Breaking News

Breaking News

ಕೊಪ್ಪಳ: ಗಣೇಶ ವಿಸರ್ಜನೆ ವೇಳೆ ಗಲಾಟೆ; ಮೂವರಿಗೆ ಚಾಕು ಇರಿತ

ಕೊಪ್ಪಳ: ಗಣೇಶ ವಿಸರ್ಜನೆ ವೇಳೆ ನಡೆದ ಗಲಾಟೆ ಮುಂದುವರಿದು ಮೂವರಿಗೆ ಚಾಕುವಿನಿಂದ ಇರಿದ ಘಟನೆ ಗಂಗಾವತಿ ತಾಲೂಕಿನ ಆರಾಳ ಗ್ರಾಮದಲ್ಲಿ ನಡೆದಿದೆ. ಜಯಪ್ರಕಾಶ್, ಗುರುಪ್ರಕಾಶ್ ಹಾಗೂ ದೊಡ್ಡಬಸವ ಗಾಯಗೊಂಡಿದ್ದು, ಜಯಪ್ರಕಾಶ್ ಮತ್ತು ಗುರುಪ್ರಕಾಶ್ ಅವರ ಹೊಟ್ಟೆಗೆ ಗಂಭೀರ ಗಾಯಗಳಾಗಿವೆ. ಮೂವರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರವಿವಾರ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕೆಲ ಯುವಕರು ಡಿಜೆ ವಾಹನದ ಮೇಲೆ ಹತ್ತಿ ಕುಣಿಯುತ್ತಿದ್ದರು. ಭದ್ರತೆ ದೃಷ್ಟಿಯಿಂದ ಜಯಪ್ರಕಾಶ್ ಹಾಗೂ ಅವರ …

Read More »

ಕಲಬುರಗಿ: ಯುವಕನ ರುಂಡ-ಮುಂಡ ಬೇರ್ಪಟ್ಟಿದ್ದ ನಿಗೂಢ ಕೇಸ್ ಭೇದಿಸಿದ ಖಾಕಿ

ಕಲಬುರಗಿ: ಅಫಜಲಪುರ ತಾಲೂಕಿನ ಗೊಬ್ಬರು (ಬಿ) ಗ್ರಾಮದ ಜಮೀನಿನಲ್ಲಿ ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ 22 ವರ್ಷದ ಖಲೀಂ ಸಾಬ್‌ ಶವದ ಪ್ರಕರಣವನ್ನು ಗಾಣಗಾಪುರ ಪೊಲೀಸರು 48 ಗಂಟೆಗಳಲ್ಲಿ ಭೇದಿಸಿದ್ದಾರೆ. ಇದು ಅಪಘಾತವಲ್ಲ, ಹಣಕಾಸಿನ ವಿಚಾರಕ್ಕೆ ನಡೆದ ಕೊಲೆ ಎಂಬುದು ತನಿಖೆಯಿಂದ ಬಯಲಾಗಿದೆ. ಸೆ.25ರಂದು ಬೈಕ್‌ಗೆ ಪೆಟ್ರೋಲ್ ಖಾಲಿಯಾಗಿ ತಳ್ಳಿಕೊಂಡು ಬರುತ್ತಿದ್ದ ನಂದಿಕೂರ ತಾಂಡಾದ ಸಂದೀಪ್ ಪವಾರ್ ಹಾಗೂ ಸಂದೀಪ್ ಚವ್ಹಾಣ್‌ಗೆ ಖಲೀಂ ಪೆಟ್ರೋಲ್ ತಂದುಕೊಟ್ಟಿದ್ದ. ಆರೋಪಿಗಳು ₹200 ನೀಡಿದ್ದು, …

Read More »

ರೇಷನ್ ಕಾರ್ಡ್ ವಿಚಾರಕ್ಕೆ ತಮ್ಮನಿಗೆ ಅಣ್ಣನೇ ಚಾಕು ಹಾಕಿದ್ನಾ? ಒಡವಟ್ಟಿದವರ ದ್ವೇಷದ ಹಿಂದಿರುವ ಕಥೆ ಇಲ್ಲಿದೆ

ಹಾಸನ: ಆಸ್ತಿ ಹಂಚಿಕೆ ಹಾಗೂ ರೇಷನ್ ಕಾರ್ಡ್ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೇಲೂರು ತಾಲೂಕಿನ ಸೋಂಪುರ ಗ್ರಾಮದಲ್ಲಿ ನಡೆದಿದೆ. ದೇವರಾಜ್ ಎಂಬಾತ ತನ್ನ ಸಹೋದರ ರಘು (35)ಗೆ ಚಾಕುವಿನಿಂದ ಇರಿದಿದ್ದು, ಚಿಕಿತ್ಸೆ ಫಲಕಾರಿಯಾಗದೆ ರಘು ಮೃತಪಟ್ಟಿದ್ದಾರೆ. ಸಹೋದರರಿಬ್ಬರಿಗೂ ಸೇರಿ 7ರಿಂದ 8 ಎಕರೆ ಜಮೀನು ಇದ್ದು, ಅದರಲ್ಲಿ 3 ಎಕರೆ ಜಮೀನು ಮಾರಾಟ ಮಾಡಲಾಗಿತ್ತು ಎನ್ನಲಾಗಿದೆ. ಬಂದ ಹಣದಲ್ಲಿ ತಮ್ಮನ ಪಾಲು ನೀಡುವಂತೆ ರಘು ಕೇಳುತ್ತಿದ್ದರೂ …

Read More »

ಒಂದೇ ಒಂದು ನಿಮಿಷ ಬನ್ನಿ ಅಣ್ಣಾ – ಮಹಿಳೆ ಸತ್ತರೂ ಕಾರಿಂದ ಕೆಳಗಿಳಿಯದ ನಿಖಿಲ್

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೊರವಲಯದ ಕಗ್ಗಲೀಪುರ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಅಪಘಾತದ ವೇಳೆ ಅದೇ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಕಾರನ್ನು ಸಾರ್ವಜನಿಕರು ಅಡ್ಡಗಟ್ಟಿ ನೆರವು ನೀಡುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ. ಆದರೆ, ರೈತರ ಪ್ರತಿಭಟನೆಗೆ ತೆರಳಬೇಕಿರುವುದರಿಂದ ತುರ್ತಾಗಿ ಹೋಗಬೇಕಿದೆ ಎಂದು ಹೇಳಿ ನಿಖಿಲ್ ಕುಮಾರಸ್ವಾಮಿ ಸ್ಥಳದಿಂದ ತೆರಳಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ …

Read More »

ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆಯೊಂದಿಗೆ ನವದಂಪತಿಗೆ ಕೆಡುಕು ಮಾಡಲು ಯತ್ನ

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಸಕ್ಕನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ ಕುಪೇಂದ್ರ ಅವರ ಮನೆ ಮುಂದೆ ವಾಮಾಚಾರ ನಡೆಸಿರುವ ಘಟನೆ ನಡೆದಿದೆ. ಲಗ್ನ ಪತ್ರಿಕೆ, ಮೂಳೆ ಹಾಗೂ ಕಪ್ಪು ಅನ್ನ ಬಳಸಿ ವಾಮಾಚಾರ ಮಾಡಿರುವುದು ಪತ್ತೆಯಾಗಿದೆ. ಕುಪೇಂದ್ರ ಅವರು ಒಂದು ತಿಂಗಳ ಹಿಂದೆ ತಮ್ಮ ಮಗನ ವಿವಾಹ ಮಾಡಿದ್ದರು. ನವದಂಪತಿಗೆ ಕೆಡುಕು ಉಂಟುಮಾಡುವ ಉದ್ದೇಶದಿಂದ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆಯಿಂದ ಕುಪೇಂದ್ರ ಕುಟುಂಬ ಆತಂಕಕ್ಕೊಳಗಾಗಿದ್ದು, …

Read More »

ಮೊಬೈಲ್ ಅಂಗಡಿಯಲ್ಲಿ ಕಳವು, ನಾಲ್ವರು 10ನೇ ತರಗತಿ ವಿದ್ಯಾರ್ಥಿಗಳ ಬಂಧನ!

ಉತ್ತರ ಕನ್ನಡದ ಮುಂಡಗೋಡಿನಲ್ಲಿ ಮೊಬೈಲ್ ಅಂಗಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ಶಾಲೆಯ 10ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ವಿದ್ಯಾರ್ಥಿಗಳನ್ನು ಪತ್ತೆಹಚ್ಚಿ, ₹63,920 ಮೌಲ್ಯದ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ರಾತ್ರಿ ವಸತಿ ನಿಲಯದಿಂದ ಹೊರಬಂದು, ಮೊಬೈಲ್ ಅಂಗಡಿಯ ಬೀಗ ಮುರಿದು ಮೊಬೈಲ್‌ಗಳು, ಪವರ್ ಬ್ಯಾಂಕ್, ಇಯರ್‌ಬಡ್ಸ್, ಸ್ಪೀಕರ್ ಹಾಗೂ ಚಾರ್ಜರ್‌ಗಳನ್ನು ಕಳವು ಮಾಡಿದ್ದರು. ಕೃತ್ಯಕ್ಕೆ ಬಳಸಿದ ಉಪಕರಣಗಳನ್ನೂ ಪೊಲೀಸರು …

Read More »

‘KPSC’ ನೇಮಕಾತಿ ಅಕ್ರಮ: ಆರೋಪಿ ಬಸವರಾಜ್ ಕನ್ನಾಳೆ ಡೈರಿಯಲ್ಲಿ ಬಯಲಾಯ್ತು ಲಕ್ಷ ಲಕ್ಷ ಹಣದ ಲೆಕ್ಕ!

ಬೆಂಗಳೂರು: KPSC ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆ ಮನೆಯಲ್ಲಿ ಸಿಐಡಿಗೆ ಮಹತ್ವದ ಡೈರಿ ಪತ್ತೆಯಾಗಿದೆ. ಡೈರಿಯಲ್ಲಿ ಅಕ್ರಮವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳ ಹೆಸರು, ಪಡೆದ ಹಣ ಹಾಗೂ ಬಾಕಿ ಹಣದ ವಿವರಗಳಿವೆ. 20ಕ್ಕೂ ಅಧಿಕ ಅಭ್ಯರ್ಥಿಗಳಿಗೆ ರಹಸ್ಯ ತರಬೇತಿ ನೀಡಲು ಕನ್ನಾಳೆ ಮೂರು ಐಷಾರಾಮಿ ವಿಲ್ಲಾಗಳನ್ನು ಬುಕ್ ಮಾಡಿದ್ದ ಎನ್ನಲಾಗಿದೆ. ಅಭ್ಯರ್ಥಿಗಳಿಂದ ಮುಂಗಡವಾಗಿ ಲಕ್ಷಾಂತರ ರೂಪಾಯಿ ಪಡೆದು, ಉಳಿದ ಹಣದ ವಿವರಗಳನ್ನು …

Read More »

ರೌಡಿಶೀಟರ್ ಗಳ ನಡುವೆ ಹೊಡೆದಾಟ: ಓರ್ವ ರೌಡಿಶೀಟರ್ ನ ಕೊಲೆ

ಬೆಂಗಳೂರು: ಗಣೇಶ ವಿಸರ್ಜನೆ ವೇಳೆ ಎರಡು ರೌಡಿಶೀಟರ್‌ಗಳ ಗುಂಪಿನ ನಡುವೆ ನಡೆದ ಹೊಡೆದಾಟದಲ್ಲಿ ದೀಪಕ್‌ ಎಂಬ ರೌಡಿಶೀಟರ್‌ ಕೊಲೆಯಾದ ಘಟನೆ ಪೀಣ್ಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶನಿವಾರ ದೀಪಕ್‌ ಹಾಗೂ ಈಶ್ವರ್‌, ನೇಪಾಳಿ ಸುಮನ್‌ ಗುಂಪಿನ ನಡುವೆ ಗಲಾಟೆ ನಡೆದಿತ್ತು. ಭಾನುವಾರ ಚೊಕ್ಕಸಂದ್ರ ಕೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ಮತ್ತೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಕಾಲು ತುಳಿದ ವಿಚಾರಕ್ಕೆ ದೀಪಕ್‌ಗೆ ಡ್ರಾಗರ್‌ನಿಂದ ಇರಿಯಲಾಗಿದೆ ಎನ್ನಲಾಗಿದೆ. ಗಂಭೀರವಾಗಿ …

Read More »

ಕುಂದಾಪುರ : ಬಾರ್‌ನಲ್ಲಿ ಊಟ ಮಾಡುತ್ತಿದ್ದವರ ಗಲಾಟೆ, ಸೋಡಾ ಬಾಟಲಿಯಿಂದ ಹಲ್ಲೆ

ಕುಂದಾಪುರ: ಬಗ್ವಾಡಿ ಕ್ರಾಸ್‌ನ ಬಾರ್‌ನಲ್ಲಿ ಊಟ ಮಾಡುತ್ತಿದ್ದ ವೇಳೆ ಜೋರಾಗಿ ಮಾತನಾಡುತ್ತಿದ್ದವರಿಗೆ ನಿಧಾನವಾಗಿ ಮಾತನಾಡುವಂತೆ ತಿಳಿಸಿದ್ದಕ್ಕೆ ಮಾತಿಗೆ ಮಾತು ಬೆಳೆದು ದಿನೇಶ್‌ ಲೂವಿಸ್‌ (36) ಎಂಬುವರ ಮೇಲೆ ನಾಲ್ವರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಸಚಿನ್‌ ಎಂಬಾತ ಸೋಡಾ ಬಾಟಲಿಯಿಂದ ದಿನೇಶ್‌ ತಲೆಗೆ ಹೊಡೆದಿದ್ದು, ಬಾಟಲಿ ಒಡೆದು ತಲೆ ಹಾಗೂ ಕೆನ್ನೆಗೆ ಗಂಭೀರ ಗಾಯಗಳಾಗಿವೆ. ಶ್ರೀಕಾಂತ್‌ ಶೆಟ್ಟಿ ಹಾಗೂ ಮಂಜು ಶೆಟ್ಟಿ ಕೂಡ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ …

Read More »

ಹನೂರು : ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೆಳೆದಿದ್ದ 292 ಗಾಂಜಾ ಗಿಡಗಳು ವಶ

ಚಾಮರಾಜನಗರ: ತಾಲೂಕಿನ ಕೂಳಿಹಟ್ಟಿ, ಬೆಳ್ಳಾಜಿ ಬೀಟ್‌ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೆಳೆದಿದ್ದ 292 ಗಾಂಜಾ ಗಿಡಗಳನ್ನು ಅಬಕಾರಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಗಾಂಜಾ ಗಿಡಗಳ ಒಟ್ಟು ತೂಕ 213 ಕೆ.ಜಿ. 600 ಗ್ರಾಂ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಖಚಿತ ಮಾಹಿತಿ ಆಧರಿಸಿ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯ ಪ್ರದೇಶದಲ್ಲಿ ಗಾಂಜಾ ಬೆಳೆದಿರುವುದು ಪತ್ತೆಯಾಗಿದೆ. ಈ ಸಂಬಂಧ ನೆಲ್ಲಿಕತ್ರಿ ಗ್ರಾಮದ ಐವರ ವಿರುದ್ಧ …

Read More »