BigTv News
April 17, 2026
Breaking News
ಕಾಸರಗೋಡು: ಪೊಯಿನಾಚಿ ಸಮೀಪದ ಮಂಡಲಿಪಾರ ಞಾಣಿಕಡವು ರಸ್ತೆಯ ಸಂಕದ ಅಡಿಯಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಟಿಪ್ಪರ್ ಲಾರಿ ಚಾಲಕ ಬೆಂಡಿಚ್ಚಾಲ್ ಮಂಡಲಿಪ್ಪಾರ ನಿವಾಸಿ ಅಬ್ದುಲ್ ಕಬೀರ್ (40) ಸಾವಿನ ಹಿಂದಿನ ನಿಗೂಢತೆ ಇನ್ನೂ ಮುಂದುವರಿದಿದೆ. ಅಂದು ಅಲ್ಲೇ ಪಕ್ಕದ ತೋಟದಿಂದ ತೆಂಗಿನಕಾಯಿ ಕೊಯ್ಯುತ್ತಿದ್ದ ವ್ಯಕ್ತಿ ಮೃತದೇಹವನ್ನು ಮೊದಲು ಕಂಡಿದ್ದರು. ಈ ಬಗ್ಗೆ ಮಾಹಿತಿ ಲಭಿಸಿದ ಮೇಲ್ಪರಂಬ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮಹಜರು ನಡೆಸಿದ ಬಳಿಕ ಕಣ್ಣೂರು ಮೆಡಿಕಲ್ ಕಾಲೇಜು …
Read More »
BigTv News
April 17, 2026
Breaking News
ಮುಳಬಾಗಿಲು: ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಬುಧವಾರ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬುಧವಾರ ಬಂಧಿಸಿ, ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಮುಳಬಾಗಿಲು ನಗರದ ಶಾಮೀರ್ ಮೊಹಲ್ಲ ನಿವಾಸಿ ಅಬೂಕರ್ (22) ಬಂಧಿತ ಆರೋಪಿ. ಆರೋಪಿಯಿಂದ 1.5 ಕೆಜಿ ಗಾಂಜಾ ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಖಚಿತ ಮಾಹಿತಿ ಮೇರೆಗೆ ನಗರ ಠಾಣೆ ಇನ್‌ಸ್ಪೆಕ್ಟರ್ ಎಂ.ಆರ್. ಅಣ್ಣಯ್ಯ ಮತ್ತು ಸಿಬ್ಬಂದಿ ದಾಳಿ ನಡೆಸಿ, ಗಾಂಜಾ ವಶಕ್ಕೆ ಪಡೆದು, ಆರೋಪಿಯನ್ನು …
Read More »
BigTv News
April 17, 2026
Breaking News
ಮಂಗಳೂರು: ಪ್ರವಾಸಕ್ಕೆಂದು ಬಂದು ಬಿಜೈಯ ಲಾಡ್ಜ್ ಒಂದರಲ್ಲಿ ಉಳಿದುಕೊಂಡಿದ್ದ ಆಂಧ್ರಪ್ರದೇಶ ಅನಂತರಪುರ ಮೂಲದ ಕುಟುಂಬವೊಂದಕ್ಕೆ ಸಂಬಂಧಿಸಿದ ಸುಮಾರು 10 ಗ್ರಾಂ. ತೂಕದ 1.40 ಲಕ್ಷ ರೂ. ಮೌಲ್ಯದ ಚಿನ್ನದ ಬ್ರಾಸ್ ಲೆಟ್ ಕಳವಾಗಿದೆ. ಕುಟುಂಬದ ಮುಖ್ಯಸ್ಥ ಎ.ಎನ್. ಶಿವ ನೀಡಿದ ದೂರಿನಂತೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಎ.13ರಂದು ಬೆಳಗ್ಗೆ 6.30ರಿಂದ ಬಿಜೈ ಕೆಎಸ್ ಆರ್ ಟಿಸಿ ಬಸ್ಸು ನಿಲ್ದಾಣದ ಲಾಡ್ಜ್‌ನಲ್ಲಿ ತಂಗಿದ್ದು, ಎ.15ರಂದು ಬೆಳಗ್ಗೆ 8.30ಕ್ಕೆ ತಣ್ಣೀರು ಬಾವಿ ಬೀಚ್ …
Read More »
BigTv News
April 17, 2026
Breaking News
ಬಂಟ್ವಾಳ: ಮಡಂತ್ಯಾರಿನಿಂದ ಬಿ.ಸಿ. ರೋಡ್ ಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳೆಯ ಕತ್ತಿನಲ್ಲಿದ್ದ 18 ಗ್ರಾಂ. ತೂಕದ 2.50 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಳ್ಳತನವಾಗಿದೆ. ಬೆಳ್ತಂಗಡಿಯ ಪಾಪುಂಜ ಮನೆಯ ಸರಸ್ವತಿ ಅವರು ಕೆಎಸ್ ಆರ್ ಟಿಸಿ ಬಸ್ ನಲ್ಲಿ ಸಂಚರಿಸುತ್ತಿದ್ದರು. ಬಸ್ಸಿನಲ್ಲಿ ರಷ್ ಇದ್ದ ಕಾರಣ ನಿಂತುಕೊಂಡೇ ಪ್ರಯಾಣಿಸಿದ್ದು , ಬಿ.ಸಿ.ರೋಡ್ ನಲ್ಲಿ ಬಸ್ ನಿಂದ ಇಳಿಯುವಾಗ ಚಿನ್ನದ ಸರ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಸರ ಕಳ್ಳತನ ಆಗಿರಬಹುದು …
Read More »
BigTv News
April 17, 2026
Breaking News
ಹೊಸಪೇಟೆ: ನಗರದ ಸಂಡೂರು ರಸ್ತೆಯ ಬಳಿ ಸಂಗ್ರಹಿಸಿಟ್ಟಿದ್ದ ಅಕ್ರಮ ಪಡಿತರ ಅಕ್ಕಿಯನ್ನು ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿಕೊಂಡು ಇಲ್ಲಿನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ಆಹಾರ ನಿರೀಕ್ಷಕ ಅಜೀತ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಪಡಿತರ ಅಕ್ಕಿಯನ್ನು ಅಕ್ರಮವಾಗಿ ಗೂಡ್ಸ್ ವಾಹನದಲ್ಲಿ ಸಂಗ್ರಹಿಸಿದ 34,843 ರೂ. ಮೌಲ್ಯದ 15.30 ಕ್ವಿಂಟಲ್ ಅಕ್ಕಿಯನ್ನು ವಶಕ್ಕೆ ಪಡೆಯುಲಾಗಿದೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಆಹಾರ …
Read More »
BigTv News
April 16, 2026
Breaking News
ಉಡುಪಿ: ವಾಟ್ಸಪ್‌ನಲ್ಲಿ ಬಂದ ಎಪಿಕೆ ಫೈಲ್ ಡೌನ್‌ಲೋಡ್ ಮಾಡಿದ ವ್ಯಕ್ತಿ ಬರೋಬ್ಬರಿ 4,86,13 ರೂ. ಕಳೆದುಕೊಂಡ ಘಟನೆ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಬ್ದುಲ್ ಹಮೀದ್ ಎಂಬವರು ಪಡುಬಿದ್ರಿ ಹೆಜಮಾಡಿ ಬ್ರಾಂಚ್ ನ ಕೆನರಾ ಬ್ಯಾಂಕ್ ಮತ್ತು ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಬ್ರಾಂಚ್ ನಲ್ಲಿ ಖಾತೆ ಹೊಂದಿದ್ದರು. ಎ.12ರಂದು ಬೆಳಗ್ಗೆ 7ಕ್ಕೆ ಅವರ ಪರಿಚಯದ ಕುಮಾರ ಸ್ವಾಮಿ ಎಂಬವರ ಮೊಬೈಲ್ ಸಂಖ್ಯೆಯಿಂದ ವಾಟ್ಸಪ್ ಮೂಲಕ ಆರ್‌ಟಿಒ …
Read More »
BigTv News
April 16, 2026
Breaking News
ಕಾರ್ಕಳ: ತಾಲ್ಲೂಕಿನ ಕುಕ್ಕುಂದೂರು ಗ್ರಾಮದ ಶಂಕರಬೆಟ್ಟು ಅರ್ಬಿಪಾದೆ ಎಂಬಲ್ಲಿನ ಕಲ್ಲುಕೋರೆ ಪಾದೆಯಲ್ಲಿ ಅಕ್ರಮ ಗಣಿಕಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಮನೋಜ್ ಮತ್ತು ಶರಣ್ ಎಂಬವವರ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟಿಪ್ಪರ್ ಲಾರಿ ಚಾಲಕರಿಬ್ಬರು ಸೇರಿಕೊಂಡು ಕಲ್ಲುಗಳನ್ನು ಕಳವು ಮಾಡಿ ಸಾಗಾಟ ಮಾಡಲು ಲೋಡ್ ಮಾಡುತ್ತಿದ್ದು ಅವರನ್ನು ಬಂಧಿಸಿ ಕಲ್ಲು ತೆಗೆಯಲು ಉಪಯೋಗಿಸಿದ ಸಲಕರಣೆಗಳನ್ನು, ಸೈಜ್ ಕಲ್ಲುಗಳನ್ನು ಲೋಡ್ ಮಾಡಿದ ಟಿಪ್ಪರ್ …
Read More »
BigTv News
April 16, 2026
Breaking News
ಉಡುಪಿ: ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ 23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬೆಂಗಳೂರು ಶಿವನಗರದ ನಿವಾಸಿ ಎಂ. ಬಾಬು (52), ಎಂಬಾತನನ್ನು ಮಲ್ಪೆ ಪೊಲೀಸರು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮಲ್ಪೆ ಪೊಲೀಸ್ ಠಾಣೆ ಉಪ ನಿರೀಕ್ಷಕ ಅನಿಲ್ ಕುಮಾರ್ ಡಿ.ನೇತೃತ್ವದಲ್ಲಿ 5 ತಿಂಗಳುಗಳಿಂದ ಆರೋಪಿಯ ಬಂಧನಕ್ಕೆ ಪ್ರಯತ್ನ ನಡೆದಿತ್ತು. ಕೊನೆಗೂ ಖಚಿತ ಮಾಹಿತಿ ಮೇರೆಗೆ ಠಾಣೆಯ ಹೆಡ್ ಕಾನ್‌ಸ್ಟೆಬಲ್‌ಗಳಾದ ಸುರೇಶ್ ಕುಮಾರ್ ಮತ್ತು ವಿಶ್ವನಾಥ್ ಎಚ್. ಅವರು ಎ.12ರಂದು ಬೆಂಗಳೂರಿಗೆ …
Read More »
BigTv News
April 16, 2026
Breaking News
ಮೊಟ್ಟೆ ಸಾಗಿಸುತ್ತಿದ್ದ ಮಿನಿ ಟೆಂಪೋ ಅಪಘಾತಕ್ಕೀಡಾಗಿ ಸಾವಿರಾರು ಮೊಟ್ಟೆಗಳು ನಾಶವಾದ ಘಟನೆ ಕೆಆರ್ ಪುರದ ಟಿಸಿ ಪಾಳ್ಯ ಸಿಗ್ನಲ್ ಸಮೀಪ ಇಂದು ಬೆಳಗ್ಗೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಮಿನಿ ಟೆಂಪೋಗೆ ಹಿಂದಿನಿಂದ ಬಂದ ಬೃಹತ್ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಟೆಂಪೋ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ವಾಹನದಲ್ಲಿ ತುಂಬಿದ್ದ ಮೊಟ್ಟೆಗಳು ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದು ಸಂಪೂರ್ಣ ಹಾನಿಗೊಂಡಿವೆ. ಮಾರುಕಟ್ಟೆಗೆ ಸಾಗಿಸಲಾಗುತ್ತಿದ್ದ ಈ ಮೊಟ್ಟೆಗಳು …
Read More »
BigTv News
April 16, 2026
Breaking News
ಕೊಲ್ಲೂರು: ಮುದೂರು ಗ್ರಾಮದ ಬೆದ್ರಕಟ್ಟೆಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ಜೀವ ಬೆದರಿಕೆ ಹಾಕಿದ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಮುದೂರು ನಿವಾಸಿ ಕೆ.ಟಿ. ಜೋಸೆಫ್ ಹಾಗೂ ಅವರ ಅಳಿಯ ಮನೋಜ್ ಪಿ.ವಿ. ಬೈಕ್ ನಲ್ಲಿ ಜಡ್ಕಲ್ ನ ಕಾನ್ಕಿಯಿಂದ ಮುದೂರು ಕಡೆ ತೆರಳುತ್ತಿದ್ದಾಗ ಆಪಾದಿತ ಅನಿಲ್ ಎಂಬಾತ ಕೊಲೆ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.
Read More »