Breaking News

Breaking News

ವಾಟ್ಸ್‌ಆಯಪ್ ಸ್ಟೇಟಸ್ ವಿಚಾರಕ್ಕೆ ವ್ಯಕ್ತಿಯ ಬರ್ಬರ ಹತ್ಯೆ; ದಂಪತಿ ಪೊಲೀಸ್ ಠಾಣೆಗೆ ಶರಣು

ಬೆಳಗಾವಿ: ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಅಕ್ರಮ ಸಂಬಂಧದ ಆರೋಪದ ಹಿನ್ನೆಲೆಯಲ್ಲಿ ರಮೇಶ ಹಣಮಂತ ಬಂಡ್ರೋಳಿ (40) ಎಂಬಾತನನ್ನು ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮೀ ಬಣಪ್ಪ ಒಡೆಯರ (33) ಹಾಗೂ ಆಕೆಯ ಪತಿ ಬಣಪ್ಪ ರಾಮಚಂದ್ರ ಒಡೆಯರ (45) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಮೇಶ, ಲಕ್ಷ್ಮೀ ಜೊತೆಗಿರುವ ಫೋಟೋವನ್ನು ವಾಟ್ಸ್‌ಆಯಪ್ ಸ್ಟೇಟಸ್‌ನಲ್ಲಿ ಹಾಕಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ದಂಪತಿ ಮನೆಯ ಹಿಂಭಾಗದ ಗದ್ದೆಯಲ್ಲಿ ರಮೇಶನ …

Read More »

ಅಡಿಕೆ ಗೊನೆ ಕೊಯ್ಯುವ ಕುಶಲ ಕಾರ್ಮಿಕನ ಬರ್ಬರ ಹತ್ಯೆ, ಕೆರೆಯ ಬಳಿ ಕಲ್ಲುಗಳ ನಡುವೆ ಶವ ಪತ್ತೆ

ಸಾಗರ: ಮಡಸೂರು ಸಮೀಪದ ಸಿಂಪೆಕೆರೆ ಬಳಿ ಅಡಿಕೆ ಗೊನೆ ಕೊಯ್ಯುವ ಕುಶಲ ಕಾರ್ಮಿಕ ಆನಂದ ಪೂಜಾರಿ (38) ಅವರನ್ನು ಮಂಗಳವಾರ ರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹೆಗ್ಗೋಡು ಸಮೀಪದ ಮುಂಡಿಗೆಸರ ಗ್ರಾಮದವರಾದ ಅವರು, 15 ವರ್ಷಗಳ ಹಿಂದೆ ಮಡಸೂರು ಗ್ರಾಮದ ಯುವತಿಯನ್ನು ವಿವಾಹವಾಗಿ ಅಲ್ಲಿಯೇ ನೆಲೆಸಿದ್ದರು. ಅಡಿಕೆ ಮರ ಹತ್ತಿ ಗೊನೆ ಕೊಯ್ಯುವುದು ಹಾಗೂ ಕೊಳೆರೋಗಕ್ಕೆ ಔಷಧ ಸಿಂಪಡಿಸುವುದು ಸೇರಿದಂತೆ ವಿವಿಧ ಕೃಷಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮಂಗಳವಾರ …

Read More »

ಹಿಂದೂ–ಮುಸ್ಲಿಂ ಒಂದೇ ಎಂಬ ಭಾವನೆ: ಪಗಡಿಗಲ್ಲಿಯಲ್ಲಿ ಸೌಹಾರ್ದದ ಈದ್ ಮಿಲಾದ್..!

ಧರ್ಮ ಬೇರೆ, ಭಾವನೆ ಒಂದೇ: ಈದ್ ಮಿಲಾದ್ ಮೆರವಣಿಗೆಯಲ್ಲಿ ಹಿಂದೂ–ಮುಸ್ಲಿಂ ಸೌಹಾರ್ದತೆ.. ಹಿಂದೂ–ಮುಸ್ಲಿಂ ಒಂದೇ ಎಂಬ ಭಾವನೆಯೊಂದಿಗೆ ಈದ್ ಮಿಲಾದ್ ಆಚರಣೆ ಹುಬ್ಬಳ್ಳಿ: ಈದ್ ಮಿಲಾದ್ ಹಬ್ಬದ ಸಂಭ್ರಮದಲ್ಲಿ ಹಿಂದೂ–ಮುಸ್ಲಿಂ ಸೌಹಾರ್ದತೆಯ ಸಂದೇಶಕ್ಕೆ ಪಗಡಿಗಲ್ಲಿ ಸಾಕ್ಷಿಯಾಯಿತು. ಘಂಟಿಕೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಪಗಡಿಗಲ್ಲಿಯಲ್ಲಿ ಈದ್ ಮಿಲಾದ್ ಪ್ರಯುಕ್ತ ಅದ್ಧೂರಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಮುಸ್ಲಿಂ ಮುಖಂಡರು ಹಾಗೂ ಸ್ಥಳೀಯರು ಭಾಗವಹಿಸಿದ್ದು, ಹಿಂದೂ ಸಮುದಾಯದ ಹಿರಿಯರು ಕೂಡ ಸೌಹಾರ್ದತೆಯಿಂದ ಪಾಲ್ಗೊಂಡು ಹಬ್ಬದ …

Read More »

ಧಾರವಾಡದಲ್ಲಿ ಸಿಲಿಂಡರ್ ಸ್ಪೋಟ

ಧಾರವಾಡ: ಜನ್ನತ್ ನಗರದಲ್ಲಿ ತಡರಾತ್ರಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅವಘಡ ಸಂಭವಿಸಿದೆ. ಗ್ಯಾಸ್ ಸೋರಿಕೆಯಿಂದ ಸ್ಫೋಟ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಮನೆಯ ಪೀಠೋಪಕರಣಗಳು ಹಾಗೂ ಪಾತ್ರೆಗಳು ಛಿದ್ರಗೊಂಡು ರಸ್ತೆಗೆ ಬಿದ್ದಿವೆ. ಸ್ಫೋಟದ ಭೀಕರ ದೃಶ್ಯ ಸಮೀಪದ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಭಾರೀ ಶಬ್ದ ಹಾಗೂ ಬೆಂಕಿಯ ಜ್ವಾಲೆಗೆ ಸ್ಥಳೀಯರು ಬೆಚ್ಚಿಬಿದ್ದು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಪ್ರಾಥಮಿಕ ತನಿಖೆಯಂತೆ ಗ್ಯಾಸ್ ಸೋರಿಕೆಯೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಘಟನೆಯಿಂದ …

Read More »

ಮಹಿಳೆ ಮೇಲೆ ಆಯಸಿಡ್ ದಾಳಿ: ಅಪರಾಧಿಗೆ 10 ವರ್ಷ ಕಠಿಣ ಜೈಲು, ₹3.05 ಲಕ್ಷ ದಂಡ! ಪುತ್ತೂರು ಕೋರ್ಟ್ ಮಹತ್ವದ ತೀರ್ಪು

ದಕ್ಷಿಣ ಕನ್ನಡ: ಮಹಿಳೆ ಮೇಲೆ ಆಸಿಡ್ ದಾಳಿ ನಡೆಸಿದ ಪ್ರಕರಣದಲ್ಲಿ ಕಡಬ ಕೊಡಿಂಬಾಳದ ಜಯಾನಂದ ಕೆ. (60) ಅಪರಾಧಿ ಎಂದು ಸಾಬೀತಾಗಿದೆ. ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆತನಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. 2020ರಲ್ಲಿ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಪೂರ್ಣಗೊಳಿಸಿದ ಪೊಲೀಸರು ಸಾಕ್ಷ್ಯಾಧಾರಗಳೊಂದಿಗೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಆರೋಪ ಸಾಬೀತಾಗಿದೆ ಎಂದು ನ್ಯಾಯಾಲಯ ತೀರ್ಮಾನಿಸಿದೆ. …

Read More »

30 ಲಕ್ಷ ರೂ. ಮೌಲ್ಯದ 130 ಮೊಬೈಲ್‌ ಕದ್ದ ಆರೋಪಿ ಸೆರೆ

ಬೆಂಗಳೂರು: ಕಂಟೈನರ್‌ಗೆ ಬೀಗ ಹಾಕದೆ ಹೋಗಿದ್ದ ವೇಳೆ ₹30 ಲಕ್ಷ ಮೌಲ್ಯದ 130 ಮೊಬೈಲ್‌ಗಳನ್ನು ಕಳವು ಮಾಡಿದ್ದ ಆರೋಪಿಯನ್ನು ವೈಟ್‌ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಮಹದೇವಪುರದ ಮೊಹಮ್ಮದ್ ಅಲಿ (43) ಬಂಧಿತ. ನಲ್ಲೂರಹಳ್ಳಿ ಬಳಿ ಪಾರ್ಸಲ್‌ ಬಾಕ್ಸ್‌ಗಳನ್ನು ಅನ್‌ಲೋಡ್‌ ಮಾಡಿದ ಸಿಬ್ಬಂದಿ ಕಂಟೈನರ್‌ಗೆ ಬೀಗ ಹಾಕದೆ ತೆರಳಿದ್ದರು. ಇದನ್ನು ಗಮನಿಸಿದ ಆರೋಪಿ ಮೊಬೈಲ್‌ಗಳಿದ್ದ ಮೂರು ಪಾರ್ಸಲ್‌ ಬಾಕ್ಸ್‌ಗಳನ್ನು ಕಳವು ಮಾಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆತನಿಂದ …

Read More »

ವಿದ್ಯಾರಣ್ಯಪುರ: ಮಾರಕಾಸ್ತ್ರ ಹಿಡಿದು ಬಡಿದಾಡಿದ 2 ಗುಂಪು

ಬೆಂಗಳೂರು: ವಿದ್ಯಾರಣ್ಯಪುರದಲ್ಲಿ ಸೋಮವಾರ ಎರಡು ಪುಂಡರ ಗುಂಪುಗಳು ನಡುರಸ್ತೆಯಲ್ಲೇ ಮಾರಕಾಸ್ತ್ರಗಳನ್ನು ಹಿಡಿದು ಬಡಿದಾಡಿಕೊಂಡಿರುವ ಆರೋಪ ಕೇಳಿ ಬಂದಿದ್ದು, ಸ್ಥಳೀಯರು ಆತಂಕ ಕ್ಕೊಳಗಾಗಿದ್ದಾರೆ. ಮಾರಕಾಸ್ತ್ರಗಳನ್ನು ಕೈಯಲ್ಲಿ ಹಿಡಿದು ಪ್ರತ್ಯಕ್ಷಗೊಂಡ 10ಕ್ಕೂ ಅಧಿಕ ಯುವಕರ 2 ಗುಂಪುಗಳು ಸಾರ್ವಜನಿಕ ಸ್ಥಳದಲ್ಲೇ ಜಗಳ ನಡೆಸಿ ರಂಪಾಟ ಸೃಷ್ಟಿಸಿದ್ದವು. ಇದನ್ನು ಪ್ರಶ್ನಿಸಲು ಬಂದ ಸ್ಥಳೀಯರ ಜೊತೆಗೂ ಜಗಳಕ್ಕೆ ಮುಂದಾದ ಪುಂಡರು, ನಾವು ನಿಮ್ಮ ಮನೆಗೆ ಬಂದು ಗಲಾಟೆ ಮಾಡಲಿಲ್ಲ ಎಂದು ಬೆದರಿಸಿರುವ ಆರೋಪ ಕೇಳಿ ಬಂದಿದೆ. ವಿಷಯ …

Read More »

ಸಿಂದಗಿ: ಹೊತ್ತಿ ಉರಿದ ಕಾರು; ಇಬ್ಬರು ಪ್ರಾಣಾಪಾಯದಿಂದ ಪಾರು

ವಿಜಯಪುರ: ಜಿಲ್ಲೆಯ ಸಿಂದಗಿ ಪಟ್ಟಣದ ಹಳೆ ಬಜಾರ್‌ನಲ್ಲಿ ಕಿಯಾ ಕಾರೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ನಡೆದಿದೆ. ಕಾರಿನಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ ಬೆಂಕಿಗೆ ಕಾರಣ ಎನ್ನಲಾಗಿದ್ದು, ವಾಹನದಲ್ಲಿದ್ದ ಇಬ್ಬರು ಪ್ರಯಾಣಿಕರು ಸಮಯಪ್ರಜ್ಞೆ ಮೆರೆದು ತಕ್ಷಣವೇ ಹೊರಗೆ ಜಿಗಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಕಾರು ಸಂಪೂರ್ಣವಾಗಿ ಉರಿದು ಬೂದಿಯಾಗಿದೆ. ಕಾರಿನ ಮಾಲೀಕರ ಹೆಸರು ಹಾಗೂ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ. ಸುದ್ದಿ ತಿಳಿಯುತ್ತಿದ್ದಂತೆ ಸಿಂದಗಿ ಪೊಲೀಸ್ ಠಾಣೆಯ …

Read More »

ಕದ್ದ ಹಣವನ್ನು ಬಡವರಿಗೆ ದಾನ ಮಾಡುತ್ತಿದ್ದ ರಾಬಿನ್ ಹುಡ್ ಅರೆಸ್ಟ್ – ಭಾರೀ ಮೌಲ್ಯದ ಚಿನ್ನ ಜಪ್ತಿ!

ಬೆಂಗಳೂರು: ಮನೆಗಳಿಗೆ ಕನ್ನ ಹಾಕಿ ಕದ್ದ ಆಭರಣಗಳನ್ನು ಮಾರಾಟ ಮಾಡಿ ಬಂದ ಹಣದ ಅರ್ಧ ಭಾಗವನ್ನು ಬಡವರಿಗೆ ದಾನ ಮಾಡುತ್ತಿದ್ದ ಸೀಗೆಹಳ್ಳಿ ನಿವಾಸಿ ಶಿವರಸನ್ ಅಲಿಯಾಸ್ ಶಿವು (33)ನನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ. ಆತನಿಂದ 8 ಮನೆಕಳವು ಪ್ರಕರಣಗಳನ್ನು ಭೇದಿಸಿ ₹26 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಿದ್ದಾರೆ. ಚಿತ್ರಕಲಾವಿದ ಎಂದು ಹೇಳಿಕೊಳ್ಳುವ ಶಿವರಸನ್, 2018ರಿಂದ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ. ಈ …

Read More »

ವಿಜಯಪುರದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಭೂತನಾಳ ಕೆರೆಯಲ್ಲಿ 6 ಶವಗಳು ಪತ್ತೆ!

ವಿಜಯಪುರ ನಗರದ ಹೊರವಲಯದ ಐತಿಹಾಸಿಕ ಬೂತನಾಳ ಕೆರೆಯಲ್ಲಿ ನಾಲ್ಕು ಮಹಿಳೆಯರು ಹಾಗೂ ಇಬ್ಬರು ಬಾಲಕರ ಸೇರಿದಂತೆ ಒಟ್ಟು ಆರು ಮಂದಿಯ ಮೃತದೇಹಗಳು ಪತ್ತೆಯಾಗಿದ್ದು, ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕೆರೆಯಲ್ಲಿ ಇನ್ನಷ್ಟು ಶವಗಳು ಇರುವ ಶಂಕೆ ವ್ಯಕ್ತವಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿ ಶೋಧ ಕಾರ್ಯ ನಡೆಸಿ ಮೃತದೇಹಗಳನ್ನು ಹೊರತೆಗೆಯುತ್ತಿದ್ದಾರೆ. ಕೆರೆಗೆ ಬಂದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ಜಮಾಯಿಸಿದ್ದು, ಆದರ್ಶ …

Read More »