಆಯಂಟಿ ಸ್ಟಾಬಿಂಗ್ ಸ್ಕ್ವಾಡ್” ತಂಡದಿಂದ ಪರಿಶೀಲನೆ ಮುಂದುವರೆಸಲಾಗಿದೆ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮುಚ್ಚಂಡಿ-ಬುಡ್ಯಾನೂರ ರಸ್ತೆಯಲ್ಲಿ ಆರೋಪಿತನಾದ ಕಿರಣ ದುರ್ಗಪ್ಪ ಕಡ್ಯಾಗೋಳ (22) ಎಂಬಾಗ ಕಾನೂನು ಬಾಹಿರವಾಗಿ ಅರಣ್ಯ ಪ್ರದೇಶದ ಗಿಡಗಂಟಿಗಳಲ್ಲಿ ನಿಂತು ಕೈಯಲ್ಲಿ ಕಬ್ಬಿಣದ ಕುಡುಗೋಲ ಹಿಡಿದು ಜಳಪಳಿಸುತ್ತಿದ್ದ. ಈ ವೇಳೆ …
Read More »
BigTv News
May 9, 2026
Breaking News
ಹಾರೋಹಳ್ಳಿ: ಚಿನ್ನದ ಮಾಂಗಲ್ಯ ಕಿತ್ತು ಪರಾರಿಯಾಗಿದ್ದ ಆರೋಪಿಗಳನ್ನು ಹಾರೋಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆನೇಕಲ್ ತಾಲೂಕಿನ ತಿಮ್ಮರಾಯಸ್ವಾಮಿ ದಿಣ್ಣೆ ಕುವೆಂಪುನಗರದ ಆಟೋ ಚಾಲಕ ಲೋಕೇಶ (41), ಮಟ್ಟನಹಳ್ಳಿ ಲಾರಿ ಚಾಲಕ ರಮೇಶ್ ವಿ. ಬಿನ್ ಲೇಟ್ ವೆಂಕಟರಮಣಪ್ಪ (43) ಬಂಧಿತರು. ಆನೇಕಲ್&ಹಾರೋಹಳ್ಳಿ ಮುಖ್ಯರಸ್ತೆಯ ನರಿಪುರಗೇಟ್ ಬಳಿ ಸೋಮವಾರ ಸಂಜೆ ಲ್ಮಮ್ಮ ಎಂಬುವವರು ನೀರು ತೆಗೆದುಕೊಳ್ಳಲು ಬಂದಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಈ ಇಬ್ಬರು ಲಕ್ಷ್ಮಮ್ಮ ಅವರನ್ನು ಅಡ್ಡಗಟ್ಟಿ ಚಿನ್ನದ …
Read More »
BigTv News
May 9, 2026
Breaking News
ಶಿಡ್ಲಘಟ್ಟ: ನಗರದ ಪೊಲೀಸರು ದ್ವಿಚಕ್ರ ವಾಹನ ಕಳ್ಳನನ್ನು ಬಂಧಿಸಿ, ಐದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇದಾಯತ್ ಎಂಬುವವರು ಸರ್ಕಾರಿ ಆಸ್ಪತ್ರೆಯ ಬಳಿ ಬಿಟ್ಟಿದ್ದ ತಮ್ಮ ದ್ವಿಚಕ್ರ ವಾಹನ ಕಳ್ಳತನವಾಗಿರುವ ಬಗ್ಗೆ ದೂರು ನೀಡಿದ್ದರು. ಸರ್ಕಲ್ ಇನ್‌ಸ್ಪೆಕ್ಟರ್ ಆನಂದ್ ಕುಮಾರ್ ನೇತೃತ್ವದಲ್ಲಿ ಪಿಎಸ್‌ಐ ವೇಣುಗೋಪಾಲ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಶೀನಿವಾಸಪುರ ನಿವಾಸಿ ಸೈಯದ್ ಯಾಸೀನ್ ಪಾಷಾ ಎಂಬ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
Read More »
BigTv News
May 9, 2026
Breaking News
ಕನಕಪುರ: ತಾಲ್ಲೂಕಿನ ಗಡಿಭಾಗ ಭೀಮಗೊಂಡನಹಳ್ಳಿ ಬಳಿಯ ಮೊಬ್ಬಿನ ದೊಡ್ಡಿಯಲ್ಲಿ ಯುವಕನೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಕೆರೆ ಮೇಗಳದೊಡ್ಡಿ ಗ್ರಾಮದ ಶಂಕರ್ ನಾಯಕ್ (27) ಆತ್ಮಹತ್ಯೆ ಮಾಡಿಕೊಂಡ ಯುವಕ. ಬೆಂಗಳೂರಿನಲ್ಲಿ ಕಾರು ಚಾಲಕನಾಗಿದ್ದ ಶಂಕರ ನಾಯಕ್ ಹಾಗೂ ಬೆಂಗಳೂರಿನಲ್ಲಿದ್ದ ಉಯ್ಯಂಬಳ್ಳಿ ಹೋಬಳಿ ಬೆಂಡಗೋಡು ಗ್ರಾಮದ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಆಗಾಗ ಇಬ್ಬರೂ ಜಗಳವಾಡುತ್ತಿದ್ದರು. ಯುವತಿಯ ಹಿಂಸೆ ತಾಳದೆ ನನ್ನ ಮಗ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. …
Read More »
BigTv News
May 9, 2026
Breaking News
ರಾಯಚೂರು: ಸಾರ್ವಜನಿಕ ಸ್ಥಳದಲ್ಲಿ ಮಾನವ ಸೇವನೆಗೆ ಯೋಗ್ಯವಲ್ಲದ, ವಿಷಪೂರಿತ ಸಿ.ಎಚ್ ಪೌಡರ್ ಮಿಶ್ರಿತ ಸೇಂದಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ನೇತಾಜಿ ನಗರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬೋಳಮಾನದೊಡ್ಡಿ ರಸ್ತೆಯ ಕೃಷ್ಣ ದೇವರಾಯ ಕಾಲೊನಿಯಲ್ಲಿ ಖಚಿತ ಮಾಹಿತಿ ಲಭಿಸಿತು. ಕೃಷ್ಣ ದೇವರಾಯ ಪ್ರದೇಶದ ಏಗನೂರು ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಹರಿಜನವಾಡದ ತಾಯಪ್ಪ (52) ಸಿ.ಎಚ್ ಪೌಡರ್ ಮಿಶ್ರಿತ ಸೇಂದಿಯನ್ನು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ …
Read More »
BigTv News
May 9, 2026
Breaking News
ಮೈಸೂರು:ಸಿದ್ದಾರ್ಥನಗರ ನಿವಾಸಿ ಪಂಕಜ್ ಜೈನ್ ಎಂಬವರ ಮನೆಯಲ್ಲಿ ಕಳವು ನಡೆದಿದೆ. ಪಂಕಜ್ ಜೈನ್ ಮೇ 2 ರಂದು ಕುಟುಂಬ ಸಹಿತ ರಾಜಸ್ತಾನಕ್ಕೆ ಕುಟುಂಬದವರ ವಿವಾಹಕ್ಕೆ ತೆರಳಿದ್ದರು. ಗುರುವಾರ ಮನೆಗೆ ಆಗಮಿಸಿದ ಸಂದರ್ಭ ಮನೆಯಲ್ಲಿ ಕಳವು ನಡೆದಿರುವುದು ಕಂಡು ಬಂತು. ಪಂಕಜ್ ಜೈನ್ ಅವರು ಮನೆಯ ಮುಂಬಾಗಿಲಿನ ಡೋರ್‌ಲಾಕ್ ತೆರೆದು ಮನೆಯೊಳಗೆ ಪ್ರವೇಶಿಸಿದಾಗ ಮೊದಲ ಮಹಡಿಗೆ ಹೋದಾಗ ರೂಮ್‌ನಲ್ಲಿ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂತು. ನಮತರ ನಂತರ ಕಬೋರ್ಡ್ ನೋಡಿದಾಗ ಅಲ್ಲಿ …
Read More »
Shaikh BigTv
May 8, 2026
Breaking News, Crime, ಕರ್ನಾಟಕ, ಬಳ್ಳಾರಿ
ಖಾಕಿ ಮೇಲಿನ ನಂಬಿಕೆಗೆ ಕಲೆ”… ಖಾಕಿಯೊಳಗಿನ ಕಪ್ಪು ಮುಖ ಬಯಲು ಪೊಲೀಸರಿಗೆ ಭಾರೀ ಮುಜುಗರ! ಒಬ್ಬ ಗನ್‌ಮ್ಯಾನ್ ತಪ್ಪಿಗೆ ನಿಷ್ಠಾವಂತ ಪೊಲೀಸರ ಗೌರವಕ್ಕೆ ಕಲೆ! ಬಳ್ಳಾರಿಯಲ್ಲಿ ಎಸ್ಪಿ ಗನ್‌ಮ್ಯಾನ್ ದಂಧೆ ಬಯಲು! ಜನರು ಪೊಲೀಸರನ್ನು ನೋಡಿದಾಗ ಭದ್ರತೆ ನೆನಪಾಗಬೇಕು… ಆದರೆ ಬಳ್ಳಾರಿಯಲ್ಲಿ ನಡೆದ ಈ ಘಟನೆ ಜನರ ಮನಸ್ಸಿನಲ್ಲಿ ಭಯ ಮತ್ತು ಅನುಮಾನ ಹುಟ್ಟಿಸುವಂತಾಗಿದೆ. ಕಾನೂನು ಕಾಯಬೇಕಾದ ಖಾಕಿಯಲ್ಲೇ ಕೆಲವರು ಕಪ್ಪು ದಂಧೆಗೆ ಇಳಿದರೆ, ನಿಷ್ಠೆಯಿಂದ ಕೆಲಸ ಮಾಡುವ ನೂರಾರು …
Read More »
BigTv News
May 8, 2026
Breaking News
ತಿಪಟೂರು: ತಾಲ್ಲೂಕಿನ ಕಿಬ್ಬನಹಳ್ಳಿ ಕ್ರಾಸ್‌ನಲ್ಲಿ ಬುಧವಾರ ಎಟಿಎಂನ ಸಿಸಿಟಿವಿ ಕ್ಯಾಮೆರಾಕ್ಕೆ ಬಿಳಿಬಣ್ಣದ ಲೇಪನ ಮಾಡಿ ಡಿಜಿಟಲ್ ಲಾಕರ್ ಒಡೆದು ₹6ಲಕ್ಷ ಕಳ್ಳತನ ಮಾಡಲಾಗಿದೆ. ಕಿಬ್ಬನಹಳ್ಳಿ ಕ್ರಾಸ್‌ನ ಮಾತಾ ರೆಸಿಡೆನ್ಸಿ ಆವರಣದ ಎಸ್‌ಬಿಐ ಬ್ಯಾಂಕ್‌ಗೆ ಸೇರಿದ ಎಟಿಎಂ ಕೇಂದ್ರಕ್ಕೆ ನುಗ್ಗಿದ ಕಳ್ಳರ ಗುಂಪು, ಎಟಿಎಂ ಯಂತ್ರವನ್ನು ಹಾನಿಗೊಳಿಸಿ ಅದರ ಡಿಜಿಟಲ್ ಲಾಕರ್ ಒಡೆದು ಹಾಕಿದ್ದು ಬಳಿಕ ಯಂತ್ರದಲ್ಲಿದ್ದ ₹6 ಲಕ್ಷ ನಗದು ದರೋಡೆ ಮಾಡಿದ್ದಾರೆ.ಎಟಿಎಂ ಕೇಂದ್ರಕ್ಕೆ ಭದ್ರತಾ ಸಿಬ್ಬಂದಿ ಇರಲಿಲ್ಲ.
Read More »
BigTv News
May 8, 2026
Breaking News
ಬೆಂಗಳೂರು: ಶಸ್ತ್ರಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ಚಿನ್ನಾಭರಣ ಕಳವು ಮಾಡಿದ್ದ ಖಾಸಗಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯನ್ನು ಹೆಣ್ಣೂರು ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೇ 1ರಂದು ಆಸ್ಪತ್ರೆಗೆ ದಾಖಲಾಗಿದ್ದ ಸ್ವಪ್ನಾ ಎಂಬ ರೋಗಿಯ 9.68 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದರು. ಈ ಸಂಬಂಧ ಸ್ವಪ್ನಾ ಪತಿ ಶ್ರೀನಿವಾಸ್ ಎಂಬುವರು ನೀಡಿದ ದೂರಿನ ಮೇರೆಗೆ ವಶಕ್ಕೆ ಪಡೆಯಲಾಗಿದೆ. ಯಲಹಂಕ ನಿವಾಸಿ ಶ್ರೀನಿವಾಸ್, ಮೇ 1ರಂದು ಶಸ್ತ್ರಚಿಕಿತ್ಸೆಗಾಗಿ ತಮ್ಮ …
Read More »
BigTv News
May 8, 2026
Breaking News
ಪಶ್ಚಿಮ ಬಂಗಾಳ :ಪಶ್ಚಿಮ ಬಂಗಾಳದ ಹಿರಿಯ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕನ ಹತ್ಯೆಗೆ ಸಂಚು ರೂಪಿಸಿರುವ ಆಘಾತಕಾರಿ ವಿಷಯವೊಂದು ತನಿಖೆಯಿಂದ ಬಯಲಾಗಿದೆ. ಈ ಕೊಲೆಗೆ ಬಿಹಾರದಿಂದ ಶಾರ್ಪ್ ಶೂಟರ್‌ಗಳನ್ನು ಕರೆಸಲಾಗಿದ್ದು, ಬರೋಬ್ಬರಿ 40 ಲಕ್ಷ ರೂಪಾಯಿಗಳಿಗೆ ‘ಕಾಂಟ್ರಾಕ್ಟ್’ ನೀಡಲಾಗಿತ್ತು ಎಂಬ ಮಾಹಿತಿ ಪೊಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆಇತ್ತೀಚೆಗೆ ಶಂಕಿತ ಆರೋಪಿಗಳನ್ನು ಬಂಧಿಸಿದ ನಂತರ ಅವರ ಮೊಬೈಲ್ ಕರೆಗಳ ಮಾಹಿತಿ ಹಾಗೂ ಹಣದ ವರ್ಗಾವಣೆಯ ಕುರುಹುಗಳನ್ನು ಆಧರಿಸಿ …
Read More »