Breaking News

Breaking News

ಪೇಮೆಂಟ್‌ ಬಂದಿಲ್ಲ, ಪುಷ್ಪ ಅರುಣ್‌ಕುಮಾರ್‌ಗೆ ಹೇಳಿ ಪ್ಲೇಸ್’:‌ ಕೊತ್ತಲವಾಡಿ ಸಿನಿಮಾ ನಟ ಮಹೇಶ್‌ ಗುರು.

ಕೊತ್ತಲವಾಡಿ ಸಿನಿಮಾಕ್ಕೆ ಪುಷ್ಪ ಅರುಣ್‌ ಕುಮಾರ್‌ ಅವರು ಹಣ ಹೂಡಿದ್ದರು. ಅಷ್ಟೇ ಅಲ್ಲದೆ ‘ಘಾಟಿ’ ಸಿನಿಮಾದ ವಿತರಣೆ ಕೂಡ ಮಾಡಿದ್ದರು. ಈಗ ಸಿನಿಮಾದ ಸಂಭಾವನೆ ಕೊಟ್ಟಿಲ್ಲ ಅಂತ ನಟ ಮಹೇಶ್‌ ಗುರು ಅವರು ಆರೋಪ ಮಾಡಿದ್ದಾರೆ.ಫೇಸ್‌ಬುಕ್‌ನಲ್ಲಿ ಅವರು ಹಾಕಿದ್ದ ವಿಡಿಯೋ ವೈರಲ್ ಆಗಿತ್ತು, ಈಗ ನೋಡಿದ್ರೆ ವಿಡಿಯೋ ಡಿಲೀಟ್ ಮಾಡಿದ್ದಾರೆ. ನಿರ್ಮಾಪಕಿ ಪುಷ್ಪ ಅವರ ಗಮನಕ್ಕೆ ತರೋದಿಕ್ಕೆ ವಿಡಿಯೋ ಮಾಡಿದ್ದೆ ಎಂದು ಮಹೇಶ್‌ ಹೇಳಿದ್ದಾರೆ.ನಮಗೆ ಆಗಿರೋ ಮೋಸವನ್ನು ನಿರ್ಮಾಪಕಿಗೆ ತಿಳಿಸಿ …

Read More »

ಆಸ್ತಿಗಾಗಿ ಪುಟ್ಟ ಬಾಲಕಿಯನ್ನು ಮೂರನೇ ಮಹಡಿಯಿಂದ ತಳ್ಳಿ ಕೊಲೆ ; ಮಲತಾಯಿ ಬಂಧನ.

ಬಾಲಕಿಗೆ ಆಟ ಆಡಿಸುವ ನೆಪದಲ್ಲಿ ಟೆರಸ್‌ಗೆ ಕರೆದೊಯ್ದು ಮೂರನೇ ಮಹಡಿಯಿಂದ ಮಲತಾಯಿ ತಳ್ಳಿ ಕೊಲೆ ಮಾಡಿದ ಅಮಾನವೀಯ ಘಟನೆ ಬೀದರ್ ನಗರದ ಆದರ್ಶ ಕಾಲೋನಿಯಲ್ಲಿ ನಡೆದಿದೆ.7 ವರ್ಷದ ಸಾನ್ವಿ ಮೃತ ಬಾಲಕಿ ಹಾಗೂ ಆರೋಪಿಯನ್ನು ರಾಧಾ ಎಂದು ಗುರುತಿಸಲಾಗಿದೆ. ಆ.27ರಂದು ಮಲತಾಯಿ ರಾಧಾ ಬಾಲಕಿಗೆ ಆಟ ಆಡಿಸುವ ನೆಪದಲ್ಲಿ 3ನೇ ಮಹಡಿಗೆ ಕರೆದೊಯ್ದಿದ್ದಳು.ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ರಾಧಾಳನ್ನು ಬಂಧಿಸಿದ್ದಾರೆ. ವಿಚಾರಣೆಗೊಳಪಡಿಸಿದಾಗ ಆಸ್ತಿ ಇಬ್ಭಾಗ ಆಗುತ್ತದೆ ಎಂದು ಕೊಲೆ ಮಾಡಿರುವುದಾಗಿ …

Read More »

ಸುಳ್ಯ: ತೆಂಗಿನಕಾಯಿ ಕೀಳುತ್ತಿದ್ದಾಗ ವಿದ್ಯುತ್ ಸ್ಪರ್ಶ ; ವ್ಯಕ್ತಿ ಸಾವು.

ತೆಂಗಿನ ಮರದಿಂದ ಕಾಯಿ ಕೀಳುತ್ತಿದ್ದಾಗ ಅಲ್ಯೂಮೀನಿಯಂ ಗಳೆ ವಿದ್ಯುತ್ ಲೈನಿಗೆ ತಗುಲಿ ಕಾಯಿ ಕೊಯ್ಯುತ್ತಿದ್ದ ವ್ಯಕ್ತಿ ಮೃತಪಟ್ಟ ಘಟನೆ ಬೆಳ್ಳಾರೆ ಬಳಿಯ ಅಯ್ಯನಕಟ್ಟೆಯಿಂದ ಸಂಭವಿಸಿದೆ.ಮೃತರಾದ ವ್ಯಕ್ತಿ ತಂಬಿನಮಕ್ಕಿಯ ರಾಮ ಎಂದು ಗುರುತಿಸಲಾಗಿದೆ.. ‌ ಅಯ್ಯನಕಟ್ಟೆಯ ಗೋಕುಲಂ ಎದುರುಗಡೆ ಇರುವ ಸಿದ್ದಿಕ್ ಎಂಬರಿಗೆ ಸೇರಿದ ತೆಂಗಿನ ಮರದಿಂದ ಕಾಯಿ ಕೀಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

Read More »

ಇಸ್ರೇಲ್ ಹಮಾಸ್ ಯುದ್ಧಕ್ಕೆ ತುಪ್ಪ ಸುರಿದ ಅಮೆರಿಕಾ: ರುಬಿಯೋ ಹೇಳಿಕೆ ಬೆನ್ನಲೇ ದಾಳಿ ತೀವ್ರಗೊಳಿಸಿದ ಇಸ್ರೇಲ್.

ಅಮೆರಿಕಾ ಬೆಂಬಲ ತೀವ್ರಗೊಳಿಸುತ್ತಿದ್ದಂತೆ ಇಸ್ರೇಲ್‌ ಗಾಜಾದ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಿದ್ದು, ಇಸ್ರೇಲ್ ದಾಳಿಗೆ ಗಾಜಾದಲ್ಲಿರುವು ಕಟ್ಟಡಗಳು ಹೊತ್ತಿ ಉರಿಯುತ್ತಿರುವ ವೀಡಿಯೋಗಳು ವೈರಲ್ ಆಗಿವೆ.ಹಮಾಸ್‌ನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಗುರಿ ಹೊಂದಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಹೊಸ ಮಿಲಿಟರಿ ದಾಳಿಗೆ ಅಮೆರಿಕಾ ಸಂಪೂರ್ಣ ಬೆಂಬಲ ನೀಡುವುದಾಗಿ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ ಭರವಸೆ ನೀಡಿದ ಕೆಲ ಗಂಟೆಗಳಲ್ಲಿ ಇಸ್ರೇಲ್ ಗಾಜಾದ ಮೇಲೆ ಭಾರಿ ವಾಯುದಾಳಿ ನಡೆಸಿದೆ.

Read More »

ರಾಜ್ಯದಲ್ಲಿ ಇನ್ಮುಂದೆ ‘ಯೂಟ್ಯೂಬ್ ಚಾನೆಲ್’ ಆರಂಭಕ್ಕೆ ‘ಲೈಸೆನ್ಸ್’ ಕಡ್ಡಾಯ : ಸರ್ಕಾರದಿಂದ ಮಹತ್ವದ ನಿರ್ಧಾರ.!

ಹುಬ್ಬಳ್ಳಿ: ಮೊದಲು ನೀವೆಲ್ಲಾ ಊಹಾ ಪತ್ರಿಕೋದ್ಯಮವನ್ನು ನಿಲ್ಲಿಸಿ. ಇದು ಸಮಾಜಕ್ಕೆ ಹಾನಿಕರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲೆಕ್ಟ್ರಾನಿಕ್ ಮೀಡಿಯಾ ಪತ್ರಕರ್ತರಿಗೆ ಕರೆ ನೀಡಿದರು.ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಉದ್ಘಾಟಿಸಿ, ಲೋಗೋ ಬಿಡುಗಡೆ ಮಾಡಿ ಮಾತನಾಡಿದರು.

Read More »

ಗೆಳೆಯನ ಎದುರೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ!

ಪುರಿಯಲ್ಲಿ ಗೆಳೆಯ ಎದುರೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ.ಒಡಿಶಾದ ಪುರಿ ಜಿಲ್ಲೆಯ ದೇವಸ್ಥಾನದ ಬಳಿ ಘಟನೆ ನಡೆದಿದೆ. ಯುವತಿ ದೇವಸ್ಥಾನಕ್ಕೆ ಭೇಟಿಕೊಟ್ಟು ಗೆಳೆಯನ ಜತೆ ಬೀಚ್​ಗೆ ಹೋದಾಗ ಕೆಲವು ಕಿಡಿಗೇಡಿಗಳು ಅವರನ್ನು ಹಿಂಬಾಲಿಸಿದ್ದರು.ನಂತರ ಆರೋಪಿಗಳು ಇಬ್ಬರ ವಿಡಿಯೋಗಳನ್ನು ಚಿತ್ರೀಕರಿಸಿದ್ದಾರೆ, ನಂತರ ಅವರು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದರು. ಆನ್​ಲೈನ್ ವಹಿವಾಟಿನ ಮೂಲಕ 2,500 ರೂ. ಮತ್ತು 1,000 ರೂ. ನಗದು ಪಾವತಿಸಿದ್ದಾರೆ, ಆದರೆ ಆ ಮೊತ್ತ ಸಾಕಾಗಲಿಲ್ಲ. ಹೆಚ್ಚಿನ ಹಣ …

Read More »

ಅಸ್ಸಾಂ: ಎಸಿಎಸ್ ಅಧಿಕಾರಿ ನೂಪುರ್ ಮನೆಯಲ್ಲಿ 2 ಕೋಟಿ ರೂ. ನಗದು, ಚಿನ್ನಾಭರಣ ಪತ್ತೆ, ಭೂ ಹಗರಣದಲ್ಲಿ ಅರೆಸ್ಟ್​

ಭೂಹಗರಣದಲ್ಲಿ ಅಸ್ಸಾಂನ ನಾಗರಿಕ ಸೇವೆ( ಎಸಿಎಸ್)ಗಳ ಮಹಿಳಾ ಅಧಿಕಾರಿ ನೂಪುರ್ ಬೋರಾ ಅವರನ್ನು ಬಂಧಿಸಲಾಗಿದೆ. ಅವರ ಮನೆಯಲ್ಲಿ 2 ಕೋಟಿ ರೂ. ನಗದು, ಭಾರಿ ಚಿನ್ನಾಭರಣಗಳು ಪತ್ತೆಯಾಗಿವೆ. ಅವರನ್ನು ಬಾರ್ಪೇಟಾ ಜಿಲ್ಲೆಯಲ್ಲಿ ನಿಯೋಜಿಸಲಾಗಿತ್ತು, ಅಲ್ಲಿ ಅವರು ಹಿಂದೂ ಕುಟುಂಬಗಳ ಭೂಮಿಯನ್ನು ಮುಸ್ಲಿಮರಿಗೆ ಅಕ್ರಮವಾಗಿ ವರ್ಗಾಯಿಸಿದ್ದರು.ಅವರ ಮನೆಯಿಂದ 1 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚಿನ್ನ ಮತ್ತು ನೋಟುಗಳ ಬಂಡಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವಿಷಯದ ತನಿಖೆಗೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಹಿಮಂತ …

Read More »

ಬಸವಾಪಟ್ಟಣ: ಹಸುವಿನ ಕಣ್ಣು ತೆಗೆದು ಪ್ರಾಣ ಉಳಿಸಿದ ಪಶುವೈದ್ಯ.

ಕ್ಯಾನ್ಸರ್‌ ಪೀಡಿತ ಕಣ್ಣಿನಿಂದ ತೀವ್ರ ಬಾಧೆಗೊಳಗಾಗಿದ್ದ ಹಸುವಿನ ಕಣ್ಣನ್ನು ಸಮೀಪದ ದಾಗಿನಕಟ್ಟೆಯ ಪಶು ಆಸ್ಪತ್ರೆಯ ಪಶು ವೈದ್ಯಾಧಿಕಾರಿ ಮೊಹ್ಮದ್‌ ಉಮರ್‌ ಫಾರೂಕ್‌ ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ತೆಗೆದು ಹಾಕಿ ಹಸುವಿನ ಪ್ರಾಣ ಉಳಿಸಿದ್ದಾರೆ.ಹಸುವಿನ ಮಾಲೀಕ ದ್ಯಾಮಣ್ಣ, ‘ಇದು ಏಳು ವರ್ಷದ ಹಸುವಾಗಿದ್ದು, ಈಗ ಮೂರನೇ ಸೂಲಿನ ಗರ್ಭ ಧರಿಸಿದೆ. ಈಗಲೂ ಪ್ರತಿದಿನ 15 ಲೀಟರ್‌ ಹಾಲು ಕೊಡುತ್ತಿದೆ. ಡಾ.ಫಾರೂಕ್‌ ಅವರು ಇಂತಹ ಕ್ಯಾನ್ಸರ್‌ ಪೀಡಿತ ಹಸುವನ್ನು …

Read More »

ದೊಡ್ಡಬಳ್ಳಾಪುರ: ರೈತನ ಮೇಲೆ ದಾಳಿ ನಡೆಸಿದ ಕರಡಿ.

ತಾಲ್ಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಕಳಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಬೆಳೆಗೆ ನೀರು ಹಾಯಿಸುವಾಗ ರೈತನ ಮೇಲೆ ಕರಡಿ ದಾಳಿ ನಡೆಸಿ, ಗಾಯಗೊಳಿಸಿದೆ.ತಕ್ಷಣ ಎಚ್ಚೆತ್ತ ರೈತ ರಮೇಶ್‌ ಸಮೀಪದಲ್ಲೇ ಇದ್ದ ಮರವನ್ನು ಏರಿ ಕುಳಿತಿದ್ದಾರೆ. ಕರಡಿಯು ಸಹ ಮರ ಹತ್ತಿ ರಮೇಶ್ ಅವರ ತೊಡೆಯನ್ನು ಗಾಯಗೊಳಿಸಿದೆ. ರಮೇಶ್‌ ಅವರ ಕೂಗಾಟ ಕೇಳಿಸಿಕೊಂಡ ಅಕ್ಕಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರು ಸ್ಥಳಕ್ಕೆ ದೌಡಾಯಿಸಿ ಬಂದು ಕರಡಿ ದಾಳಿಯಿಂದ ರಮೇಶ್ ಅವರನ್ನು …

Read More »
Featured Video Play Icon

ನೀವು ಕಳ್ಳರ ಜೊತೆಗಾದರೂ ಇರಿ. ಯಾರ ಜೊತೆಗಾದರೂ ಇರಿ. ಆದರೆ, ಸತ್ಯದ ಪರವಾಗಿ ಇರಿ: ಎಲೆಕ್ಟ್ರಾನಿಕ್ ಮೀಡಿಯಾದವರಿಗೆ ಸಿಎಂ ಕರೆ…

ಯು ಟ್ಯೂಬ್ ಚಾನಲ್ ಗಳ ಆರಂಭಕ್ಕೆ ಪರವಾನಗಿ ನಿಗಧಿ ಮಾಡುವ ಬಗ್ಗೆ ಪರಿಶೀಲನೆ: ಸಿಎಂ.. ಊಹಾ ಪತ್ರಿಕೋದ್ಯಮ ಮೊದಲು ನಿಲ್ಲಿಸಿ: ಸಿಎಂ ಕರೆ ಹುಬ್ಬಳ್ಳಿ ಸೆ 15: ಮೊದಲು ನೀವೆಲ್ಲಾ ಊಹಾ ಪತ್ರಿಕೋದ್ಯಮವನ್ನು ನಿಲ್ಲಿಸಿ. ಇದು ಸಮಾಜಕ್ಕೆ ಹಾನಿಕರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲೆಕ್ಟ್ರಾನಿಕ್ ಮೀಡಿಯಾ ಪತ್ರಕರ್ತರಿಗೆ ಕರೆ ನೀಡಿದರು. ನಾನು ರಾಜಕಾರಣಕ್ಕೆ ಬಂದು ಇಷ್ಟು ವರ್ಷದಲ್ಲಿ ಯಾವ ಮಾಧ್ಯಮಗಳಿಗೂ ನನ್ನ ಬಗ್ಗೆ ಹೀಗೇ ಬರೆಯಿರಿ, ಹಾಗೇ ಬರೆಯಿರಿ …

Read More »