BigTv News
June 28, 2023
News, ಕರ್ನಾಟಕ, ಕರ್ನಾಟಕ, ಕರ್ನಾಟಕ, ರಾಜಕೀಯ ಸುದ್ದಿ, ಸುದ್ದಿ
ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗ ನಮ್ಮ ನಾಯಕರಾದ ಯಡಿಯೂರಪ್ಪನವರು ಹಾಕಿದ ಕಣ್ಣೀರಿನಲ್ಲಿ ಇಡೀ ಬಿಜೆಪಿ ಕೊಚ್ಚಿಕೊಂಡು ಹೋಯಿತು ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ. ಇಂದು ಮಾಧ್ಯಮಗಳ ಮುಂದೆ ಮಾತನಾಡಿದ ರೇಣುಕಾಚಾರ್ಯ, ಯಡಿಯೂರಪ್ಪರ ಸರ್ಕಾರಕ್ಕೆ ಎರಡು ವರ್ಷ ತುಂಬಿದಾಗ ಸಂಭ್ರಮೋತ್ಸವ ಮಾಡುವುದನ್ನು ಬಿಟ್ಟು ಅಂದೇ ಯಡಿಯೂರಪ್ಪರ ಕೈಯಲ್ಲಿ ಮುಖ್ಯಮಂತ್ರಿ ಸ್ಥಾನ ರಾಜೀನಾಮೆ ಕೊಡಿಸಿದ್ದು, ಅಂದು ಯಡಿಯೂರಪ್ಪ ಹಾಕಿದ ಕಣ್ಣೀರಿನಲ್ಲಿ ಬಿಜೆಪಿ ಕೊಚ್ಚಿ ಹೋಗಿದೆ ಎಂದಿದ್ದಾರೆ. ಚುನಾವಣಾ ಹೊಸ್ತಿಲಿನಲ್ಲಿ …
Read More »
BigTv News
June 28, 2023
News, ಕರ್ನಾಟಕ, ಸುದ್ದಿ, ಹುಬ್ಬಳ್ಳಿ-ಧಾರವಾಡ
ಧಾರವಾಡ – ಶಾಸಕ ವಿನಯ ಕುಲಕರ್ಣಿ ಸೂಚನೆಯ ಮೇರೆಗೆ, ಅವರ ಧರ್ಮ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಹೊಸಯಲ್ಲಾಪುರದ ಕೋಳಿಕೇರಿ,ಹಾಗೂ ಹೊಸಯಲ್ಲಾಪೂರ ರುದ್ರಭೂಮಿ ಹಾಗೂ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಡಾ – ಗೋಪಾಲಕೃಷ್ಣ ರವರು ತ್ಯಾಜ್ಯ ಸಂಸ್ಕರಣಾ ಘಟಕದ ಮೂಲಕ ರೈತರಿಗೆ ಅನುಕೂಲವಾಗುವಂತೆ ಗೊಬ್ಬರ ತಯಾರಿಸುತ್ತಿದ್ದು, ಸಾವಯವ ಗೊಬ್ಬರಗಳಲ್ಲಿ ಎರಡನೇಯ ಅತೀ ಉತ್ತಮ ಗೊಬ್ಬರವಾಗಿದ್ದು ರೈತರು ಅತಿ …
Read More »
admin
June 28, 2023
News, ಕರ್ನಾಟಕ, ಧಾರವಾಡ, ಸುದ್ದಿ, ಹುಬ್ಬಳ್ಳಿ-ಧಾರವಾಡ
ನವಲಗುಂದ : ಜೀವಜಲವಾದ ನೀರುನ್ನು ನವಲಗುಂದ ಪಟ್ಟಣದಲ್ಲಿ ಬೇಕಾಬಿಟ್ಟಿ ಬಳಕೆ ಮಾಡುತ್ತಿರುವ ದೃಶ್ಯಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ ಈಗಾಗಲೇ ರಾಜ್ಯದಲ್ಲಿ ಮಳೆ ಆಗದೇ ಕೆಲವು ಕಡೆ ಜಲಕ್ಷಾಮ ಆಗುವುದನ್ನು ನೋಡಬಹುದು. ಆದರೆ ಪಟ್ಟಣದಲ್ಲಿ ಕುಡಿಯುವ ನೀರು ಬೇಕಾಬಿಟ್ಟಿ ಪೋಲಾಗವುದನ್ನು ನಿಯಂತ್ರಿಸುವಲ್ಲಿ ಯಾರು ಮುಂದೆ ಬರುತ್ತಿಲ್ಲ. ಎಂಬ ಅಪಸ್ವರ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಕುಡಿಯುವ ನೀರನ್ನು ಸ್ಥಳೀಯರು. ಸುಖಾ ಸುಮ್ಮನೆ ನಲ್ಲಿಯನ್ನು ಬಂದ ಮಾಡದೇ ರಸ್ತೆಯ ಮೇಲೆ ಹರಿದು …
Read More »
BigTv News
June 28, 2023
News, ಕರ್ನಾಟಕ, ಕರ್ನಾಟಕ, ಕರ್ನಾಟಕ, ಬೆಂಗಳೂರು, ಬೆಂಗಳೂರು
ಬೆಂಗಳೂರು ; ಇಂದು ರೈತ ಸೇನಾ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಕರ್ನಾಟಕ ನೀರಾವರಿ ನಿಗಮ ಬೆಂಗಳೂರು ಕಾಫಿ ಬೋರ್ಡ್ನಲ್ಲಿ ಮಹದಾಯಿ ಕಳಸಾ ಬಂಡೂರಿ ಯೋಜನೆಗೆ ಸಂಬಂಧಪಟ್ಟ ಹಾಗೆ ಸಂಬಂಧಪಟ್ಟ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರೈತ ಸೇನಾ ಕರ್ನಾಟಕ ಪದಾಧಿಕಾರಿಗಳ ನೇತೃತ್ವದಲ್ಲಿ ಚರ್ಚಿಸಲಾಯಿತು. ಈ ಒಂದು ಚರ್ಚೆಯ ಸಂದರ್ಭಗಳಲ್ಲಿ ಮಹದಾಯಿ ಯೋಜನೆ ಬಗ್ಗೆ ಮತ್ತು ಕೇಂದ್ರ ಸರಕಾರದ ಪರವಾನಿಗೆಗಳ ಬಗ್ಗೆ ದೀರ್ಘಕಾಲ ಚರ್ಚೆ ಮಾಡಿ ಶೀಘ್ರವಾಗಿ ಸರಕಾರವು ಒಂದು …
Read More »
BigTv News
June 28, 2023
News, ಕರ್ನಾಟಕ, ಧಾರವಾಡ, ಧಾರವಾಡ, ಧಾರವಾಡ, ಹುಬ್ಬಳ್ಳಿ-ಧಾರವಾಡ
ಶಾಲೆಯಿಂದ ಹೊರಬಂದಿದ್ದ ಮಗುವಿನ ಮೇಲೆ ಮಂಗವೊಂದು ದಾಳಿ ಮಾಡಿ ವಿದ್ಯಾರ್ಥಿನಿಗೆ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಧಾರವಾಡದ ಗರಗ ಗ್ರಾಮದಲ್ಲಿ ಇಂದು ನಡೆದಿದ್ದು, ಧಾರವಾಡ ತಾಲ್ಲೂಕಿನ ಗರಗ ಗ್ರಾಮದ ನಿವಾಸಿ ಇಕರಾ ಗಡಕಾರಿ (8) ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿಯಾಗಿದ್ದಾಳೆ. ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಉರ್ದು ಶಾಲೆಯಲ್ಲಿ 2ನೇ ತರಗತಿ ಒದುತ್ತಿದ್ದು, ಶಾಲೆ ಆಟದ ಸಮಯದಲ್ಲಿ ವಿದ್ಯಾರ್ಥಿನಿ ಶಾಲೆಯಿಂದ ಆಚ್ಚೆ ಬಂದು ಶಾಲೆಯ ಆವರಣಕ್ಕೆ ಮರಳುತ್ತಿರುವ ವೇಳೆ ಒಂಟಿ ಮಂಗ ವಿದ್ಯಾರ್ಥಿನಿಯ …
Read More »
admin
June 28, 2023
News, ಅಪರಾಧ, ಕರ್ನಾಟಕ, ತುಮಕೂರು
ಕೊರಟಗೆರೆ: ತಾಲೂಕಿನ ಕಾಲೋನಿ, ನಾಗೇನಹಳ್ಳಿ ಸೇರಿದಂತೆ ಭೈರೇನಹಳ್ಳಿ ಕ್ರಾಸ್ ಬಳಿ ಸರಣಿ ಕಳ್ಳತನ ನಡೆದಿದ್ದು, ರಸ್ತೆ ಬದಿಯ ಅಂಗಡಿಗಳಲ್ಲಿ ಕಳ್ಳರು ಕಳ್ಳತನ ನಡೆಸಿರುವುದಲ್ಲದೇ ಬೆಳಗ್ಗಿನ ವೇಳೆ ವೃದ್ದೆಯ ಕೊರಳಲ್ಲಿದ್ದ ಚೈನ್ ಕಸಿದು ಪರಾರಿಯಾದ ಘಟನೆ ಕೂಡ ನಡೆದಿದೆ. ಕಾಲೋನಿಯಿಂದ ಕೊರಟಗೆರೆಗೆ ಬರುವ ಮಾರ್ಗ ಮಧ್ಯದ ರಸ್ತೆ ಬದಿಯ ಐದು ಅಂಗಡಿಗಳಲ್ಲಿ ತಡ ರಾತ್ರಿ ಕಳ್ಳತನ ನಡೆಸಲಾಗಿದ್ದು, ಸಿಲಿಂಡರ್,ಗುಟ್ಕಾ, ಸಿಗರೇಟ್, ನಗದು ಕಳವು ಮಾಡಿ ಕಳ್ಳರು ಪರಾರಿಯಾಗಿದ್ದಾರೆ.ಕಳ್ಳತನ ಮಾಡಿರುವ ಪ್ರತಿಯೊಂದು ಅಂಗಡಿಗಳಲ್ಲಿ ಬೆಲೆ …
Read More »
BigTv News
June 28, 2023
News, ಕರ್ನಾಟಕ, ಕರ್ನಾಟಕ, ರಾಜಕೀಯ, ಹಾಸನ
ಡ್ರಗ್ ಮಾಫಿಯಾದ ಬೇರುಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ರಾಜ್ಯದಲ್ಲಿ ಡ್ರಗ್ಸ್ ಹಾವಳಿಯನ್ನು ಪರಿಣಾಮಕಾರಿಯಾಗಿ ತಡೆಯುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಯುವ ಸಮೂಹ ಮಾದಕದ್ರವ್ಯದ ದಾಸರಾಗದಂತೆ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇದರ ಜತೆಗೆ ಡ್ರಗ್ ಮಾಫಿಯಾದ ಮೂಲವನ್ನು ಪತ್ತೆ ಹಚ್ಚಬೇಕು. ಚಾಳಿ ಬಿದ್ದ ಪೆಡ್ಲರ್ ಗಳನ್ನು ಗಡಿಪಾರು ಮಾಡುವುದೂ ಸೇರಿದಂತೆ ಹಚ್ಚಿನ ಕಠಿಣ ಕ್ರಮಗಳ ಮೂಲಕ ಡ್ರಗ್ ಹಾವಳಿಯನ್ನು ತಡೆಯಬೇಕು ಎಂದು ಸೂಚಿಸಿದ್ದಾರೆ. ವಿಶೇಷ …
Read More »
BigTv News
June 28, 2023
News, ಕರ್ನಾಟಕ, ದಕ್ಷಿಣ ಕನ್ನಡ, ದಕ್ಷಿಣ ಕನ್ನಡ
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತ್ತೂರು ಗ್ರಾಮದಲ್ಲಿ ಆಡು ನುಂಗಲು ಸಾಧ್ಯವಾಗದೇ ಆಡನ್ನು ಬಿಟ್ಟು ಹೆಬ್ಭಾವು ತೆರಳಿದ ಘಟನೆ ನಡೆದಿದೆ. ಆಹಾರ ಅರಸಿ ನಾಡಿಗೆ ಬಂದಿದ್ದ ಭಾರೀ ಗಾತ್ರದ ಹೆಬ್ಬಾವು ಬ್ರಾಂತಿಕಟ್ಟೆ ಕೊಡೆಂಕಿರಿ ಎಂಬಲ್ಲಿ ಆಡೊಂದನ್ನು ಬೇಟೆಯಾಡಿದ್ದು ಹಿಡಿದ ಆಡನ್ನು ನುಂಗಲು ಸುಮಾರು ಒಂದು ತಾಸು ಸೆಣಸಾಡಿ ವಿಫಲವಾಗಿ ನುಂಗಲು ಸಾಧ್ಯವಾಗದೆ ತೆರಳಿದೆ. ಜಾರ್ಜ್ ಕುಟ್ಟಿ ಎಂಬವರಿಗೆ ಸೇರಿದ ಸುಮಾರು 45 ಕೆಜಿ ತೂಕದ ಗಂಡು ಆಡು ಹೆಬ್ಬಾವಿನ …
Read More »
BigTv News
June 27, 2023
News, ಕರ್ನಾಟಕ, ಗದಗ
ಗದಗ ; ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜ ವಿವಿದೋದ್ಧೇಶಗಳ ಸಂಘ ನರಗುಂದ ವತಿಯಿಂದ SSLC ಮತ್ತು PUC ವಿದ್ಯಾರ್ಥಿಗಳಿಗೆ ನಿನ್ನೆ ದಿನ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಈ ಸಂದರ್ಭದಲ್ಲಿ ನರಗುಂದ ಮತಕ್ಷೇತ್ರದ ಶಾಸಕರಾದ ಸಿ.ಸಿ.ಪಾಟೀಲ್ ಅವರ ಪುತ್ರ ಉಮೇಶಗೌಡ ಪಾಟೀಲ್ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ದೂರೆಸ್ವಾಮಿ ವಿರಕ್ತಮಠದ ಶ್ರೀಗಳು ಹಾಗೂ ಸಾಧನೆ ಮಾಡಿದ ಮಕ್ಕಳ ಪೋಷಕರು ಹಾಗೂ ನರಗುಂದ ಪಟ್ಟಣದ ಸಮಸ್ತ …
Read More »
BigTv News
June 27, 2023
News, ಕರ್ನಾಟಕ, ಜಿಲ್ಲೆ, ಧಾರವಾಡ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ : ದಕ್ಷಿಣ ಮತ್ತು ಉತ್ತರ ಭಾರತದ ನಡುವೆ ಸಂಪರ್ಕ ಕಲ್ಪಿಸುವ ಮೊದಲ ವಂದೇ ಭಾರತ ರೈಲು ಇದಾಗಿದೆ. ಈ ರೈಲು ಆರಂಭಿಸುವಂತೆ ಬಹುದಿನಗಳ ಬೇಡಿಕೆ ಇತ್ತು ಏಪ್ರಿಲ್ ನಲ್ಲಿ ಆರಂಭಿಸಬೇಕಾಗಿತ್ತು. ಸ್ವಲ್ಪ ತಡವಾದ್ರೂ, ಈಗ ಆರಂಭವಾಗಿದೆ. ಸ್ವದೇಶಿ ನಿರ್ಮಿತ ಟ್ರೈನ್ ಇದು ಅನ್ನೋದು ಹೆಮ್ಮೆ ವಿಚಾರ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಧಾರವಾಡದಿಂದ ಪ್ರಯಾಣದ ವೇಳೆ ಮಾಧ್ಯಮದ ಜೊತೆಗೆ ಮಾತನಾಡಿ, ವಿದೇಶಗಳಲ್ಲಿ ಇಂತಹ ಟ್ರೈನ್ ನೋಡುತ್ತಿದ್ದೆವು. …
Read More »