Breaking News

Breaking News

ಎಸಿಪಿ ಗಂಗಾಧರ ಮಾರ್ಗದರ್ಶನದಲ್ಲಿ ಪೊಲೀಸರ ಕಾರ್ಯಾಚರಣೆ – ಪಿಎಸ್‌ಐ ರವಿ ವಡ್ಡರ್, ಮಂಜುನಾಥ ಹುಲಕಂದ ತಂಡದ ಯಶಸ್ಸು…

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಆರೋಪಿಗೆ 3 ವರ್ಷ ಜೈಲು ಶಿಕ್ಷೆ. ಪೊಕ್ಸೋ ಪ್ರಕರಣದಲ್ಲಿ ದೋಷಿ ಸಾಬೀತು: ಯುವಕನಿಗೆ 3 ವರ್ಷ ಜೈಲು. ಬಾಲಕಿ ಕಿರುಕುಳ ಪ್ರಕರಣ: ಆರೋಪಿಗೆ ಜೈಲು ಶಿಕ್ಷೆ, ₹10 ಸಾವಿರ ದಂಡ ಬೆಳಗಾವಿ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯವು 3 ವರ್ಷಗಳ ಜೈಲು ಶಿಕ್ಷೆ ಮತ್ತು ₹10,000 ದಂಡ ವಿಧಿಸಿದೆ.. 2024ರ ಜನವರಿ 17ರಂದು ಬೆಳಗಾವಿ ಜಿಲ್ಲೆಯ ಪರಶ್ಯಾನಟ್ಟಿ ಗ್ರಾಮದ …

Read More »

ಶಾಲಾ ಕಟ್ಟಡದಿಂದ ಜಿಗಿದು ಬಾಲಕಿ ಆತ್ಮಹತ್ಯೆ – ಸಹಪಾಠಿಯ ಕಿರುಕುಳ ಆರೋಪ

ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲ್ಲೂಕಿನ ಭೆಮಳಖೇಡ ಗ್ರಾಮದಲ್ಲಿ ಶಾಲಾ ಕಟ್ಟಡದಿಂದ ಜಿಗಿದು 16 ವರ್ಷದ ಬಾಲಕಿ ಮದಿಯಾ ನಶೀರ್ ಪಾಷಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಭೆಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಯಿ ಮದಿಯಾ ಚಿಕ್ಕಪ್ಪ ಎಂ.ಡಿ. ಯೂಸುಫ್ ಹೇಳಿಕೆಯಲ್ಲಿ, ಸಹಪಾಠಿಯ ಲವ್ ಮಾಡುವಂತೆ ಕಿರುಕುಳ ನೀಡಿರುವುದೇ ಆಕೆಯ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ. ಸಹಪಾಠಿಯ ಕಿರುಕುಳದ ದೃಶ್ಯಗಳು ಸಿಸಿ ಕ್ಯಾಮರಾಗಳಲ್ಲಿ …

Read More »

ವಿಟ್ಲ: ಮನೆಯಲ್ಲಿ ಎಂಡಿಎಂಎ ಮಾರಾಟ; ನಾಲ್ವರ ಬಂಧನ

ಬಂಟ್ವಾಳ ತಾಲೂಕಿನ ನೇರಳಕಟ್ಟೆ ಇಂದಿರಾನಗರದ ಬಾಡಿಗೆ ಮನೆಯೊಂದರಲ್ಲಿ ಮಾದಕ ವಸ್ತುವಾದ ಎಂ.ಡಿ.ಎಂ.ಎ.ಯನ್ನುಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಬಂಟ್ವಾಳ ನೆಟ್ಲಮುಡ್ನೂರು ಗ್ರಾಮದ ಭಗವಂತಕೋಡಿ ನಿವಾಸಿ ಅಶ್ರಫ್ ಜಿ. (38) ಸಹಿತ ನಾಲ್ವರನ್ನು ವಿಟ್ಲ ಪೊಲೀಸ್ ಉಪ ನಿರೀಕ್ಷಕ ರತ್ನಕುಮಾರ್ ಎಂ. ನೇತೃತ್ವದ ಪೊಲೀಸ್‌ ತಂಡ ಬಂಧಿಸಿದೆ. ಆರೋಪಿಯು ಹಫೀಝ್‌ ಯಾನೆ ಅಪ್ಪಿ, ಅಫ್ವಾನ್‌ ಮತ್ತು ಅಶ್ರಫ್‌ ಎನ್‌. ಎ. ಅವರೊಂದಿಗೆ ಈ ಮನೆಯಲ್ಲಿದ್ದ. ಮನೆಯಲ್ಲಿ ಪರಿಶೀಲಿಸಿದಾಗ ಒಟ್ಟು 17.97 ಗ್ರಾಂ ತೂಕದ 1,79,700 …

Read More »

ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ವರ್ಗಾವಣೆ

ಶಿರ್ವ: ಬೆಳ್ಳೆ ಗ್ರಾಮದಲ್ಲಿರುವ ಸರ್ವೇ ನಂ. 333/4 ರಲ್ಲಿ 2.24 ಎಕ್ರೆ ಮತ್ತು ಸರ್ವೇ ನಂ. 333/4 ಪುಂಜದಲ್ಲಿ 0.46 ಎಕ್ರೆ ಜಮೀನನ್ನು ಮೂಡುಬೆಳ್ಳೆ ಕಟ್ಟಿಂಗೇರಿ ನಿವಾಸಿ ಶಿವ ಜಿ. ಯಾನೆ ಶಿವಾಜಿ ಮೂಲ್ಯ ಮತ್ತು ಮಲ್ಲಿಕಾ ಅವರು ಉಡುಪಿ ತಹಶೀಲ್ದಾರ್ ಮುಂದೆ ಕೃತಕ ಮತ್ತು ನಕಲಿ ದಾಖಲೆಗಳನ್ನು ಸಲ್ಲಿಸಿ ಕುಟುಂಬದ ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಬಂಟಕಲ್ಲು ಬಾಳಿಮನೆ ನಿವಾಸಿ ಸದಾನಂದ ಮೂಲ್ಯ ದೂರು ನೀಡಿದ್ದಾರೆ. ನ್ಯಾಯಾಲಯದ …

Read More »

ಉಪ್ಪಿನಂಗಡಿ: ಅಕ್ರಮ ದಾಸ್ತಾನು ಮಾಡಿದ್ದ 4,175 ಲೀಟರ್‌ ಡಿಸೇಲ್ ಜಪ್ತಿ

ಅಕ್ರಮವಾಗಿ ದಾಸ್ತಾನು ಮಾಡಿದ್ದ 4,175 ಲೀಟರ್‌ ಡಿಸೇಲ್ ಅನ್ನು ಬೆಳ್ತಂಗಡಿ ಡಿವೈಎಸ್ಪಿ. ರೋಹಿಣಿ ಸಿ.ಕೆ. ನೇತೃತ್ವದ ತಂಡ ಜಪ್ತಿ ಮಾಡಿದೆ. ಬೆಳ್ತಂಗಡಿ ತಾಲ್ಲೂಕಿನ ಕಣಿಯೂರು ಗ್ರಾಮದ ಜಗದೀಶ್ ಎಂಬಾತ ಶೆಡ್‌ನಲ್ಲಿ ಅಕ್ರಮವಾಗಿ ಡೀಸೆಲ್ ದಾಸ್ತಾನು ಮಾಡಿದ್ದ. ಪೊಲೀಸರು ದಾಳಿ ನಡೆಸಿ 200 ಲೀಟರ್ ಸಾಮರ್ಥ್ಯದ 20 ಬ್ಯಾರೆಲ್‌ಗಳು ಹಾಗೂ 35 ಲೀಟರ್ ಸಾಮರ್ಥ್ಯ 5 ಕ್ಯಾನ್‌ಗಳಲ್ಲಿ ಒಟ್ಟು 4,175 ಲೀಟರ್‌ ಡೀಸೆಲ್ ಜಪ್ತಿ ಮಾಡಿದರು. ಇವುಗಳ ಮೌಲ್ಯ ₹3.50 ಲಕ್ಷ …

Read More »

ದಾಂಡೇಲಿಯಲ್ಲಿ ಮರಕ್ಕೆ ಡಿಕ್ಕಿ ಹೊಡೆದು ನಜ್ಜುಗುಜ್ಜಾದ ಸ್ವಿಫ್ಟ್ ಕಾರು: ಮೂವರು ಗಂಭೀರ

ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಸ್ವಿಫ್ಟ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು ಮೊದಲಿಗೆ ಸ್ಥಳೀಯ ಆಸ್ಪತ್ರೆಗೆ …

Read More »

ಗುಂಡ್ಲುಪೇಟೆ | ಕತ್ತು ಕೂಯ್ದು ವ್ಯಕ್ತಿಯ ಬರ್ಬರ ಹತ್ಯೆ

ಪಟ್ಟಣದ ಹೊರವಲಯದ ವಿಜಯಪುರ ಅಮಾನಿ ಕೆರೆಯ ಬಳಿ ವ್ಯಕ್ತಿಯೊಬ್ಬ ಬರ್ಬರವಾಗಿ ಕೊಲೆಯಾಗಿರುವ ಘಟನೆ ನಡೆದಿದೆ. ತಾಲ್ಲೂಕಿನ ಮೂಖಹಳ್ಳಿ ಗ್ರಾಮ ನಂಜುಂಡಸ್ವಾಮಿ ಬಿನ್ ಕರಿಯ 22 ವರ್ಷ ಮೃತ ವ್ಯಕ್ತಿ. ಕತ್ತು ಕೂಯ್ದು ಕೊಲೆ ಮಾಡಿರುವ ಸ್ಥಿತಿಯಲ್ಲಿ ಮೃತದೇಹ‌ ಪತ್ತೆಯಾಗಿದ್ದು, ಡಿವೈಎಸ್ಪಿ ಸ್ನೇಹರಾಜ್, ಸರ್ಕಲ್‌ ಇನ್ಸ್ ಪೆಕ್ಟರ್ ಜಯಕುಮಾರ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಆರೋಪಿಗಳ ಸೆರೆಗೆ ಜಾಲ ಬೀಸಿದ್ದಾರೆ. ಸ್ನೇಹಿತರ ಜೊತೆ ಮದ್ಯ ಸೇವನೆ ಮಾಡುಲು ತೆರಳಿದಾಗ ಘಟನೆ ನಡೆದಿರುವ …

Read More »

ಬಳ್ಳಾರಿ: ತೀವ್ರ ಕೀಟಲೆಗೆ ಗುರಿಯಾಗಿದ್ದ ಸಹಪಾಠಿಯನ್ನು ಕೊಂದ ಬಾಲಕ

ವಸತಿ ಶಾಲೆಯಲ್ಲಿ ಶನಿವಾರ ಸಹಪಾಠಿಗಳ ಮೇಲೆ ತೀವ್ರ ಹಲ್ಲೆ ನಡೆಸಿ, ಒಬ್ಬನ ಕೊಂದಿದ್ದ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ತೀವ್ರ ಕೀಟಲೆಗೆ ಗುರಿಯಾಗಿದ್ದ ಎನ್ನಲಾಗಿದೆ. ಆಪ್ತ ಸಮಾಲೋಚನೆ ವೇಳೆ ಬಾಲಕ ಈ ವಿಷಯವನ್ನು ವಿಚಾರಣಾ ತಂಡಕ್ಕೆ ತಿಳಿಸಿದ್ದಾನೆ. ಇಡೀ ಹಾಸ್ಟೆಲ್‌ನಲ್ಲಿ ಎಲ್ಲರೂ ಆಂಧ್ರಪ್ರದೇಶದವರಾಗಿದ್ದರೂ, ಈತನೊಬ್ಬನೇ ಕರ್ನಾಟಕದವನಾಗಿದ್ದ. ಆಟಪಾಠಗಳಲ್ಲಿ ಆತನನ್ನು ಯಾರೂ ಸೇರಿಸಿಕೊಳ್ಳುತ್ತಿರಲಿಲ್ಲ. ಕ್ರಿಕೆಟ್‌ ಆಡುವಾಗ ‘ಆರ್‌ಸಿಬಿ’ ಎಂದು ರೇಗಿಸುತ್ತಿದ್ದರು ಎಂದು ಹೇಳಿಕೊಂಡಿರುವುದಾಗಿ ಗೊತ್ತಾಗಿದೆ. ಹಲ್ಲೆ ನಡೆದ ರಾತ್ರಿಯು ಕಾನೂನು ಸಂಘರ್ಷಕ್ಕೆ ಒಳಗಾಗಿರುವ …

Read More »

ಗ್ಯಾಸ್‌ ಟ್ರಬಲ್‌ : ರಾಜ್ಯದಲ್ಲಿ ಹೆಚ್ಚಾಯ್ತು ಸಿಲಿಂಡರ್ ಕಳ್ಳರ ಹಾವಳಿ

ರಾಮನಗರ: ಇಸ್ರೇಲ್-ಇರಾನ್ ಯುದ್ಧದ ಎಫೆಕ್ಟ್‌ನಿಂದಾಗಿ ಒಂದೆಡೆ ಗ್ಯಾಸ್ ಸಿಲಿಂಡರ್ ಅಭಾವ ಸೃಷ್ಟಿಯಾಗಿದ್ರೆ ಮತ್ತೊಂದೆಡೆ ಸಿಲಿಂಡರ್ ಕಳ್ಳರ ಹಾವಳಿ ಹೆಚ್ಚಾಗಿದೆ. ಚನ್ನಪಟ್ಟಣದ ಕನಕನಗರದ ಕೃಷ್ಣಪ್ಪ ಎಂಬುವವ ಮನೆಯಲ್ಲಿ ಸಿಲಿಂಡರ್ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಬಂದ ಖದೀಮ ಕಾಂಪೌಂಡ್ ಒಳಗೆ ಇದ್ದ ಸಿಲಿಂಡರ್ ಕದ್ದು ಎಸ್ಕೇಪ್ ಆಗಿದ್ದಾನೆ. ಫುಲ್ ಗ್ಯಾಸ್ ಇದ್ದ ಸಿಲಿಂಡರ್ ಅನ್ನು ಕಳ್ಳ ಹೊತ್ತೊಯ್ದ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೊದಲೇ ಸಿಲಿಂಡರ್ ಪೂರೈಕೆ ವ್ಯತ್ಯಯದಿಂದ …

Read More »

ಮೊಮ್ಮಗನನ್ನು ಕೊಂದಿದ್ದ ಅಜ್ಜಿಯ ಬಂಧನ

ಚೇಳೂರು: ನಲವತ್ತು ದಿನದ ಹಸುಗೂಸಾಗಿದ್ದ ಮರಿ ಮೊಮ್ಮಗನನ್ನು ಉಸಿರುಗಟ್ಟಿಸಿ ಕೊಂದಿದ್ದ ವೃದ್ಧೆಯನ್ನು ಚೇಳೂರು ಪೊಲೀಸರು ಬಂಧಿಸಿದ್ದಾರೆ. ಚೇಳೂರಿನ ಮೆಹಬೂಬಿ (72) ಆರೋಪಿ. ಅನ್ಯ ಧರ್ಮದ ಯುವಕನ್ನು ಮದುವೆಯಾಗಿದ್ದ ಮೊಮ್ಮಗಳು ಗರ್ಭಿಣಿಯಾದ ಬಳಿಕ ಅಜ್ಜಿ ಮನೆಗೆ ಬಂದಿದ್ದಳು. ಈ ವಿಚಾರವಾಗಿ ಮೆಹಬೂಬಿ ಬೇಸರಗೊಂಡಿದ್ದರು. ಮಗು ಜನನವಾದ 40 ದಿನಗಳ ಬಳಿಕ ವೃದ್ಧೆ ಸಮಯ ನೋಡಿಕೊಂಡು ಕತ್ತು ಹಿಸುಕಿ ಕೊಲೆ ಮಾಡಿದ್ದಳು. ಇದನ್ನರಿಯದೇ ಅನಾರೋಗ್ಯದ ಹಿನ್ನೆಲೆಯಲ್ಲಿ ಹಸುಗೂಸು ಮೃತಪಟ್ಟಿದೆ ಎಂದು ಭಾವಿಸಿ ಅಂತ್ಯಸಂಸ್ಕಾರ …

Read More »