Breaking News

Breaking News

ಇಸ್ಪೀಟ್ ಕಾರ್ಡ್ ನಲ್ಲಿ ಕೆಮೆರಾ, ಸ್ಪೀಕರ್ – ಅಂದರ್ ಬಾಹರ್ ಕಳ್ಳಾಟ ಬಯಲು!

ಬೆಂಗಳೂರು: ಇಸ್ಪೀಟ್ ಆಟದಲ್ಲಿ ರಹಸ್ಯ ಕ್ಯಾಮೆರಾ, ಸ್ಕ್ಯಾನರ್ ಹಾಗೂ ಇಯರ್‌ಬಡ್ಸ್ ಬಳಸಿ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಬಿಹಾರ ಮೂಲದ ಅಬು ತಲಾ, ಚಿಕ್ಕಮಗಳೂರಿನ ತಬ್ರೇಜ್ ಅಹಮದ್ ಹಾಗೂ ಶಿವಮೊಗ್ಗದ ಮೂವರು ಸೇರಿ ಐವರನ್ನು ಬಂಧಿಸಲಾಗಿದೆ. ಆರೋಪಿಗಳು ದೆಹಲಿಯಿಂದ ಡಿಜಿಟಲ್ ಸ್ಕ್ಯಾನ್ ಮಾಡಬಹುದಾದ ಇಸ್ಪೀಟ್ ಕಾರ್ಡ್‌ಗಳನ್ನು ತರಿಸಿಕೊಂಡು, ಮೊಬೈಲ್, ಕಾರಿನ ಕೀ, ಸ್ಮಾರ್ಟ್‌ವಾಚ್ ಹಾಗೂ ಕಣ್ಣಿನ ಲೆನ್ಸ್‌ನಂತೆ ಕಾಣುವ ರಹಸ್ಯ ಸಾಧನಗಳನ್ನು ಬಳಸುತ್ತಿದ್ದರು. ಕಾರ್ಡ್‌ಗಳ …

Read More »

ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ದೋಖಾ: ಕೇರಳದಲ್ಲಿ ಸಿಕ್ಕಿಬಿದ್ರು ತಾಯಿ, ಮಗ!

ಬೆಂಗಳೂರು: ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳ ಮೂಲಕ ಮದುವೆ ಸಂಬಂಧ ಹುಡುಕುತ್ತಿದ್ದ ಕುಟುಂಬಗಳನ್ನು ಟಾರ್ಗೆಟ್ ಮಾಡಿ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ತಾಯಿ-ಮಗನನ್ನು ಆಡುಗೋಡಿ ಪೊಲೀಸರು ಕೇರಳದ ವಯನಾಡಿನಲ್ಲಿ ಬಂಧಿಸಿದ್ದಾರೆ. ಡಾ. ಪ್ರದೀಪ್ ಜೋಸೆಫ್ ಮತ್ತು ಕಲಾವತಿ ಎಂದು ಪರಿಚಯಿಸಿಕೊಳ್ಳುತ್ತಿದ್ದ ಆರೋಪಿಗಳು ಶ್ರೀಮಂತರಂತೆ ಬಿಂಬಿಸಿಕೊಂಡು ವಂಚನೆ ನಡೆಸುತ್ತಿದ್ದರು. ಮದುವೆ ಮಾತುಕತೆ ಕುದುರಿದ ಬಳಿಕ ತುರ್ತು ಹಣದ ಅಗತ್ಯವಿದೆ ಎಂದು ಹೇಳಿ ವಧುವಿನ ಕುಟುಂಬಗಳಿಂದ ಲಕ್ಷಾಂತರ ರೂಪಾಯಿ ಪಡೆದು ಪರಾರಿಯಾಗುತ್ತಿದ್ದರು. ಬೆಂಗಳೂರಿನ ಕುಟುಂಬವೊಂದರಿಂದ ₹20 ಲಕ್ಷ …

Read More »

ಜಮೀನಿನ ಖಾತೆ ಮಾಡಿಕೊಡಲು ₹6.50 ಲಕ್ಷ ಲಂಚಕ್ಕೆ ಬೇಡಿಕೆ: ಗ್ರಾಮ ಲೆಕ್ಕಿಗನ ಬಂಧನ

ಚಿಕ್ಕಬಳ್ಳಾಪುರ: ಜಮೀನಿನ ಖಾತೆ ಮಾಡಿಕೊಡಲು ₹6.50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ₹3 ಲಕ್ಷ ಮುಂಗಡ ಪಡೆಯುತ್ತಿದ್ದ ವೇಳೆ ಜಂಗಮಕೋಟೆ ಹೋಬಳಿಯ ನಾಡಕಚೇರಿಯ ಗ್ರಾಮ ಲೆಕ್ಕಿಗ ಮೋಹನ್ ಕುಮಾರ್ ಸಿ. ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹೊಸಪೇಟೆ ಗ್ರಾಮದ 14 ಗುಂಟೆ ಜಮೀನಿನ ಖಾತೆಗಾಗಿ ರೈತ ಬೈರೇಗೌಡ ಅವರನ್ನು ಸಂಪರ್ಕಿಸಿದ್ದರು. ಮೊದಲು ₹7 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಲೆಕ್ಕಿಗ, ಬಳಿಕ ₹6.50 ಲಕ್ಷಕ್ಕೆ ವ್ಯವಹಾರ ಕುದುರಿಸಿದ್ದ ಎನ್ನಲಾಗಿದೆ. ಈ ಕುರಿತು …

Read More »

ಮೆರವಣಿಗೆ ವೇಳೆ ಸಚಿವ ಅಜಯ್ ಸಿಂಗ್​​​ಗೆ ಶಾಕ್​ ಕೊಟ್ಟ ಕಳ್ಳ!

ಕಲಬುರಗಿ: ಯಡ್ರಾಮಿ ತಾಲೂಕಿನಲ್ಲಿ ನಡೆದ ಮೆರವಣಿಗೆ ವೇಳೆ ಸಣ್ಣ ನೀರಾವರಿ ಸಚಿವ ಡಾ. ಅಜಯ್ ಸಿಂಗ್ ಅವರ ಕೈಯಲ್ಲಿದ್ದ ಉಂಗುರ ಕದಿಯಲು ಕಳ್ಳರು ಯತ್ನಿಸಿದ ಘಟನೆ ನಡೆದಿದೆ. ಸಚಿವರಾದ ಬಳಿಕ ಮೊದಲ ಬಾರಿಗೆ ತವರು ಕ್ಷೇತ್ರಕ್ಕೆ ಆಗಮಿಸಿದ್ದ ಅಜಯ್ ಸಿಂಗ್ ಅವರನ್ನು ನೂರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿ, ಹೆಗಲ ಮೇಲೆ ಹೊತ್ತು ಮೆರವಣಿಗೆ ನಡೆಸಿದರು. ಈ ವೇಳೆ ಜನದಟ್ಟಣೆಯ ನಡುವೆ ದುಷ್ಕರ್ಮಿಯೊಬ್ಬರು ಉಂಗುರ ಕದಿಯಲು ಯತ್ನಿಸಿದ್ದಾನೆ. ಇದರಿಂದ …

Read More »

ಯುವಕನಿಂದ ಮಾನಸಿಕ ಕಿರುಕುಳ; ವಿದ್ಯಾರ್ಥಿನಿ ಆತ್ಮಹತ್ಯೆ

ಮಾಸೂರು ಗ್ರಾಮದ ವಿಶ್ವನಾಥ್‌ ಮತ್ತು ಮೋಹಿನಿ ದಂಪತಿಯ ಪುತ್ರಿ ಯಶಸ್ವಿ ವಿ. (17) ಮೃತ ವಿದ್ಯಾರ್ಥಿನಿ. ಸಾಗರದಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಯಶಸ್ವಿಗೆ ಕಳೆದ ಕೆಲ ದಿನಗಳಿಂದ ಅಡ್ಡೇರಿ ಗ್ರಾಮದ ಸುಮುಖ ಎಂಬ ಯುವಕ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಮಾನಸಿಕ ಕಿರುಕುಳ ತಾಳಲಾರದೆ ಐದು ದಿನಗಳ ಹಿಂದೆ ಯಶಸ್ವಿ ವಿಷ ಸೇವಿಸಿದ್ದರು. ತಕ್ಷಣ ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಬಳಿಕ ಶಿವಮೊಗ್ಗ ಹಾಗೂ ಮಣಿಪಾಲ ಆಸ್ಪತ್ರೆಗೆ …

Read More »

ರಾಯಚೂರಲ್ಲಿ ಘೋರ ಕೃತ್ಯ : ಕೋರ್ಟ್ ಅವರಣದಲ್ಲೇ ಅಳಿಯನಿಗೆ ಚಾಕು ಇರಿದ ಮಾವ!

ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೋರ್ಟ್ ಆವರಣದಲ್ಲೇ ಮಾವ ಅಳಿಯನಿಗೆ ಚಾಕು ಇರಿದ ಘಟನೆ ನಡೆದಿದೆ. ಶಂಭುಲಿಂಗ (52) ಎಂಬಾತನಿಗೆ ಮಾವ ದಾನಪ್ಪ ಚಾಕುವಿನಿಂದ ಇರಿದಿದ್ದಾನೆ. ಪತ್ನಿ ವಿಜಯಲಕ್ಷ್ಮಿ ಕೋರ್ಟ್‌ನಲ್ಲಿ ಡಿ ಗ್ರೂಪ್ ಸಿಬ್ಬಂದಿಯಾಗಿದ್ದು, ಕೆಲಸದ ನಿಮಿತ್ತ ಶಂಭುಲಿಂಗ ಕೋರ್ಟ್‌ಗೆ ಬಂದಿದ್ದ. ಈ ವೇಳೆ ದಾನಪ್ಪ ಕಿರಿಕ್ ಮಾಡಿದ್ದು, ಪತ್ನಿ ಜಗಳ ಬಿಡಿಸಲು ಮುಂದಾದಾಗ ಶಂಭುಲಿಂಗನಿಗೆ ಚಾಕುವಿನಿಂದ ಇರಿದಿದ್ದಾನೆ. ಎದೆ ಹಾಗೂ ಬೆನ್ನು ಸೇರಿದಂತೆ ಮೂರ್ನಾಲ್ಕು ಕಡೆ …

Read More »

10 ಮಂದಿ ಪೆಡ್ಲರ್‌ಗಳ ಬಂಧನ ; 15.94 ಕೋಟಿ ಮೌಲ್ಯದ ಡ್ರಗ್ಸ್‌ ವಶ

ಬೆಂಗಳೂರು ಪೊಲೀಸರು ವಿವಿಧೆಡೆ ಕಾರ್ಯಾಚರಣೆ ನಡೆಸಿ ಹೊರರಾಜ್ಯದ ಒಬ್ಬರು ಸೇರಿದಂತೆ 10 ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಬರೋಬ್ಬರಿ ₹15.94 ಕೋಟಿ ಮೌಲ್ಯದ ಎಂಡಿಎಂಎ, ಗಾಂಜಾ, ಹೈಡ್ರೋಗಾಂಜಾ ಹಾಗೂ ಹಶೀಶ್ ಆಯಿಲ್ ವಶಪಡಿಸಿಕೊಳ್ಳಲಾಗಿದೆ. ಹೆಬ್ಬಾಳ, ಯಶವಂತಪುರ, ಎಚ್‌ಎಎಲ್‌, ವೈಟ್‌ಫೀಲ್ಡ್‌ ಹಾಗೂ ಯಲಹಂಕ ಪೊಲೀಸರು ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ್ದಾರೆ. ಬಂಧಿತರು ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಖರೀದಿಸಿ, ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ …

Read More »

ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಮಾಜಿ ಪ್ರಾಂಶುಪಾಲನಿಗೆ 7 ವರ್ಷ ಜೈಲು, ₹4 ಲಕ್ಷ ದಂಡ!

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ವಸತಿ ನಿಲಯದಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಾಜಿ ಪ್ರಾಂಶುಪಾಲ ವೈ. ಚಿನ್ಮಯಾನಂದ ಮೂರ್ತಿಗೆ ವಿಶೇಷ ಪೋಕ್ಸೋ ನ್ಯಾಯಾಲಯ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹4 ಲಕ್ಷ ದಂಡ ವಿಧಿಸಿದೆ. 2022ರಲ್ಲಿ ಕಟ್ಟೇರಿ ಗ್ರಾಮದ ವಸತಿ ನಿಲಯದಲ್ಲಿ ಪ್ರಾಂಶುಪಾಲನಾಗಿದ್ದ ವೇಳೆ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಆರೋಪದಡಿ ಕೆ.ಆರ್. ಸಾಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. …

Read More »

ಎಬಿವಿಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿನಿಯರನ್ನ ಎಳೆದಾಡಿದ ಪೊಲೀಸರು: ಪ್ರಶ್ನಿಸಿದ ಮಾಧ್ಯಮದವರ ಮೇಲೆಯೇ ದರ್ಪ

ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿತು. ಈ ಪ್ರತಿಭಟನೆ ಮೌರ್ಯ ವೃತ್ತದಿಂದ ವಿಧಾನಸೌಧದವರೆಗೂ ಸಾಗಲು ಯತ್ನಿಸಿದಾಗ ಪೊಲೀಸರು ವಿದ್ಯಾರ್ಥಿಗಳನ್ನು ತಡೆದಿದ್ದಾರೆ.ಈ ವೇಳೆ ಪೊಲೀಸರು ಪ್ರತಿಭಟನಾ ನಿರತ ವಿದ್ಯಾರ್ಥಿನಿಯರನ್ನು ಅವಮಾನಕಾರಿಯಾಗಿ ನಡೆಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರತಿಭಟನಾಕಾರರನ್ನು ಬಸ್‌ಗಳಿಗೆ ಹತ್ತಿಸುವಾಗ ಮಹಿಳಾ ಸಿಬ್ಬಂದಿ ಇಲ್ಲದೆ ಪುರುಷ ಪೊಲೀಸರೇ ವಿದ್ಯಾರ್ಥಿನಿಯರನ್ನು ಎಳೆದಾಡಿದ್ದಾರೆ. ಇದನ್ನು ಮಾಧ್ಯಮಗಳ ವರದಿಗಾರರು ಪ್ರಶ್ನಿಸಿದಾಗ …

Read More »

ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಬೆದರಿಕೆ’; ಗೋದಾವರಿ ನದಿಗೆ ಹಾರಿ ಎಂಜಿನಿಯರ್ ಕುಟುಂಬ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!.

ಆಂಧ್ರ ಪ್ರದೇಶದ ಗೋದಾವರಿ ನದಿಗೆ ಹಾರಿ ಎಂಜಿನಿಯರ್ ಕುಟುಂಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮತಾಂತರಕ್ಕೆ ಒತ್ತಾಯ, ಕೊಲೆ ಬೆದರಿಕೆ ಹಾಗೂ ಸುಲಿಗೆಗೆ ಯತ್ನಿಸಿದ ಆರೋಪದ ಮೇಲೆ ರೈಫಲ್ ಶೂಟಿಂಗ್ ಕೋಚ್ ಶೇಖ್ ಸಾದಿಕ್ ಖಾನ್‌ನನ್ನು ಪೊಲೀಸರು ಮೀರತ್‌ನಲ್ಲಿ ಬಂಧಿಸಿದ್ದಾರೆ. ಆಗಸ್ಟ್ 16-17ರ ಮಧ್ಯರಾತ್ರಿ ಎಂಜಿನಿಯರ್ ತಿಲ್ಲಪುಡಿ ನೂಕರಾಜು, ಪತ್ನಿ ಮೀನಾ, ಮಗಳು ಸೌಜನ್ಯ ಹಾಗೂ ಮೊಮ್ಮಗ ಸೇತುವೆಯಿಂದ ನದಿಗೆ ಹಾರಿದ್ದರು. ಮೀನುಗಾರರ ರಕ್ಷಣಾ ಕಾರ್ಯಾಚರಣೆಯಲ್ಲಿ ಮೊಮ್ಮಗ ಪಾರಾಗಿದ್ದು, …

Read More »