Breaking News

Breaking News

ಹುಬ್ಬಳ್ಳಿ : RCB ಅಭಿಮಾನಿಗಳಿಂದ ಶ್ರೀ ಸಿದ್ಧಾರೂಢ ಮಠದಲ್ಲಿ ಅಭಿಷೇಕ ಸಲ್ಲಿಸಿ ಪೂಜೆ!

18 ವರ್ಷಗಳ ಕನಸು ಇಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯಾವಳಿ ಎಲ್ಲೆಡೆ ಸಂಭ್ರಮ ನಡೆಯುತ್ತಿದ್ದು, ಪಂಜಾಬ್ ವಿರುದ್ಧ RCB ಫೈನಲ್ ಗೆ ತಲುಪಿದ್ದು ಎಲ್ಲೆಡೆ RCB ಅಭಿಮಾನಿಗಳ ಸಂಭ್ರಮ ಹೆಚ್ಚಾಗಿದೆ ಪೂಜೆ,ಕಟೌಟ್, ಪಟಾಕಿ ಹೀಗೆ ವಿವಿಧ ರೀತಿಯಲ್ಲಿ ಸಂಭ್ರಮವನ್ನು ಆಚರಿಸುತ್ತಿದ್ದಾರೆ. ಹಾಗೆ ಆರ್ಸಿಬಿ ಅಭಿಮಾನಿಗಳು ಇಂದು ಬೆಳಗ್ಗೆ ಶ್ರೀ ಸಿದ್ದಾರೂಢ ಸ್ವಾಮಿ ಮಠದಲ್ಲಿ ಅಭಿಷೇಕ ಮಾಡಿಸುವ ಮೂಲಕ ಆರ್‌ಸಿಬಿ ಗೆಲ್ಲಲಿ ಎಂದು ಹರಸಿ …

Read More »

ದೆಹಲಿ : ಪೊಲೀಸ್ ಮಾಲ್‌ಖಾನೆಯಿಂದ 50 ಲಕ್ಷ ರೂಪಾಯಿ ಮತ್ತು ಚಿನ್ನ ಕಳವು!

ಖುರ್ಷಿದ್ ಇತ್ತೀಚೆಗೆ ದೆಹಲಿ ಪೊಲೀಸರ ವಿಶೇಷ ದಳಕ್ಕೆ ನೇಮಕಗೊಂಡಿದ್ದ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಖುರ್ಷಿದ್‌ನನ್ನು ಗುರುತಿಸಿ ಮೇ 31 ರಂದು ಬಂಧಿಸಿದ್ದಾರೆ. ಖುರ್ಷಿದ್ ಸ್ವಲ್ಪ ಸಮಯ ಮಾಲ್‌ಖಾನೆಯಲ್ಲಿ ನೇಮಕಗೊಂಡಿದ್ದ. ಅದೇ ಅವಧಿಯಲ್ಲಿ ಅವನು ತನ್ನದೇ ಆದ ಒಂದು ಕೀಲಿಯನ್ನು ಮಾಡಿಸಿಕೊಂಡು ಕಳ್ಳತನವನ್ನು ಮಾಡಿದ್ದಾನೆ.50 ಲಕ್ಷ ರೂಪಾಯಿ ನಗದು ಮತ್ತು ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದಾನೆ.

Read More »

ಕೋಲಾರ: ವೃದ್ಧೆ ಹೊತ್ತೊಯ್ದು ಅತ್ಯಾಚಾರ, ಕೊಲೆ.!

ವೃದ್ಧೆಯನ್ನು ಹೊತ್ತೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಗಫರ್ ಖಾನ್ ಮೊಹಲ್ಲಾದ ಬಾಬಾನಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ.ಮೃತ ವೃದ್ಧೆಯನ್ನು ಹೆಚ್.ಜಿ. ಹೊಸೂರಿನ ಲಕ್ಷ್ಮೀದೇವಮ್ಮ ಎಂದು ಗುರುತಿಸಲಾಗಿದೆ.ಕೋಲಾರದ ಶ್ರೀನಿವಾಸಪುರದ ಸಂತೆ ಮೈದಾನದ ಬಳಿ ಕೃತ್ಯ ನಡೆದಿದೆ. 2 ದಿನದ ಹಿಂದೆ ನಾಪತ್ತೆಯಾಗಿದ್ದ ವೃದ್ಧೆ ಶವವಾಗಿ ಪತ್ತೆಯಾಗಿದ್ದಾರೆ

Read More »

ವಿದ್ಯಾರ್ಥಿ ಜತೆ ಲೈಂಗಿಕ ಕ್ರಿಯೆ ನಡೆಸಿದ ಶಿಕ್ಷಕಿ ಅರೆಸ್ಟ್​, ಜಾಮೀನಿನ ಮೇಲೆ ಬಿಡುಗಡೆ!!

ವಿದ್ಯಾರ್ಥಿ ಜತೆ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ಪ್ರೌಢಶಾಲಾ ಶಿಕ್ಷಕಿಯೊಬ್ಬಳನ್ನು ಬಂಧಿಸಿರುವ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ.ಶಿಕ್ಷಕಿ, ವಿದ್ಯಾರ್ಥಿಯ ಜತೆ ಅನೇಕ ತಿಂಗಳುಗಳಿಂದ ಲೈಂಗಿಕ ಸಂಬಂಧ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಸ್ತುತ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ. ಘಟನೆಯ ತನಿಖೆ ಮುಂದುವರೆದಿದೆ ಮತ್ತು ಹೆಚ್ಚಿನ ಸಂತ್ರಸ್ತರಿದ್ದರೆ, ಮುಂದೆ ಬಂದು ಹೇಳಿಕೆ ನೀಡಲು ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ

Read More »

ಬೆಂಗಳೂರು: ಪಿಸ್ತೂಲ್‌ ಬೆದರಿಕೆ ಆರೋಪ, ASI ವಿರುದ್ಧ ತನಿಖೆ.

ASI ಒಬ್ಬರು ಸಾರ್ವಜನಿಕ ಸ್ಥಳದಲ್ಲಿ ಪಿಸ್ತೂಲ್‌ ಹಿಡಿದು ಬೆದರಿಕೆ ಹಾಕಿದ್ದ ಆರೋಪವಿದ್ದು, ಈ ಸಂಬಂಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಈ ಸಂಬಂಧ ಪೊಲೀಸ್‌ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಮಡಿವಾಳದ ಹೋಟೆಲ್‌ನಲ್ಲಿ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಮಧ್ಯೆ ಸಂಬಳದ ವಿಚಾರಕ್ಕೆ ಮೂರು ತಿಂಗಳಿಂದ ಗಲಾಟೆ ನಡೆಯುತ್ತಿತ್ತು. ಗಲಾಟೆ ಸಂಬಂಧ ಕಾರ್ಮಿಕನೊಬ್ಬ ಪೊಲೀಸ್ ಕಂಟ್ರೋಲ್‌ಗೆ ರೂಂಗೆ ಕರೆ ಮಾಡಿದ್ದ. ಕರೆ ಆಧರಿಸಿ ಸ್ಥಳಕ್ಕೆ ಹೋಗಿ ವಿಚಾರಿಸಿದ್ದೇನೆ. ಪಿಸ್ತೂಲ್‌ನ ಪೌಚ್ ಕಿತ್ತುಹೋಗಿತ್ತು. …

Read More »

ಚಿಕ್ಕಬಳ್ಳಾಪುರ : ಸರಗಳ್ಳತನ, ಇಬ್ಬರು ಆರೋಪಿಗಳ ಬಂಧನ!!

ಕಳವಾರ ಗ್ರಾಮದಲ್ಲಿ ನಡೆದ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗೌರಿಬಿದನೂರು ತಾಲ್ಲೂಕಿನ ಮುದುಗೆರೆಯ ಗೋವಿಂದ (30) ಮತ್ತು ಅಶ್ವಿನಿ (19) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳಿಂದ 49 ಗ್ರಾಂನ ಬಂಗಾರದ ಮಾಂಗಲ್ಯದ ಸರ, 760 ಮಿಲಿ ತೂಕದ 2 ಬಂಗಾರದ ಗುಂಡುಗಳು, 8 ಗ್ರಾಂ ತೂಕದ ಬಂಗಾರದ ತಾಳಿ ಹಾಗೂ ನೋಂದಣಿ ಸಂಖ್ಯೆ ಇಲ್ಲದ ದ್ವಿಚಕ್ರವಾಹನ ವಶಕ್ಕೆ ಪಡೆಯಲಾಗಿದೆ.

Read More »

ಹುಬ್ಬಳ್ಳಿ ಬ್ರೇಕಿಂಗ್: ಬಡ್ಡಿ ಕಿರುಕುಳಕ್ಕೆ ಬೇಸತ್ತು ಹುಬ್ಬಳ್ಳಿಯಲ್ಲಿ ಮತ್ತೊಬ್ಬ ವ್ಯಕ್ತಿ ಆತ್ಮಹತ್ಯೆ.!!

ಕಳೆದ ಹಲವು ದಿನಗಳಿಂದ ಬಾಷಾ ಸಾಬ್ ನಾಲ್ಕೈದು ಜನರ ಬಳಿ ಕೈಗಡ ಸಾಲ ಪಡೆದಿದ್ದನಂತೆ. ಅಲ್ದೇ ಲಲಿತಾ, ಕಿಟ್ಯಾ ರಿಂದ ದಿನ ದುಡಿಯುವ ಆಟೋ ಸಹ ಕಿತ್ತುಕೊಳ್ಳುವ ಮೂಲಕ‌ ನಿರಂತರ ಕಿರುಕುಳ‌ ನೀಡುತ್ತಿದ್ದರು ಎಂದು ಮೃತ ವ್ಯಕ್ತಿ ವೀಡಿಯೋ ಮೂಲಕ‌ ಆರೋಪ ಮಾಡಿದ್ದಾನೆ. ಹುಬ್ಬಳ್ಳಿಯ ಎಸ್ ಎಂ ಕೃಷ್ಣ ನಗರದ ಬಾಷಾ ಸಾಬ್ ಸಂಕೇಶ್ವರ್ (65) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. 1.80 ಲಕ್ಷಕ್ಕೆ ನಡೆದಿದ್ದ ಮಾತುಕತೆ ವಿಚಾರವನ್ನ ವಿಡಿಯೋದಲ್ಲಿ ತಿಳಿಸಿರೋ …

Read More »

ಬಡ್ಡಿ ಕಿರುಕುಳಕ್ಕೆ ಆತ್ಮಹತ್ಯೆ ಸರ್ಕಾರದ ಕಾನೂನು ಬಿಳಿ ಪೇಪರ್ ಗೆ ಸಿಮಿತ ಆಯ್ತಾ…???

ಹುಬ್ಬಳ್ಳಿ : ಅವಳಿ ನಗರದಲ್ಲಿ ಮನಕುಲಕುವ ಘಟನೆ ನಡೆದಿದ್ದು ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಬಡ್ಡಿ ಕಿರುಕುಳ ನೀಡಿರುವದು ಹುಬ್ಬಳ್ಳಿಯಎಸ್ ಎಂ ಕೃಷ್ಣ ನಗರದಲ್ಲಿ ನಡೆದಿದೆ. ಬಾಷಾ ಸಾಬ್ ಸಂಕೇಶ್ವರ್ (65) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.ಮನೆಯಲ್ಲಿ ಬಡತನ ಇದ್ದರು ದುಡಿದು ಬದಕುವ ಚಲ‌ ಬಿಡದ ಈ ವ್ಯಕ್ತಿಕಳೆದ ಹಲವು ದಿನಗಳಿಂದ ಬಾಷಾ ಸಾಬ್ ನಾಲ್ಕೈದು ಜನರ ಬಳಿ ಕೈಗಡ ಸಾಲ ಪಡೆದಿದ್ದನಂತೆ. ಅದರಂತೆಯೇ ಹಣ ವಾಪಸ್ ನೀಡೋದಾಗಿ ಲಲಿತಾ, …

Read More »

ಹುಬ್ಬಳ್ಳಿ ಯುವಕನ ಪ್ರಮಾಣಿಕತೆ ನವ ಸಮಾಜಕ್ಕೆ ಮಾದರಿ…

ಹುಬ್ಬಳ್ಳಿಯ ದಾಜಿಬನಪೇಟಯ ಎಸ್. ಟಿ. ಬಂಡಾರಿ ಅಂಗಡಿ ಹತ್ತಿರ ಮಹಿಳೆ ತನ್ನ ಪರ್ಸ್, ದುಡ್ಡು, ಮೊಬೈಲ್ ಕಳೆದುಕೊಂಡಿದ್ದು, ಅದು ಯಲ್ಲಾಪುರದ ಆಫರಾಜ್ ಅವರಿಗೆ ಸಿಕ್ಕಿರುತ್ತದೆ. ಸಾವಿರಾರು ರೂಪಾಯಿಗಳು, ಇತರ ವಸ್ತುಗಳಿರುವ ಬ್ಯಾಗ್ ಅನ್ನು ತಂದು ಕೊಟ್ಟು ಪ್ರಾಮಾಣಿಕತೆ ಮೆರೆದಿದ್ದಾರೆ. https://www.instagram.com/reel/DKZ4V9NPp2N/?igsh=MW9uMmgwdGlpa3VzNQ== ಹಳೇಹುಬ್ಬಳ್ಳಿಯ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ. ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ಸಾಭಿತುಪಡಿಸಿದ್ದಾರೆ. ಯುವಕನ ಪ್ರಾಮಾಣಿಕತೆಗೆ ಪೊಲೀಸರು ಪ್ರಶಂಸೆ ನೀಡಿದ್ದಾರೆ..

Read More »

ಚಾಮರಾಜನಗರ : ಕಾಡಾನೆ ದಾಳಿಗೆ ಟ್ರ್ಯಾಕ್ಟರ್ ಜಖಂ; ಬೆಳೆ ನಾಶ!!

ನಟರಾಜನ್ ಅವರಿಗೆ ಸೇರಿದ ಕೃಷಿ ಜಮೀನಿಗೆ ಕಾಡಾನೆಯೊಂದು ನುಗ್ಗಿ ಕೃಷಿ ಬೆಳೆಗಳನ್ನು ಹಾನಿಗೊಳಿಸಿದೆ.ಇದನ್ನು ಕಂಡ ರೈತರು ಟ್ರ್ಯಾಕ್ಟರ್ ಮೂಲಕ ಆನೆಯನ್ನು ಓಡಿಸಲು ಪ್ರಯತ್ನಿಸಿದಾಗ, ಕಾಡು ಆನೆ ಆಕ್ರಮಣಕಾರಿಯಾಗಿ ಟ್ರ್ಯಾಕ್ಟರ್ ಗೆ ಹಾನಿ ಮಾಡಿದೆ ಎಂದು ತಿಳಿದು ಬಂದಿದೆ.ಈ ಘಟನೆ ರೈತರನ್ನು ಭಯಭೀತಗೊಳಿಸಿದ್ದು, ಅರಣ್ಯ ಇಲಾಖೆ ಸೂಕ್ತ ಪರಿಹಾರ ಒದಗಿಸಿ, ಆನೆಗಳು ಕೃಷಿ ಭೂಮಿಗೆ ಪ್ರವೇಶಿಸದಂತೆ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ.

Read More »