Breaking News

Breaking News

ರಾಮಮೂರ್ತಿನಗರ | ಮನೆಗೆ ನುಗ್ಗಿ ಕಳ್ಳತನ: ಆರೋಪಿ ಸೆರೆ

ಬೆಂಗಳೂರು: ಮನೆಗೆ ನುಗ್ಗಿ ಚಿನ್ನದ ಆಭರಣ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಮಮೂರ್ತಿನಗರದ ಚೆಲುವಯ್ಯ ರಸ್ತೆಯ ಏಳನೇ ಕ್ರಾಸ್‌ ನಿವಾಸಿ ನಾಗರಾಜ್‌ (35) ಬಂಧಿತ. ಮಂಡ್ಯ ಜಿಲ್ಲೆಯ ಹೊಸಹಳ್ಳಿ ಗ್ರಾಮದ ನಾಗರಾಜ್‌, ನಗರದಲ್ಲಿ ಬಾಡಿಗೆ ಮನೆ ಪಡೆದು ನೆಲಸಿದ್ದ.ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ. ಬಂಧಿತ ಆರೋಪಿಯಿಂದ ₹20 ಲಕ್ಷ ಮೌಲ್ಯದ 153 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಠಾಣಾ ವ್ಯಾಪ್ತಿಯ ಲಿಟಲ್ ಆಸ್ಪತ್ರೆ ರಸ್ತೆಯ ಬಳಿ …

Read More »

ಬೆಳಗಾವಿ-ಪಣಜಿ ಹೆದ್ದಾರಿಯಲ್ಲಿ ಕಾರುಗಳ ಮುಖಾಮುಖಿ ಡಿಕ್ಕಿ: ಇಬ್ಬರ ಸಾವು

ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿಯ ತಾಲ್ಲೂಕಿನ ಅಸ್ತೋಲಿ ಗ್ರಾಮದ ಹೊರವಲಯದಲ್ಲಿ ಗುರುವಾರ ಇನ್ನೊವಾ ಮತ್ತು ಕ್ವಿಡ್ ಕಾರುಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಕ್ವಿಡ್ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೋವಾ ಕಾರಿನಲ್ಲಿದ್ದ ಕಾರಿನ ಚಾಲಕ ಗಂಭೀರವಾಗಿ ಮತ್ತು ಉಳಿದ ಪ್ರಯಾಣಿಕರು ಸಾಧಾರಣ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಈ ಅಪಘಾತದಲ್ಲಿ ಕ್ವಿಡ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸೌತ್ ಗೋವಾ ಜಿಲ್ಲೆಯ ಫೋಂಡಾ ನಿವಾಸಿಗಳಾದ ರುದ್ರಯ್ಯ ಶಿವಯ್ಯನವರ (77) ಮತ್ತು ರೇಣುಕಾ ಹಿರೇಮಠ …

Read More »

ಬೆಳಗಾವಿ | ಮಟ್ಕಾ: ಐವರ ಬಂಧನ

ನಗರದ ವಿವಿಧೆಡೆ ಬುಧವಾರ ಮಟ್ಕಾ ಆಟದಲ್ಲಿ ತೊಡಗಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಶಿವಾಜಿ ರಸ್ತೆ ನಾಲೆ ಬಳಿ ತಹಶೀಲ್ದಾರ್‌ ಗಲ್ಲಿಯ ವಿನಾಯಕ ಸಾಂಬ್ರೇಕರ(39) ಎಂಬಾತನನ್ನು ಖಡೇ ಬಜಾರ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆತನಿಂದ ₹1,020 ನಗದು ವಶಕ್ಕೆ ಪಡೆಯಲಾಗಿದೆ. ವಡಗಾವಿಯ ಮಲಪ್ರಭಾ ನಗರದಲ್ಲಿ ಅದೇ ಪ್ರದೇಶದ ಮಲ್ಲಿಕಾರ್ಜುನ ಕಾಂಬಳೆ ಎಂಬಾತನನ್ನು ಶಹಾಪುರ ಠಾಣೆ ಪೊಲೀಸರು ಬಂಧಿಸಿ, ₹1,250 ನಗದು ವಶಕ್ಕೆ ಪಡೆದಿದ್ದಾರೆ. ಹಳೇ ಸಗಟು ತರಕಾರಿ ಮಾರುಕಟ್ಟೆ ಬಳಿ ಕಾಕತಿಯ …

Read More »

ರಾಜ್ಯದ ಪೊಲೀಸ್ ಸಿಬ್ಬಂದಿಗಳಿಗೆ ಭರ್ಜರಿ ಗಿಫ್ಟ್ : ಹುಟ್ಟುಹಬ್ಬ , ವಿವಾಹ ವಾರ್ಷಿಕೋತ್ಸವಕ್ಕೆ ಸಾಂದರ್ಭಿಕ ರಜೆ ಮಂಜೂರು.!

  ರಾಜ್ಯದ ಪೊಲೀಸ್ ಸಿಬ್ಬಂದಿಗೆ ಭರ್ಜರಿ ಉಡುಗೊರೆ… ಬರ್ತ್‌ಡೇ, ವಿವಾಹ ವಾರ್ಷಿಕೋತ್ಸವದ ದಿನ ರಜೆ.. ಪೊಲೀಸರಿಗೆ ರಜೆ ನೀಡಲು ಡಿಜಿ ಸಲೀಂ ಖಡಕ್ ಆದೇಶ.. ಒತ್ತಡದ ಕೆಲಸ, ಜೀವನ ಸಮತೋಲನಕ್ಕೆ ಸಹಾಯ.. ಬೆಂಗಳೂರು : ಕರ್ನಾಟಕ ಸರ್ಕಾರವು ಪೊಲೀಸ್ ಸಿಬ್ಬಂದಿಗಳ ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಮತ್ತು ಅವರ ಕೌಟುಂಬಿಕ ಜೀವನಕ್ಕೆ ಪ್ರಾಮುಖ್ಯತೆ ನೀಡಲು ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದ ದಿನದಂದು ಸಾಂದರ್ಭಿಕ ರಜೆ ಮಂಜೂರು ಮಾಡಿ ಮಹತ್ವದ ಆದೇಶ …

Read More »

PSI ಪರೀಕ್ಷಾ ಹಗರಣದ ಕಿಂಗ್ ಪಿನ್ ಆರ್ ಡಿ. ಪಾಟೀಲ್ ಮೈಸೂರು ಜೈಲಿಗೆ ಸ್ಥಳಾಂತರ

ಕಲಬುರಗಿ: ಪಿಎಸ್ ಐ ಪರೀಕ್ಷಾ ಹಗರಣದ ಕಿಂಗ್ ಪಿನ್ ಆರ್ ಡಿ ಪಾಟೀಲ್ ಮೈಸೂರು ಜೈಲಿಗೆ ಶಿಫ್ಟ್ ಮಾಡಲಾಗಿದೆ. ಇಲ್ಲಿನ ಕಲಬುರಗಿ ಕೇಂದ್ರ ಕಾರಗೃಹದಿಂದ ಮೈಸೂರಿಗೆ ಸ್ಥಳಾಂತರಗೈಯಲಾಗಿದೆ.ಕಲಬುರಗಿ ಜೈಲಿನಲ್ಲಿ ಕಿರಿಕ್ ಮಾಡ್ತಿದ್ದ ಹಿನ್ನಲೆ ಮೈಸೂರಿಗೆ ಕಾರಾಗೃಹ ಇಲಾಖೆ ಸ್ಥಳಾಂತರ ಮಾಡಿದೆ. ಕಳೆದ ತಿಂಗಳು ಜೈಲಿನಲ್ಲಿ ಜೂಜಾಟ ಹಾಗೂ ಎಣ್ಣೆ ಹೊಡೆಯುವ ವಿಡಿಯೋ ವೈರಲ್ ಆಗಿತ್ತು.ಅದಕ್ಕೆಲ್ಲಾ‌ ಮಾಸ್ಟರ್ ಮೈಂಡ್ ಆರ್.ಡಿ.ಪಾಟೀಲ್ ನೇ ಆಗಿದ್ದ. ಅಲ್ಲದೇ ಕಲಬುರಗಿ ಜೈಲು ಮುಖ್ಯ ಅಧೀಕ್ಷಕಿಯ ವಿರುದ್ದ …

Read More »

ಬಳ್ಳಾರಿ: ವಿಮೆ ಹೆಸರಲ್ಲಿ 11 ಲಕ್ಷ ವಂಚನೆ

ನಗರದ ಉದ್ದಿಮೆದಾರರೊಬ್ಬರಿಗೆ ವಿಮೆ ಹೆಸರಿನಲ್ಲಿ ₹11.41 ಲಕ್ಷ ವಂಚನೆ ಮಾಡಲಾಗಿದೆ. ಈ ಕುರಿತು ಬಳ್ಳಾರಿಯ ಸಿಇಎನ್ (ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ) ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದೂರುದಾರ ವ್ಯಕ್ತಿಗೆ ಈಚೆಗೆ ಕರೆ ಮಾಡಿದ್ದ ವಂಚಕರು, ನೀವು ಹೊಂದಿರುವ ವಿಮೆಗೆ ಈಗಲೇ ಹಣ ಪಾವತಿಸಿದರೆ ಶೇ 25ರಷ್ಟು ರಿಯಾಯಿತಿ ದೊರೆಯುವುದಾಗಿ ತಿಳಿಸಿದ್ದರು. ಅದನ್ನು ನಂಬಿದ ವ್ಯಕ್ತಿ ಹಣ ಪಾವತಿಗೆ ಮುಂದಾಗಿದ್ದರು. ಆಗ ಸಂಪರ್ಕ ಮಾಡಿದ್ದ ಅದೇ ಜಾಲದ ಮತ್ತೊಬ್ಬ ವಂಚಕ, …

Read More »

ಬೆಂಗಳೂರು: ಲಿಫ್ಟ್‌ ಕುಸಿದು ಇಬ್ಬರ ಸಾವು

ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಗೆರೆ ರಸ್ತೆಯಲ್ಲಿ ಎಸ್‌ಎಸ್‌ವಿಆರ್‌ ಕನ್ಸ್‌ಸ್ಟ್ರಕ್ಷನ್‌ ನಿರ್ಮಿಸುತ್ತಿರುವ ಅಪಾರ್ಟ್‌ಮೆಂಟ್‌ ಕಾಮಗಾರಿ ಸ್ಥಳದಲ್ಲಿ ಸರಕು ಸಾಗಣೆಯ ಲಿಫ್ಟ್‌ ಕುಸಿದು ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಲಿಫ್ಟ್‌ ಆಪರೇಟರ್ ಸತ್ಯಕುಮಾರ್ ಹಾಗೂ ಲಿಫ್ಟ್‌ ಮೆಕಾನಿಕ್‌ ಮುತ್ತಪ್ಪ ಮೃತ ಕಾರ್ಮಿಕರು. ಬುಧವಾರ ಸಂಜೆ ಕೆಲಸ ಮಾಡುತ್ತಿದ್ದ ವೇಳೆ ಲಿಫ್ಟ್‌ ಕುಸಿದು ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟಿದ್ದಾರೆ ಎಂದು …

Read More »

ಚೀಟಿ ವ್ಯವಹಾರ ಇತ್ಯರ್ಥಕ್ಕೆ ₹4 ಲಕ್ಷ ಲಂಚ ಬೇಡಿಕೆ; ಹಣ ಸ್ವೀಕರಿಸುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ಇನ್ಸ್‌ಪೆಕ್ಟರ್!

ಬೆಂಗಳೂರು: ರಾಜ್ಯದ ಪೊಲೀಸರು ತಲೆತಗ್ಗಿಸುವಂಥ ಇನ್ನೊಂದು ಪ್ರಕರಣ ಸಂಭವಿಸಿದೆ. 4 ಲಕ್ಷ ರೂ. ಲಂಚ ಸ್ವೀಕರಿಸುವಾಗ ಇನ್ಸ್‌ಪೆಕ್ಟರ್‌ ಒಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದಾರೆ. ಬೆಂಗಳೂರಿನ ಕೆ.ಪಿ.ಅಗ್ರಹಾರ ಠಾಣೆ ಇನ್‌ಸ್ಪೆಕ್ಟರ್ ಗೋವಿಂದರಾಜು ಲೋಕಾಯುಕ್ತ ಬಲೆಗೆ ಬಿದ್ದ ಇನ್ಸ್‌ಪೆಕ್ಟರ್‌. ಲೋಕಾಯುಕ್ತ ಎಸ್.​ಪಿ ಶಿವಪ್ರಕಾಶ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದೆ. ಚೀಟಿ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಪ್ರಕರಣದಲ್ಲಿ ಸೇರಿಸುವುದಾಗಿ ಬೆದರಿಸಿ ಇನ್‌ಸ್ಪೆಕ್ಟರ್ ಗೋವಿಂದರಾಜು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 4 ಲಕ್ಷ …

Read More »

ಹುಲ್ಲಿನ ಬಣವಿಯಲ್ಲಿ ಮಾದಕ ವಸ್ತು ಸಂಗ್ರಹ: ಶಿವಮೊಗ್ಗದಲ್ಲಿ 4 ಲಕ್ಷ ಮೌಲ್ಯದ ಗಾಂಜಾ ಸೀಜ್: ಆರೋಪಿ ಅರೆಸ್ಟ್

ಶಿವಮೊಗ್ಗ: ಮಾದಕ ವಸ್ತುಗಳ ವಿರುದ್ಧ ರಾಜ್ಯಾದ್ಯಂತ ಸಮರ ಸಾರಿರುವ ಪೊಲೀಸರು, ಹಲವು ಆರೋಪಿಗಳನ್ನು ಬಂಧಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ 4 ಲಕ್ಷ ಮೌಲ್ಯದ ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿ ಆರೋಪಿಯನ್ನು ಬಂಧಿಸಿರುವ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಬೊಮ್ಮನಕಟ್ಟಿ ಗ್ರಾಮದಲ್ಲಿ ದಾಳಿ ನಡೆಸಿದ ಭದ್ರಾವತಿ ಪೇಪರ್ ಟೌನ್ ಠಾಣೆ ಪೊಲೀಸರು ಹುಲ್ಲಿನ ಬಣವಿಯಲ್ಲಿ ಅಡಗಿಸಿಟ್ಟಿದ್ದ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.4 ಲಕ್ಷ ರೂಪಾಯಿ ಮೌಲ್ಯದ 8 ಕೆಜಿ ಗಾಂಜಾವನ್ನು ಹುಲ್ಲಿನ ಬಣವಿಯಲ್ಲಿ …

Read More »

ಹೆಂಡತಿ ಮರಣ ಪತ್ರಕ್ಕೆ ಅರ್ಜಿ ಹಾಕಿದ್ದ ಗಂಡನಿಗೆ ಆತನ ಮರಣಪತ್ರ ಕೊಟ್ಟ ಅಧಿಕಾರಿಗಳು.!

ತಾಲೂಕಾಡಳಿತದ ಎಡವಟ್ಟನಿಂದ ಹೆಂಡತಿಯ ಮರಣ ಪತ್ರಕ್ಕೆ ಅರ್ಜಿ ಹಾಕಿದ ಗಂಡನಿಗೆ ಆತನ ಮರಣಪತ್ರ ಕೊಟ್ಟಿರುವ ಘಟನೆ ನಡೆದಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಶಿರಗಂಬಿ ಗ್ರಾಮದ ಮಲ್ಲಮ್ಮ ಎಂಬ ಮಹಿಳೆ ಆ.12, 2021ರಂದು ಮರಣ ಹೊಂದಿದ್ದರು. ಪತ್ನಿ ಮರಣ ಪ್ರಮಾಣ ಪತ್ರಕ್ಕೆ ಆಕೆಯ ಗಂಡ ಟೋಪನಗೌಡ ಗುಬ್ಬಿ ಎಂಬುವರು ರಟ್ಟಿಹಳ್ಳಿ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಅಧಿಕಾರಿಗಳು ಪತ್ನಿ ಮರಣ ಪ್ರಮಾಣ ಪತ್ರದ ಬದಲು ಅರ್ಜಿದಾರನೇ ಮೃತಪಟ್ಟಿರುವುದಾಗಿ ಪ್ರಮಾಣ ಪತ್ರ …

Read More »