Breaking News

Breaking News

ಧಾರವಾಡ ; ರೈತರ ಕಣಕಿ ಹೊಟ್ಟಿಗೆ ಬೆಂಕಿ ಅಪಾರ ನಷ್ಟ .

ಧಾರವಾಡ ಉಪ್ಪಿನಬೆಟಿಗೇರಿ ಗ್ರಾಮದ ರೈತ ಮಡಿವಾಳ ಅವರ ಹೊಲದಲ್ಲಿ ಸಂಗ್ರಹಿಸಿ ಇಟ್ಟಿದ್ದ ಕಣಕಿ ಹೊಟ್ಟಿಗೆ ಭಾನುವಾರ ಬೆಂಕಿಗೆ ಆಹುತಿಯಾಗಿದೆ 9 ಟ್ರಾಕ್ಟರ್ ಕಣಕಿ ಹೊಟ್ಟನ್ನು ಬನವಿ ಒಟ್ಟಲೆಂದು ಗಂಗಪ್ಪನವರು ಹಾರು ಬೆಳವಡಿ ರಸ್ತೆಯ ಹೊಲದಲ್ಲಿ ಸಂಗ್ರಹಿಸಿಟ್ಟಿದ್ದರು. ರಾತ್ರಿ ಯಾರು ಇಲ್ಲದ ವೇಳೆ ಕಿಡಿಗೇಡಿಗಳು ಹೊಲಕ್ಕೆ ನುಗ್ಗಿ ಬೆಂಕಿ ಹಚ್ಚಿದ್ದಾರೆ ಕೂಡಲೆ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಬೆಂಕಿಯನ್ನು ನಿಂದಿಸಿದ್ದಾರೆ.

Read More »

ಹುಬ್ಬಳ್ಳಿ : ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ

ರಸ್ತೆ ಬಳಿ ಬೈಕ್ ನಿಂಲಿಸಿಕೊಂಡು ನಿಂತಿದ್ದ ರೈತನಿಗೆ ಓರ್ವನು ಕ್ಷುಲ್ಲಕ ವಿಷಯವಾಗಿ ಚಾಕುವಿನಿಂದ ತಲೆಗೆ ಹೊಡೆದು ಗಾಯಗೊಳಿಸಿದ ಘಟನೆ ಕುಸುಗಲ ಗ್ರಾಮದ ಜಿಲ್ಲಾ ಪಂಚಾಯಿತಿ ರಸ್ತೆಯಲ್ಲಿ ನಿನ್ನೆ ನಡೆದಿದೆ. ಕುಸುಗಳು ಗ್ರಾಮದ ಶಿವರೆಡ್ಡಿ ಕುಸುಗಲ್ ಎಂಬಾತ ಹಲ್ಲೆ ಮಾಡಿದ್ದಾಗಿ ಕುಸುಗಲ್ ಗಂಗಾಧರ್ ನಗರದ ರೇವಣಸಿದ್ದೇಶ್ವರ ಸಂಕರಡ್ಡಿ ದೂರು ಕೊಟ್ಟಿದ್ದಾರೆ. ಎದುರಿನಿಂದ ಬೈಕ್ ನಿಂದ ಬಂದ ಶಿವರೆಡ್ಡಿ ಹಲೇ ಮಾಡಿದ್ದಾರೆ ಎಂದು ದೂರು ಕೊಟ್ಟಿದ್ದಾರೆ. ಈ ವಿಚಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ …

Read More »

ಕಲ್ಲು ಬಂಡೆ ಒಡೆಯುವಾಗ ದುರಂತ: ಓರ್ವ ಕಾರ್ಮಿಕ ಸಾವು; ಇಬ್ಬರ ಸ್ಥಿತಿ ಗಂಭೀರ

ಕೋಲಾರದಲ್ಲಿ ಬಂಡೆ ಒಡೆಯಲು ಸಿದ್ಧತೆ ನಡೆಸುತ್ತಿದ್ದಾಗ ದುರಂತ ಸಂಭವಿಸಿದ್ದು, ಕಲ್ಲು ಬಿದ್ದು ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೂಂಡಿದ್ದಾರೆ ಮಾಲೂರು ತಾಲೂಕಿನ ಮಾಕಾರಹಳ್ಳಿಯಲ್ಲಿ ನಡೆದಿದೆ.ಬಂಡೆ ಸ್ಫೋಟಿಸಲು ತಯಾರಿ ಮಾಡಿಕೊಳ್ಳುತ್ತಿದ್ದ ವೇಳೆ ಏಕಾಏಕಿ ಕಲ್ಲುಬಂಡೆ ಜಾರಿ ಬಿದ್ದಿದೆ. ಘಟನಾ ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

Read More »

ಬೆಂಗಳೂರಿನಲ್ಲಿ ಮತ್ತೊಂದು ಹಿಟ್ ಅಂಡ‌ ರನ್ ಪ್ರಕರಣ : ಆಟೋ ಚಾಲಕನ ಕಾಲು ಕಟ್ಟು

ರಾಜಧಾನಿ ಬೆಂಗಳೂರಿನ ಕೆ ಆರ್ ಮಾರ್ಕೆಟ್ ಪ್ರೈ ಓವರಲ್ಲಿ ಭೀಕರ ಹಿಟ್ ಅಂಡ‌ ರನ್ ಪ್ರಕರಣ ವರದಿಯಾಗಿದೆ. ಆಟೋ ಹಾಗೂ ಕಾರಿಗೆ ಗುದ್ಧಿ ಪರಾರಿಯಾದ ಪರಿಣಾಮ ಚಾಲಕನ ಕಾಲು ಮುರಿದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕಂಡು ಬಂದಿದೆ. ಈ ಘಟನೆಯಿಂದ ಆಟೋ ಜಜ್ಜಿನಜ್ಜಾಗಿದೆ ಹೀಗಾಗಿ ಆಟೋ ಚಾಲಕನ ಕಾಲು ಕಟ್ಟಾಗಿದೆ. ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Read More »

ಪುಂಡರ ಅಟ್ಟಹಾಸ ; ಯುವಕರಿಬ್ಬರ ಮೇಲೆ ಹಲ್ಲೆ.

ರಾಜಧಾನಿ ಬೆಂಗಳೂರುನಲ್ಲಿ ಪುಂಡರ ಹಟ್ಟಹಾಸ ಮುಂದುವರೆದಿದ್ದು ಇದೀಗ ಇಬ್ಬರ ಯುವಕರ ಮೇಲೆ ಹಲ್ಲೇ ನಡೆದಿದ್ ಘಟನೆ ಮೈಸೂರು ಮೆಟ್ರೋ ಸ್ಟ್ರೆಷನ್ ಬಳಿ ನಡೆದಿದೆ ಕಾರಿಗೆ ಪೆಟ್ರೋಲ್ ಹಾಕಿತ್ತಿರುವ ಇಬ್ಬರ ಯುವಕರ ಮೇಲೆ ಹಲ್ಲೆ ಮಾಡಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಇಬ್ಬರು ಯುವಕರನ್ನು ರಕ್ಷಿಸಿದ್ದಾರೆ. ಹಲ್ಲೆಗೊಳಗಾದ ಇಬ್ಬರು ಯುವಕರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಹಲ್ಲೇಗೈದೆ ಯುವಕರನ್ನು ಪೊಲೀಸರು ಬಂಧಿಸಿ ವಿಚಾರಣೆ ಶುರು ಮಾಡಿದ್ದಾರೆ

Read More »

ರಾಜ್ಯದಲ್ಲಿ ಮೀನು ಮಟ್ಟನ್ ಗೆ ಬಾರಿ ಬೇಡಿಕೆ

ದೇಶದಲ್ಲಿ ಹಾಕಿ ಜ್ವರ ಬಿತ್ತಿ ಹೆಚ್ಚಾಗಿದ್ದು. ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ದಲಿತರಂಗಾಣದಲ್ಲಿ ಹಕ್ಕಿ ಜ್ವರ ಭೀತಿ ಇನು ದೂರವಾಗಿಲ್ಲ. ಈ ಹಿನ್ನೆಲೆಯಲ್ಲಿ ದಿನದಿಂದಲೇ ಕೋಳಿ ಮಾಂಸಕ್ಕೆ ಮತ್ತು ಮೊಟ್ಟೆಗಳಿಗೆ ಬೇಡಿಕೆ ಕುಸಿದಿದೆ. ಮನೆ ಮನೆಗಳಲ್ಲಿ ಹಾಗೂ ಹೋಟೆಲ್ಗಳಲ್ಲಿ ಚಿಕನ್ ತಯಾರಿಸುವವರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಕುರಿ ಮಾಂಸದ ಬೆಲೆ ದುಬಾರಿಯಾಗಿದೆ . ಹಾಗೂ ಮೀನಿನ ಬೆಲೆಯು ಕೂಡ ದುಬಾರಿಯಾಗಿದೆ.

Read More »

ಮಾರ್ಚ್ 21ರಿಂದ ಎಸ್‍ಎಸ್‍ಎಲ್‍ಸಿ ಪರಿಕ್ಷ ಆರಂಭ ; ಅಕ್ರಮ ತಡೆಗೆ ಸರ್ಕಾರಿ ದಿಂದ ಶಿಸ್ತು ಕ್ರಮ

ಮಾರ್ಚ್ 21 ರಿಂದ ಏಪ್ರಿಲ್ 4ರ ವರೆಗೆ ರಾಜ್ಯದಲ್ಲಿ 28 18 ಕೇಂದ್ರಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದೆ. ಈ ಬಾರಿ ಪರೀಕ್ಷೆಗೆ ಒಟ್ಟು 896.447 ವಿದ್ಯಾರ್ಥಿಗಳ ಹೆಸರು ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಹಾಗೂ ನಕಲು ತಡೆಯಲು ಎಲ್ಲಾ ಕೇಂದ್ರಗಳಲ್ಲಿ ವೆಬ್ ಕ್ಯಾಸ್ಟಿಂಗ್ ಅಳವಡಿಸಲಾಗಿದೆ. ಎಲ್ಲಾ ಅಕ್ರಮಗಳು ಕಂಪ್ಯೂಟರ್ ಪರದೆಯಲಿ ಗೋಚರವಾಗುವಂತೆ ವ್ಯವಸ್ಥೆ ಮಾಡಲಾಗಿದೆ.

Read More »

ಬಳ್ಳಾರಿಯ ದರೋಜಿ ಗುಡ್ಡದಲ್ಲಿ ಆಕಸ್ಮಿಕ ಬೆಂಕಿ!ಕರಡಿಯ ವಾಸಸ್ಥಾನ ಎಂದೇ ಪ್ರಸಿದ್ದಿಯಾದ ಗುಡ್ಡ.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ದರೋಜಿ ಗುಡ್ಡದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಧಗಧಗಿಸಿ ಹೊತ್ತಿ ಉರಿಯುತ್ತಿದೆ.400ಕ್ಕೂ ಹೆಚ್ಚು ಕರಡಿಗಳು ಸೇರಿದಂತೆ ವಿವಿಧ ಅಪರೂಪದ ವನ್ಯ ಜೀವಿಗಳ ಹಾಗೂ ಪಕ್ಷಿಗಳ ವಾಸಸ್ಥಾನಗಳಲ್ಲಿ ದರೋಜಿ ಗುಡ್ಡವೂ ಒಂದಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಆಗಮಿಸಿ, ಬೆಂಕಿ ನಂದಿಸೋ ಕಾರ್ಯದಲ್ಲಿ ತೊಡಗಿದ್ದಾರೆ.ಸದ್ಯ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಯಾವುದೇ ವನ್ಯಜೀವಿಗಳ ಪ್ರಾಣಹಾನಿಯಾಗಿಲ್ಲ ಎಂಬುದಾಗಿ ಹೇಳಲಾಗುತ್ತಿದೆ.

Read More »

ಜೀವಂತ ಮಗಳ ಶ್ರಾದ್ಧ ಮಾಡಿ, ಪಿಂಡ ಇಟ್ಟ ಪೋಷಕರು.ಕಾರಣ ಏನು ಗೊತ್ತೇ?

ಕೋಲ್ಕತ್ತಾದಲ್ಲಿ ನಡೆದ ಘಟನೆ. ಮಗಳು ಓಡಿ ಹೋಗಿ ಮದುವೆಯಾಗಿದ್ದನ್ನು ಸಹಿಸಲಾಗದೆ ದಂಪತಿ ಅಂತ್ಯಕ್ರಿಯೆ ನೆರವೇರಿಸಿ, ತಮ್ಮ ಮಗಳು ಇನ್ನು ತಮ್ಮ ಪಾಲಿಗಿಲ್ಲ ಎನ್ನುವ ದೃಢ ನಿಶ್ಚಯ ಮಾಡಿದ್ದಾರೆ. ಭವಿಷ್ಯದಲ್ಲಿ ಊರಿನ ಯಾವುದೇ ಹೆಣ್ಣುಮಗಳು ಈ ರೀತಿಯ ಕೆಲಸ ಮಾಡದಿರಲಿ ಎನ್ನುವ ಎಚ್ಚರಿಕೆಯಲ್ಲಿ ಈ ರೀತಿ ಮಾಡಿದ್ದಾರೆ.ಈ ಘಟನೆಯು ಸಾಂಪ್ರದಾಯಿಕ ಸುಧಾರಣೆಗಳು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ನಡುವಿನ ನಿರಂತರ ಉದ್ವಿಗ್ನತೆಯನ್ನು ಎತ್ತಿ ತೋರಿಸಿದೆ. ನಗರ ಪ್ರದೇಶಗಳಲ್ಲಿ ಪ್ರೇಮ ವಿವಾಹಗಳು ಮತ್ತು ವೈಯಕ್ತಿಕ …

Read More »

ಹಣ ಡಬ್ಲಿಂಗ್ ಪ್ರಕರಣ ; ನಟಿ ರನ್ಯಾರಾವ್ ಕಾರು ಚಾಲಕ ಬಂಧನ.

ಅಕ್ರಮವಾಗಿ ಚಿನ್ನ ಸಾಗಾಟ ಪ್ರಕರಣಕ್ಕೆ ಇದೀಗ ರೋಚಕ ತ್ತಿರುವು ಸಿಕ್ಕಿದೆ. ಈ ಹಿಂದೆ ಈ ಪ್ರಕರಣದಲ್ಲಿ ಜೈಲು ಸೇರಿದ ನಟಿ ರನ್ಯ ರಾವ್ ಕಾರು ಚಾಲಕ ದೀಪಕ್ ಇದೀಗ ಹಣ ಡಬ್ಲಿಂಗ್ ಪ್ರಕರಣದಲ್ಲಿ ಬಂದಿತನಾಗಿದ್ದಾನೆ. ಆರೋಪಿ ದೀಪಕ್ ಹಲವು ತಿಂಗಳುಗಳಿಂದ ನಟಿ ರನ್ಯರಾವ್ ಅವರ ಕಾರು ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದನು. ಈತನ ವಿರುದ್ಧ ಹಣ ಡಬ್ಲಿಂಗ್ ಆರೋಪ ದಡಿ ಪ್ರಕರಣ ದಾಖಲಾಗಿರುವುದರಿಂದ ದೀಪಕ್ ನನ್ನು ಪೊಲೀಸ್ ರು ಬಂದಿಸಿದ್ದಾರೆ.

Read More »